ನಿಜವಾದ ಕಳ್ಳರು ಯಾರು ?

ನಿಜವಾದ ಕಳ್ಳರು ಯಾರು ?

ಮದ್ಯರಾತ್ರಿ ೧೨ ಗಂಟೆ, ಘಾಡ ನಿದ್ರೆ. ಆ ಸಮಯದಲ್ಲಿ ಕಿಟಕಿಯ ಅತ್ತಿರ ಎನ್ನೋ ಶಬ್ದ. ಅದನ್ನು ಕೇಳಿದ ನನಗೆ ಎಚ್ಚರವಾಗಿ ಕಿಟಕಿಯ ಕಡೆ ನೋಡಿದರೆ, ಟಾರ್ಚ್ ಬೆಳಕು ಹರಿದಾಡುತಿತ್ತು....!
ಮತ್ತು ಕಿಟಿಕಿಯನ್ನು ತಗಿಯಲು ಪ್ರಯತ್ನ ಮಾಡುವಂತಿತ್ತು. ಆ ದೃಶ್ಯವನ್ನು ನೋಡಿ ಹೆದರಿಕೆ ಆಗಿ, ನನ್ನ ಹೃದಯ ಜೋರಾಗಿ ಬಡಿಯತೋಡಗಿತು.  ಓ ಮೈ ಗಾಡ್ ! ಎಂದು ಸಮಾದಾನ ಮಾಡಿ ಕೊಂಡು ದೇವರನ್ನು ನೆನೆಸಿ ಕೊಂಡೆ. ಆಮೇಲೆ ದೈರ್ಯದಿಂದ "ಯಾರು ? ಯಾರವರು? ಎಂದು ಕೂಗಿದೆ.
ನನ್ನ ಕೂಗನ್ನು ಕೆಳೆದ ಅವರು ಓಡಿ ಹೋದರು. ಆಮೇಲೆ ಪೋಲಿಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿದೆ. ಸ್ವಲ್ಪ ಸಮಯದ ನಂತರ ಪೋಲಿಸ್ ಬಂದು ಎಲ್ಲಾ ಕಡೆ ಪರಿಶೀಲನೆ ಮಾಡಿ, ಈಗ ಏನೂ ತೊಂದರೆ ಇಲ್ಲ ನೀವು ಆರಾಮಾಗಿ ಮಲಗ ಬಹುದು ಎಂದರು. ಆಗ ನನಗೆ ಸ್ವಲ್ಪ ದೈರ್ಯ ಬಂತು ಮತ್ತು ಪೋಲಿಸ್ ಅವರಿಗೆ ದನ್ಯವಾದ ಹೇಳಿದೆ.
ಆಮೇಲೆ ಎಲ್ಲಾ ಕಿಟಕಿಗಳನ್ನು ಮುಚ್ಚಿ, ನನ್ನ ಪಾಡಿಗೆ ನಾನು ಒಳಗೆ ಬಂದೆ. ಆಗ ಯಾರೋ ನನ್ನನ್ನು ಹಿಂಬಾಲಿಸುವಂತೆ ಬಾಸವಾಹಿತು, ತಿರುಗಿ ನೋಡಿದರೆ ಪೋಲಿಸ್ !!! 
Any problem sir ? ಎಂದು ಕೇಳಿದೆ.
ಆಗ  ಅವರು ಏನೋ ತೊಂದರೆ ಇಲ್ಲಾ, ನಾವು ಇಲ್ಲಿ ಬಂದು ಪರಿಶಿಲಿಶಿದಕ್ಕೆ ೫೦೦ ರುಪಾಯಿ ದುಡ್ಡು ಕೊಡಿ ಎಂದು ಕೇಳಿದರು. ಅದನ್ನು ಕೇಳಿದ ನನಗೆ ಆಶ್ಚರ್ಯವಾಯಿತು!!!
ಇನ್ನೇನು ಇಲ್ಲಿಗೆ ಕರೆದ ಕೂಡಲೇ ಬಂದಿದ್ದಾರೆ ಎಂದು ಯೋಚನೆ ಮಾಡದೇ ನಾನು ೫೦೦ ರೂಪಾಯಿ ಕೊಟ್ಟು, ಕದವನ್ನು ಹಾಕಿಕೊಂಡು ಮಲಗಿದೆ.
ಆಮೇಲೆ ಅದೇ ಯೋಚನೆಯಲ್ಲಿ ನನಗೆ ನಿದ್ದೇನೆ ಬರಲಿಲ್ಲ, ಒಂದು ಪ್ರಶ್ನೆ ಕಾಡುತ್ತಲೇ ಇತ್ತು. ಅದು "ನಿಜವಾದ ಕಳ್ಳರು ಯಾರು ಎಂದು?"

ಎಚ್ ಆರ್ ಕೆ

Comments

Submitted by makara Fri, 09/28/2012 - 18:58

ಮೊದಲು ಬ0ದವರಿಗೆ ಕಳ್ಳತನ‌ ಮಾಡಲು ಲೈಸನ್ಸ್ ಇರಲಿಲ್ಲ‌ ಎರಡನೇ ಬಾರಿಗೆ ಬ0ದವರಿಗೆ ಲೈಸೆನ್ಸ್ ಇದೆ. ಅದ್ದರಿ0ದ‌ ಇಲ್ಲಿ ನ್ಯಾಯದ‌ ಪ್ರಶ್ನೆ ಬರುವುದಿಲ್ಲ‌ ಏನಿದ್ದರೂ ಕಾನೂನಿನ‌ ಪ್ರಶ್ನೆಯಷ್ಟೇ ಮುಖ್ಯವಾಗುತ್ತದೆ. ಕಾನೂನಿ ರೀತ್ಯಾ ಮೊದಲು ಬ0ದವರೇ ಕಳ್ಳರು. :))