'ಕೆನಡಾದ ಸ್ವಾಮಿನಾರಾಯಣ ಮಂದಿರದಲ್ಲಿ ಅರ್ಚನೆ ಮಾಡಿಸಿದ ಪುಣ್ಯ ನಮ್ಮದು' !
ಕೆಳಗೆ ಕೊಟ್ಟಿರುವ ಕೊಂಡಿಯನ್ನ್ನು ಜಗ್ಗಿದರೆ, ನಮ್ಮ ಪೂಜೆಯ ವಿಧಿವಿಧಾನಗಳನ್ನು ಕೇಳಬಹುದು : ನಾನು ನನ್ನ ಬಳಿಯಲ್ಲಿದ ಪುಟ್ಟ 'ವಾಯ್ಸ್ ರೆಕಾರ್ಡರ್,' ನಲ್ಲಿ ಆ ಧ್ವನಿಯನ್ನೂ ಸೆರೆಹಿಡಿದೆ : ಬಹಳ ದೊಡ್ದ ಫೈಲ್ ಆಗಿರುವುದರಿಂದ ಅಪ್ಲೋಡ್ ಆಗಲಿಲ್ಲ.
https://mail.google.com/mail/u/0/?hl=en&shva=1#sent/13a14c3f69c852c6
ನಮಗೆ ಕೆನಡಾದ 'ಟೊರಾಂಟೋನಗರ'ದಲ್ಲಿ ಅತ್ಯಂತ ಮುದಕೊಟ್ಟ ಸ್ಥಳವೆಂದರೆ, 'ಶ್ರೀ. ಸ್ವಾಮಿನಾರಾಯಣ ದೇವಸ್ಥಾನ'. ಪ್ರಕಾಶನಿಗೆ ಇಲ್ಲಿಗೆ ಬರಲು ಸಾಧ್ಯವಾಗದೆ ಹೋಯಿತು. ಆಫೀಸ್ ಕೆಲಸದವತಿಯಿಂದ. ನಾವೇ ಅವನು ತಿಳಿಸಿದ ಪ್ರಕಾರ, 'ಸ್ಟ್ರೀಟ್ ಕಾರ್', ಮತ್ತು ಬಸ್ಸಿನಲ್ಲಿ ಪ್ರಯಾಣಿಸಿ, 'ಸ್ವಾಮಿನಾರಾಯಣ ಮಂದಿರ'ವನ್ನು ತಲುಪಿದೆವು. ಅಲ್ಲಿ 'ಸ್ವಾಮಿನಾರಾಯಣ ದೈವ ಪರಂಪರೆಯಲ್ಲಿ, 'ನೀಲಕಂಠವರ್ಣಿ'ಯೆಂಬ ದೈವಸಂಭೂತನಿಗೆ ಅಭಿಷೇಕ ಮಾಡಿಸಿದೆವು. ಅಲ್ಲಿ ಮರಾಥಿ, ಹಿಂದಿ, ಗುಜರಾತಿ, ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅರ್ಚಕ, 'ಕಾಂತಿ ಭಾಯಿ'ಯವರು ಮಾಡಿಸುತ್ತಿದ್ದರು. ಅವರು 'ಇಂಗ್ಲೀಷ್' ನಲ್ಲಿ ಮಾಡಿಸಿದರೆ ಉತ್ತಮವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ನನಗೂ ಇಂಗ್ಲಿಷ್ ಭಾಷೆಯಲ್ಲಿ ಹೇಗೆ ಮಾಡಿಸುತ್ತಾರೆ ನೋಡೋಣ ಎನ್ನಿಸಿತು. ತಕ್ಷಣ ಅವರ ಅರ್ಚನಾ ಮಂತ್ರದ ಧ್ವನಿಯನ್ನು ನನ್ನ ಪುಟ್ಟ ರೆಕಾರ್ಡರ್ ನಲ್ಲಿ ಧ್ವನಿಮುದ್ರಿಸಿಕೊಂಡೆನು. ಅದೇನೋ ಈ ಸನ್ನಿವೇಶ ನನ್ನ ಜೀವನದಲ್ಲಿ ಒಂದು ಮರೆಯಲಾರದ ಕ್ಷಣಗಳಲ್ಲೊಂದು ಅನ್ನಿಸಿದೆ. ಈ ಅರ್ಚಕ, ಕೆನಡಾದಲ್ಲಿ ಹುಟ್ಟಿ ತನ್ನ ಜೀವನವನ್ನೆಲ್ಲ ಅಲ್ಲೇ ಕಳೆದನಂತೆ. ಆತನಿಗೆ ಭಾರತಕ್ಕೆ ಬರುವ ಆಶೆ. ಆದರೆ ಆ ಭಾಗ್ಯ ಇನ್ನೂ
ತನಗೆ ಸಾಧ್ಯವಾಗಿಲ್ಲ ಎನ್ನುವ ವಿಷಯ ಹೇಳುವಾಗ ಆತನ ಕಣ್ಣಂಚಿನಲ್ಲಿ ನೀರು ಬಂದಿತ್ತು. ಅದೊಂದು ಅತ್ಯಂತ ಸುಂದರ ಹಾಗು ಭಾವುಕ ಕ್ಷಣವಾಗಿತ್ತು !
