ನಮ್ಮ ಮೇಸ್ಟ್ರು ಮತ್ತು ಮಕ್ಕಳು
ಶಾಲೆ ೧.
ಶಾಲೆಯನ್ನೇ ಮನೆಯನ್ನಾಗಿ
ಮಾಡಿಕೊಂಡ ಮೇಸ್ಟು
ಪಾಪ ಅವರಾದರೊ ಏನ ಮಾಡಿಯಾರು!
ದಲಿತರಾದ ಅವರಿಗೆ ಬಾಡಿಗೆಗೆ ಮನೆ ಕೊಡುವವರಾದರೊ ಯಾರಿದ್ದರು?
ಆಗೆಂದ ಮಾತ್ರಕ್ಕವರಿಗೆ ಹುಳಿ ಅನ್ನ
ಮೊಸರು ಮತ್ತು ಮಜ್ಜಿಗೆಗೆ ಯಾವ ಕೊರತೆಯೊ ಕಾಡರಲಿಲ್ಲ ಬಿಡಿ
ಎವತ್ತೈದರ ಅಸುಪಾಸು, ಮಗಳ ಮದುವೆ
ಅದು ಇದು ತಲೆಯ ತುಂಬಾ ಬರಿ ಲೆಕ್ಕಾಚಾರವೆ
ಆಗಿದ್ದರೊ ಅವರು ಕಲಿಸಿದ ಕಾಗುಣಿತ
ಗಣಿತ ಇನ್ನೊ ಅಬಾದಿತ, ಜೀವಂತ
ಹಿಂದಿ ಮೇಸ್ಟ್ರೇ ಇರದೆ ಎಲ್ಲರನ್ನೊ ಪಾಸು ಮಾಡಿಸೊರೊ
ಮಾಡಲ್ಲೇ ಬೇಕಿತ್ತು ಬಿಡಿ ಅವರಾದರೊ ಮತ್ತೇನು ಮಾಡಿಯಾರು
ಇದ್ದಕಿದ್ದಂತೆ, ಬರೀ ಸವರ್ಣೀಯರೇ ಇದ್ದ ಉರಿಗೆ ಬೇಕಂತಲೇ
ಬರೀ ದಲಿತರನ್ನೇ ತಂದು ತುಂಬಿದ್ದರು ಆ ಮಿನಿಸ್ಟ್ರು
ಇರಬೇಕು ಯಾವುದೊ ಸೇಡಿನ ಬೆಂಕಿ
ಅದ್ರೊ ಅವರೆಣಿಸಿದಂತೆ ಕಾಳ್ಗಿಚ್ಚಾಗಿ ಪರಿಣಮಿಸಲೊ ಇಲ್ಲ
ಇತ್ತ ಮತ್ತೆ ಯಾರನ್ನೊ ಸುಡಲೊ ಇಲ್ಲ
ಕಲಿಸುವುದನ್ನ ಅವರಾರೊ ಮರೆಯಲೊ ಇಲ್ಲ
ಮಕ್ಕಳು ಎಂದಿನಂತೆ ಶಾಲೆಗೆ ಬಂದರು, ಮುಂದಕ್ಕೆ ಜಿಗಿದರು
ಹೇಳಲೇ ಬೇಕಿಲ್ಲಿ ಅದು ನಿಜಕ್ಕೊ ಸುಟ್ಟದ್ದು ಮತ್ತೆ ಆ ಮೆಸ್ಟ್ರುಗಳನ್ನೆ
ಬರಲೇ ಬೇಕಿತ್ತು ದೊರದ ಊರುಗಳಿಂತ, ಏದೆ ಬಿರಿದರೊ
ತುಳಿಯಲೇ ಬೇಕಿತ್ತು ಸೈಕಲ್ಲು
ಅವರಾರೊ ತಮ್ಮ ಮಕ್ಕಳನ್ನ ತಮ್ಮದೇ
ಶಾಲೆಗೆ ದಾಖಲು ಮಾಡುವ ಧರ್ಯ ಮಾಡದೆ
ದೊಡಿದ್ದರು ಹತ್ತಿರದ ನಗರಗಳ ಶಾಲೆಗೆ
ಅವರಲ್ಲಿ ಅರ್ಧಂಬರ್ಧ ಪೋಲಿ ಬಿದ್ದರು ಎನ್ನೊದೊ ನಿಜಾನೆ
ಹೀಗೆ ನಿಧಾನವಾಗಿ ನಮ್ಮ ಸರ್ಕಾರಿ ಶಾಲೆಗಳು ಮುಂದಕ್ಕೆ ಚಲಿಸುತ್ತಾ
