ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ (tirukana kanasu)
ಕನ್ನಡದ ಪ್ರಾಥಮಿಕ ಶಾಲಾ ಪಠ್ಯವಾಗಿ 1950 ರ ದಶಕದಿಂದ 1990 ದಶಕದ ವರೆಗೂ ಇದ್ದಿರಬಹುದಾದ ‘ತಿರುಕನ ಕನಸು’ ಒಂದು ಅದ್ವಿತೀಯ ಮಕ್ಕಳ ಹಾಡು. ಇದರ ಕರ್ತೃ: ಮುಪ್ಪಿನ ಷಡಕ್ಷರಿಗಳು, ಕೊಳ್ಳೇಗಾಲದವರು. 16ನೇಯ ಶತಮಾನದಲ್ಲಿ ಕಂಡ ಸಾಹಿತಿಗಳು. ಸ್ವರವಚನಗಳ ಸಂಗ್ರಹ ಸುಬೋಧ ಸಾರ ಇವರ ಕೃತಿ. ನಿಜಗುಣ ಶಿವಯೋಗಿಗಳ ಸಮಕಾಲೀನರೆಂದು ವಿದ್ವಜ್ಜನರ ಅಭಿಪ್ರಾಯ. ಕೆಲವೇ ಕನ್ನಡ ಅಕ್ಷರಮಾಲೆಯ ಅಕ್ಷರಗಳನ್ನು ಬಳಸಿ, ಅದ್ಭುತವಾಗಿ ರಚಿಸಿದ ಕವಿತೆಯಿದು. ಒಂದೊಂದು ಶಬ್ದವನ್ನೂ ಸುಂದರವಾಗಿ ಜೋಡಿಸಿ ರಚಿಸಿದ ಹಾಡು. (45 ‘ರ’ ಅಕ್ಷರ ಒಳಗೊಂಡ ಶಬ್ದಗಳು,ಇವುಗಳನ್ನು ಆರಿಸಿದ ಬಗೆ ಉದಾಹರಣಾರ್ಥವಾಗಿ ಹಾಡಿನ ಮುಂದೆ ತೋರಿಸಲಾಗಿದೆ. 44 ‘ನ’ ಅಕ್ಷರ, 36 ‘ದ’ ಅಕ್ಷರ,31 'ಕ' ಅಕ್ಷರ, 26 ‘ಮ’ ಅಕ್ಷರ, 24 ‘ತ’ ಅಕ್ಷರ, 23 ‘ಲ’ ಅಕ್ಷರ, 22 ‘ಡ’ ಅಕ್ಷರ, 18 ‘ಸೊನ್ನೆ’ಯ ಪದಗಳು. 12 ‘ಳ’ ಅಕ್ಷರ ಒಳಗೊಂಡ ಶಬ್ದಗಳನ್ನು ಗುರುತಿಸಬಹುದು). ಒಟ್ಟಾರೆ ನೂರೆಂಟು ಶಬ್ದಗಳ ಹಾಡಿನಲ್ಲಿ ಎಲ್ಲವೂ ಸಮ್ಮಿಳಿತ ಹೊಂದಿ, ಸಕ್ಕರೆಯಂಥ ಕನ್ನಡದ ಕರ್ಣಮಧುರ ಸಂಗೀತವನ್ನು ವಾದ್ಯಗಳಿಲ್ಲದೇ ಇಂಪಾಗಿ ಹೊರಡಿಸುತ್ತದೆ. ಸುಮ್ಮನೆ ಮೊದಲೆರಡು ಸಾಲುಗಳೆಡೆ ಕಣ್ಣಾಡಿಸಿ, ಪ್ರತಿ ಎರಡನೆಯ ಅಕ್ಷರ 'ರ'ಕಾರ. ಅದ್ಭುತವಾಗಿ ಲಯಬದ್ಧವಾಗಿರುವುದಲ್ಲದೇ ಕಥೆಯನ್ನು ವರ್ಣಿಸುತ್ತ ಚಿತ್ರಣವನ್ನು ನೀಡುವ ಪರಿ ಯಾವ ಭಾಷೆಯಲ್ಲಿ ಸಿಕ್ಕೀತು. ಅದು ಕನ್ನಡದ ಸೊಗಡು, ತಾಕತ್ತು, ಬಳಸಿಕೊಂಡಷ್ಟು ಜೇಣು. ಅಕ್ಷರ ತಪಸ್ವಿಗಳು ಮಾತ್ರ ರಚಿಸಬಹುದಾದಂತಹ ಉತ್ಕೃಷ್ಟ ಕೃತಿ ಇದು. ನೋಡಲು ಮಕ್ಕಳ ಹಾಡಿನಂತಿರುವ ಇದರಲ್ಲಿರುವ ಗೂಡಾರ್ಥ ಮಥಿಸಿದಷ್ಟು ದೊರಕೀತು.
