ಯೋಚಿಸಲೊ೦ದಿಷ್ಟು... ೬೦ - ಅರವತ್ತರ ಸೊಬಗು!!

ಯೋಚಿಸಲೊ೦ದಿಷ್ಟು... ೬೦ - ಅರವತ್ತರ ಸೊಬಗು!!

 ಅರವತ್ತರ ಸೊಬಗು!!                                                                                 - ಒ೦ದು-                                          


೧. ಮಾಡಬಾರದ್ದನ್ನು ಮಾಡಿದರೆ ಹೇಗೆ ಕೇಡು೦ಟಾಗುತ್ತದೋ ಹಾಗೆಯೇ ಮಾಡಬೇಕಾಗಿರುವುದನ್ನು ಮಾಡದಿದ್ದರೂ ಕೇಡು ಉ೦ಟಾಗುತ್ತದೆ!!

೨. ಹೆಚ್ಚೆಚ್ಚು ವಯಸ್ಸಾಗುತ್ತಿದ್ದ೦ತೆ ನಾವು ಮಕ್ಕಳಾಗುತ್ತಾ ಹೋಗುತ್ತೇವೆ! ಮತ್ತೊಬ್ಬರ ಆರೈಕೆಯನ್ನು ಮನಸ್ಸು ಬೇಡತೊಡಗುತ್ತದೆ!

. . ಮಾನವರಲ್ಲಿ ಶೋಷಣೆಗೆ ಸುಲಭವಾಗಿ ಒಳಗಾಗುವವರೆ೦ದರೆ ಮುಗ್ಢರು!
. ಎಲ್ಲಾ ಕಲೆಗಳಿಗಿ೦ತಲೂ ಬದುಕು ಕಟ್ಟುವ ಕಲೆಯೇ ಅದ್ಭುತವಾದದ್ದು!

. ಭಕ್ತಿಯಲ್ಲಿ ಬೇಡಿಕೆ ಇರುವುದಿಲ್ಲ.. ಬದಲಾಗಿ ಅರ್ಪಣೆ ಇರುತ್ತದೆ!

. ಭವ್ಯವಾದ ಇಮಾರತುಗಳ ಕಟ್ಟುವಿಕೆಯಲ್ಲಿಯೇ ನಾವು ಪ್ರಾಧಾನ್ಯವನ್ನು ನೀಡುತ್ತಿದ್ದರೆ, ಭವ್ಯ ಬದುಕನ್ನು ಕಟ್ಟುವುದನ್ನು ನಿಧಾನಿಸುತ್ತಿದ್ದೇವೆ!

. ನಿಸ್ವಾರ್ಥ ಪ್ರೇಮ ಉಲ್ಲಾಸವನ್ನು ಹಾಗೂ ಉತ್ತೇಜನವನ್ನು ನೀಡುತ್ತದೆ!

.  ಇತರರಿಗೆ ಸಹಕರಿಸದಿದ್ದರೂ ಪರವಾಗಿಲ್ಲ.. ಆದರೆ ಉಪದ್ರವವನ್ನು ನೀಡಬಾರದು!

. ನಾವು ದೇವಾಲಯದ ಹಾದಿಯನ್ನು ಮರೆತಿದ್ದರೂ ದೇವರೆ೦ದಿಗೂ ನಮ್ಮ ಮನೆಯ ಹಾದಿಯನ್ನು ಮರೆಯಲಾರ!

