ಕನ್ನಡ ಕಲಿ ಕುಲ ಹೆಮ್ಮೆಯ ಪ್ರವರ

ಕನ್ನಡ ಕಲಿ ಕುಲ ಹೆಮ್ಮೆಯ ಪ್ರವರ

ಕವನ

ಹಂಪೆಯ ಅರಸರ ಕ್ಷಾತ್ರದ ತೇಜ

ಕೃಷ್ಣದೇವರಾಯರ ಶೌರ್ಯದ ಓಜ

ಹುಲಿಯನು ಹೊಯ್ದ ಹೊಯ್ಸಳ ರಾಜ

ಕೊಡವರ ಸೇನೆಯ ಸಿಂಹದ ನಾದ

ಕೊಡಗಿನ ಕಲಿಗಳ ರಣದುನ್ಮಾದ

ಓಬವ್ವೆಯ ವೈರಿಯ ರಣ ಚಂಡಾಟ

ಮದಕರಿ ಘುಟುರಿನ ದುರ್ಗದ ಕೋಟೆ

ಕಂಪಲಿ ಕೋಟೆ ಶೌರ್ಯದ ಧಾಮ

ರಣದಲಿ ದಣಿಯದ ಕುಮಾರ ರಾಮ

ರಾಯರ ಮೆಚ್ಚಿನ ಎಚ್ಚಮ ನಾಯಕ

ಕಿತ್ತೂರ ಸಿಂಹಿಣಿ ಚೆನ್ನಮ್ಮ ರಾಣಿಯ

ಹಮ್ಮೀರ ಪುತ್ರ ಸಂಗೊಳ್ಳಿ ರಾಯ

ಉಳ್ಳಾಲ ರಾಣಿ ಅಬ್ಬಕ್ಕ ದೇವಿಯ

ಕಡಲಿನ ಕಲಿಗಳ ಮೊಗವೀರ ಪಡೆಯು

ಬೇಡರ ಪಡೆಗಳ ಬಳ್ಳಾರಿ ಗಡಿಯು

ಏಸೂರು ಕೊಟ್ಟರು ಈಸೂರು ಬಿಡದ

ಈಸೂರ ಕಲಿಗಳ ಸಂಗ್ರಾಮ ಕಿಡಿಯು

ನಮ್ಮಯ  ನಾಡಿನ ಎಂಟೆದೆ ಬಂಟರ

ಕನ್ನಡ  ಕಲಿ ಕುಲ ಹೆಮ್ಮೆಯ ಪ್ರವರ

 

Comments