ಸಂಸ್ಕಾರ!

ಸಂಸ್ಕಾರ!


ತಮ್ಮ ವಿಶಿಷ್ಟ ಸಂಸ್ಕೃತಿ ಮತ್ತು ಧಾಮರ್ಿಕ ಆಚರಣೆಗಳಿಂದ ಬಹು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವವರು, ಟಿಬೆಟ್ ಜನತೆ.

ಟಿಬೆಟ್ ಬೌದ್ಧ ಬಿಕ್ಕುಗಳ ನಾಡು. ಈ ಬೌದ್ಧರ ನೆಲೆ ಸಮುದ್ರ ಮಟ್ಟದಿಂದ 19.000 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿ ಬೌದ್ಧರು ಬಹು ಪಾಲಿದ್ದರೂ ಸಹ, ಕ್ರಿಶ್ಚಿಯನ್, ಇಸ್ಲಾಂ ಮತ್ತು ಹಿಂದೂ ಧಮರ್ಿಯರು ಇದ್ದಾರೆ.

ಸಾಮಾನ್ಯವಾಗಿ ನಮ್ಮಲ್ಲಿ ಅಂದ್ರೆ ಹಿಂದೂಗಳು ಶವಗಳನ್ನು ಮಣ್ಣು ಮಾಡುವ, ಇಲ್ಲವೇ ಸುಡುವ ಆಚರಣೆಯನ್ನು ಕಾಣಬಹುದು. ಆದ್ರೆ ಟಿಬೆಟಿಯನ್ನರು ವಿವಿಧ ರೀತಿಯ ಶವ ಸಂಸ್ಕಾರಗಳನ್ನ ಅನುಸರಿಸ್ತಾರೆ. ಅಂತಹ ವಿಧಾನಗಳು ಬೇರೆಯವರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಕಾಣಬಹುದು. ಅಂತಹ ಆಚರಣೆಗಳಲ್ಲಿ ಆಕಾಶ ಶವಸಂಸ್ಕಾರವೂ ಒಂದು.

ಆಕಾಶ ಸಂಸ್ಕಾರವನ್ನು ಉಳ್ಳವರು ಮಾಡಬಹುದಾಗಿದೆ. ಇಲ್ಲದವ್ರು ಕಡಿಮೆ ಪ್ರಮಾಣದಲ್ಲಿ ಬಳಸುವಂತದ್ದು ನೀರಿನ ಸಂಸ್ಕಾರ. ಇದಲ್ಲದೆ ಮತ್ತೊಂದು ಸಂಸ್ಕಾರ ವಿಧಾನವನ್ನು ಬಳಸುತ್ತಾರೆ, ಅದುವೇ ಸ್ತೂಪ ಸಂಸ್ಕಾರ.

ಆಕಾಶ ಸಂಸ್ಕಾರ

ಆಕಾಶ ಸಂಸ್ಕಾರ ಅಂದ್ರೆ ಮೃತ ದೇಹವನ್ನು ರಣಹದ್ದುಗಳಿಗೆ ನೀಡುವುದು. ರಣಹದ್ದುಗಳು ಮಾಂಸವನ್ನು ತಿಂದು ಆಕಾಶಕ್ಕೆ ವಾಪಾಸ್ಸಾಗುತ್ತವೆ. ಹೀಗೆ ಮಾಡಿದಾಗ ಮೃತನಾದ ವ್ಯಕ್ತಿ ನೇರ ಸ್ವರ್ಗಕ್ಕೆ ಹೋಗುತಾನೆಂಬ ನಂಬಿಕೆ. ಹಾಗಂತ ಎಲ್ಲರೂ ಈ ರೀತಿಯ ಸಂಸ್ಕಾರಕ್ಕೆ ಅರ್ಹರಲ್ಲ. 18 ವರ್ಷ ಹೊರತುಪಡಿಸಿದ ಮಕ್ಕಳು, ಗಭರ್ಿಣಿಯರು ಮತ್ತು ಖಾಯಿಲೆ, ಅಪಘಾತಗಳಿಗೆ ಬಲಿಯಾದವರು ಇದಕ್ಕೆ ಯೋಗ್ಯರಲ್ಲ. ಹಾಗಾಗಿ ಆಕಾಶ ಸಂಸ್ಕಾರ ಇಂದಿಗೂ ಸಹ ಟಿಬೆಟಿನ ನಿಗೂಢಗಳಲ್ಲಿ ಒಂದಾಗಿದೆ.

