ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
ಭಾರತವು ತನ್ನನ್ನು ತಾನು ಚೆನ್ನಾಗಿ ಅಭಿವ್ಯಕ್ತಗೊಳಿಸಿಕೊಳ್ಳಬೇಕು (ಮಾರಾಟ ಮಾಡಿಕೊಳ್ಳಬೇಕು)
ಕಳೆದ ವಾರ ಭಾರತ ರತ್ನ ಡಾll ಅವುಳ್ ಫಕೀರ್ ಝೈನುಲಾಬ್ದೀನ್ ಅಬ್ದುಲ್ ಕಲಾಮ್ ಅವರು ತಾವು ೪೩ ವರ್ಷಗಳಷ್ಟು ದೀರ್ಘಕಾಲ ಅಲಂಕರಿಸಿದ್ದ ಭಾರತ ಸರ್ಕಾರದ ಪ್ರಮುಖ ವೈಜ್ಞಾನಿಕ ಸಲಹಾದಾರರು; ಈ ವಿಶೇಷ ಹುದ್ದೆಯಿಂದ ನಿವೃತ್ತಿ ಹೊಂದುವುದಾಗಿ ಘೋಷಿಸಿದರು. ಅವರು ಭಾರತದ ಪ್ರತಿ ವೈಜ್ಞಾನಿಕ ಮೈಲುಗಲ್ಲುಗಳೊಡನೆ ಸಹಭಾಗಿತ್ವವನ್ನು ಹೊಂದಿದವರಾಗಿದ್ದಾರೆ - ಮೊದಲ ರಾಕೆಟ್ ಉಡಾವಣಾ ವಾಹನ, ಮೊದಲ ಭಾರತೀಯ ಉಪಗ್ರಹ, ಮೊದಲ ನಿರ್ಧಿಷ್ಟ ಉದ್ದೇಶಿತ ಕ್ಷಿಪಣಿ, ಮತ್ತು ಎಲ್ಲರಿಗೂ ತಿಳಿದಿರುವಂತೆ ಭಾರತದ ಅಣ್ವಸ್ತ್ರ ಕಾರ್ಯಕ್ರಮ - ಇಂತಹ ಹಿನ್ನಲೆಯುಳ್ಳ ಡಾll ಅಬ್ದುಲ್ ಕಲಾಮ್ ಅವರು ಕೆಲವು ವರ್ಷಗಳಿಂದ ಭಾರತದ ಸಹಸ್ರಮಾನದ ಯೋಜನೆಗಳು - INDIAN MILLENIUM MISSIONS (IMM) ೨೦೨೦ ಇವುಗಳ ಮೂಲಕ ಭಾರತವನ್ನು ಅಭ್ಯುದಯ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಲು ನೀಲನಕ್ಷೆಯನ್ನು ತಯಾರಿಸುತ್ತಿದ್ದಾರೆ. ಡಾll ಅಬ್ದುಲ್ ಕಲಾಮ್ ಅವರು ಇದನ್ನು ಭಾರತದ ಎರಡನೆಯ ಆಯೋಜನೆ ಎಂದು ಕರೆಯುತ್ತಾರೆ. ಆದರೆ ಅವರು ಸಂಪೂರ್ಣ ನಿವೃತ್ತಿ ಹೊಂದಿ ನಿಷ್ಕ್ರಿಯರಾಗುತ್ತಿಲ್ಲ ಎನ್ನುವುದು ಸಮಾಧಾನದ ಸಂಗತಿ. ಅವರು ISROದ ಪ್ರತಿಷ್ಠಿತ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮತ್ತು ಅವರು ಭಾರತದ ಮಕ್ಕಳ ಮೇಲೆ ತಮ್ಮ ವಿಶೇಷ ಲಕ್ಷ್ಯವನ್ನಿರಿಸುವ ಆಶಯವನ್ನು ಹೊಂದಿರುವುದಾಗಿ ಹೇಳುತ್ತಾರೆ. ಶಂತನು ಗುಹಾ ರೇ ಅವರೊಂದಿಗಿನ ಸಂದರ್ಶನದ ಆಯ್ದ ಭಾಗಗಳನ್ನು ಇಲ್ಲಿ ಕೊಡಲಾಗಿದೆ.