ದೇವಸ್ಥಾನಗಳು ಎಲ್ಲೇ ಇರಲಿ, ಭಾರತೀಯರಾದ ನಾವು, ಅರ್ಚನೆ ಮಾಡಿಸಿಯೇ ತೀರುತ್ತೇವೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಮಾಡಿಸಿದ್ದು ಬಹುಶಃ ನಮಗೆ ಅರಿವಿಲ್ಲದಂತೆಯೇ ನಮ್ಮ ಮನಸ್ಸಿನಲ್ಲಿ ಮುದ್ರಿತವಾಗಿದೆ ! ಇದೂ ಒಂದು ಕಾರಣವಿರಬಹುದೇ !?
ನೀಲಕಂಠವರ್ಣಿ (ಸ್ವಾಮಿನಾರಾಯಣ್) ರವರ ಪುಥಳಿಗೆ ಅಭಿಷೇಕ ಸೇವೆ :
ಮತ್ತೊಂದು ವಿಷಯವೆಂದರೆ, 'ಟೊರಾಂಟೋನಗರ'ದ ಕೆಲವು ಜನ, ಮತ್ತು ಅಮೇರಿಕಾದಲ್ಲಿ ನಾವು ಹಿಂದೆ ಜನರನ್ನು ವಿಚಾರಿಸಿದಾಗ ಕಂಡುಬರುವ ವಿಷವೆಂದರೆ, ಹೆಚ್ಚಿನ ಜನ ಭಾರತಕ್ಕೆ ಭೆಟ್ಟಿ ನೀಡಿಲ್ಲ. ಅವರೆಲ್ಲ 'ಭಾರತದ ಬೇರು'ಗಳನ್ನು ಹೊಂದಿದ್ದಾರೆ. 'ಗಯಾನ', 'ವೆಸ್ಟ್ ಇಂಡಿಸ್', ಮೊದಲಾದ ಪ್ರದೇಶಗಳಿಂದ ಬಂದ ಜನ ಅದೆಷ್ಟೋ ವರ್ಷ ಭಾರತಕ್ಕೆ ಹೋಗೆಇಲ್ಲ. ಇನ್ನು ಕೆಲವರು ಭಾರತದ ಸೈನಿಕರು, ಇಂಗ್ಲೆಂಡ್ ಗೆ 'ವಿಕ್ಟೋರಿಯಾ ರಾಣಿಯ ಗೋಲ್ದನ್ ಜ್ಯುಬಿಲಿ ಸಮಾರಂಭ,' ಕ್ಕೆ ಹೋದವರು, ವಾಪಸ್ ಭಾರತಕ್ಕೆ ಬರದೆ ಕೆನಡಾದಲ್ಲಿ ನೆಲೆಸಿದ್ದಾರೆ. ಬ್ರಿಟಿಷ್ ಸರಕಾರ ಅವರಿಗೆ ಜಮೀನು, ಮತ್ತು ಮನೆಗಳನ್ನು ಅತಿ ಸೋವಿಯಾಗಿ ಕೊಟ್ಟು ಅವರನ್ನು ತಮ್ಮ ಕೈಲಿ ಇಟ್ಟುಕೊಂಡರು. ಈಗ ಅವರೆಲ್ಲ 'ಬಿಲಿಯನೇರ್' ಆಗಿ ಹಲವಾರು 'ಮಾಲ್ ಗಳ ಮಾಲೀಕ'ರಾಗಿದ್ದಾರೆ. ಅತಿ ಶ್ರೀಮಂತ ವರ್ಗದ ಜನರವರು !