ಆಕಾಶ ಸಂಸ್ಕಾರದ ಹಿಂದೆ ಪವಿತ್ರ ಮತ್ತು ಮಹತ್ತರವಾದ ಅರ್ಥವಿದೆ. ನಶ್ವರ ಜೀವನವನ್ನು ಅನುಭವಿಸಲು, ಸಾವನ್ನು ಬಹಿರಂಗವಾಗಿ ಎದುರಿಸಲು ಈ ಧಾಮರ್ಿಕ ಸಾಕ್ಷಿ ಪ್ರೇರಣೆಯಾಗುತ್ತದೆ. ಟಿಬೆಟಿಯನ್ನರು ಹೆಣವನ್ನು ಮುಚ್ಚಿಡುವಲ್ಲಿ ಯಾವುದೇ ನಂಬಿಕೆಯನ್ನು ಇರಿಸಿಲ್ಲ. ಮೃತನ ಆತ್ಮ ದೇಹವನ್ನು ಬಿಟ್ಟು, ಮರುಜನ್ಮದ ವೃತ್ತದಲ್ಲಿ ಸಂಚಾರಕ್ಕೆ ಹೋಗುತ್ತದೆ.


ಈ ವಾದವನ್ನು ಡ್ರಿಗಂಗ್ ಬೌದ್ಧ ಮಂದಿರದ ಅನುಯಾಯಿಗಳು ಬಹುವಾಗಿ ನಂಬಿದ್ದಾರೆ. ಹಾಗಾಗಿ ಈ ಮಂಜಿನ ನೆಲದಲ್ಲಿ ಇಂತದ್ದೊಂದು ಆಚರಣೆಯನ್ನು ಜಾರಿಗೆ ತಂದಿದ್ದಾರೆ. ಆದಾಗ್ಯೂ ಸಹ ಇನ್ನೊಂದು ವಾದದ ಪ್ರಕಾರ ಶವವನ್ನು ರಣಹದ್ದುಗಳಿಗೆ ನೀಡುತ್ತಾರೆ. ಈ ರಣಹದ್ದುಗಳು ಡಾಕಿನಿಗಳು. ಅಂದ್ರೆ ಟಿಬೆಟಿಯನ್ನರ ದೇವತೆಗಳಿಗೆ ಸಮವಾದ ಶಕ್ತಿಗಳು. ಟಿಬೆಟ್ ಭಾಷೆಯಲ್ಲಿ ಡಾಕಿನಿ ಅಂದ್ರೆ ಆಕಾಶದ ನರ್ತಕ ಅಂತರ್ಥ. ಹಾಗಾಗಿ ಡಾಕಿನಿಗಳು ಆತ್ಮವನ್ನು ನೇರ ಸ್ವರ್ಗಕ್ಕೆ ಕರೆದೊಯ್ಯುತ್ತಾರೆ. ಸ್ವರ್ಗಕ್ಕೆ ಹೋದ ಆತ್ಮಗಳು ತಮ್ಮ ಪುರ್ನಜನ್ಮದ ಅವಧಿಯವರೆಗೂ ಅಲ್ಲೇ ಕಾಯಬೇಕಾಗುತ್ತದೆ ಅನ್ನೋ ನಂಬಿಕೆಯಿದೆ.

ಹೀಗೆ ರಣಹದ್ದುಗಳಿಗೆ ಮೃತ ದೇಹವನ್ನು ನೀಡುವುದು ಸದ್ಗುಣಶೀಲತೆ. ಒಂದ್ವೇಳೆ ಈ ಆಹಾರ ಸಿಗದೇ ಹೋಗದೇ ಇದ್ದಾಗ, ಸಾಯಬೇಕಿದ್ದ ಅದೆಷ್ಟೋ ಪ್ರಾಣಿಗಳು ಉಳಿಸಿದಂತಾಗುತ್ತದೆ. ಬೌದ್ಧರ ಗುರುಗಳಲ್ಲಿ ಒಬ್ಬರಾದ ಶಾಕ್ಯಮುನಿ, ಗಿಡುಗವೊಂದಕ್ಕೆ ತನ್ನ ದೇಹದ ಮಾಂಸದ ತುಣುಕನ್ನು ನೀಡುವ ಮೂಲಕ ಇಂಥ ಸದ್ಗುಣವನ್ನು ಪ್ರದಶರ್ಿಸಿದ್ದ.