ಭಾರತವು ಪ್ರಪಂಚದ ನಿಯಂತೃಕ (Dominant) ಶಕ್ತಿಯಾಗಿ ಹೊರಹೊಮ್ಮಲಿದೆಯೇ?
ನಾವು ಐದು ವಿಭಾಗಗಳಲ್ಲಿ ಸಂಯೋಜಿತ ಕಾರ್ಯಯೋಜನೆಯನ್ನು ರೂಪಿಸಬೇಕಾಗಿದೆ. ಮೊದಲನೆಯದು ವ್ಯವಸಾಯ ಮತ್ತು ಆಹಾರ ಸಂಸ್ಕರಣೆ – ನಾವು ೩೬೦ ದಶಲಕ್ಷ್ಯ ಟನ್ನುಗಳ ಆಹಾರ ಮತ್ತು ವ್ಯವಸಾಯ ಉತ್ಪಾದನೆಯ ನಿರ್ದೇಶಿತ ಗುರಿಯನ್ನು ರೂಪಿಸಬೇಕು. ಎರಡನೆಯದು, ನಂಬಲರ್ಹ ಮತ್ತು ಗುಣಮಟ್ಟದ ವಿದ್ಯುತ್ತನ್ನು ಎಲ್ಲರಿಗೂ ಒದಗಿಸಬೇಕು. ಮೂರನೆಯದು ವಿದ್ಯಾಭ್ಯಾಸ ಮತ್ತು ಆರೋಗ್ಯ ಸಂರಕ್ಷಣೆ. ನಾಲ್ಕನೆಯದು ಮಾಹಿತಿ ತಂತ್ರಜ್ಞತೆ, ಇದರಿಂದ ದೇಶದ ಸಾರಿಗೆ ಹಾಗೂ ಸಂಪರ್ಕ ಸಾಧನಗಳಿಲ್ಲದ ದೂರದ ಪ್ರದೇಶಗಳಲ್ಲಿಯೂ ವಿದ್ಯಾಭ್ಯಾಸವನ್ನು ಒದಗಿಸುವುದು ಸಾಧ್ಯವಾಗಬೇಕು. ಐದನೆಯದು, ಅಣುವಿಜ್ಞಾನ ಕ್ಷೇತ್ರ, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರಗಳು. ಈ ಐದೂ ಕ್ಷೇತ್ರಗಳು ಒಂದಕ್ಕೊಂದು ಪರಸ್ಪರ ಸಂಭಂದ ಹೊಂದಿದ್ದು ಇವು ದೇಶದ ಮುಂದಿರುವ ೩೦ ’ಭಾರತ ಅಭ್ಯುದಯ ಯೋಜನೆ ೨೦೨೦’ ಇವುಗಳಲ್ಲಿ ಸಮ್ಮಿಳಿತವಾಗಲಿವೆ.
ಭಾರತದ ಅಣ್ವಸ್ತ್ರ ಕಾರ್ಯಕ್ರಮವು ಶಸ್ತ್ರ ಪೈಪೋಟಿಗೆ ಉತ್ತೇಜನ ನೀಡಿದಂತಾಗುವುದಿಲ್ಲವೇ?