ಈಗ
ಮತ್ತದೇ ಮಿನಿಸ್ಟ್ರುಗಳ ಶನಿ ದ್ರುಸ್ಟಿ ನಮ್ಮ
ಈ ಮೇಸ್ಟ್ರುಗಳ ಮೇಲೆ ಬಿದ್ದು, ಕುರಿ
ಕೋಳಿ ಲೆಕ್ಕಕ್ಕೆ, ಜನಗಣತಿ
ಚುನಾವಣೆಗಳೆಲ್ಲದರಲಿ ಇವರಿರದೇ ಎನೊ ಇರದು
ಅದೊ ಅಲ್ಲದೇ ಪಾರಂಪರಿಕ ರಜೆ ಅನುಬವಿಸುತ್ತಿದ್ದ
ಇವರಿಗೆ ಹೆಚ್ಚುವರಿಯಾಗಿ ಬೇಸಿಗೆಯಲ್ಲಿ
ಮತ್ತೆ ದಸರೆ ರಜಗಳಲ್ಲಿ ನಲಿ ಕಲಿ ಬಂದಿದೆ
ವರ್ಗಾವಣೆಗಳಿಲ್ಲದೇ ಕೌಟುಂಬಿಕ ಬದುಕಿನಿಂದ
ಹಲವರನ್ನ ಹೊರಕ್ಕೆ ದೊಡಿದೆ
ಇನ್ನೊ ವಯಸ್ಸಾದ ತಂದೆ ತಾಯಿ
ಮದುವೆಯಾಗದ ಅಕ್ಕ ತಂಗಿ ಇದ್ದವರ ಪಾಡು ಹೇಳತೀರದು
ಇಂತಹದರಲ್ಲಿ
ಕೈಗೆ ಬಾಯಿಗೆ ದಕ್ಕದ ಅವ್ರ ಸರ್ಕಾರಿ ಸಂಬಳ
ಅವರನ್ನ ಅತ್ತ ಕೆಳಕ್ಕೊ ಅಲ್ಲದೇ ಅತ್ತ ಮೇಲಕ್ಕೊ ಎತ್ತದೆ
ಅವರ ಅತ್ಮವಿಶ್ವಾಸವನ್ನೇ ಕದಡಿದೆ
ಕದ್ದು ಕುಡಿಯುವ ಮತ್ತೆ ಲಲನೆಯರ ದಾಸ್ಯಕ್ಕೆ ಬಲಿಯಾಗುವ
ಅಲ್ಲಲ್ಲಿ ಮಕ್ಕಳ ಮೇಲೆರಗುವ ಶಿಕ್ಶಕರ ಹೆಸರುಗಳು ಹೆಚ್ಚಾಗಿ ಸದ್ದು ಮಾಡುತ್ತಿವೆ
ದೊರದ ಶಾಲೆಗಳಿಗೆ ಆಗೀಗ ಹಾಜರಾಗುವವರ ಮೇಸ್ಟ್ರುಗಳ ಸಂತತಿಯೊ ಬೆಳೆಯುತ್ತಿದೆ
ದೇಸಿ ರಾಜಕೀಯದಲ್ಲಿ ರಾರಾಜಿಸುವ ಹಲವು ಮೇಧಾವಿ ಮೇಸ್ಟ್ರುಗಳೊ ಇದ್ದಂತಿದೆ
ನೈತಿಕತೆತಯನ್ನ ಭೊದಿಸಬೇಕಾದ ನಮ್ಮೀ
ಮೇಸ್ಟ್ರುಗಳೆಗೆ ವರದಕ್ಶಿಣೆಯ ಬೊತ ಮೆಟ್ಟಿದೆ
ಇಂತಹದರಲ್ಲಿ ನಮ್ಮ ಬಡ ಮಕ್ಕಳು ಕಲಿಯ ಬೇಕಿದೆ
ಇದು ಸೊಜಿಗ ಎನಿಸಿದರೆ ನಿಮ್ಮ ಹತ್ತಿರದ ಶಾಲೆಗಳಿಗೊಮ್ಮೆ
ಅಗೀಗ ಹೋಗಿ ಬನ್ನಿ, ಅದರಲ್ಲಿ ನಿಮ್ಮದೊ ಪಾಲಿದೆ
ಹಾಗಂತ ಎಲ್ಲರೊ ಹಾಗೆನಿಲ್ಲ
ಒೞೆಯ ಮೇಸ್ಟ್ರುಗಳ ಸಂತತಿ ಇನ್ನೊ ಇದ್ದಂತಿದೆ
ಅದಕ್ಕಗಿಯೇ ಗುರು ಶಿಶ್ಯರ ಪರಂಪರೆ ಇನ್ನೊ ಉಳಿದಂತಿದೆ!
