ಭಾರತದಲ್ಲಿ ಹಾಲಿನ ಕ್ರಾಂತಿಯ ಹರಿಕಾರ ಡಾ. ಕುರಿಯನ್ ವರ್ಗಿಸ್ ಇನ್ನಿಲ್ಲ
'ಹಾಲಿನ ಕ್ರಾಂತಿಯ ಹರಿಕಾರ' ೯೦ ರ ಹರೆಯದ 'ಡಾ. ವರ್ಗಿಸ್ ಕುರಿಯನ್', ಗುಜರಾಥಿನ ನಾಡಿಯಾಡ್ ನ, ಪಟೇಲ್ ಯೂರೊಲಾಜಿಕಲ್ ಆಸ್ಪತ್ರೆಯಲ್ಲಿ ರವಿವಾರ, (೦೯-೦೯-೨೦೧೨) ಮುಂಜಾನೆ, ೧-೧೫ ಕ್ಕೆ ನಿಧನರಾದರು. ದೀರ್ಘಕಾಲದಿಂದ ಬಳಲಿದ್ದ ಕುರಿಯನ್, ತಮ್ಮ ಜೀವನದ ದೀರ್ಘ ಕಾಲವನ್ನು ಹಾಲಿನ ಉತ್ಪಾದನೆಯಲ್ಲಿ ಭಾರತವನ್ನು ಮಂಚೂಣಿಯಲ್ಲಿ ತರುವ ಮಹತ್ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನವರತ ನಿಷ್ಠೆಯಿಂದ ದುಡಿದರು. ನಮ್ಮ ಭಾರತದಲ್ಲಿ ಇರುವಷ್ಟು ಹಸುಗಳು, ಎಮ್ಮೆಗಳು, ವಿಶ್ವದ ಬೇರೆಲ್ಲಿಯೂ ಇಲ್ಲ. ಅವುಗಳನ್ನು ಸರಿಯಾಗಿ ನಿಯಂತ್ರಿಸಿ, ರೈತರ ಸಹಕಾರ ಗಳಿಸಿ, ಹಾಲಿನ ಹೊಳೆಯನ್ನು ಹರಿಸುವಲ್ಲಿ ಕೈಮರವಾಗಿ ಶ್ರಮಿಸಿದ ಡಾ. ವರ್ಗಿಸ್ ಕುರಿಯನ್, ವಂದನಾರ್ಹರು !
ಆನಂದ್ ನಲ್ಲಿ 'ಎನ್.ಡಿ.ಡಿ.ಬಿ.ಯ ಸ್ಥಾಪಕ ಅಧ್ಯಕ್ಷ'ರಾಗಿ ದಶಕಗಳ ಕಾಲ ತಮ್ಮ ಅನುಪಮ ಮಾರ್ಗದರ್ಶನನೀಡಿದರು. ಅವರ ಪ್ರಯತ್ನದಿಂದ ಭಾರತದಲ್ಲಿ ಹಾಲಿನ ಕ್ರಾಂತಿಯಾಗಿ ಹಲವಾರು ರಾಜ್ಯಗಳು ಇದೇ ಜಾಡಿನಲ್ಲಿ ಸಾಗಿ ಸ್ವಸಾಮರ್ಥ್ಯವನ್ನು ಸಾಧಿಸಲು ಪ್ರೇರಣೆ ಸಿಕ್ಕಿತು. ಗುಜರಾಥ್ ನ 'ಆನಂದ್' ಗ್ರಾಮದ ಬಳಿ ಈಗ ೧೬, ೧೦೦ ಹಾಲಿನ ಡೈರಿಗಳು ತಲೆಯೇಳಲು ಕುರಿಯನ್ ರವರ ಶ್ರಮ, ಮತ್ತು ಕನಸೇ ಕಾರಣವೆಂದು ಅಲ್ಲಿನ ಹಾಲಿನ ರೈತರೆಲ್ಲಾ ಬಲ್ಲರು. ಹಾಗಾಗಿ ಸನ್ ೧೯೭೦ ರಲ್ಲಿ ಆರಂಭವಾದ ಈ ವಲಯದಲ್ಲಿ ಸುಮಾರು ೩.೨ ಮಿಲಿಯನ್ ಸದಸ್ಯ ರೈತರು ಪಾಲ್ಗೊಂಡಿದ್ದಾರೆ. ಸನ್ ೧೯೬೦ ರಲ್ಲಿ ಅಲ್ಲಿನ ಹಾಲಿನ ಉತ್ಪಾದನಾ ಸಾಮರ್ಥ್ಯ ೨೦ ಮೆಟ್ರಿಕ್ ಟನ್ಸ್ ಇತ್ತು. ಅದೇ ಸನ್ ೨೦೧೧ ರಲ್ಲಿ ೧೨೨ ಮೆಟ್ರಿಕ್ ಟನ್ ನಷ್ಟು ವೃದ್ಧಿಸಿದೆ.