ಮುಪ್ಪಿನ ಷಡಕ್ಷರಿಗಳು ಭೋಗ ಷಟ್ಪದಿಯಲ್ಲಿ, ಸರಳ ಸುಂದರ ಭಾಷೆಯಲ್ಲಿ ತಿರುಕನ ಕನಸನ್ನು ವರ್ಣಿಸುವ ರೀತಿ, ಕನಸು ಬಿಚ್ಚಿಕೊಳ್ಳುವ ಪರಿ ಅತ್ಯದ್ಭುತ. ಉತ್ತಮ ಸಂದೇಶ ನೀಡುವ ಕಥಾ ಸಾಹಿತ್ತವಿದು. ಇಂತಹ ಕಾವ್ಯ ಪರಂಪರೆ, ಕನ್ನಡದ ‘ಖಜಾನೆ’ ಗಳಂತೆ ಇರುವ ಇವುಗಳನ್ನು ಮರೆಯಾಗಲು ಬಿಡಬಾರದು. ಕನ್ನಡದ ಅತ್ಯಮೂಲ್ಯ ಆಸ್ತಿಯಂತಿರುವ ಕವಿತೆಗಳನ್ನು ನಾವು ನಮ್ಮ ಆಭರಣಗಳಂತೆ ಕಾಪಾಡಿ, ಸಂರಕ್ಷಿಸಬೇಕಾದ ಅವಶ್ಯಕತೆ ಇದೆ. ಕನ್ನಡದ ಅಮ್ಮಂದಿರು ವಿಶೇಷ ವಾಗಿ ಆಸಕ್ತಿವಹಿಸಿ ಮಕ್ಕಳಿಗೆ ಇವುಗಳನ್ನು ಕಲಿಸಿದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿಕೊಳ್ಳುವಲ್ಲಿ ಹೆಚ್ಚಿನ ಕೊಡುಗೆ ನೀಡಿದಂತಾಗುತ್ತದೆ. ಕನ್ನಡದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೇ , ಗರ್ವದಿಂದ, ಅಭಿಮಾನದಿಂದ ಇಂತಹ ಹಾಡುಗಳನ್ನು ಹೇಳುವಂತಾಗಬೇಕು.. ಮುಖ್ಯವಾಗಿ ಕನ್ನಡಮ್ಮನ ಕಂದಮ್ಮಗಳಿಗೆ, ಕನ್ನಡದ ಉಳಿವಿಗಾಗಿ, ಇಂದಿನ ಪೀಳಿಗೆಗೆ ಅತಿ ಅವಶ್ಯವಾಗಿ ಕಲಿಸಿ, ಅದರ ಗೂಡಾರ್ಥ ವಿವರಣೆ ಮಾಡಿ, ಮನದಟ್ಟು ಮಾಡಿಸಬೇಕಾಗಿದೆ. ಕನ್ನಡಿಗ ಮಿತ್ರರೇ, ನಾವು ಕರ್ನಾಟಕದಲ್ಲಿರಲಿ ಅಥವಾ ವಿಶ್ವದ ಯಾವ ಮೂಲೆಯಲ್ಲಿದ್ದರೂ ಸರಿ, ನಮ್ಮ ಮಕ್ಕಳಿಗೆ ಇಂತಹ ಅಮೂಲ್ಯ ‘ಮಕ್ಕಳ ಹಾಡು’ ಗಳನ್ನು ಕಲಿಸಿ, ಕನ್ನಡ ಕಣ್ಮರೆಯಾಗಿ ಹೋಗದಂತೆ ಪ್ರಯತ್ನಿಸೋಣ. ಮುಂದೆಂದಾದರೂ ಬಂದೀತು ಎಂದು ತಮಗೆ ಸಾಧ್ಯವಾದ ಸಾಧನದಲ್ಲಿ ಸಂಗ್ರಹಿಸಿಡುವುದು ಉತ್ತಮವೆಂದು ನನ್ನ ಪ್ರಾಮಾಣಿಕ ಅನಿಸಿಕೆ. ಇದು ಖಂಡಿತ ನಮ್ಮನ್ನು ನಮ್ಮ ಬಾಲ್ಯದ ಶಾಲಾ ದಿನಗಳಿಗೆ ಕೊಂಡೊಯ್ಯುತ್ತದೆ. ಮತ್ತೊಮ್ಮೆ ಓದಿ ಅನಂದಿಸಿ, ಇನ್ನು ತಾವುಂಟು, ತಮ್ಮ ಬಾಲ್ಯದ ‘ತಿರುಕನ ಕನಸು’ಂಟು.
ತಿರುಕನ ಕನಸು
-ಮುಪ್ಪಿನ ಷಡಕ್ಷರಿ ಶಿವಯೋಗಿ