Comments
ವೆ0ಕಟೇಶರೆ
ನನಗು ಅ0ಗ್ಲದಲ್ಲಿ ಪೂಜ ವಿದಿಗಳನ್ನು ಕೇಳುವ ಕುತೂಹಲದಿ0ದ
ನೀವು ಕೊಟ್ಟಿರುವ ಲಿ0ಕ್ ಗಳನ್ನು ಜಗ್ಗಿ ನೋಡಿದೆ ಎಷ್ಟೆ ಜಗ್ಗಿದರು ಊಹು !!!!! ದ್ವನಿ ಕೆಳಗಿಳಿಯುತ್ತಿಲ್ಲ
In reply to ವೆ0ಕಟೇಶರೆ by partha1059
ಕೆನಡದ ಪುಜಾರ್ರ ವಿಚಾರ
ಸಾರ್,
ನನ್ನ ಆಡಿಯೋ ಅಪ್ಲೋಡ್ ಆಗಲಿಲ್ಲ. ಅದು ದೊಡ್ಡ ಫೈಲ್ ಆದ್ದರಿಂದ. ತಮ್ಮ ಇ.ಮೇಲ್.ಐಡಿ ತಿಳಿಸಿದರೆ ಕಲಿಸುತ್ತೇನೆ. ಇ. ಮೇಲ್ ನಲ್ಲಿ ಸಾಧ್ಯವಿದೆ. ಧನ್ಯವಾದಗಳು.
In reply to ಕೆನಡದ ಪುಜಾರ್ರ ವಿಚಾರ by venkatesh
ನನ್ನ ಈ ಮೈಲ್
partha1059@gmail.com or partha1059@yahoo.com
In reply to ಕೆನಡದ ಪುಜಾರ್ರ ವಿಚಾರ by venkatesh
ಸರ್ , ನನಗೂ ಕಳಿಸಿ, ನನಗೂ ಬಲೇ
ಸರ್ , ನನಗೂ ಕಳಿಸಿ, ನನಗೂ ಬಲೇ ಕುತೂಹಲ , ನೀವು ಭಾರತಕ್ಕೆ ಮರಳಿದ್ದು ಸಂತೋಷವಾಯಿತು.
In reply to ಸರ್ , ನನಗೂ ಕಳಿಸಿ, ನನಗೂ ಬಲೇ by shreekant.mishrikoti
ನಮಸ್ಕಾರ, ಶ್ರೀಕಾಂತ ಮಿಶ್ರಿಕೋಟಿಯವರಿಗೆ,
ಖಂಡಿತ ಕಳಿಸಿದ್ದೇನೆ. ನೋಡಿ. ಸರ್
. ಮನೆಯಲ್ಲಿ ಎಲ್ಲಾ ಅರಾಮ ?
In reply to ವೆ0ಕಟೇಶರೆ by partha1059
ಆಂಗ್ಲ ಭಾಷೆಯಲ್ಲಿ ಪುಜಾವಿಧಿಗಳು ..
ಪಾರ್ಥರು ಏಕೆ ಸುಮ್ಮನಾದರು. ಹೆಚ್ಚು ಅಪೇಕ್ಷೆ ಇಟ್ಟುಕೊಂಡಿದ್ದರು ಅನ್ನಿಸುತ್ತದೆ. ಪರವಾಗಿಲ್ಲ. ಏನೋ ಒಂದು ಮಾತು ಹೇಳಬಹುದು. ಸಂಸ್ಕೃತ ಮಂತ್ರಗಳನ್ನು ಇಂಗ್ಲಿಷ್ನನಲ್ಲಿ ಹೇಳಲು ಸಾದ್ಯವೇ ?