ನಾವು ಏನು ಮಾಡಬೇಕೆಂದು ನೀವು ನಿರೀಕ್ಷಿಸುತ್ತೀರಿ?ಚೀನಾ ಮತ್ತು ಪಾಕಿಸ್ಥಾನದಂತಹ ಎರಡು ಅಣ್ವಸ್ತ್ರ ದೇಶಗಳ ನಡುವೆ ಅಡುಕೊತ್ತಿನಲ್ಲಿ ಸಿಕ್ಕಿಹಾಕಿಕೊಂಡು ತಪಸ್ಸು ಮಾಡುತ್ತಾ ಕುಳಿತುಕೊಳ್ಳಬೇಕೆ? ಮೂರು ಸಾವಿರ ವರ್ಷಗಳಿಂದ ನಾವು ದಾಳಿಗೊಳಪಟ್ಟಿದ್ದೇವೆ ಮತ್ತು ಅದಕ್ಕಿರುವ ಏಕೈಕ ಕಾರಣವೆಂದರೆ – ದಾಳಿಕೋರರಿಗೆ ಪ್ರತಿರೋಧನೆ ಒಡ್ಡಲು ವಾಸ್ತವವಾಗಿ ಆಗ ನಮ್ಮ ಬಳಿ ಏನೂ ಇರಲಿಲ್ಲ. ಈ ಪರಿಸ್ಥಿತಿಯನ್ನು ನಾವು ಬದಲಾಯಿಸಬೇಕಾಗಿರುವುದು ಸರಿಯಲ್ಲವೇ? ನಮ್ಮ ನೆರೆಹೊರೆಯವರ ಬಳಿ ಅಣ್ವಸ್ತ್ರಗಳಿದ್ದರೆ ಅವು ನಮ್ಮ ಬಳಿಯೂ ಇರಬೇಕು. ಇಲ್ಲದಿದ್ದರೆ ಅವು ನಮ್ಮ ಸ್ಥಾನವನ್ನು ಅಭದ್ರಗೊಳಿಸುತ್ತವೆ. ನಾವು ಈ ಬಾಂಬುಗಳನ್ನು ಅಲಂಕಾರಕ್ಕಾಗಿ ತಯಾರಿಸಿಲ್ಲ.
ನಮ್ಮ ನೆರೆಹೊರೆಯವರಲ್ಲಿ ನಾವೇಕೆ ಭಾರತವಿರೋಧಿ ಭಾವನೆಯನ್ನು ಕಾಣುತ್ತೇವೆ?
ಇದು ಏಕೆಂದರೆ ಭಾರತವು ಭೌಗೋಳಿಕವಾಗಿ ಸದಾ ಗೆಲುವಿನ ಪರಿಸ್ಥಿತಿಯನ್ನು ಬೆಳೆಸಿಕೊಂಡಿಲ್ಲ. ಚೀನಾವನ್ನು ನೋಡಿ ಮತ್ತು ಅದರ ಎಲ್ಲಾ ಆಟಾಟೋಪಗಳನ್ನು ನೋಡಿ. ಅದು ವ್ಯಾಪಾರೀ ನಿಯಮಗಳನ್ನು ಉಲ್ಲಂಘಿಸುತ್ತದೆ, ಪಾಶ್ಚಿಮಾತ್ಯ ದೇಶಗಳಿಂದ ಶಸ್ತ್ರಾಸ್ತ್ರ ರಹಸ್ಯಗಳನ್ನು ಕದಿಯುತ್ತದೆ, ಆದರೂ ಬೀಝಿಂಗ್ ಮತ್ತು ವಾಷಿಂಗ್ಟನ್ನಿನ ಭಾಂದವ್ಯವು ಆರಾಮದಾಯಕವಾಗಿದೆ. ಇದು ಏಕೆಂದರೆ, ಆರ್ಥಿಕ ಕಾರಣಗಳು ಭೌಗೋಳಿಕ ರಾಜಕೀಯವನ್ನು ಆಳುತ್ತಿವೆ. ಭಾರತವು ಅಂತಹ ಉದಾಹರಣೆಗಳಿಂದ ಪಾಠ ಕಲಿಯಬೇಕು. ನಮ್ಮ ನೆರೆಹೊರೆಯವರಿಗೆ ಹೋಲಿಸಿದರೆ ಖಂಡಿತಾ ನಾವು ಅಭಿವೃದ್ಧಿ ಹೊಂದಿದವರಾಗಿದ್ದೇವೆ. ಆದ್ದರಿಂದ, ನಾವು