ನಗುವೆ೦ಬ ಬೆಳಕು..

ನಗುವೆ೦ಬ ಬೆಳಕು..

ಕವನ

 

 

 

 

ದೀಪವೊ೦ದು ಉರಿಯಿತೆ೦ದು

ಬೆಳಕು ಹಬ್ಬಿ ನಗುತಿರಲು

 ಕತ್ತಲೆಗೆ ಸಾವಲ್ಲವೇ.

ಆಕಾಶದ ಕತ್ತಲಲ್ಲಿ

 ನಕ್ಷತ್ರಗಳು  ಮತ್ತಿನಲ್ಲಿ 

ಮತ್ತೆ ಮತ್ತೆ ಮಿನುಗುತಿರಲು

ದ್ರಷ್ಟಿಗಳಿಗೆ  ನೆಲೆ ಎಲ್ಲಿವೆ.. 

 

ನದಿಯಾಚೆ ದಡದ ಊರಿನಲ್ಲಿ 

ಸಾಲು ದೀಪಗಳು

 ಈಚೆ ದಡದ ಕತ್ತಲಲ್ಲಿ 

ಎರಡು ಹೊಳೆವ ಕಣ್ಣುಗಳು.

ಎಣೆಸುತಿರೆ ಎಷ್ಟೊ ಸಾರಿ

ದೀಪಕೊ೦ದು ದೀಪ ಸೇರಿ

ಹೊಳಪು ದ್ರಷ್ಟಿಯ ಮೀರಿ

ಜಗದ ಮೊಗವೆಲ್ಲ ಬೆಳಕಾಗಿ

ಮನವೆಲ್ಲ ನಗುತಿರಲು 

ಅ೦ಧಕಾರಕೆ ಕೊನೆ ಅಲ್ಲವೆ..

 

 

 

Comments