In reply to ಆಂಗ್ಲ ಭಾಷೆಯಲ್ಲಿ ಪುಜಾವಿಧಿಗಳು .. by venkatesh
ಸಂಸ್ಕೃತ ಮಂತ್ರಗಳನ್ನು ಇಂಗ್ಲಿಷ್ನನಲ್ಲಿ ಹೇಳಲು ಸಾದ್ಯವೇ ?
ಅದನ್ನು ಹೇಗೆ ಇಂಗ್ಲೀಷಿನಲ್ಲಿ ಹೇಳಿದ್ದಾರೆ ಎಂಬ ಕುತೂಹಲ ಸಹಜ; ಇಷ್ಟಕ್ಕೂ 'ಶಬ್ದ ಮುಖ್ಯವಲ್ಲ; ಅರ್ಥ ಮುಖ್ಯ ' ಎಂದು ತಥಾಗತ( ಅಂದರೆ ಬುದ್ಧ) ನು ಹೇಳಿದ್ದಾನೆ!
In reply to ಆಂಗ್ಲ ಭಾಷೆಯಲ್ಲಿ ಪುಜಾವಿಧಿಗಳು .. by venkatesh
ಸರ್
ಸರ್
ನೀವು ಕಳಿಸಿದ ಮಂತ್ರದ ದ್ವನಿಸಂಗ್ರಹವನ್ನು ಎರಡು ಮೂರು ಬಾರಿ ಕೇಳಿದೆ. ಖುಷಿ ಎನಿಸಿತು. ಸಂಕಲ್ಪದಲ್ಲಿ ನಮ್ಮಗೆ ಭರತವರ್ಷೆ ಭರತ ಖಂಡೆ .... ಆ ರೀತಿಯೆ ಕೇಳಿ ಅಭ್ಯಾಸ ಹಾಗಾಗಿ ಅಲ್ಲಿನ ಸಂಕಲ್ಪ ಕೇಳುವಾಗ ಸ್ವಲ್ಪ ವಿಚಿತ್ರ ವೆನೆಸುತ್ತದೆ, ಹೌದು ಸಂಕಲ್ಪವೆಂದರೆ ನಾವು ಇರುವ ಸ್ಥಳದ ವಿಳಾಸ ವಲ್ಲವೆ :)))
ಸಂಸ್ಕ್ರುತ ಮಂತ್ರಗಳು ಮತ್ತು ಮಧ್ಯ ಅಂಗ್ಲದಲ್ಲಿ ವಿವರಣೆಗಳು ಕೇಳಲು ಸಹ ಕಿವಿಗೆ ಇಂಪಾಗಿಯೆ ಇದೆ, ಮಧ್ಯ ನಿಮ್ಮ ದ್ವನಿಯನ್ನು ಕೇಳುವ ಬಾಗ್ಯ ನಮ್ಮದು. ಸ್ವಾಮಿನಾರಾಯಣಸ್ವಾಮಿಯನ್ನು ಮೊಬೈಲ್ ನಲ್ಲಿ ಪೋಟೋ ಹಿಡಿಯುವ ಅವಕಾಶವಿರಲಿಲ್ಲ ಅನ್ನಿಸುತ್ತೆ. ಸ್ವಾಮಿನಾರಯಣ ಎಂದರೆ ವಿಷ್ಣುವಿನ ವಿಗ್ರಹವೆ ನನಗೆ ಸ್ವಷ್ಟವಾಗಲಿಲ್ಲ. ನಿಮ್ಮ ಮುದ್ರಿಕೆಯಲ್ಲಿ ದ್ವನಿ ಅತಿ ಸ್ವಷ್ಟವಾಗಿ ಮೂಡಿ ಬಂದಿದೆ.
ಬೆಳಗಿನಿಂದ ಮನೆಯಲ್ಲಿ ಅತಿಥಿಗಳ ಭರಾಟೆ ಹಾಗಾಗಿ ನಿಮಗೆ ಬೇಗ ಪ್ರತಿಕ್ರಿಯೆ ನೀಡಲು ಸಾದ್ಯವಾಗಲಿಲ್ಲ ಕ್ಷಮಿಸಿ.