ತಿರುಕನೊರ್ವನೂರ ಮುಂದೆ = ತಿರುಕ, ಓರ್ವ, ಊರ
ಮುರುಕು ಧರ್ಮಶಾಲೆಯಲ್ಲಿ = ಮುರುಕು, ದರ್ಮಶಾಲೆ
ಒರಗಿರುತ್ತಲೊಂದು ಕನಸ ಕಂಡನೆಂತೆನೆ = ಒರಗಿ, ಇರುತ್ತ,
ಪುರದ ರಾಜ ಸತ್ತನವಗೆ = ಪುರ, ರಾಜ
ವರಕುಮಾರರಿಲ್ಲದಿರಲು = ವರಕುಮಾರರು, ಇಲ್ಲದಿರಲು
ಕರಿಯ ಕೈಗೆ ಕುಸುಮಮಾಲೆಯಿತ್ತು ಪುರದೊಳು = ಕರಿ, ಪುರದೊಳು
ನಡೆದು ಯಾರ ಕೊರಳಿನಲ್ಲಿ = ಯಾರ, ಕೊರಳು
ತೊಡರಿಸುವುದೊ ಅವರ ಪಟ್ಟ = ತೊಡರಿಸು, ಅವರ
ಕೊಡೆಯರನ್ನು ಮಾಳ್ಪೆವೆಂದು ಬಿಟ್ಟರಲ್ಲಿಯೆ = ಒಡೆಯರು, ಬಿಟ್ಟರಲ್ಲಿಯೆ
ಒಡನೆ ತನ್ನ ಕೊರಳಿನಲ್ಲಿ = ಕೊರಳು
ತೊಡರಿಸಲ್ಕೆ ಕಂಡು ತಿರುಕ = ತೊಡರಿಸು, ತಿರುಕ
ಪೊಡವಿಯಾಣ್ಮನಾದೆನೆಂದು ಹಿಗ್ಗುತಿರ್ದನು = ಹಿಗ್ಗುತಿರ್ದ
ಪಟ್ಟವನ್ನು ಕಟ್ಟಿ ನೃಪರು = ನೃಪರು
ಕೊಟ್ಟರವಗೆ ಕನ್ಯೆಯರನು = ಕೊಟ್ಟರವಗೆ, ಕನ್ಯೆಯರನು
ನೆಟ್ಟನವನು ರಾಜ್ಯವಾಳ್ದ ಕನಸಿನಲ್ಲಿಯೇ = ರಾಜ್ಯ
ಭಟ್ಟನಿಗಳ ಕೂಡಿ ನಲ್ಲ
ನಿಷ್ಟಸುಖದೊಳಿರಲವಂಗೆ = ಸುಖದೊಳಿರಲು
ಹುಟ್ಟಿ ಹೆಣ್ಣು ಗಂಡು ಮಕ್ಕಳಾದುವಾಗಲೇ
ಓಲಗದಲಿರುತ್ತ ತೊಡೆಯ = ಇರುತ್ತ
ಮೇಲೆ ಮಕ್ಕಳಾಡುತಿರಲು = ಆಡುತಿರಲು
ಲೀಲೆಯಿಂದ ಚಾತುರಂಗ ಬಲವ ನೋಡುತ = ಚಾತುರಂಗ
ಲೋಲನಾಗಿ ನುಡಿದನಿನಿತು
ಕೇಳು ಮಂತ್ರಿಸುತರುಗಳಿಗೆ ಮಂತ್ರಿ, ಸುತರು
ಬಾಲೆಯರನು ನೋಡಿ ಮದುವೆ ಮಾಡಬೇಕೆಲೆ = ಬಾಲೆಯರನು,
ನೋಡಿ ಬನ್ನಿರೆನಲು ಜೀಯ = ಬನ್ನಿರೆನಲು
ನೋಡಿ ಬಂದೆವೆನಲು ಬೇಗ
ಮಾಡು ಮದುವೆ ಮಂಟಪದೊಳು ಸಕಲ ಕಾರ್ಯವ = ಕಾರ್ಯವ
ಗಾಢವಾಗೆ ಸಂಭ್ರಮಗಳು = ಸಂಭ್ರಮಗಳು
ಮಾಡುತಿದ್ದ ಮದುವೆಗಳನು
ಕೂಡಿದಖಿಳ ರಾಯರೆಲ್ಲ ಮೆಚ್ಚುವಂದದಿ - ರಾಯರೆಲ್ಲ
ಧನದ ಮದವುರಾಜ್ಯಮದವು = ರಾಜ್ಯ
ತನುಜ ಮದವು ಯುವತಿ ಮದವು
ಜನಿತಮಾಗಿ ಕನಸಿನಲ್ಲಿ ಹಿಗ್ಗುತಿರ್ದನು = ಹಿಗ್ಗುತಿರ್ದನು