ಜನನ ಮತ್ತು ಬಾಲ್ಯ :
ಸನ್, ೧೯೨೧ ರ, ನವೆಂಬರ್ ೨೬ ರಂದು, ಕೇರಳ ರಾಜ್ಯದ 'ಕೊಯಕ್ಕೋಡಿ'ಯಲ್ಲಿ ಕ್ರಿಶ್ಚಿಯನ್ ಪರಿವಾರದಲ್ಲಿ ಜನ್ಮವೆತ್ತಿದ ಕುರಿಯನ್. ಮುಂದೆ ಸನ್, ೧೯೪೦ ರಲ್ಲಿ, ಮದ್ರಾಸ್ ನ 'ಸೆಂಟ್ ಲಾಯೊಲಾ ಕಾಲೇಜ್' ನಲ್ಲಿ ಪದವಿಗಳಿಸಿ, 'ಡೈರಿ ಇಂಜಿನಿಯರಿಂಗ್' ನಲ್ಲಿ ಹೆಚ್ಚಿನ ವ್ಯಾಸಂಗವನ್ನು ನಡೆಸಿ, ಮುಂದೆ ಅದೇವಲಯದಲ್ಲಿ ಅಮೆರಿಕದಲ್ಲೂ ಶಿಕ್ಷಣ ಪಡೆದರು. ವಾಪಸ್ ಬಂದವರು, ಗುಜರಾತ್ ನ ಆನಂದ್ ನಲ್ಲಿ 'ಹಾಲಿನ ರೈತರ ಕೋ ಆಪರೇಟಿವ್ ಸೊಸೈಟಿ' ಸ್ಥಾಪನೆಯ ಕೆಲಸದಲ್ಲಿ ತಾವು ಮುಂದಾಳಾಗಿ ಸ್ಥಾಯಿಯಾಗಿ ನಿಂತು, ಅಲ್ಲಿನ ರೈತರಿಗೆ ಮಾರ್ಗದರ್ಶನಮಾಡಿದರು. ಮೊದಲು ಅವರು ಆ ಗ್ರಾಮಕ್ಕೆ ಕಾಲಿಟ್ಟಾಗ 'ಗೋಮಾಂಸ' ತಿನ್ನುತ್ತಿದ್ದ ಅವರಿಗೆ ಮನೆ ಬಾಡಿಗೆಗೆ ದೊರೆಯಲಿಲ್ಲ. ಅದಕ್ಕಾಗಿ ಅವರು ಹೆದರದೆ ದಿಟ್ಟಮನಸ್ಸಿನಿಂದ 'ಗ್ಯಾರೇಜ್' ಒಂದರಲ್ಲಿ ಕೆಲಕಾಲ ವಾಸಿಸಿದರು. ಅವರ ಕಾರ್ಯನಿಷ್ಠೆ ಮತ್ತು ಸಹಾಯಮಾಡುವ ಪ್ರವೃತ್ತಿ ನಿಧಾನವಾಗಿ ಅಲ್ಲಿನ ಹಾಲಿನ ರೈತರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯವನ್ನು ಮೂಡಿಸಿ, ಅವರೆಲ್ಲಾ ಅವರನ್ನು ಪ್ರೀತಿಸಲು ಆರಂಭಿಸಿದರು. ಡಾ.ಕುರಿಯನ್ ರಿಗೆ ಹಾಲು ಅಷ್ಟು ಇಷ್ಟವಾಗುವುದಿಲ್ಲ. ಆದರಿಂದ ಅವರು ಕುಡಿಯುವುದಿಲ್ಲ.
