ಶಂಖನಾದ:

ಶಂಖನಾದ:

 ಶಂಖಧ್ವನಿ ರೋಗಾಣುಗಳನ್ನು ಹೋಗಲಾಡಿಸಿ ವಾಯುವನ್ನು ಶುದ್ಧಗೊಳಿಸುತ್ತದೆ.

ಅರೆ, ಇದು ನಾನು ಹೇಳುತ್ತಿಲ್ಲ, ಇದನ್ನು 1928ರಲ್ಲಿ ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಪ್ರಯೋಗ ನಡೆಸಿ, ಇದರ ಅಲೆಗಳು ಬೆಕ್ಟೀರಿಯಾ ಮತ್ತು ಕೀಟಾಣುಗಳನ್ನು  ಸುಲಭವಾಗಿ ಕೊಲ್ಲುತ್ತವೆ ಎಂದು ಸಿದ್ಧಪಡಿಸಿದ್ದಾರೆ.

ಸೆಕೆಂದಿಗೆ ಘನಅಡಿ ಒತ್ತಡದ ವಾಯುವಿನೊಂದಿಗೆ  ಶಂಖವನ್ನು ಊದಿದರೆ 1200 ಅಡಿಗಳೊಳಗಿನ ಬೆಕ್ಟೀರಿಯಾಗಳನ್ನು ನಾಶಪಡಿಸುವದಲ್ಲದೇ 2600 ಅಡಿ ಅಂತರಗಳಲ್ಲಿರುವ ಕ್ರಿಮಿಗಳನ್ನು ಮೂರ್ಛೆಗೊಳಿಸುತ್ತವೆಯಂತೆ!  ಇಷ್ಟೇ ಅಲ್ಲ ಕಾಲರಾ, ವಾತಜ್ವರ, ಮುಂತಾದ ಕಾಯಿಲೆಗಳ ಕೀಟಾಣುಗಳನ್ನು ಕೊಲ್ಲುತ್ತದೆ ಎಂತೆ.  ಅಪಸ್ಮಾರ, ತೀಕ್ಷ್ಣವಾಯು, ಅವಳಿ ಗಂಡಮೂಲೆಗಳ ಗಂಡ, ಕುಷ್ಟರೋಗಗಳ ಮೇಲೂ ಪರಿಣಾಮ ಬೀರುತ್ತದೆಅಂತೆ.

ಅದಕ್ಕೆ ಭಾರತೀಯರು ಕರ್ಣಾನಂದವಾಗುವಂತೆ  ಶಂಖ ಹೊಡೆಯುತ್ತೇವೆ.

ಯಾವುದನ್ನು ನಮ್ಮ ಪೂರ್ವಜರು ಅಭ್ಯಸಿಸಿ ನಿರ್ಧರಿಸಿ ನಮಗೆ ಶಾಸ್ತ್ರಬದ್ಧವಾಗಿ ನಡೆದುಕೊಳ್ಳಲು ಹೇಳಿದ್ದಾರೋ ಅವುಗಳ ಮಹತ್ವವನ್ನು ಕಂಡುಕೊಳ್ಳ ಬೇಕಾದರೆ ನಮಗೆ ಪಾಶ್ಚಾತ್ಯರ ಮುದ್ರೆ ಬೇಕಾಗುತ್ತದೆ.

ನೀವೇನೇ ಶಂಖಹೊಡೆದರೂ ನಮ್ಮರು ಇದನ್ನು ನಂಬ ಬೇಕಲ್ಲ!

ಅದೇನೆ ಇರಲಿ, ನಾನು ಈ ಶಂಖದ ಬಗ್ಗೆ ನಿಮ್ಮೊಂದಿಗೆ ಇಷ್ಟರಲ್ಲೇ  ಇನ್ನಷ್ಟು ಊದುವವನಿದ್ದೇನೆ.

 

Comments