ರಘುರಾಮನ - ಸೂರ್ಯವಂಶ

ರಘುರಾಮನ - ಸೂರ್ಯವಂಶ

 ರಘುರಾಮನ - ಸೂರ್ಯವಂಶದ ಬಗ್ಗೆ ನನ್ನ ಮಾಹಿತಿ ನಿಮ್ಮೊಂದಿಗೆ ಹಂಚಿಕೊಳ್ಳುವೆ:

ಪೂರ್ವದಲ್ಲಿ ಆದಿಬ್ರಹ್ಮನಿಗೆ ಅವನ ಅಂಗದಿಂದ ಮರೀಚಿ ಹುಟ್ಟಿದನಂತೆ,

ಈ ಮರೀಚಿಯ ಮಗ ಕಶ್ಯಪ,(ಇವನದೊಂದು ಅಗಾಧ ಸೃಷ್ಠಿ..ನಂತರ ಹೇಳುವೆ)

ಕಶ್ಯಪನಿಗೆ ಹುಟ್ಟಿದವ ವಿವತ್ಸು

ವಿವತ್ಸನ ಮಗ ವೈವಸ್ವತ (ಇವನಿಗೆ ವೈವಸ್ವತ ಮನು ಎಂದೂ ಕರೆಯುವರು)

ಈ ವೈವಸ್ವತನಿಗೆ ಹುಟ್ಟಿದ - ಇಕ್ಷಾಕು

ಇಕ್ಷಾಕುವಿಗೆ ನಿಮಿ, ವಿಕುಕ್ಷಿಗಳು ಮಕ್ಕಳು

ವಿಕುಕ್ಷಿಗೆ ಪುರಂಜಯ ಹುಟ್ಟಿದ,

ಪುರಂಜಯನ ಮಗ ನೇನಸ್ಸು,

ನೇನಸ್ಸುವಿನ ಮಗ ಪೃಥು

ಈ ಪೃಥುವಿನ ವಂಶದಲ್ಲಿ ಕುವಲಾಂಶ ಹಾಗೇ ಯೌವನಾಶ್ವರೂ ಜನಿಸಿದರು,

ಈ ಯೌವನಾಶ್ವನ ಮಗ ಮಾಧಾಂತ

ಮಾಧಾಂತನಿಗೆ ಅಂಬರೀಷ ಮತ್ತು ಪುರುಕುತ್ಸರು ಮಕ್ಕಳು,

ಈ ಪುರುಕುತ್ಸನ ಸಂತತಿಯಲ್ಲಿ ಹುಟ್ಟಿದ ಸತ್ಯವೃತ,

ಈ ಸತ್ಯವೃತನ ಮಗನೇ ತ್ರಿಶಂಕು,

ಈ ತ್ರಿಶಂಕುವಿನ ಮಗ ಹರಿಶ್ಚಂದ್ರ

ಹರಿಶ್ಚಂದ್ರನ ಮಗ – ಲೋಹಿತಾಶ್ವ,

ಲೋಹಿತಾಶ್ವನ ಸಂತತಿಯಲ್ಲಿ ಸಗರ ರಾಜ ಜನ್ಮತಳೆದ,

ಸಗರನಿಗೆ- ಸಮಂಜಸ, ಸಮಂಜಸನಿಗೆ-ಅಂಶುಮಾನ್ ಮತ್ತು ಅಂಶುಮಾನ್ ಗೆ ದಿಲೀಪ ಹುಟ್ಟಿದರು

ಈ ದಿಲೀಪನ ಮಗನೇ ಭಗೀರಥ

ಭಗೀರಥನ ವಂಶದಲ್ಲಿ ಹುಟ್ಟಿದ ಸ್ಥೂಲಬಾಹು

ಈ ಸ್ಥೂಲಬಾಹುವಿನ ಮಗ ರಘು ಮತ್ತು ಇವನ ಮಗ ಅಜ.

ಅಜನ ಮಗ ದಶರಥ

ಈ ದಶರಥನ ಮಗನೇ ನಮ್ಮ ಸೀತಾಪತಿ – ರಘುರಾಮ

ಇವನ ಮಕ್ಕಳು ಕುಶ-ಲವರು

ಮುಂದಿನದು ಗೊತ್ತಿಲ್ಲ. . .  ಗೊತ್ತಿದ್ದರೆ ಹೇಳಿ ಟಿಪ್ಪಣಿ ಮಾಡಿಕೊಳ್ಳುವೆ.....

 

Comments