ಮೂಢ ಉವಾಚ - 160

ಮೂಢ ಉವಾಚ - 160

ಹುಟ್ಟಿನಿಂ ಜಾತಿಯೆನೆ ನೀತಿಗದು ದೂರ

ಪ್ರಿಯ ಸುತರು ನರರಲ್ತೆ ದೇವಾಧಿದೇವನ |
ದೇವಗಿಲ್ಲದ ಜಾತಿ ಮಕ್ಕಳಿಗೆ ಬೇಕೇಕೆ
ಮೇಲು ಕೀಳುಗಳ ಸರಿಸಿಬಿಡು ಮೂಢ || ..319

ಆನಂದದ ಬಯಕೆ ನಂದದೆಂದೆಂದು
ಆನಂದವೇನೆಂದು ತಿಳಿಯಬೇಕಿಂದು |
ಸಿಕ್ಕಷ್ಟು ಸಾಲದೆನೆ ಆನಂದವಿನ್ನೆಲ್ಲಿ
ಇರುವುದೆ ಸಾಕೆನಲು ಆನಂದ ಮೂಢ || ..320
*****************
-ಕ.ವೆಂ.ನಾಗರಾಜ್.
Rating
No votes yet

Comments