ಮನಸೇ ಓ ಚಂಚಲ ಮನಸೇ
ನೀ ಇದ್ದದ್ದು ಬಿಟ್ಟು ಇಲ್ಲದ್ದು ನೀ ಬಯಸ್ತಿಯಾ
ಲಕ್ಷ ಸಿಕ್ಕರೆ ಕೋಟಿ ನೀ ಬಯಸ್ತಿಯಾ
ಆರ್ ಸಿ ಸಿ ಮನೆ ಇದ್ದು ಅರಮನೆ ನೀ ಬಯಸ್ತಿಯಾ
ದ್ವಿಚಕ್ರ ಇದ್ದು ನಾಲ್ಕು ಚಕ್ರದ ವಾಹನ ನೀ ಬಯಸ್ತಿಯಾ
ಹೆಣ್ಣು ಮಗು ಇದ್ದು ಗಂಡು ಮಗು ನೀ ಬಯಸ್ತಿಯಾ
ಮಕ್ಕಳು ಆದ ಮೇಲೆ ಮೊಮ್ಮಕ್ಕಳನ್ನು ನೀ ಬಯಸ್ತಿಯಾ
ನಾಳೆ ಸಾಯುವ ವೇಳೆ ಬಂದರೆ ಇನ್ನು ನಾಲಕ್ಕು ದಿನ ಇರಬೇಕು ಅಂತ ನೀ ಬಯಸ್ತಿಯಾ
ಮನಸ್ಸಿನ ಬಯಕೆ ಇದು ಕೊನೆಯಿಲ್ಲದ ಬಯಕೆ
ಇಂತಿ ನಿಮ್ಮ ಪ್ರೀತಿಯ ಕಿರು ಕವಿ,
ಸಿದ್ದರಾಮ ಏನ್ ಕೊರಪಳ್ಳಿ
ಶಹಾಬಾದ್, ಗುಲ್ಬರ್ಗಾ
ಕರ್ನಾಟಕ, ಭಾರತ
Comments
ಉ: ಮನಸೇ