ಅನಿತರೊಳಗೆ ನೃಪರ ದಂಡು = ಅನಿತರೊಳಗೆ, ನೃಪರ
ಮನೆಯ ಮುತ್ತಿದಂತೆಯಾಗೆ
ಕನಸ ಕಾಣುತಿರ್ದ ಹೆದರಿ ಕಣ್ಣ ತೆರೆದನು = ಕಾಣುತಿರ್ದ, ಹೆದರಿ, ತೆರೆದನು
ಸಂಗ್ರಹ: ಲಕ್ಷ್ಮೀಕಾಂತ ಇಟ್ನಾಳ
Comments
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by kamalap09
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by lpitnal@gmail.com

In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by kavinagaraj

In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by Krishna Kulkarni
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by makara
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by lpitnal@gmail.com
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by makara
ಉ: ತಿರುಕನ ಕನಸು - @ಜೀ @ಇಟ್ನಾಳ್ ಅವ್ರೇ...
In reply to ಉ: ತಿರುಕನ ಕನಸು - @ಜೀ @ಇಟ್ನಾಳ್ ಅವ್ರೇ... by venkatb83

In reply to ಉ: ತಿರುಕನ ಕನಸು - @ಜೀ @ಇಟ್ನಾಳ್ ಅವ್ರೇ... by ಶ್ರೀನಿವಾಸ ವೀ. ಬ೦ಗೋಡಿ
ಉ: ತಿರುಕನ ಕನಸು - @ಜೀ @ಇಟ್ನಾಳ್ ಅವ್ರೇ...
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by gopaljsr
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by ksraghavendranavada
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by H A Patil
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ
In reply to ಉ: ತಿರುಕನ ಕನಸು - ನಮ್ಮ ಮಕ್ಕಳಿಗಾಗಿ ಮತ್ತೊಮ್ಮೆ by nanjunda