ಸಾವಿನ ನಂತರ ಶವವನ್ನ ಮೂರು ದಿನಗಳ ಕಾಲ ಮನೆಯಲ್ಲೇ ಇಟ್ಟಿರ್ತಾರೆ. ಬೌದ್ಧ ಬಿಕ್ಕುಗಳು ಶವದ ಸುತ್ತ ಕೂತು ಮಂತ್ರ ಪಠಣೆ ಮಾಡುತ್ತಾರೆ. ಶವ ಸಂಸ್ಕಾರದ ಹಿಂದಿನ ದಿನ ಮೃತ ದೇಹವನ್ನು ಶುಚಿಗೊಳಿಸಿ, ಬಿಳಿ ಬಟ್ಟೆಯಲ್ಲಿ ಸುತ್ತಿ ಇಡಲಾಗುತ್ತದೆ. ಮೃತ ದೇಹವನ್ನು ಹುಟ್ಟಿದಾಗಿನ ಆಕಾರದಲ್ಲಿ ಅಂದ್ರೆ ಭ್ರೂಣದ ಅವಸ್ಥೆಯಲ್ಲಿರಿಸಲಾಗಿರುತ್ತದೆ. ಮುಂಜಾನೆಗೂ ಮುಂಚೆ ಸಂಸ್ಕಾರವನ್ನು ಮಾಡ್ತಾರೆ.

ಲಾಮ ಗುರು ಸಂಸ್ಕಾರದ ಕೈಂಕರ್ಯವನ್ನು ಸ್ಮಶಾನದಲ್ಲಿ ಮಾಡುತ್ತಾರೆ. ಮಂತ್ರಗಳ ಮೂಲಕ ಆತ್ಮಕ್ಕೆ ಮಾರ್ಗದರ್ಶನ ನೀಡುತ್ತಾರೆ. ಟಿಬೆಟ್ನಲ್ಲಿ ಕೆಲವೇ ಕೆಲವು ಸ್ಮಶಾನಗಳಿವೆ. ಇಂಥ ಸ್ಮಶಾನಗಳನ್ನು ಬೌದ್ಧ ಮಂದಿರಗಳಿಗೆ ಹತ್ತಿರಲ್ಲಿ ನಿಮರ್ಾಣ ಮಾಡಲಾಗಿರುತ್ತದೆ. ಆಕಾಶ ಸಂಸ್ಕಾರವನ್ನು ನೋಡೋಕೆ ಕೆಲವರಿಗೆ ಮಾತ್ರ ಅವಕಾಶವಿರುತ್ತದೆ. ಹಾಗೆಯೇ ಕೆಲವರಿಗೆ ಮಾತ್ರ ಇಲ್ಲಿಗೆ ಬರೋ ಸ್ವಾತಂತ್ರ್ಯವಿರುತ್ತದೆ.

ಮಂತ್ರ ಪಠಿಸಿದ ನಂತ್ರ, ದೇಹವನ್ನು ಹದ್ದುಗಳಿಗೆ ನೀಡುವ ಸಲುವಾಗಿ ಕತ್ತರಿಸಲಾಗುತ್ತದೆ. ಸುತ್ತಿದ ದೇಹವನ್ನು ಬಿಡಿಸಿಟ್ಟು, ಮೊದಲಿಗೆ ದೇಹದ ಮೂತ್ರ ಪಿಂಡಗಳನ್ನು ಕತ್ತರಿಸುತ್ತಾರೆ. ಸಣ್ಣ ಕಸಾಯಿ ಕತ್ತಿ ಮತ್ತು ಕೊಡಲಿಗಳನ್ನು ಬಳಸಿ ಒಂದು ನಿಖರ ಮತ್ತು ನಿದರ್ೀಷ್ಟ ರೀತಿಯಲ್ಲಿ ದೇಹ ಕತ್ತರಿಸುತ್ತಾರೆ. ದೇಹದೊಳಗಿನ ಭಾಗಗಳನ್ನು ಸಣ್ಣದಾಗಿ ಕತ್ತರಿಸುತ್ತಾರೆ.

ಕತ್ತರಿಸಿದ ಮಾಂಸದ ಜೊತೆ ಜಜ್ಜಿದ ಮೂಳೆಗಳನ್ನು ಸ್ಟಂಪ್ನೊಂದಿಗೆ ಬೆರೆಸುತ್ತಾರೆ. ಈ ಸ್ಟಂಪ್ ಅಂದ್ರೆ ಬಲರ್ಿ ಹಿಟ್ಟು, ಓಕ್ನ ಹಾಲು ಅಥ್ವಾ ತುಪ್ಪ ಮತ್ತು ಚಹಾದಿಂದ ಮಾಡಿದ ಮಿಶ್ರಣವಾಗಿದೆ. ಗಂಧದ ಕಡ್ಡಿಗಳು ಉರಿಯುವ ಮೂಲಕ ಮುಂದಿನ ಕಾರ್ಯಕ್ಕೆ ರಣಹದ್ದುಗಳನ್ನು ಆಹ್ವಾನಿಸುತ್ತವೆ.

ದೇಹವನ್ನು ಕತ್ತರಿಸುತ್ತಿದ್ದರೆ, ವಿಕಾರ ಮತ್ತು ದೊಡ್ಡ ಗಾತ್ರದ ನೂರಾರು ಪಕ್ಷಿಗಳು, ಕಸಾಯಿಯವನ ಸುತ್ತಲೂ ಬರುವ ಮೂಲಕ, ಹಬ್ಬದ ಸಂಭ್ರಮವನ್ನು ರೂಪಿಸುತ್ತವೆ. ಪೂರ್ಣ ಪ್ರಮಾಣದಲ್ಲಿ ದೇಹವನ್ನು ಕತ್ತರಿಸಿದ ಮೇಲೆ ಪುಡಿ ಮಾಡಿದ ಮೂಳೆಗಳನ್ನ ಮತ್ತು ಸ್ಟಂಪ್ನ್ನೊಂದಿಗೆ ಬೆರೆಸಿ ರುದ್ರಭೂಮಿಯಲ್ಲಿ ಎರಚುತ್ತಾರೆ. ಹಾಗೆ ಎಸೆದ ಕೂಳನ್ನು ಸ್ವಾದೀನ ಪಡಿಸಿಕೊಳ್ಳಲು ಹಕ್ಕಿಗಳು ಜಿಗಿದಾಡುತ್ತವೆ.

ಪೂತರ್ಿ ಆಹಾರವನ್ನ ಹಕ್ಕಿ ತಿಂದ ನಂತರವೇ ಆತ್ಮ ಸ್ವರ್ಗಕ್ಕೆ ಸೇರುತ್ತೆ ಅನ್ನೋ ಭರವಸೆ ಮೂಡುವುದು. ಮೊದಲು ಮೂಳೆಗಳ ಮಿಶ್ರಣ ನಂತರ, ಅಂಗಗಳು, ಕೊನೆಗೆ ಮಾಂಸದ ಮಿಶ್ರಣವನ್ನು ರಣಹದ್ದುಗಳಿಗೆ ನೀಡಲಾಗುತ್ತದೆ.

ಈ ಅತೀಂದ್ರೀಯ ಸಂಪ್ರದಾಯ ಟಿಬೆಟಿಯರಲ್ಲದವರಲ್ಲಿ ಕುತೂಹಲವನ್ನು ಉಂಟುಮಾಡುತ್ತದೆ. ಪೋಟೋ ತೆಗೆಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪೋಟೋ ತೆಗೆಯೋದ್ರಿಂದ ಆತ್ಮಾರೋಹಣದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಆಕಾಶ ಸಂಸ್ಕಾರದ ಜೊತೆಗೆ ಇನ್ನಷ್ಟು ಸಂಸ್ಕಾರದ ವಿಧಿ-ವಿಧಾನಗಳಿವೆ.