ಭಾರತ ಸರ್ಕಾರವು ತನ್ನ ಗಡಿಗಳಾಚೆಯ ಮಾರುಕಟ್ಟೆಗಳಲ್ಲಿ ತನ್ನ ಸ್ವಂತ ವರ್ಚಸ್ಸನ್ನು (ಛಾಪನ್ನು) ಅಗ್ರರೀತಿಯಲ್ಲಿ ವ್ಯಕ್ತಪಡಿಸಬೇಕು (ಮಾರಾಟ ಮಾಡಬೇಕು) ಮತ್ತು ಅದರೊಂದಿಗೆ ನಮ್ಮ ಮಾರುಕಟ್ಟೆಯಲ್ಲಿ ನಮ್ಮ ನೆರೆಹೊರೆಯವರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು. ಆದರೆ ಅದು ಆಗಿದೆಯೇ? ಭಾರತ ಮತ್ತು ಅದರ ನೆರೆಹೊರೆಯವರೊಂದಿಗಿನ ಭಾಂದವ್ಯವು ಎಲ್ಲಾ ಕಾಲದ ಕನಿಷ್ಠ ಸ್ಥಾಯಿಗೆ ಮುಟ್ಟಿದೆ, ಇದು ಉತ್ತಮವಾಗಬೇಕು. ನಮ್ಮ ನೆರೆಹೊರೆಯವರು ನಮ್ಮ ಸಾಮರ್ಥ್ಯಗಳನ್ನು ಮತ್ತು ಅಭಿವೃದ್ಧಿಯ ರಂಗಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವರೂ ಕೂಡಾ ಎಲ್ಲಿ ತಮ್ಮ ಕೊಡುಗೆಯನ್ನು ನೀಡಬಹುದೋ ಅದನ್ನು ನೋಡಬೇಕು. ಅಗ ಮಾತ್ರ ಈ ಅಪನಂಬಿಕೆ ಶಮನವಾಗುತ್ತದೆ. ಆಗ ಜನರು ಭಯೋತ್ಪಾದನೆಯನ್ನು ಕುರಿತು ಮಾತನಾಡುವುದನ್ನು ಬಿಟ್ಟು ಕೇವಲ ವ್ಯಾಪಾರದ ಕುರಿತಾಗಿ ಮಾತನಾಡುತ್ತಾರೆ.
ನೀವು ಭಾರತವು G – 8 ದೇಶಗಳೊಂದಿಗೆ ಸಮಾನ ಸ್ಥಾಯಿಯಲ್ಲಿರುವುದರ ಕನಸು ಕಾಣುತ್ತಿದ್ದೀರ. ಅದು ಬಹುದೂರದ ಆಲೋಚನೆ ಎಂದು ನಿಮಗನಿಸುವುದಿಲ್ಲವೇ?
ಆರ್ಥಿಕ ಅಭಿವೃದ್ಧಿಯು ತಾಂತ್ರಿಕತೆ, ಮೂಲಭೂತ ಸೌಲಭ್ಯಗಳು, ವಿದ್ಯಾಭ್ಯಾಸ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕೆಂಬ ತುಡಿತ ಇವೆಲ್ಲದರ ಸಂಯೋಜಿತ ಬೆಳವಣಿಗೆಯ ಮೂಲಕ ಉಂಟಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಉತ್ಪನ್ನಗಳ ಮಾರುಕಟ್ಟೆಯನ್ನು ಸ್ಥಿರವಾಗಿರಿಸಿಕೊಳ್ಳಲು ವಿವಿಧ ತತ್ವಾಭಿಪ್ರಾಯವುಳ್ಳ ದೇಶಗಳಿಗೆ ತಮ್ಮ ಸರಕನ್ನು ಮಾರುತ್ತವೆ. ಉದಾಹರಣೆಗೆ, ಅಮೇರಿಕವು, ಚೀನಾದ ವಿಷಯದಲ್ಲಿ ’ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಧೋರಣೆ’ (Missile Technology Control Regime) ಮತ್ತು NPTಯ ಕೆಲವು ಅಂಶಗಳನ್ನು ಕೈಬಿಟ್ಟಿದೆ. ಭಾರತದ ಆರ್ಥಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಚಾರಿತ್ರಿಕ-ಧಾರ್ಮಿಕ ಮನೋಭಾವನೆಗಳಿಗೆ ಅತೀತರಾಗಿ ವಿಕಸನಗೊಳ್ಳಬೇಕಾಗಿದೆ. ದೇಶವು ಉತ್ಕೃಷ್ಟವಾದ ಭಾರತೀಯ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಅದು ತನ್ನ ನಾಗರೀಕತೆಯ ಗುಣಗಳನ್ನು ವಿಶ್ವಶಾಂತಿಗಾಗಿ ಹಂಚಿಕೊಳ್ಳಬೇಕು. G – 8 ದೇಶದ ನಾಯಕರು ಬೇರೆ ಬೇರೆ ದೇಶಗಳಿಗೆ ಭೇಟಿಯಿತ್ತು ಗುಪ್ತವಾಗಿ ಅಡಕವಾದ (ನೀಟಾಗಿ ಪ್ಯಾಕ್ ಮಾಡಿದ) ರಾಜಕೀಯ ಉದ್ದೇಶಗಳೊಂದಿಗೆ ತಮ್ಮ ಉಪಕರಣ ಮತ್ತು ತಂತ್ರಾಶಗಳನ್ನು ಮಾರಾಟ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ನಾನು ತ್ರಿಪುರಾ, ಅಸ್ಸಾಮ್ ಮತ್ತು ಝಾರ್ಖಂಡ್ ರಾಜ್ಯಗಳಿಗೆ ಭೇಟಿಯಿತ್ತಿದ್ದೆ. ಈ ಎಲ್ಲಾ ರಾಜ್ಯಗಳಲ್ಲಿಯೂ ಅಧಿಕ ಪ್ರಮಾಣದ ಪ್ರಾಕೃತಿಕ ಮತ್ತು ಮಾನವ ಸಂಪನ್ಮೂಲಗಳಿವೆ. ಇವೆಲ್ಲಕ್ಕೆ ಒಂದು ಸಂಯೋಜಿತ ನಿರ್ಧಿಷ್ಟ ಗುರಿಹೊಂದಿದ ಕಾರ್ಯಕ್ರಮಗಳಿರಬೇಕು ಮತ್ತವು ಪ್ರತಿಯೊಂದು ರಾಜ್ಯಕ್ಕೂ ವಿಶೇಷವಾಗಿರಬೇಕು ಆದರೆ ಅವುಗಳಿಗೆ ಸಂಯೋಜಿತ ಹಣಕಾಸಿನ ವ್ಯವಸ್ಥೆಯಿರಬೇಕು.
ನೀವು ಮಕ್ಕಳೊಂದಿಗೆ ಕೆಲಸ ಮಾಡಬೇಕೆನ್ನುವ ಆಶಯ ವ್ಯಕ್ತಪಡಿಸಿದ್ದೀರ. ಈ ಹೊಸ ಆಸಕ್ತಿ ಏಕೆ?