ಶಾಲೆ ೨
ಮತ್ತೊಂದೆಡೆ ಅತ್ತ ಬೆಂಗಳೊರಿನತ್ತ
ಕೈ ಮಾಡುತ್ತಾ ಹೇಳುತ್ತಾನೆ ಒಬಾಮ
ನನ್ನ ನೆಚ್ಚಿನ ಅಮೇರಿಕೆಯ ಮಕ್ಕಳಿಗೆ ಇವರು ಸವಾಲೆಂದು
ಅವನಿಗೇನು ಗೊತ್ತು, ನಮ್ಮ ಮಧ್ಯಮ ವರ್ಗದ ಪಾಲಕರ ಸಾವಾಲು
ನಗರಗಳ ಹೆಸರಾಂತ ಶಾಲೆಗಳಲ್ಲಿ ಮಕ್ಕಳನ್ನ ದಖಾಲಿಸಲು ಹೆಣಗಾಡುವ ಪಾಡು
ಬೆವರು, ಬುದ್ಧಿ ಮತ್ತು ಎಲ್ಲದನ್ನೊ ಪಣಕಿಕ್ಕಿ, ಯಾರದೊ ನೆಲಕ್ಕೆ
ಅರ್ಪಿಸಲು, ಸಮರ್ಪಿಸಲು ಪರಿತಪಿಸುವ ಅವರ ಪಾಡು
ಗೊತ್ತಿದೆಯಾ ನಿನಗೆ ?
ಮುಂದೆ ಅವರದೇ ಮಕ್ಕಳು ಅವರಿಗೇ ಅಪರಿಚಿತರಾಗುಳಿಯುವುದರ ಬಗ್ಗೆ
ಹೆಚ್ಚೆಂದರೆ, ಹೀಗೆ ಕಲಿತವರು
ಸಾಗರಗಳಾಚೆ ದುಡಿಯುವ ಗುತ್ತಿಗೆ ಕಾರ್ಮಿಕರು
ತಾಯ್ನೆಲ ಬಿಟ್ಟು ಅಲ್ಲೇಲ್ಲೊ ಇದ್ದು, ಇದ್ದಲ್ಲೇ ಉಳಿದು
ತಮ್ಮವರಿಗೇ ಅಪರಿಚಿತಾರಾಗಿ ಉಳಿದು ಬದುಕುವ ಅವರ .......!?
Comments
ಉ: ನಮ್ಮ ಮೇಸ್ಟ್ರು ಮತ್ತು ಮಕ್ಕಳು
In reply to ಉ: ನಮ್ಮ ಮೇಸ್ಟ್ರು ಮತ್ತು ಮಕ್ಕಳು by mmshaik
ಉ: ನಮ್ಮ ಮೇಸ್ಟ್ರು ಮತ್ತು ಮಕ್ಕಳು
In reply to ಉ: ನಮ್ಮ ಮೇಸ್ಟ್ರು ಮತ್ತು ಮಕ್ಕಳು by mmshaik
ಉ: ನಮ್ಮ ಮೇಸ್ಟ್ರು ಮತ್ತು ಮಕ್ಕಳು