ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್
ಬರುವ ಭಾನುವಾರ " ಎಲ್ಲರಿಗಾಗಿ ವೇದ" ಸಾಪ್ತಾಹಿಕ ವೇದ ಪಾಠದ ಉದ್ಘಾಟನಾ ಸಮಾರಂಭ ನಿಶ್ಚಯವಾಯ್ತು. ನನ್ನ ಬಂಧು ಹೆಚ್.ಎಸ್. ರಮೇಶ್ ಹೇಳಿದರು" ನನ್ನ ಮಿತ್ರನ ಮಗಳು ಕು|| ಸ್ವಾತಿ ಭಾರದ್ವಾಜ್ ಭರತನಾಟ್ಯದಲ್ಲಿ ಗಿನ್ನೀಸ್ ದಾಖಲೆ ಮಾಡಿದ್ದಾಳೆ. ಅವಳಿಗೆ ಮೊನ್ನೆ ಸನ್ಮಾನ ನಡೆಯಿತು. ಸ್ಯಾಂಟ್ರೊ ಕಾರ್ ನ್ನು ಅವಳಿಗೆ ಬಹುಮಾನವಾಗಿ ಕೊಟ್ಟರು. ಈ ಕಾರ್ಯಕ್ರಮದಲ್ಲಿ ಸ್ವಾತಿಯ ಭರತನಾಟ್ಯ ಪ್ರದರ್ಶನ ಕೂಡ ಏರ್ಪಾಡು ಮಾಡೋಣ" ಕೂಡಲೇ ಸ್ವಾತಿಯ ತಂದೆ ಪ್ರಕಾಶ್ ರನ್ನು ಸಂಪರ್ಕಿಸಲಾಯ್ತು. ಅವರೂ ಒಪ್ಪಿದರು. ಭರತನಾಟ್ಯ ಕಾರ್ಯಕ್ರಮವೂ ನಿಶ್ಚಯವಾಗಿ ಆಮಂತ್ರಣ ಮುದ್ರಣವಾಯ್ತು. ಆಮಂತ್ರಣವನ್ನು ಹಿಡಿದು ಚೆನ್ನರಾಯ ಪಟ್ಟಣದತ್ತ ಕಾರ್ ತಿರುಗಿತು. ಅವರ ಮನೆಯೊಳಗೆ ಕಾಲಿಟ್ಟ ಕೂಡಲೇ ಕಂಡ ಪ್ರಶಸ್ತಿಗಳ ಸರಮಾಲೆಯನ್ನು ನನ್ನ ಕ್ಯಾಮರಾ ಕ್ಲಿಕ್ಕಿಸಲು ವಿಫಲವಾಯ್ತು. ಅದಕ್ಕಾಗಿಯೇ ಒಂದು ವೀಡಿಯೋ ತೆಗೆದೆ. ಸಾಮಾನ್ಯ ಕ್ಯಾಮರಾವಾದ್ದರಿಂದ ವೀಡಿಯೋ ಗುಣಮಟ್ಟ ಅಷ್ಟು ಚೆನ್ನಾಗಿಲ್ಲವಾದರೂ ಅದು ಹೇಳಬೇಕಾದ್ದನ್ನು ಹೇಳುತ್ತದೆಯಾದ್ದರಿಂದ ಆ ಕ್ಲಿಪ್ ಇಲ್ಲಿ ಅಳವಡಿಸಿರುವೆ .
http://youtu.be/kH5lWw4Og2k
ಜೊತೆಗೆ ಫೋಟೋಗಳನ್ನೂ ಪ್ರಕಟಿಸಿರುವೆ. ಕು|| ಸ್ವಾತಿ ಭಾರಧ್ವಾಜ್ ,ಇವರ ವೆಬ್ ಸೈಟ್ ಕೊಂಡಿ ಕೆಳಗಿದೆ. ಹೆಚ್ಚಿನ ವಿವರ ಅಲ್ಲಿ ಲಭ್ಯ.
http://www.indiandancinglegend.com/
http://youtu.be/kH5lWw4Og2k
Comments
ಉ: ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್
In reply to ಉ: ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್ by makara
ಉ: ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್
In reply to ಉ: ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್ by makara
ಉ: ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್
In reply to ಉ: ಅಸಾಧಾರಣ ಪ್ರತಿಭೆ ಕು|| ಸ್ವಾತೀ ಭಾರಧ್ವಾಜ್ by kavinagaraj
ನಿಜಕ್ಕೂ ಅಸಾಧಾರಣ ಪ್ರತಿಭೆಯೇ ಸರಿ !
ಈ ಮಗುವನ್ನೂ ಪರಿಚಯಿಸಿದ್ದಾಗಿ ಅನೇಕಾನೇಕ ಧನ್ಯವಾದಗಳು ! ಇನ್ನೂ ಉತ್ತಮ ವೇದಿಕೆಯಲ್ಲಿ ಅವಳನ್ನು ಪರಿಚಯಿಸುವ ಅಗತ್ಯವಿದೆ !
ಹರಿಹರಪುರ ಶ್ರೀಧರ್ ಅವರೆ,
ಹರಿಹರಪುರ ಶ್ರೀಧರ್ ಅವರೆ,
ಸ್ವಾತಿ ಭಾರದ್ವಾಜ್ ಚಿಕ್ಕ ಹುಡುಗಿ. ಅವಳು ಭರತನಾಟ್ಯವಿರಲಿ,ಕೂಚಿಪುಡಿಯಿರಲಿ, ಎಲ್ಲಾ ಪ್ರಕಾರದ ನಾಟ್ಯದಲ್ಲೂ ಅದ್ವಿತೀಯಳಾಗಲಿ. ಇದು ನನ್ನ ಹಾರೈಕೆ. "ಅಸಾಧಾರಣ"!, "ಭರತನಾಟ್ಯದಲ್ಲಿ ಗಿನ್ನೀಸ್ ದಾಖಲೆ ಮಾಡಿದ್ದಾಳೆ", "ಸ್ಯಾಂಟ್ರೋ ಕಾರ್!!", "ನೃತ್ಯಶಾಸ್ತ್ರದ ದಂತಕತೆ"(Indian dancing legend), "ನಾಟ್ಯ ಭೈರವಿ"...ಏನಿದೆಲ್ಲಾ? ಆಕೆ ಭರತನಾಟ್ಯದಲ್ಲಿ ಗಿನೆಸ್ ದಾಖಲೆ ಮಾಡಿದ್ದಲ್ಲ- ಕೂಚಿಪುಡಿಯಲ್ಲಿ ( http://en.wikipedia.org/wiki/Kuchipudi -ವರ್ಲ್ಡ್ ರೆಕಾರ್ಡ್ ಬಗ್ಗೆ ಅಲ್ಲೇ ವಿವರ ಇದೆ).
-ಗಣೇಶ.