ಚುರ್ಮುರಿ - ೧೮
೬೮) ಮದ್ಯ
.......
ತನ್ನ ಸಂಬಂಧಿಕರೊಬ್ಬರು ಇನ್ನೇನು ಸ್ವಲ್ಪ ದಿನದಲ್ಲಿಯೇ ಕೊನೆಯುಸಿರೆಳೆಯಲಿದ್ದಾರೆ ಎಂಬುದನ್ನ ತಿಳಿದು ಅವನು ಅವರಿಗೆ ಮದ್ಯವನ್ನು ತರಲು ಹೋದ, ಕೊಂಡು ಹಿಂದಿರುವಾಗ ರಸ್ತೆಯಲ್ಲಿ ಅಪಘಾತಕ್ಕೀಡಾದನು. ಕೈಲಿದ್ದ ಬಾಟಲಿಯಿಂದ ಮದ್ಯದ ಹನಿಗಳು ಅವನ ತುಟಿಯನ್ನು ಸೋಕುತ್ತಿದ್ದವು.
೬೯) ಪ್ರಳಯ
.........
ಪ್ರಳಯ ಪ್ರಳಯ ಪ್ರಳಯ ಎಂದು ಬಡಿದುಕೊ(ಲ್ಲು)ಳ್ಳುತ್ತಿರುವ ಚಾನೆಲ್ಗಳು ಮತ್ತು ಜ್ಯೋತಿಷಿಗಳು ಪ್ರಳಯವೆಂದು ಬಿಂಬಿಸಿದ ಮಾರನೇ ದಿನದಿಂದ ಸಂಪೂರ್ಣವಾಗಿ ಮೌನಕ್ಕೆ ಶರಣಾಗಬಹುದು.
೭೦) ಸುಳಿ!
.......
ಸುಮಾರು ವರ್ಷಗಳಿಂದ ಸಾಂಪ್ರದಾಯಿಕ ಬೆಳೆ ಭತ್ತವನ್ನು ಬೆಳೆದು ಸುಮಾರಾಗಿ ಲಾಭ ಮಾಡಿದ್ದ. ಯಾರೋ ಶುಂಟಿಗೆ ತುಂಬಾ ಬೆಲೆಯೆಂದು ಹೇಳಿದ್ದು ಕೇಳಿ ತನ್ನ ಗದ್ದೆಗೆ ಹಾಕಿದ. ೭-೮ ವರ್ಷಗಳು ಮಾಡಿದರೂ ಲಾಭವಿರಲಿ ಅಸಲೂ ಬರುತ್ತಿರಲಿಲ್ಲ. ಈ ವರ್ಷದಿಂದ ಶುಂಟಿ ಮಾಡಬಾರದೆಂದು ತೀರ್ಮಾನಿಸಿ, ಈಗಾಗಲೇ ಶುಂಟಿ ಹಾಕಿ ಭೂಮಿಯಲ್ಲಿರುವ ಫಲವತ್ತತೆಯೆಲ್ಲಾ ಹೋಗಿರುವುದರಿಂದ ಮುಂದಿನ ವರ್ಷದಿಂದ ಭತ್ತವನ್ನೇ ಹಾಕುವುದೆಂದು ನಿಶ್ಚಯಿಸಿ ಗದ್ದೆಯನ್ನು ಖಾಲಿ ಬಿಟ್ಟನು. ತುಂಬಾ ಜನ ಇವನ ಹಾಗೇ ಮಾಡಿದುದರಿಂದ ಈ ವರ್ಷ ಶುಂಟಿಗೆ ಬಂಪರ್ ಬೆಲೆ ಬಂದಿತ್ತು. ಮುಂದಿನ ವರ್ಷ ಭತ್ತದ ಬದಲು ಮತ್ತೆ ಶುಂಟಿ ಹಾಕಬೇಕೆಂದುಕೊಂಡನು!
೭೧) ಚಿನ್ನ
......
ಅವನು ಚಿನ್ನದ ಮೇಲೆ ಇನ್ವೆಸ್ಟ್ ಮಾಡುತ್ತೇನೆಂದು ಚಿನ್ನದ ಗಟ್ಟಿ ತೆಗೆದುಕೊಂಡು ಬ್ಯಾಂಕಿನಲ್ಲಿ ಇಡುತ್ತೇನೆಂದು ಅವನ ಪತ್ನಿಗೆ ಹೇಳಿದನು. ಅದಕ್ಕವಳು, ಹಾಗೆ ಮಾಡುವುದರ ಬದಲು ನನಗೊಂದು ಸರ ಮಾಡಿಸಿ ಹೇಗಿದ್ದರೂ ಅದೂ ಚಿನ್ನವೇ ತಾನೇ ಎಂದಳು.
೭೨) ಪರಿಹಾರ
...........
ಆ ಸೆಲ್ಫೋನ್ ಕಂಪನಿಯ ಸಿಮ್ ಉಪಯೋಗಿಸುತ್ತಿದ್ದನವನು, ಸುಖಾಸುಮ್ಮನೆ ಚಾರ್ಜ್ ಮಾಡುತ್ತಿದ್ದುದರಿಂದ ಅವರ ಕಸ್ಟಮರ್ ಕೇರಿಗೆ ಕರೆ ಮಾಡಿ ಎಷ್ಟು ಸಮಯ ಹೇಳಿದರೂ ಯಾವುದೇ ಬದಲಾವಣೆ ಆಗಲಿಲ್ಲ. ಬೇಸರಗೊಂಡ ಇವನು ಇನ್ನೊಂದು ಕಂಪನಿಗೆ ಸ್ವಿಚ್ ಆಗಬೇಕೆಂದು ಮೆಸೇಜ್ ಕಳುಹಿಸಿದ. ಆ ತಕ್ಷಣವೇ ಕಸ್ಟಮರ್ ಕೆರಿಂದ ಕರೆ ಬಂದು ಅವನ ಸಮಸ್ಯೆಯನ್ನು ಕೂಡಲೇ ಪರಿಹರಿಸಿದರು.
Rating
Comments
ಉ: ಚುರ್ಮುರಿ - ೧೮
In reply to ಉ: ಚುರ್ಮುರಿ - ೧೮ by makara
ಉ: ಚುರ್ಮುರಿ - ೧೮
ಉ: ಚುರ್ಮುರಿ - ೧೮
ಉ: ಚುರ್ಮುರಿ - ೧೮
In reply to ಉ: ಚುರ್ಮುರಿ - ೧೮ by kavinagaraj
ಉ: ಚುರ್ಮುರಿ - ೧೮
ಉ: ಚುರ್ಮುರಿ ೧೮ @ ಚ್ಹಿಕ್ಕು
ಉ: ಚುರ್ಮುರಿ - ೧೮
ಉ: ಚುರ್ಮುರಿ - ೧೮
ಉ: ಚುರ್ಮುರಿ - ೧೮
ಉ: ಚುರ್ಮುರಿ - ೧೮
ಉ: ಚುರ್ಮುರಿ - ೧೮
ಉ: ಚುರ್ಮುರಿ - ೧೮
In reply to ಉ: ಚುರ್ಮುರಿ - ೧೮ by Chikku123
ಉ: ಚುರ್ಮುರಿ - ೧೮