ಡಾ. ಕುರಿಯನ್ ರ, ವಿದ್ಯಾಭ್ಯಾಸ ಮತ್ತು ವೃತ್ತಿಜೀವನದ ಒಂದು ಕಿರು ಪರಿಚಯ :
* ೧೯೪೩ 'ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ'
* ೧೯೪೬ 'ಟಾಟಾ ಐರನ್ ಅಂಡ್ ಸ್ಟೀಲ್ ಕಂಪೆನಿ' 'ಟೆಕ್ನಿಕಲ್ ಇನ್ ಸ್ಟಿ ಟ್ಯೂಟ್ ಜಮ್ಷೆಡ್ ಪುರ್',
* ೧೯೪೮ 'ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಈಜಿನಿಯರಿಂಗ ಪದವಿ,'
* 'ಬೆಂಗಳೂರಿನ ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿ ಟ್ಯೂಟ್' ನಿಂದ ಪದವಿ.
* ಭಾರತ ಹಾಗೂ ವಿದೇಶಗಳಿಂದ ೧೭ ಗೌರವ ಡಾಕ್ಟರೇಟ್ ಪದವಿಗಳು ದೊರೆತಿವೆ.
* ಅಲಹಾಬಾದ್ ವಿಶ್ವವಿದ್ಯಾಲಯದ ಚಾನ್ಸಲರ್ (ಆಪ್ರಿಲ್ ೧೭, ೨೦೦೬ ನಿಂದಲೂ),
* ಸದಸ್ಯ, 'ಬೋರ್ಡ್ ಆಫ್ ಟ್ರಸ್ಟೀಸ್', ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಶನಲ್ ಮೆಮೋರಿಯಲ್ ಟ್ರಸ್ಟ್, ಹೊಸದೆಹಲಿ' ( ೧೯೮೬ ನಿಂದಲೂ ),
* ಸಲಹೆಕಾರರ ಸಮಿತಿಯ ಸದಸ್ಯ, 'ಸೌತ್ ಏಶ್ಯನ್ ನೆಟ್ವರ್ಕ್ ಆನ್ ಫರ್ಮೆಂಟೆಡ್ ಫೂಡ್ಸ್ ಸ್ಯಾನ್ ಫುಡ್ಸ್' (೨೦೦೪ ರಿಂದಲೂ).
