ಮೂಢ ಉವಾಚ - 161

ಮೂಢ ಉವಾಚ - 161

ನಾನಾರು ಅವನಾರು ಜಗವೆಂದರೇನು

ಪ್ರಶ್ನತ್ರಯಗಳು ನರರ ಕಾಡದಿಹವೇನು |

ಹಿಂದಿದ್ದು ಈಗಿರುವ ಎಂದೆಂದು ಇಹವೀ

ಒಗಟಿಗುತ್ತರವ ತಿಳಿದಿಹೆಯ ಮೂಢ || ..321


ನಾನಾರು ಹೇಗಿರುವೆ ಬಿಡಿಸಿ ಹೇಳುವವರಾರು

ಜನನ ಮರಣಗಳ ಚಕ್ರ ತಿರುಗುವುದು ಏಕೆ |

ಹುಟ್ಟುವುದು ಏಕೆ ಸಾಯುವುದು ಮತ್ತೇಕೆ

ಅನಾದಿ ಪ್ರಶ್ನೆಗಳು ಅನಂತವೋ ಮೂಢ || ..322

******************

-ಕ.ವೆಂ.ನಾಗರಾಜ್.

Rating
No votes yet

Comments