ನನ್ನ ೪೩ ವರ್ಷಗಳ ವೃತ್ತಿ ಜೀವನದಲ್ಲಿ ನನ್ನ ಕಾರ್ಯ ಕ್ಷೇತ್ರವನ್ನು ಸ್ವಲ್ಪ ಹೆಚ್ಚು ಕಡಿಮೆ ಪ್ರತಿ ಹತ್ತು ವರ್ಷಗಳಿಗೊಂದಾವರ್ತಿ ಬದಲಾಯಿಸಿದ್ದೇನೆ. ಬದಲಾವಣೆ ಹೊಸ ಆಲೋಚನೆಗಳನ್ನು ಹುಟ್ಟು ಹಾಕುತ್ತದೆ, ಹೊಸ ಆಲೋಚನೆಗಳು ಹೊಸ ಸೃಜನಾತ್ಮಕ ಕಾರ್ಯಗಳಿಗೆ ದಾರಿ ಮಾಡಿಕೊಡುತ್ತವೆ. ಆಗಸ್ಟ್ ೨೦೦೧ರಿಂದ ನಾನು ವಿವಿಧ ರಾಜ್ಯಗಳಿಗೆ ಭೇಟಿ ಕೊಡುತ್ತಾ ಇದ್ದೇನೆ. ನಾನು ಸುಮಾರು ೧೫,೦೦೦ ವಿದ್ಯಾರ್ಥಿಗಳನ್ನು ಬಹುತೇಕ ಹೈಸ್ಕೂಲ್ ಮಟ್ಟದವರನ್ನು ಉದ್ದೇಶಿಸಿ ಮಾತನಾಡಿದ್ದೇನೆ. ನಾನು ಅವರ ಕಲ್ಪನೆಗಳನ್ನು ಹಂಚಿಕೊಂಡಿದ್ದೇನೆ. ನಾನು ಕಂಡುಕೊಂಡಂತೆ ನಾನು ಅವರೊಟ್ಟಿಗೆ ಚೆನ್ನಾಗಿ ಸಂವಹನ ಏರ್ಪಡಿಸಿಕೊಳ್ಳಬಲ್ಲೆ. ನಾನು ವಿಜ್ಞಾನವನ್ನು ಪ್ರೀತಿಸುವಂತೆ ಮತ್ತು ದೇಶದ ಗುರಿ – ‘ಅಭಿವೃದ್ಧಿ ಹೊಂದಿದ ಭಾರತ’ದ ಬಗ್ಗೆ ಅವರ ಮನಸ್ಸಿನೊಳಗೆ ಪ್ರಜ್ವಲನೆಯನ್ನು ಉಂಟು ಮಾಡಬಲ್ಲೆ.
ಭಾರತದ ಯುವ ಪೀಳಿಗೆಯವರಾಗಿ, ತಾಂತ್ರಿಕತೆ ಹಾಗೂ ಜ್ಞಾನವೆನ್ನುವ ಅಸ್ತ್ರಗಳನ್ನು ಹೊಂದಿದ್ದು, ಮತ್ತು ತನ್ನ ರಾಷ್ಟ್ರಕ್ಕಾಗಿ ಪ್ರೀತಿಯುಳ್ಳವರಾಗಿದ್ದು, ಸಣ್ಣ ಗುರಿಗಳನ್ನು ಹೊಂದಿರುವುದು ಅಪರಾಧವೆಂದು ನಾನು ಪರಿಗಣಿಸುತ್ತೇನೆ.
ನಾನು ನನ್ನ ಗುರಿಯಾದ – ’ಅಭಿವೃದ್ಧಿ ಹೊಂದಿದ ಭಾರತ’ವನ್ನು ಸಾಧಿಸುವ ತನಕ ಜ್ಞಾನವೆಂಬ ದೀಪದ ಹಣತೆಯನ್ನು ಉರಿಸುತ್ತಲೇ ಇರುತ್ತೇನೆ.