ಜಲ ಸಂಸ್ಕಾರ

ನೀರಿನ ಅಂತ್ಯಕ್ರಿಯೆ ಸಾಮಾನ್ಯವಾಗಿ ಕೆಳವರ್ಗದ ಜನ್ರ ಆಚರಣೆ. ಮುಖ್ಯವಾಗಿ ಬಿಕ್ಷುಕರು, ವಿಧವೆಯರು, ವಿಧುರರು, ಅನಾಥರು ಮತ್ತು ಮಕ್ಕಳ ಶವ ಸಂಸ್ಕಾರವನ್ನು ನೀರಿನ ಅಂತ್ಯಕ್ರಿಯೆಯಲ್ಲಿ ಮಾಡುತ್ತಾರೆ. ಕತ್ತರಿಸಿದ ಅಂಗಗಗಳನ್ನು ಪ್ರವಾಹಕ್ಕೆ ಎಸೆಯುತ್ತಾರೆ. ಇನ್ನೂ ಕೆಲವೆಡೆ ಬಿಳಿ ವಸ್ತ್ರದಲ್ಲು ಸುತ್ತಿದ ಮೃತದೇಹವನ್ನು ಹಾಗೆ ನೀರಿಗೆ ಎಸೆದು ಬಿಡುತ್ತಾರೆ. ಇಂಥಹ ಆಚರಣೆ ದಕ್ಷಿಣ ಟಿಬೆಟ್ನ ಕಣಿವೆಗಳಲ್ಲಿ ಪ್ರಸಿದ್ಧಗೊಂಡಿದೆ. ಈ ಪ್ರಾಂತ್ಯದಲ್ಲಿ ರಣಹದ್ದುಗಳಿಲ್ಲದ ಕಾರಣ ನೀರಿನ ಸಂಸ್ಕಾರ ಪ್ರಸಿದ್ಧಿ ಹೊಂದಿದೆ.

ಶವದಹನ ಸಂಸ್ಕಾರದ ಅವಕಾಶ ಲಾಮ ಮತ್ತು ಅಗ್ರ ಗಣ್ಯರಾಗಿ ಹುಟ್ಟಿರುವಂಥವರಿಗೆ ಮಾತ್ರ. ಹೀಗೆ ಸುಟ್ಟ ಶವದ ಬೂದಿಯನ್ನು ಎತ್ತರದ ಬೆಟ್ಟಗಳ ಮೇಲೆ ಇಲ್ಲವೇ ನದಿಯಲ್ಲಿ ಬಿಡುತ್ತಾರೆ. ಸುಟ್ಟ ಪವಿತ್ರ ಬೂದಿಯನ್ನು ಸ್ತೂಪಗಳಲ್ಲಿ ಗೌರವಾರ್ಥ ಇರಿಸಲಾಗುತ್ತದೆ. ಅಲ್ಲದೆ ಬೌದ್ಧ ಮಂದಿರಗಳಲ್ಲಿಯೂ ಸಂರಕ್ಷಿಸಲಾಗುವುದು

ಸ್ತೂಪ ಸಂಸ್ಕಾರ ಕೇವಲ ಅಗ್ರಗಣ್ಯ ಲಾಮಗಳಿಗೆ ಮಾತ್ರ ಕಾಯ್ದಿರಿಸಿದ ಆಚರಣೆ. ಇಂಥ ಆಚರಣೆಯಲ್ಲಿ ಲಾಮಗಳ ದೇಹವನ್ನು ಉಪ್ಪು ನೀರಿನಿಂದ ಬಣ್ಣ ಬಳಿದು, ಒಣಗಿಸುತ್ತಾರೆ. ನಂತರ ಅಮೂಲ್ಯವಾದ ಮುಲಾಮು ಮತ್ತು ಸುಗಂಧ ದ್ರವ್ಯಗಳನ್ನು ಬಳಸಿ, ಸ್ತೂಪಗಳಲ್ಲಿ ಸಂರಕ್ಷಿಸುತ್ತಾರೆ. ಇಂಥಹ ಅವಕಾಶ ಕೇವಲ ದಲೈ ಲಾಮ ಮತ್ತು ಪಂಚೇನ್ ಲಾಮಗಳಿಗೆ ಮಾತ್ರ ಸಿಗುತ್ತದೆ.  

ಒಂದೊಂದು ಹುದ್ದೆಗೂ ಒಂದೊಂದು ಸ್ತೂಪಕ್ಕೂ ವ್ಯತ್ಯಾಸವಿರುತ್ತದೆ. ದಲೈಲಾಮ ಮತ್ತು ಪಂಚೇನ್ ಲಾಮಗಳಿಗೆ ಚಿನ್ನದ ಸ್ತೂಪವನ್ನು ನೀಡಲಾಗುತ್ತದೆ. ಸ್ತೂಪಗಳನ್ನು ಚಿನ್ನದ ತಗಡಗಳಿಂದ ಮುಚ್ಚಲಾಗಿರುತ್ತದೆ.

