ಒಂಬತ್ತು-ಹನ್ನೊಂದು ಕಳೆದು ಹನ್ನೊಂದು !

ಒಂಬತ್ತು-ಹನ್ನೊಂದು ಕಳೆದು ಹನ್ನೊಂದು !

 


ಮುಂಜಾನೆಯೂ ನಿಂತಿದ್ದವು ಕಂಬಗಳೆರಡು


ಬೆಳಕಿನ ಕಿರಣಗಳ ತೂರಿಬಿಡುತಲಿ


 


ನಿತ್ಯೋತ್ಸವದಂತೆ ಹಕ್ಕಿಗಳು ಗೂಡುಗಳ ಸೇರುತ್ತಿದ್ದವು


ಅರಿವಿಲ್ಲದೆ, ಗೂಡ ಕೆಡಿಸುವ ಹಕ್ಕಿ ಬರುತ್ತಲಿದೆ ಎಂದು


 


ನಿಂತಿದ್ದವೋ ಎರಡು ಕಂಬಗಳು ಬಿಮ್ಮನೆ


ಬಡಿದಿತ್ತು ಹಾರಾಡೋ ಹಕ್ಕಿ, ಹಾಗೇ ಸುಮ್ಮನೆ


 


ಉದುರಿಸಿತ್ತು ಕಂಬಗಳ, ಹಾರಾಡೋ ಪಕ್ಷಿ


ಮುಚ್ಚಿತ್ತು ಅಮಾಯಕರ ಕನಸುಗಳಾ ಅಕ್ಷಿ


 


ಎದ್ದಿತ್ತು ಧೂಳು ಅಪ್ಪಿಕೊಳ್ಳುತ ನಭವ


ಉದುರಿತ್ತು ಕಂಬ ಮುತ್ತಿಕ್ಕುತ ಭುವಿಯ


 


ಉದುರಿಸಿ ಕಂಬಗಳ ಉರಿದುಬಿದ್ದಿತ್ತು ಪಕ್ಷಿ


ಗಾಳಿಗೆ ತೂರಿತ್ತು ಸಾವಿರಾರು ಪ್ರಾಣ ಪಕ್ಷಿ


 


ಕಂಬಗಳು ಬಿದ್ದವು, ಸ್ಮಾರಕಗಳು ಎದ್ದವು


ಕನಸುಗಳು ಸತ್ತವು, ಧೂಳನ್ನು ಮೆದ್ದವು


 


ಹೋದವರ ನೆನಪಿಸುತ. ಹೊಡೆದವನ ಶಪಿಸುತ


ಉರುಳಿತ್ತು ವರ್ಷಗಳು ಹೊಡೆವನ ಅರಸುತ


 


ಇಂದು, ಹೊಡೆದವನು ಹೋದರೂ ಕಂಬಗಳು ನಿಂತಿಲ್ಲ


ಕಂಬಗಳು ನಿಂದರೂ, ಹೋದವರು ಹಿಂದಿರುಗೋಲ್ಲ


 


ಕಳೆಯುತ್ತವೆ ವರ್ಷಗಳು ಹನ್ನೊಂದು, ನೂರೊಂದು


ಆಶಯವೊಂದೇ, ಬಾರದಿರಲಿ ಇಂತಹುದೇ ಮತ್ತೊಂದು

Comments