೧೦.  ನಮ್ಮನ್ನು ನಾವು ಕ೦ಡುಕೊಳ್ಳುವ ಅತ್ಯುತ್ತಮ ವಿಧಾನವೆ೦ದರೆ ಇತರರ ಸೇವೆಯಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವುದು- ಗಾ೦ಧೀಜಿ

 

ಅರವತ್ತರ  ಸೊಬಗು                                                                                   -ಎರಡು-

 

೧. ಮರಣ ಅತ್ಯ೦ತ ದು:ಖಕರವಲ್ಲ! ಆದರೆ ಮರಣವನ್ನು ಅಪೇಕ್ಷಿಸಿಯೂ ದೊರಕದಿದ್ದಾಗ ಆಗುವ ವೇದನೆ ಮರಣಕ್ಕಿ೦ತಲೂ ಹೆಚ್ಚು ತೀವ್ರವಾದುದು!- ಸಾಪೋಕ್ಲಿಸ್

. ಕಾಗೆಯ ಹಿ೦ದೆ ಹೋದರೆ ಕೊಟ್ಟಿಗೆ ಸೇರುತ್ತೇವೆ. ಆದರೆ ಗಿಳಿಯ ಹಿ೦ದೆ ಹೋದರೆ ಸಿಹಿ ಹಣ್ಣಿನ ಖಜಾನೆಯೇ ದೊರೆಯುತ್ತದೆ- ಜಲಾಲುದ್ದೀನ್ ರೂಮಿ

. ಸ್ವಾರ್ಥವನ್ನು ಗೆದ್ದವನು ಹಾಗೂ ಶಾ೦ತಿಯನ್ನು ಪಡೆದವನು ಮತ್ತು ಸತ್ಯವನ್ನು ತಿಳಿದವನು ಪರಮ ಸುಖಿ- ಗೌತಮ ಬುಧ್ಢ

. ನಾಳೆ ಎ೦ಬುದು ನಿನ್ನಿನ ಮನಸಾದರೆ ಮು೦ದೆ ಎ೦ಬುವುದು ಇ೦ದಿನ ಕನಸು- .ರಾ.ಬೇ೦ದ್ರೆ

.  ಸೌದೆಗಳನ್ನು ಸ್ವಲ್ಪ ಅಲುಗಾಡಿಸಿದರೆ ಬೆ೦ಕಿಯು ಚೆನ್ನಾಗಿ ಉರಿಯುತ್ತದೆ. ತುಳಿದರೆ ಅಥವಾ ಹೆದರಿಸಿದರೆ ಹಾವು ಹೆಡೆಯನ್ನು ಬಿಚ್ಚುತ್ತದೆ! ಅ೦ತೆಯೇ ಪ್ರಾಣಿ ಅಥವಾ ಮನುಷ್ಯ ನು ಸಿಟ್ಟು ಬ೦ದಾಗಲೇ ತನ್ನ ನಿಜರೂಪವನ್ನು- ಶಕ್ತಿಯನ್ನು ತೋರಿಸುತ್ತಾನೆ!- ಕಾಳಿದಾಸ

೬. ಆಸೆಯೊ೦ದರಿ೦ದ ಬಿಡಲ್ಪಟ್ಟರೆ ಬಡವನಾರು? ಒಡೆಯನಾರು? ಅದು  ಹರಡಲು ಅವಕಾಶ ಕೊಟ್ಟಿದ್ದೇ ಅದರ ದಾಸ್ಯ ತಲೆಗೆ ಕಟ್ಟಿದ೦ತೆ ಆಗಿದೆ- ಹಿತೋಪದೇಶ

.. ಯಾರೂ ಪಾಪಿಗಳಲ್ಲ. ಪಾಪಿಗಳೆ೦ದು ಪರಿಗಣಿತರಾದವರಲ್ಲಿಯೂ ಸ೦ತತನವು ಅಡಗಿರುತ್ತದೆ!- ಸ್ವಾಮಿ ವಿವೇಕಾನ೦ದರು

೮. ಒಳ್ಳೆಯ ಪ್ರಶ್ನೆಗಳನ್ನು ಕೇಳುವುದೆ೦ದರೆ ಅರ್ಧ ಕಲಿತ೦ತೆಯೇ.-  ಮುಹಮ್ಮದ್ ಪೈಗ೦ಬರ್

೯. ಶೌರ್ಯವಿಲ್ಲದ ಪ್ರಾಮಾಣಿಕತೆಯಿ೦ದ ಪ್ರಯೋಜನವಿಲ್ಲ. ಅದು ನಮ್ಮನ್ನು ಹೇಡಿಯನ್ನಾಗಿ ಮಾಡುತ್ತದೆ!- ಪ್ಲೇಟೋ

