ಚೆಂಗುಲಾಬಿ ಚೆಲುವು ನನ್ನೊಲವು
ವರುಷ ಋತುವಿನಲರಳಿ ನಿಂತ
ಹೊಸ ಚೆಂಗುಲಾಬಿ ಚೆಲುವು ನನ್ನೊಲವು.
ಹರುಷ ನೀಡುವ ಗೀತದೊಡಲಿನ
ಮಧುರ ಇನಿದನಿಯ ಇಂಚರವು ನನ್ನೊಲವು
ಶ್ವೇತ ಸುಂದರಿಯಿವಳು, ಸಣ್ಣಮೈಯವಳು,
ತನ್ನೊಲವಬಲೆಯಲ್ಲಿ ನನ್ನ ಹಿಡಿದಿಹಳು.
ಬತ್ತಿಹೋದರು ಸಪ್ತಸಾಗರ,
ಬತ್ತದಂತಿಹುದು ನನ್ನೆದೆಯ ಒಲವು
ಬತ್ತಿಹೋಗಲಿ ಸಪ್ತ ಸಾಗರ
ಕರಗಿಹೋಗಲಿ ಮೇರು ಗಿರಿಗಳೆಲ್ಲ
ಜೀವಕಣಗಳು ಹರಿಯುತಿರಲು
ನಿನ್ನೊಲವಿನದೆ ಬಲವು ಬದುಕಿಗೆಲ್ಲ.
ವಿದಾಯಗಳು ಚೆಲುವೆ,
ನೀನೊಬ್ಬಳೇ ಗೆಳತಿ ನನಗೆ
ಕಾಲದ ಪಯಣದಲಿ ಕ್ಷಣಿಕವೀ ವಿರಹ
ಬೇಗ ಬರುವೆ ನಾ ನಿನ್ನೆಡೆಗೆ
ಹತ್ತು ಸಾಸಿರ ಮೈಲು
ಮತ್ತೆ ಸಾವಿರ ತಡೆಯು
ದಾಟಿ ಬರುವೆನು ನಿನ್ನ ನೆನಪಿನೊಳಗೆ
ನಿನ್ನೊಲವ ತಂಪು ನೆರಳಿನಡಿಗೆ.
ರಾಬರ್ಟ್ ಬರ್ನ್ಸ್ ಕವಿಯ " My love is like red, red rose" ಕವನದ ಭಾವಾನುವಾದ
Rating
Comments
ಉ: ಚೆಂಗುಲಾಬಿ ಚೆಲುವು ನನ್ನೊಲವು
In reply to ಉ: ಚೆಂಗುಲಾಬಿ ಚೆಲುವು ನನ್ನೊಲವು by makara
ಉ: ಚೆಂಗುಲಾಬಿ ಚೆಲುವು ನನ್ನೊಲವು
ಉ: ಚೆಂಗುಲಾಬಿ ಚೆಲುವು ನನ್ನೊಲವು @ ಮೊದ್ಮಣೀ