ಆದ್ರೆ ಟ್ಸಂಗ್ಕೊಪ ಪಂಥದ ಗಾಡೆನ್ ಬೌದ್ಧ ಮಂದಿರದಲ್ಲಿ ಮಾತ್ರ ಬೆಳ್ಳಿ ಸ್ತೂಪವನ್ನು ಕಾಣಬಹುದು. ಇದಲ್ಲದೆ ಕಂಚಿನ, ಮರದ ಮತ್ತು ಮಣ್ಣಿನ ಸ್ತೂಪಗಳನ್ನು ಕಾಣಬಹುದು. ಶಿಶುಗಳ ಸಂಸ್ಕಾರ ಬೇರೆಯದ್ದೇ ರೂಪದ್ದಾಗಿದೆ. ಮಣ್ಣಿನ ಮಡಿಕೆಯೊಳಗೆ ದೇಹವನ್ನು ಇರಿಸುತ್ತಾರೆ. ಬಾಯಿಯನ್ನು ಮುಚ್ಚಿ ನದಿಗೆ ಎಸೆಯುತ್ತಾರೆ.


ಶವಪೆಟ್ಟಿಗೆಗಳ ಪರ್ವತ

ಟಿಬೆಟ್ನ ಮತ್ತೊಂದು ಭುಜ ಚೀನಾಕ್ಕೊರಗಿಕೊಂಡಿದೆ. ಟಿಬೆಟ್ನ ಆಚರಣೆಯಂತೆ ಇಲ್ಲಿಯೂ ಭಿನ್ನ ಆಚರಣೆಗಳನ್ನು ಕಾಣಬಹುದು. ಚೀನಾದ ನೈರುತ್ಯ ಭಾಗದ ಸಿಯಾಚೀನ್ ಪ್ರಾಂತ್ಯದ ಕಣಿವೆ ಸಾಲುಗಳ ಮಧ್ಯೆ ಹಾಗೆ ಕಣ್ಣಾಯಿಸುತ್ತಾ ಹೋದ್ರೆ ಬೆಚ್ಚಿ ಬೀಳಿಸುವ ಪ್ರತಿಮೆಗಳು ಎದುರಾಗುತ್ತವೆ. ಅವು ಶವದ ಪೆಟ್ಟಿಗೆಗಳೆಂದು ಭಾಸವಾಗುತ್ತದೆ. ಇಂತಹ ಭಯಾನಕ ಶವ ಪೆಟ್ಟಿಗೆಗಳನ್ನು ಫಿಲಿಫೈನ್ಸ್ನಲ್ಲೂ ಕಾಣಬಹುದು.
 
ಇಲ್ಲಿ ಯಾಕೆ ಶವ ಪೆಟ್ಟಿಗೆಗಳನ್ನು ಇಟ್ಟಿದ್ದಾರೆಂಬ ಪ್ರಶ್ನೆ ಕಾಡುತ್ತದೆ. ಅಲ್ಲದೆ ಇಂತದ್ದೊಂದು ಆಚರಣೆ ಯಾಕೆ ಮಾಡುತ್ತಿದ್ದರು? ಯಾರು ಮಾಡುತ್ತಿದ್ದರು? ಅನ್ನೋ ಪ್ರಶ್ನೆಗಳು ಕಾಡುತ್ತವೆ.

ವಿಶೇಷ ಅಂದ್ರೆ ಇಂತಹ ಶವ ಪೆಟ್ಟಿಗೆಗಳು ಇಂದು ನಿನ್ನೆಯವಲ್ಲ. ಹಾಗಾದ್ರೆ ಈ ಪೆಟ್ಟಿಗೆಗಳು ಯಾವ ಕಾಲದವು ಅನ್ನೋ ಪ್ರಶ್ನೆಗಳ ಸರಮಾಲೆಯಲ್ಲಿ ಸಿಲುಕಬೇಕಾಗುತ್ತದೆ. ಇದಕ್ಕೆ ಉತ್ತರ ಅಂತ ಸಿಗೋದು ಇತಿಹಾಸದಲ್ಲಿ.

