ಸಂಗೀತದ ಗುಂಗು
ಒಂದು ಹಿಂದೂಸ್ಥಾನಿ ರಾಗದ ಆಲಾಪದ ಆಲೈಸುವಿಕೆಯ ಅನುಭವ, ಅನುಭೂತಿ ಮಾತಿಗೆ ನಿಲುಕದ್ದು. ಸಂಗೀತದ ಬಗ್ಗೆ ಅಳತೆಗೆ ಮೀರಿದ ಅಜ್ಞಾನವಿರುವ ನನಗೆ ಈ ಅನಿರ್ವಚನೀಯ ಆನಂದದ ಮೂಲ ಗೊತ್ತಿಲ್ಲ. ಕೆಲವು ರಾಗಗಳಂತೂ, ಉದಾಹರಣೆಗೆ ಮಾಲಕೌಂಸ್,ಲಲಿತ್, ಮಾರ್ವಾ, ಸೋಹನಿ- ಇವು ಕೇಳಿದಷ್ಟೂ ಮತ್ತು ಕೇಳಬೇಕೆನ್ನಿಸುವ ಗುಂಗು ಹಿಡಿಸುವಂತವು. ಮಲೆನಾಡಿನ ಮನೆಯ ಒಂದು ನೀರವ ಮಧ್ಯಾಹ್ನದಲ್ಲಿ ರಾಗಾಲಾಪದ ಆಲಿಕೆ ಕೊಡುವ ಸುಖ ಪ್ರಾಯಶ: ತತ್ವಶಾಸ್ತ್ರದಲ್ಲಿ ಉಲ್ಲೇಖಿಸಲಾಗಿರುವ ಬ್ರಹ್ಮಾನುಭವ. ಸಂಗೀತಗಾರನ ಕೊರಳದನಿಯ ಮಾಧುರ್ಯ ಈ ಅಲೌಕಿಕ ಆನಂದದ ಸೃಷ್ಢಿಗೆ ಅಷ್ಡೇನೂ ಬೇಕಿಲ್ಲ ಅನ್ನಿಸುತ್ತೆ. ನಾನು ಬಹಳ ಇಷ್ಟ ಪಟ್ಟು ಕೇಳುವ ಕುಮಾರ ಗಂಧರ್ವರ ದನಿ ತೀರ ಇಂಪಾದದ್ದು ಎಂದು ಹೇಳುವ ಹಾಗಿಲ್ಲ. ಒಂದು ಹಾಡು ಒಂದು ಕಾಲದೇಶದಲ್ಲಿ ಒಬ್ಬನಿಗೆ ಇಷ್ಟವಾಗಲು ಇಂತಹುದೇ ಕಾರಣಗಳು ಎಂದು ಸ್ಪಷ್ಡವಾಗಿ ಬೆಟ್ಟು ಮಾಡಿ ತೋರಿಸಲು ಪ್ರಾಯಶ: ಕಷ್ಡ ಸಾಧ್ಯ. ಇದರಲ್ಲಿ ಹಾಡುಗಾರ ಗುರುಮುಖೇನ ಕಲಿತ ವಿದ್ಯೆ, ವರ್ಷಗಟ್ಟಲೆ ನಡೆಸಿದ ತಾಲೀಮು, ಕೇಳುಗನ ಆಸಕ್ತಿ, ರಸಜ್ಞಾನ ಹೀಗೆ ಹಲವು ವಿಷಯಗಳು ತಳುಕು ಹಾಕಿಕೊಂಡಿರುತ್ತವೆ. ಇನ್ನೊಂದು ಸೋಜಿಗದ ವಿಷಯವೆಂದರೆ ಶಾಸ್ತ್ರೀಯ ಸಂಗೀತ ಕೇಳಲು ತೊಡಗಿದ ಆರಂಭದಲ್ಲಿ ಧೃತ್ ಗತಿ ಮಾತ್ರ ಇಷ್ಟವಾದರೆ, ಸ್ವಲ್ಪ ಕಿವಿ ಪಳಗಿದ ಮೇಲೆ ವಿಲಂಬಿತ ಗತಿಯ ಹಾಡುಗಾರಿಕೆ ಹೆಚ್ಚು ಇಷ್ಟವಾಗಲು ಶುರುವಾಗುತ್ತೆ. ನನಗೆ ಕೆಲವು ಸಲ ರಾಗ ಗುರ್ತಿಸಲು ಸಾಧ್ಯವಾಗುವುದಿಲ್ಲ.ಆದರೆ ಸಂಗೀತದ ಕೇಳುವಿಕೆಗೆ ಇದರಿಂದ ಇನಿತೂ ತೊಂದರೆಯಾಗಿಲ್ಲ.
ಸಂಗೀತದ ಬಗ್ಗೆ ಈ ನನ್ನ ಚಿಕ್ಕ ಲಹರಿಯನ್ನ ನನಗೆ ತುಂಬಾ ಇಷ್ಡವಾದ ಈ ಕೆಳಗಿನ ಕೊಂಡಿಗಳನ್ನ ನೀವೂ ಕೇಳಿ ಎನ್ನುತ್ತಾ ಮುಗಿಸುತ್ತಿದ್ದೇನೆ :-)
Comments
ಉ: ಸಂಗೀತದ ಗುಂಗು
In reply to ಉ: ಸಂಗೀತದ ಗುಂಗು by lpitnal@gmail.com
ಉ: ಸಂಗೀತದ ಗುಂಗು
ಉ: ಸಂಗೀತದ ಗುಂಗು
In reply to ಉ: ಸಂಗೀತದ ಗುಂಗು by ಗಣೇಶ
ಉ: ಸಂಗೀತದ ಗುಂಗು
In reply to ಉ: ಸಂಗೀತದ ಗುಂಗು by ರಾಮಕುಮಾರ್
ಉ: ಸಂಗೀತದ ಗುಂಗು
In reply to ಉ: ಸಂಗೀತದ ಗುಂಗು by Shreekar
ಉ: ಸಂಗೀತದ ಗುಂಗು
In reply to ಉ: ಸಂಗೀತದ ಗುಂಗು by ಗಣೇಶ
ಉ: ಸಂಗೀತದ ಗುಂಗು