ಮುತ್ತಿನ ಸಾಲ

ಮುತ್ತಿನ ಸಾಲ

ಕವನ

 ಮುತ್ತಿನ ಸಾಲ

 
ಅವಳು ನನಗೆ
ಸಾಲದಷ್ಟು ಮುತ್ತಿನ
ಸಾಲವನ್ನು ಕೊಟ್ಟಿದ್ದಾಳೆ
ಬಡ್ಡಿಯ ದರ
ಸಾಲ ಕೊಡುವ ಎಲ್ಲ ಬ್ಯಾಂಕುಗಳಿಂತ ದುಬಾರಿ
ನಿಜವಾಗಿ ನನಗೆ ಅಸಲು
ತೀರಿಸಲೂ ಆಗುತ್ತಿಲ್ಲ
ಇನ್ನೂ, ಮುತ್ತಿನ ಸಾಲದ ಬಡ್ಡಿಯನ್ನು
ಮಾತ್ರ ನಿರಂತರವಾಗಿ
ಕಟ್ಟುತ್ತಲೇ ಇದ್ದೇನೆ
ಇಎಂಐ ಕಂಡೀಷನ್ ಏನು ಗೊತ್ತೇ?
ದಿನಾಲೂ ಒಂದಿಷ್ಟು ಅಸಲು ಹಾಗೂ
ಬಡ್ಡಿಯನ್ನು ತಪ್ಪದೇ ಕಟ್ಟಬೇಕು
 
ಈಗ ನಾನು ಕೇಳುತ್ತೇನೆ
ಮುತ್ತಿನ ಸಾಲದಂತೆ    
ಪ್ರೀತಿಯ ಸಾಲವನ್ನೂ ಕೊಟ್ಟುಬಿಡೆಂದು
ಅವಳದ್ದು ಒಂದೇ ಕಂಡೀಷನ್
ಮೊದಲು ಮುತ್ತಿನ ಸಾಲ ತೀರಿಸೆಂದು
ಅದು ನನ್ನಿಂದಾಗದ ಮಾತು, ಅದಕ್ಕೇ
ಆ ಭಗವಂತನಲ್ಲಿ ಮೊರೆಯಿಟ್ಟಿದ್ದೇನೆ
ಮುತ್ತಿನ ಆ ಸಾಲವನ್ನು ಮನ್ನಾ ಮಾಡಿಬಿಡೆಂದು

Comments