* ಸಂಸ್ಥಾಪಕ ಅಧ್ಯಕ್ಷ, 'ನ್ಯಾಷನಲ್ ಡೈರಿ ಡೆವೆಲಪ್ಮೆಂಟ್ ಬೋರ್ಡ್' (೧೯೬೫-೧೯೯೮),
* 'ದ ಗುಜರಾತ್ ಕೋಆಪರೇಟೀವ್ ಮಿಲ್ಕ್ ಮಾರ್ಕೆಟಿಂಗ್ ಫೆಡೆರೇಷನ್ ಲಿಮಿಟೆಡ್' ಆನಂದ್ (೧೯೮೩-೨೦೦೬),
* ' ದ ನ್ಯಾಷನಲ್ ಕೋಆಪರೇಟೀವ್ ಡೈರಿ ಫೆಡೆರೇಶನ್ ಆಫ್ ಇಂಡಿಯ ಲಿಮಿಟೆಡ್', (೧೯೮೬-೧೯೯೩), (೧೯೯೫-೨೦೦೦), ಅನ್ದ್ (೨೦೦೩-೨೦೦೬),
* 'ಆನಂದ್ ನ, ಇನ್ಸ್ಟಿಟ್ಯೂಟ್ ನ ರೂರಲ್ ಮ್ಯಾನೇಜ್ಮೆಂಟ್ ಬೋರ್ಡ್ ಆಫ್ ಗವರ್ನರ್ಸ್', (೧೯೭೯-೨೦೦೬),
ನಿಧನ:
ಮೃತರಿಗೆ ಪತ್ನಿ (ಶ್ರೀಮತಿ ಮೊಲ್ಲಿ, ಮತ್ತು ಒಬ್ಬ ಮಗಳು (ಚಿ. ನಿರ್ಮಲಾ) ಇದ್ದಾರೆ. ಅವರ ಕಾರ್ಯವನ್ನು ಮೆಚ್ಚುವ ಅಪಾರ ವರ್ಗ ಅವರ ಹಿಂದಿದೆ. ಯಾವ ಪ್ರಚಾರವನ್ನು ಅಪೇಕ್ಷಿಸಿದ ನಿರ್ಮಲ ಚಿತ್ತದ ಕುರಿಯನ್ ಹಲವಾರು 'ಅಂತಾರಾಷ್ಟ್ರಿಯ ಪ್ರಶಸ್ತಿ'ಗಳನ್ನು ಗಳಿಸಿದ್ದಾರೆ. ಭಾರತ ಸರ್ಕಾರದ 'ಪದ್ಮಭೂಷಣ ಪ್ರಶಸ್ತಿ'ಯ ಜೊತೆಗೆ 'ರೇಮನ್ ಮಾಗ್ಸೆಸೆ ಪ್ರಶಸ್ತಿ'ಯನ್ನು ಗಳಿಸಿದ 'ಡಾ. ಕುರಿಯನ್' ರಿಗೆ 'ಭಾರತ ರತ್ನ ಪ್ರಶಸ್ತಿ' ಕೊಟ್ಟರೂ ಕಡಿಮೆಯೇ. ಇದು ಭಾರತದ ಸಾವಿರಾರು ಜನರ ಅಭಿಮತ!
ನನ್ನ ಪರವಾಗಿ, ಮತ್ತು ಸಂಪದಿಗರೆಲ್ಲರ ಪರವಾಗಿ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ಚಿತ್ರ ಕೃಪೆ: ಕನ್ನಡ ಪತ್ರಿಕೆ.
Comments
ಉ: ಹಾಲಿನ ಕ್ರಾಂತಿಯ ಹರಿಕಾರ ಡಾ. ಕುರಿಯನ್ ವರ್ಗಿಸ್ ಇನ್ನಿಲ್ಲ
ಉ: ಹಾಲಿನ ಕ್ರಾಂತಿಯ ಹರಿಕಾರ ಡಾ. ಕುರಿಯನ್ ವರ್ಗಿಸ್ ಇನ್ನಿಲ್ಲ
ಉ: ಹಾಲಿನ ಕ್ರಾಂತಿಯ ಹರಿಕಾರ ಡಾ. ಕುರಿಯನ್ ವರ್ಗಿಸ್ ಇನ್ನಿಲ್ಲ
In reply to ಉ: ಹಾಲಿನ ಕ್ರಾಂತಿಯ ಹರಿಕಾರ ಡಾ. ಕುರಿಯನ್ ವರ್ಗಿಸ್ ಇನ್ನಿಲ್ಲ by makara
ಉ: ಹಾಲಿನ ಕ್ರಾಂತಿಯ ಹರಿಕಾರ ಡಾ. ಕುರಿಯನ್ ವರ್ಗಿಸ್ ಇನ್ನಿಲ್ಲ