ಇದು ಬೋ ಜನಾಂಗದ ಆಚರಣೆ. ಬೋ ಜನಾಂಗ ಚೀನಾದ ಸಿಯಾಚೀನ್ ಪ್ರಾಂತ್ಯದಲ್ಲಿ ಸುಮಾರು ಮೂರು ಸಾವಿರ ವರ್ಷಗಳ ಹಿಂದೆ ವಾಸವಾಗಿತ್ತು. ಅಷ್ಟು ಹಿಂದೆಯೇ ಈ ಜನಾಂಗ ಬುದ್ದಿವಂಕೆಯ ಸಂಸ್ಕೃತಿಯನ್ನು ರೂಪಿಸಿತ್ತು.

ಬೋ ಜನಾಂಗ ಇತ್ತರೆ ಜನಾಂಗಗಳಿಗಿಂತ ಭಿನ್ನ. ಯಾಕಂದ್ರೆ ಈ ಜನಾಂಗದವ್ರ ಶವ ಸಂಸ್ಕಾರ ಪದ್ಧತಿ ಹಾಗಿದೆ. ಮೃತ ದೇಹವನ್ನು ಬಣ್ಣ  ಹಾಕಿರದ, ಗಟ್ಟಿಮುಟ್ಟಾದ ಮರದ ಹಲಗೆಗಳಿಂದ ಮಾಡಿದ ಪೆಟ್ಟಿಗೆಗಳಲ್ಲಿ ಇರಿಸುತ್ತಾರೆ. ನಂತರ ಅಂತಹ ಪೆಟ್ಟಿಗೆಗಳನ್ನು ನಂತರ ಗುಹೆ ಇಲ್ಲವೇ ಬೆಟ್ಟಗಳ ಮೇಲೆ ನೇತಾಡುವಂತೆ ಇಟ್ಟು ಬರುತ್ತಿದ್ದರು. ಇಂತಹ ಪೆಟ್ಟಿಗೆಗಳು ಕೇವಲ ಮರದ ಹಲಗೆಗಳಿಂದ ವಿವಿಧ ರೂಪದಲ್ಲಿ ಮಾಡಿರುತ್ತಿದ್ದರು.

ಮೃತರ ಆತ್ಮಗಳು ಮತ್ತೇ ನಮ್ಮ ನಾಡಿನಲ್ಲೆ ನೆಲೆಸಲಿ ಎಂಬ ಭಾವನೆಯಿಂದ ತಮ್ಮ ಬಂಧುಗಳ ಶವಗಳನ್ನು ಮರದ ಪೆಟ್ಟಿಗೆಗಳಲ್ಲಿರಿಸಿ, ಬೆಟ್ಟ ಮತ್ತು ಗುಹೆಗಳಲ್ಲಿ ಇಡುತ್ತಾರೆ. ಶವವನ್ನು ಮನೆಯಿಂದ ಸ್ಮಶಾನಕ್ಕೆ ಹೊತ್ತೊಯ್ಯುವಾಗ ಮೂರು ಇಲ್ಲವೇ ನಾಲ್ಕು ಕಡೆ ನಿಲ್ಲಿಸುತ್ತಾರೆ. ಒಂದು ವೇಳೆ ಮೃತ ವ್ಯಕ್ತಿಯ ಪತ್ನಿ ಇಲ್ಲವೇ ಪತಿ ಬದುಕಿದ್ದರೆ 3 ಕಡೆ, ಪತಿ/ಪತ್ನಿ ಇಬ್ಬರೂ ಇಲ್ಲದಿದ್ದರೆ 4 ಕಡೆ ನಿಲ್ಲಿಸುತ್ತಾರೆ. ಮೃತರ ಮನೆಯಲ್ಲು ಮೂರು ವರ್ಷಗಳ ಕಾಲ ಸೂತಕವನ್ನು ಆಚರಿಸುತ್ತಾರೆ. ಆ ಸಂದರ್ಭದಲ್ಲಿ ಮೃತರ ಕುಟುಂಬ ಪುರುಷರು ಮಧ್ಯ ಕುಡಿಯುವಂತಿಲ್ಲ, ಮಹಿಳೆಯರು ಆಭರಣಗಳನ್ನು ಧರಿಸುವಂತಿಲ್ಲ. ಅಲ್ಲದೆ ಮದುವೆಗಳು ನಡೆಯುವಂತಿಲ್ಲ.