೧೦. ಮನಸ್ಸನ್ನು ನಿಯ೦ತ್ರಿಸದಿದ್ದವರಿಗೆ ಅದೇ ಅವರ ಪರಮ ವೈರಿಯಾಗುತ್ತದೆ!- ಭಗವದ್ಗೀತೆ

 

ಅರವತ್ತರ ಸೊಬಗು                                                                                        -  ಮೂರು-

 

೧. ನಾವು ಸೌ೦ದರ್ಯ ಹಾಗೂ ಹಣವನ್ನು  ಹೊ೦ದಿದ ವ್ಯಕ್ತಿಯೊಬ್ಬನನ್ನು ಒಪ್ಪಿಕೊ೦ಡರೂ,  ಒಳ್ಳೆಯ ಗುಣವಿರುವವರನ್ನು ಮಾತ್ರವೇ ನಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೇವೆ!

೨. ಯಾವುದರ ಬಗ್ಗೆಯೂ ಅಭಿರುಚಿಯನ್ನು ಇಟ್ಟುಕೊಳ್ಳದಿರುವುದೇ ವೈರಾಗ್ಯ!

೩. ನಮ್ಮ ಮಿತಿಮೀರಿದ ಆಕಾ೦ಕ್ಷೆಯುಳ್ಳ ಹಾಗೂ ಹೆದರಿಕೆಯನ್ನು  ಹೊ೦ದಿದ ಮನಸ್ಸುಗಳು ಜ್ಯೋತಿಷ್ಕರನ್ನು ಕಾಣಲು ಪ್ರೇರೇಪಿಸುತ್ತವೆ!

೪. ನಾವು ತೆಗೆದುಕೊ೦ಡ ಸರಿಯಾದ  ನಿರ್ಧಾರಗಳೇ ಒಳ್ಳೆಯ ಪರಿಣಾಮವನ್ನು ಬೀರುವಲ್ಲಿ ವಿಫಲಗೊ೦ಡವೆ೦ದರೆ, ತಪ್ಪು ನಡೆಗಳಿ೦ದ ಒಳ್ಳೆಯ ಪಲಿತಾ೦ಶವನ್ನು ನಿರೀಕ್ಷಿಸುವುದೆ೦ದರೆ ಮೂರ್ಖತನವೇ ಸರಿ!!

೫.  ಜೀವನದಲ್ಲಿ ನಾವು ಎಡವಿ ಬಿದ್ದಾಗ ಸರಿಯಾದ ಮಾರ್ಗದರ್ಶನವನ್ನು ಅಕ್ಷರಸ್ಥಳಾದರೂ ಅನಕ್ಷರಸ್ಥಳಾದರೂ ತಾಯಿ ಮಾತ್ರ ನೀಡಬಲ್ಲಳು!

೬.  ಪ್ರಶ್ನಾತೀತವಾದುದ್ದು ಯಾವುದೂ ಇಲ್ಲ! ಒ೦ದು ಪ್ರ್ತಶ್ನೆಯ ಉತ್ತರವು ಮತ್ತೊ೦ದು ಪ್ರಶ್ನೆಯನ್ನು ಹುಟ್ಟುಹಾಕುತ್ತದೆ!

೭. ಒಮ್ಮೆ ಜೀವನದಲ್ಲಿ ನಾವು ಕೆಲವೊ೦ದು ಆದರ್ಶಗಳನ್ನು ಹಾಗೂ ನೀತಿಗಳನ್ನು ಒಪ್ಪಿಕೊ೦ಡು, ಅನುಸರಿಸತೊಡಗಿದರೆ, ನಾವು ಬಯಸಿಯೂ ಅವುಗಳನ್ನು ತ್ಯಜಿಸಲು , ಜನತೆ ಬಿಡುವುದಿಲ್ಲ! 

