ಅಮುಲ್ ಪೌಡರ್

ಅಮುಲ್ ಪೌಡರ್

ಸಣ್ಣವರಿದ್ದಾಗ ಅಮ್ಮ ಸೌದೆ ತರಲೋ ಇಲ್ಲ ಎತ್ತಿಗೆ ಮುಸುರೆ ಕೊಡಲು ಹೋದಾಗ, ಕದ್ದು ತಿನ್ನಲು ಅಡಿಗೆ ಮನೆಗೆ ಹೋಗಿ ಡಬ್ಬಿಯನ್ನು ಜಾಲಾಡುತ್ತಿದ್ದಾಗ ಕೋಡುಬಳೆಯೋ, ಕರ್ಜಿಕಾಯಿಯೋ, ಶಂಕರಪಾಳವೋ ಖಾಲಿಯಾಗಿದ್ದರೆ ಸಿಗುತ್ತಿದ್ದ ತಿಂಡಿಯೇ ಅಮುಲ್ ಪೌಡರ್!!, ಬೇಗ ಬೇಗನೆ ಅದರಲ್ಲಿದ್ದ ಪ್ಲಾಸ್ಟಿಕ್ ಚಮಚದಿಂದ ಬಾಯಿಗೆ ೩-೪ ಚಮಚದಷ್ಟನ್ನು ಹಾಕಿಕೊಂಡು (ಜಾಸ್ತಿ ಹಾಕಿಕೊಳ್ಳುವುದಕ್ಕೆ ಬಾಯಿಗೆ ಹೋಗುತ್ತಿದ್ದದ್ದೇ ಅಷ್ಟು!) ಓಡುವಾಗ ಅಕಸ್ಮಾತ್ ಅಮ್ಮ ಸಿಕ್ಕಿ ಹಿಡಿದರೂ ಹೇಗೋ ತಪ್ಪಿಸಿಕೊಂಡು ಓಡಿ ಪೌಡರಿನ ರುಚಿಯನ್ನ ಚಪ್ಪರಿಸುತ್ತ್ತಿದ್ದ ಸಂದರ್ಭ. ಅಷ್ಟೇ ಏಕೆ ನಮ್ಮ ಮೈಮನಗಳನ್ನು ತಣಿಸಿದ ಕಾಫಿಗೆ ಹಾಲಾಗುತ್ತಿದ್ದ ಪೌಡರ್. ಇಂದು ಅದರ ಜನಕನನ್ನು ಕಳೆದುಕೊಂಡಿದೆ. ನಮ್ಮ ಬಾಲ್ಯಕ್ಕೊಂದು ಕೊಡುಗೆ ಕೊಟ್ಟ ಆ ಜನಕನಿಗೊಂದು ನಮನ.
Rating
No votes yet

Comments