In reply to ಸರ್ by partha1059
ಸ್ವಾಮಿನಾರಾಯಣ ಅಂದರೆ ವಿಷ್ಣು ಅಲ್ಲ
ಪಾರ್ಥರೆ
ಸ್ವಾಮಿನಾರಾಯಣ ಅಂದರೆ ವಿಷ್ಣು ಅಲ್ಲ ; ಇನ್ನೊಮ್ಮೆ ಇದೇ ಬರಹವನ್ನು ಓದಿ. ಹೆಚ್ಚಿನ ವಿವರಕ್ಕೆ http://en.wikipedia.org/wiki/Swaminarayan ನೋಡಿ. ಕನ್ನಡ ವಿಕಿಪೀಡಿಯಾದಲ್ಲಿ ಈ ಬರಹವನ್ನು ಅನುವಾದಿಸಿ ಹಾಕಬೇಕೆಂದಿರುವೆ.
In reply to ಸ್ವಾಮಿನಾರಾಯಣ ಅಂದರೆ ವಿಷ್ಣು ಅಲ್ಲ by shreekant.mishrikoti
ಶ್ರೀಕಂಠರೆ
ನಿಜ ನೀವು ಕೊಟ್ಟ ಲಿಂಕ್ ನೋಡಿದೆ. ನಿಜ ಸ್ವಾಮಿನಾರಯಣರೆಂದರೆ ವಿಷ್ಣುವಲ್ಲ.
ತಮ್ಮ ಸಹಾಯಕ್ಕಾಗಿ ವಂದನೆಗಳು
ಪಾರ್ಥಸಾರಥಿ
In reply to ಶ್ರೀಕಂಠರೆ by partha1059
ಇದರ ಬಗ್ಗೆ ಸಾಕಷ್ಟು ಆರೋಗ್ಯಕರ ಚರ್ಚೆ ಅತ್ಯವಶ್ಯಕ
Doctrinally, Swaminarayan was close to eleventh century philosopher Ramanuja and was critical of Shankaracharya's concept of advaita, or monistic non-dualism. Swaminarayan's ontology maintained that the supreme being is not formless and that God always has a divine form.[31]
ಶ್ರೀ. ನೀಲಕಂಠವರ್ಣಿಯವರು, (ಸ್ವಾಮಿನಾರಾಯಣರು), ವಿಶಿಷ್ಥಾದ್ವೈತ ಭಕ್ತಿ ಪರಂಪರೆಯ ಪ್ರತಿಪಾದಕರು.
ಇಂಗ್ಲಿಷ್ ವಿಕಿಪಿಡಿಯಾದ ಲೇಖನದಲ್ಲಿನ ಸಾಲುಗಳನ್ನು ಉದ್ಧರಿಸಿ ಕೊಟ್ಟಿದ್ದೇನೆ :
While no detailed statistical information is available, most of the followers of Swaminarayan share a belief that Swaminarayan is the complete manifestation of 'Narayana' or 'Purushottam Narayana' - the Supreme Being and superior to other avatars.[14] A Swaminarayan sectarian legend tells how Narayana from the Nara Narayana pair, was cursed by sage Durvasa to incarnate on the Earth as Swaminarayan.[82]
In reply to ಸರ್ by partha1059
ದೆಹಲಿಯ ಅಕ್ಷರಧಾಮದ ಒಳಗೆ ಹೋಗುತ್ತಿದ್ದಂತೆಯೇ ನಮ್ಮ ಎಲ್ಲಾ ಕ್ಯಾಮೆರ,
ಮತ್ತೊಂದು ವಿಚಾರ. ಈ ಸ್ವಾಮಿನಾರಾಯಣ ಮಂದಿರದ ಹೊರಗೆ ಎಷ್ಟು ಫೋಟೋ ಬೇಕಾದರೂ ತೆಗೆಯಲು ಅಡ್ಡಿಯಿರಲಿಲ್ಲ. ಒಳಗೆ ಅಪ್ಪಣೆ ಇರಲಿಲ್ಲ. ಮೊಬೈಲ್ ಹೊರಗೆ ಒಂದು ಜಾಗದಲ್ಲಿ ಇಟ್ಟು ಒಳಗೆ ಹೋಗಲು ಬಿಡುತ್ತಾರೆ. ಆದ್ದರಿಂದ ಚಿತ್ರ ತೆಗೆಯಲು ಆಗಲಿಲ್ಲ ....