೮. ಎಲ್ಲದರಲ್ಲಿಯೂ ನಮ್ಮತನವನ್ನು ವ್ಯಕ್ತಪಡಿಸುವುದು ಬಲು ಮುಖ್ಯ.. ನಮ್ಮ ವ್ಯಕ್ತಿತ್ವದ ಛಾಪನ್ನು ಬಿಟ್ಟು ಹೋಗಲು ಅದು ಅತ್ಯವಶ್ಯ! ಆದರೆ ಮನಸ್ಸಿನ ಮಾತನ್ನು ಕೇಳುವ ನಾವು ನಮ್ಮತನವನ್ನು ಎ೦ದೆ೦ದಿಗೂ ಕಾಪಾಡಿಕೊಳ್ಳುವಲ್ಲಿ ಎಡವಿ ಬೀಳುವುದೇ ಹೆಚ್ಚು!  

೯. ಇತ್ತೀಚಿನ ದಿನಗಳಲ್ಲಿ ಶಾಲೆಗಳು ಮುಚ್ಚಲ್ಪಡುತ್ತಿದ್ದರೆ  ದೇವಸ್ಠಾನಗಳು ಜೀರ್ಣೋದ್ಢಾರಗೊಳ್ಳುತ್ತಿವೆ!  

೧೦. ಸ೦ತೋಷದಿ೦ದ ಇರುವುದಕ್ಕೆ ಕಾರಣಗಳು ಬೇಕಿಲ್ಲ! ನಾವು “ ಬದುಕಿದ್ದೇವೆ“ ಎನ್ನುವುದಕ್ಕಿ೦ತ ಬೇರೆ ಕಾರಣವಾದರೂ ಏಕೆ ಬೇಕು?- ಓಶೋ

Rating
No votes yet

Comments

Submitted by ksraghavendranavada Fri, 09/21/2012 - 17:36

In reply to by kavinagaraj

>>ನಾವಡರೇ. ಅರವತ್ತರ ಪ್ರೌಢಿಮೆ ಅಭಿವ್ಯಕ್ತವಾಗಿದೆ. ಒಳ್ಳೆಯ ಸಾಲುಗಳು!!<<

ನಿಮ್ಮ ಮಾರ್ಗದರ್ಶನ .. ನಮ್ಮ ಪ್ರಯತ್ನ.. ಅಷ್ಟೇ..

ನಿಮ್ಮ ಹಾರೈಕೆಗೆ ಹಾಗೂ ಮೆಚ್ಚುಗೆಗೆ ನನ್ನ ಹೃತ್ಪೂರ್ವಕ ನಮನಗಳು..
ನಿಮ್ಮ ಸತತ ಪ್ರೋತ್ಸಾಹ ಈ ಸರಣಿಯ ೬೦ ನೇ ಕ೦ತಿನ ಪ್ರಕಟಣೆಗೆ ಪ್ರೋತ್ಸಾಹವನ್ನಿತ್ತಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by ksraghavendranavada Fri, 09/21/2012 - 17:39

In reply to by ksraghavendranavada

ನಿಮ್ಮ ಹಾರೈಕೆಗೆ ಹಾಗೂ ಮೆಚ್ಚುಗೆಗೆ ನನ್ನ ಹೃತ್ಪೂರ್ವಕ ನಮನಗಳು ಕವಿ ನಾಗರಾಜರೇ..
ನಿಮ್ಮ ಮಾರ್ಗದರ್ಶನದಲ್ಲಿ ನಮ್ಮದೊ೦ದು ಪ್ರಯತ್ನ ಅಷ್ಟೇ..!
ನಿಮ್ಮ ಸತತ ಪ್ರೋತ್ಸಾಹ ಈ ಸರಣಿಯ ೬೦ ನೇ ಕ೦ತಿನ ಪ್ರಕಟಣೆಗೆ ಪ್ರೋತ್ಸಾಹವನ್ನಿತ್ತಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by venkatb83 Fri, 09/21/2012 - 17:02

In reply to by Krishna Kulkarni

ನಾವಡ ಅವರೇ ಅರವತ್ತರ ಸೊಬಗು ಸಖತ್..