*****
ಅಗ್ನಿಯ ರೆಕ್ಕೆಗಳು
ಈ ಭೂತಲದ ಮೇಲಿನ ಪ್ರತಿಯೊಂದು ಜೀವಿಯನ್ನು ದೇವರು ಒಂದು ನಿರ್ಧಿಷ್ಟ ಕಾರ್ಯವನ್ನು ಪೂರೈಸಲಿಕ್ಕಾಗಿ ಸೃಷ್ಟಿಸಿದ್ದಾನೆ. ನಾನು ಜೀವಿತದಲ್ಲಿ ಏನೇನು ಸಾಧಿಸಿದ್ದೇನೆಯೋ ಅದೆಲ್ಲಾ ಸಾಧ್ಯವಾದದ್ದು ಅವನ ಸಹಾಯದಿಂದ ಮತ್ತವನ ಇಚ್ಛೆಯ ಅನಾವರಣಗೊಳ್ಳುವುದರ ಮೂಲಕ. ಅವನು ತನ್ನ ಕೃಪೆಯನ್ನು ಕೆಲವು ಅಸಾದಾರಣ ಉಪಾಧ್ಯಾಯರುಗಳು ಮತ್ತು ಸಹೋದ್ಯೋಗಿಗಳು ಮೂಲಕ ನನ್ನ ಮೇಲೆ ಹರಿಸಿದ್ದಾನೆ, ಮತ್ತು ನಾನು ಈ ಒಳ್ಳೆಯ ಮಹನೀಯರಿಗೆ ಅರ್ಪಿಸುವ ಕೃತಜ್ಞತೆಗಳು, ಕೇವಲ ಅವನ ಗುಣಗಾನವಷ್ಟೆ. ಈ ಎಲ್ಲಾ ರಾಕೆಟ್ಟುಗಳು ಮತ್ತು ಕ್ಷಿಪಣಿಗಳನ್ನು ಈ ಕಲಾಮ್ ಎನ್ನುವ ಸಣ್ಣ ವ್ಯಕ್ತಿಯ ಮೂಲಕ ರೂಪಿಸಿದವನೂ ಅವನೇ; ಲಕ್ಷಾಂತರ ಭಾರತೀಯರಿಗೆ ಈ ಮೂಲಕ ಯಾವುದೇ ಕಾರಣಕ್ಕೂ ನೀವು ಅಸಹಾಯಕರು ಎನ್ನುವ ಕೀಳರಿಮೆಯನ್ನು ಹೋಗಲಾಡಿಸಿಕೊಳ್ಳಿ ಎನ್ನುವ ಸಂದೇಶ ಸಾರಲಿಕ್ಕಾಗಿ. ನಾವೆಲ್ಲರೂ ದಿವ್ಯವಾದ ಕಿಡಿಗಳನ್ನು ಹೊಂದಿ ಜನ್ಮ ತಾಳಿದ್ದೇವೆ. ನಮ್ಮ ಶ್ರಮವು ಈ ಕಿಡಿಗಳಿಗೆ ರೆಕ್ಕೆಗಳನ್ನು ಕೊಟ್ಟು ಇಡೀ ಪ್ರಪಂಚವು ಈ ದಿವ್ಯಜ್ಯೋತಿಯ ಕಾಂತಿಯಿಂದ ಒಳಿತನ್ನು ಅನುಭವಿಸುವಂತಾಗಬೇಕು. - ಡಾll ಎ.ಪಿ.ಜೆ. ಅಬ್ದುಲ್ ಕಲಾಮ್
*****
ವಿ.ಸೂ.: ಈ ಲೇಖನವು,ಡಾll ಅಬ್ದುಲ್ ಕಲಾಂ ಅವರು ನಿಮ್ಮೊಂದಿಗೆ ಮಾತನಾಡುತ್ತಾರೆ – ಒಂದು ಸಂಗ್ರಹ ಗ್ರಂಥ )Dr. Abdul Kalam Speaks to you – A Compilation), ಪ್ರಕಟಣೆ: ಶ್ರೀ ಸಂತ್ ಗಜಾನನ್ ಮಹರಾಜ್ ತಾಂತ್ರಿಕ ಮಹಾವಿದ್ಯಾಲಯ, ಶೇಗಾಂವ್ – ೪೪೪೨೦೩, ಬುಲ್ಡಾನಾ ಜಿಲ್ಲೆ, ಮಹರಾಷ್ಟ್ರರಾಜ್ಯ; ಆಂಗ್ಲ ಭಾಷೆಯ ಪುಸ್ತಕದ ೫೪ರಿಂದ ೬೧ನೇ ಪುಟಗಳ ಅನುವಾದದ ಭಾಗ.
Comments
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by makara
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by ananthesha nempu
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by ಗಣೇಶ
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by ಗಣೇಶ
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by partha1059
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by Prakash Narasimhaiya
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by partha1059
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by ಗಣೇಶ
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by Shreekar
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by Shreekar
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
ಉ: ಡಾll ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭
In reply to ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭ by H A Patil
ಉ: ಡಾ|| ಅಬ್ದುಲ್ ಕಲಾಮ್ ಅವರ ಚಿಂತನ ಧಾರೆ : ಭಾಗ - ೭