ಈ ಶವ ಪೆಟ್ಟಿಗೆಗಳೇ ಬೋ ಜನತೆಯ ಪುರಾವೆಗಳನ್ನು ಸಾರಿ ಹೇಳಲು ಉಳಿದಿರುವ ಸಾಕ್ಷ್ಯಗಳು.

ಇಂತಹ ನೇತಾಡುವ ಶವ ಪೆಟ್ಟಿಗೆಗಳನ್ನು ಮುಖ್ಯವಾಗಿ ಮತಂಗ್ಬ ಸುಮ್ವಾನ್ಗಳಲ್ಲಿನ ಸುಣ್ಣ ಕಲ್ಲಿನ ಬೆಟ್ಟಗಳಲ್ಲಿ ಕಾಣಬಹುದು. ಇಂತ ಬೆಟ್ಟಗಳ ಎರಡೂ ಬದಿಯ ಸುಮಾರು 5 ಸಾವಿರ ಮೀಟರ್ಗಳವರೆಗೂ ನೇತಾಡುವ ಶವ ಪೆಟ್ಟಿಗೆಗಳನ್ನು ಕಾಣಬಹುದು.

ತೀರ ಇತ್ತೀಚಿನ ಶವ ಪೆಟ್ಟಿಗೆಗಳು ಸಹ ಸುಮಾರು 400 ವರ್ಷಗಳ ಹಿಂದಿನ ಕಾಲದವ್ವು. ಅಂದ್ರೆ ಮಿಂಗ್ ರಾಜಮನೆತನದ ಕಾಲದವು.

ಇದ್ದಕ್ಕೂ ಮುನ್ನ ಅಂದ್ರೆ ಒಂದು ಸಾವಿರ ವರ್ಷಗಳ ಹಿಂದಿನ ಶಾಂಗ್ ರಾಜಮನೆತನದಲ್ಲಿ ಬಳಸಿರುವುದು ಕಂಡು ಬರುತ್ತದೆ. ಇದಲ್ಲದೆ ಕ್ರಿ.ಪೂ. 722-481ರ ಸ್ಪ್ರಿಂಗ್ ಮತ್ತು ಆಟೋಮನ್ರ ಕಾಲದಲ್ಲಿ ಕಾಣಬಹುದು.

ನೈರುತ್ಯ ಚೀನಾದಲ್ಲಿ ಇಂಥ ಬಳಕೆ ಬಹಳವಾಗಿರೋದನ್ನು ಕಾಣಬಹುದು. ಬೋ ಜನರ ಕಣ್ಮರೆಯ ಜೊತೆಗೆ ಇಂತ ಆಚರಣೆ ಕೂಡ ಇಂದು ಕಣ್ಮರೆಯಾಗುತ್ತಿದೆ. ಹಾಗಾಗಿ ಸಂಸ್ಕೃತಿ ನಶಿಸಿ ಹೋಗುತ್ತಿರುವುದರಿಂದ ಪೆಟ್ಟಿಗೆಗಳಲ್ಲಿ ಬೋ ಜನರ ಪೂರ್ವಜರ ಬೆಟ್ಟ ಮತ್ತು ಗುಹೆಗಳಿಂದ ಅನುರಣಿಸುತ್ತಿದೆ.

ಇಂಥ ಜನ ಮಿಂಗ್ ಆಡಳಿತದಲ್ಲಿ ಉಂಟಾದ ನರಮೇಧದಲ್ಲಿ ಕಳೆದು ಹೋದರು. ಇಂದಿಗೂ ಅಳಿದುಳಿದ ಬೋ ಜನ ಸಿಯಾಚಿನ್ ಭಾಗದಲ್ಲಿ ಕಾಣಬಹುದು. 1949ರಿಂದಲ್ಲೂ ಚೀನಾ ಗಣರಾಜ್ಯ ನೇತಾಡುವ ಶವಪೆಟ್ಟಿಗೆಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಿದೆ.

 ಚಿತ್ರಕೃಪೆ : ಅಂತರ್ಜಾಲ

 

 

Comments