ಅಸ್ತಂಗತ

ಅಸ್ತಂಗತ

ಸಾಗರದ ಅಂಚಿನಲ್ಲಿ ಮುಳುಗುತಿರುವ ನೇಸರನು

ಗಹಗಹಿಸಿ ನಕ್ಕು ನುಡಿಯುತಿರುವನು ಜಗವ ನೋಡಿ

ಅಸ್ತಂಗತನಾಗುವ ನನ್ನ ನೋಡಿ ಆನಂದದಿ

ಸಂಭ್ರಮಿಸುತ ನೋಡುತಿರುವ ಮೂಢ ಜನರೇ...

 

ಸತ್ಯದ ಅರಿವಿಲ್ಲ ನಿಮಗೆ, ಮಿಥ್ಯದಿ

ಬದುಕ ಸವೆಸುತಿಹಿರಿ ನೀವೆಲ್ಲ,ಕ್ಷಣಿಕ ಸುಖದಿ..

ಮಿಥ್ಯವೇ ಸತ್ಯವೆಂದು ನಂಬಿ

ದೂಡುತಿಹಿರಿ ಬಾಳ ಬಂಡಿಯನು..

 

ಹೊರಬನ್ನಿ ಮಿಥ್ಯದ ಲೋಕದಿಂದ

ಅರಿಯಿರಿ ಸತ್ಯ ಮಿಥ್ಯದ ನಡುವಿನ ಅಂತರವ

ಹಸನಾಗಿಸಿ ನಿಮ್ಮ ಬಾಳನು

ನುಡಿಯುತ ಸತ್ಯವ ಅಡಿಗಡಿಗೂ..

 

ನಿಮಗೆ ಕಾಣುತ್ತಿರುವ ನಾನೂ ಮಿಥ್ಯ

ಅಸ್ತಂಗತನಾಗುವ ನಾನು ಮರುದಿನ ಹುಟ್ಟಬಲ್ಲೆ

ಚಿಂತಿಸಿ...ನೀವೆಲ್ಲ ಗತಿಸಿದರೆ ಇಂದು

ಮತ್ತೆ ಪಡೆಯಬಲ್ಲಿರ ಮರುಜೀವವನು?

Rating
No votes yet

Comments