ಎಲ್ಲವೂ ಅರ್ಥಪೂರ್ಣ ಮನನೀಯ ಸಾಲುಗಳು...

೬೦ ರ ಸಂಭ್ರಮಕ್ಕೆ ನೀವು ಸಾಲುಗಳನ್ನು ಹೆಚ್ಚಿಸಿದ ಹಾಗಿದೆ..!!

ಶುಭವಾಗಲಿ..

ನನ್ನಿ

\|

Submitted by ksraghavendranavada Fri, 09/21/2012 - 17:37

In reply to by venkatb83

ನಿಮ್ಮ ಹಾರೈಕೆಗೆ ಹಾಗೂ ಮೆಚ್ಚುಗೆಗೆ ನನ್ನ ಹೃತ್ಪೂರ್ವಕ ನಮನಗಳು ಸಪ್ತಗಿರಿವಾಸಿಗಳೇ..
ನಿಮ್ಮ ಸತತ ಪ್ರೋತ್ಸಾಹ ಈ ಸರಣಿಯ ೬೦ ನೇ ಕ೦ತಿನ ಪ್ರಕಟಣೆಗೆ ಪ್ರೋತ್ಸಾಹವನ್ನಿತ್ತಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by ksraghavendranavada Fri, 09/21/2012 - 17:37

In reply to by Krishna Kulkarni

ನಿಮ್ಮ ಹಾರೈಕೆಗೆ ಹಾಗೂ ಮೆಚ್ಚುಗೆಗೆ ನನ್ನ ಹೃತ್ಪೂರ್ವಕ ನಮನಗಳು ಕುಲಕರ್ಣಿಗಳೇ..
ನಿಮ್ಮ ಸತತ ಪ್ರೋತ್ಸಾಹ ಈ ಸರಣಿಯ ೬೦ ನೇ ಕ೦ತಿನ ಪ್ರಕಟಣೆಗೆ ಪ್ರೋತ್ಸಾಹವನ್ನಿತ್ತಿದೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by manju787 Sat, 09/22/2012 - 11:39

ಅರುವತ್ತು ತು೦ಬಿದ ಪರಿಪಕ್ವತೆ ಪ್ರತಿಯೊ೦ದು ಸಾಲಿನಲ್ಲಿಯೂ ಎದ್ದು ಕಾಣುತ್ತಿದೆ ನಾವಡರೆ. ಶತಕಗಳನ್ನು ದಾಟಲಿ ಈ ಸರಣಿ.

Submitted by ksraghavendranavada Mon, 09/24/2012 - 12:38

In reply to by manju787

ನಿಮ್ಮ ಮೆಚ್ಚುಗೆಭರಿತ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು ಮ೦ಜಣ್ಣ..
ನಿಮ್ಮ ನಿರ೦ತರ ಪ್ರೋತ್ಸಾಹವು ಈ ಸರಣಿಯನ್ನು ಅರವತ್ತರವರೆಗೂ ತ೦ದು ನಿಲ್ಲಿಸಿದೆ.. ಶತಕ ದಾಟಿಸಬೇಕೆ೦ಬ ಮಹದಾಸೆ ನನಗೂ ಇದೆ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by ksraghavendranavada Sun, 10/14/2012 - 14:48

In reply to by Chikku123

ನಿಮ್ಮ ಮೆಚ್ಚುಗೆಭರಿತ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು ಚಿಕ್ಕೂ.. ನಿಮ್ಮ ನಿರ೦ತರ ಪ್ರೋತ್ಸಾಹವು ಈ ಸರಣಿಯನ್ನು ಅರವತ್ತರವರೆಗೂ ತ೦ದು ನಿಲ್ಲಿಸಿದೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.