ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ
ಬೆಂಗಳೂರಿನಲ್ಲಿ ಕಸದ ಸಮಸ್ಯೆ ವಿಪರೀತ. ಹೀಗೇ ಕಸದ ವಿಲೇವಾರಿಯನ್ನು ಸರಿಯಾಗಿ ಮಾಡದೇ ಹೋದರೆ ಬೆಂಗಳೂರು ಸಹ ಚೆನ್ನೈ, ಮುಂಬೈ ರೀತಿ ಗಬ್ಬು ನಾರಲು ಶುರುವಾಗುತ್ತದೆ. ಕಸದಿಂದ ರಸ ಮಾಡಲು ಮಹಾನಗರ ಪಾಲಿಕೆಯವರಿಗೆ ಸಾಧ್ಯವಿಲ್ಲವಾದರೂ ಕಸದಿಂದ ವಿದ್ಯುತ್ ಆದರು ಮಾಡಬಹುದಿತ್ತು. ಅದಕ್ಕೆಲ್ಲಾ ಇಚ್ಚಾಶಕ್ತಿ ಬೇಕು. ಅದನ್ನು ನಮ್ಮ ಅಧಿಕಾರಿಗಳಿಂದ, ಕಾರ್ಪೋರೇಟರುಗಳಿಂದ ಅಪೇಕ್ಷಿಸಿದರೆ ತಪ್ಪಾಗುವುದೇನೋ. ಅಥವಾ ಅದಕ್ಕೂ ಕಸದ ಮಾಫಿಯಾ ಅಡ್ಡಗಾಲು ಹಾಕಿದೆಯೋ ಎಂಬ ಅನುಮಾನ ಬೇರೆ!
ಮಹಾನಗರ ಪಾಲಿಕೆಯ ಮಂಗಾಟ ಅತ್ಲಾಗಿರಲಿ, ಸಾರ್ವಜನಿಕರಾದ ನಾವು ಕಸದ ಸಮಸ್ಯೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇವೆ ಎಂಬುದೆ ಈಗಿನ ಪ್ರಶ್ನೆ. ನವ್ಯಾರೂ ಕಸದ ಬಗ್ಗೆ ಗಮನ ಹರಿಸಿಯೇ ಇಲ್ಲ. ಹಾಗೇನಾದರೂ ನಮ್ಮ ಗಮನ ಕಸದ ಬಗ್ಗೆ ಇದ್ದರೆ, ಪಾಲಿಕೆಯ ಕಸದ ವಾಹನ ಎಷ್ಟೊತ್ತಿಗೆ ಬರುತ್ತೆ.. ಎನ್ನುವುದರ ಬಗ್ಗೆ ಮಾತ್ರ. ಕಸದ ವಾಹನ ಬಂದು ಅದನ್ನು ಸಾಗ ಹಾಕಿದರೆ ಮುಗಿಯಿತು. ನಂತರ ನಮಗೇನೂ ಚಿಂತೆ ಇಲ್ಲ. ಆ ಕಸವನ್ನು ಎಲ್ಲಿ ತೆಗೆದುಕೊಂಡು ಹೋಗಿ ಹಾಕುತ್ತಾರೆ ಎಂಬುದರ ಅರಿವೂ ನಮಗಿಲ್ಲ. ಕಸದ ನಿಯಂತ್ರಣದ ಮಾತು ದೂರವೇ ಉಳಿಯಿತು.
ನಾನು ಚೆನ್ನೈಯನ್ನು ಚೆನ್ನಾಗಿ ನೋಡಿದ್ದೇನೆ. ಅಲ್ಲಿಗೆ ಹೋಲಿಸಿದರೆ ಕಸ ವಿಲೇವಾರಿಯಲ್ಲಿ ಬೆಂಗಳೂರು ಪಾಲಿಕೆ ಹತ್ತು ಪಟ್ಟು ಮೇಲು. ಆದರೂ ನಮ್ಮಲ್ಲಿ ಅನೇಕ ಮನೆಯವರು ಆಗಾಗ ಕಸವನ್ನು ಒಂದು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಕಟ್ಟಿ ಯಾರೂ ನೋಡದಿರುವಾಗ ರಸ್ತೆ ಬದಿ ಎಸೆಯುವುದನ್ನು ಕಾಣಬಹುದು. ಎಲ್ಲಾದರೂ ಒಂದು ಖಾಲಿ ನಿವೇಶನವಿದ್ದರಂತೂ ಮುಗಿದೇ ಹೋಯ್ತು, ಅದು ಖಾಲಿ ಇರುವುದೇ ಕಸ ತುಂಬಲಿಕ್ಕೆ ಎಂಬ ಮನೋಭಾವ ನಮ್ಮದು.
ಕಸದಲ್ಲೂ ಹಸಿ ( ಸುಲಭವಾಗಿ ಮಣ್ಣಿನಲ್ಲಿ ಕರಗುವ ) ಕಸಕ್ಕಿಂತ ಓಣ ಕಸ (ಪ್ಲಾಸ್ಟಿಕ್) ತುಂಬಾ ಅಪಾಯಕಾರಿ. ನಾವುಗಳು ಅದನ್ನೂ ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಸರಿಯಾಗಿ ಉಪಯೋಗಿಸಲೂ ನಮಗೆ ತಿಳಿದಿಲ್ಲ. ಪ್ಲಾಸ್ಟಿಕ್ ಕೈಚೀಲಗಳನ್ನು ಮತ್ತೆ ಮತ್ತೆ ಉಪಯೋಗಿಸಿ ಹಣ ಉಳಿಸುವುದರೊಂದಿಗೆ ಪರಿಸರ ಮಲಿನ್ಯ ಮತ್ತು ಅದರ ತಯಾರಿಕೆಯನ್ನೂ ಕಡಿಮೆ ಮಾಡಬಹುದು. ನಾನು ಮೊದಲಿನಿಂದಲೂ ಇದನ್ನು ಮಾಡುತ್ತಾ ಬಂದಿದ್ದೇನೆ. ಸಾಮಾನುಗಳನ್ನು ತಂದಾಗ ಬರುವ ಪ್ಲಾಸ್ಟಿಕ್ ಕೈಚೀಲಗಳನ್ನು ಕಸದ ಜೊತೆ ಎಸೆಯದೇ ಚೆನ್ನಾಗಿ ಮಡಿಚಿ ಇಡುತ್ತೇನೆ. ಬಹಳಷ್ಟು ಸೇರಿದ ನಂತರ ಮೊದಲು ಯಾವುದಾದರೂ ಅಂಗಡಿಗೆ ಕೊಟ್ಟು ಬಿಡುತ್ತಿದ್ದೆ. ಆದರೆ ಈಗ ಹಾಗಲ್ಲ.
ನನ್ನ ಒಬ್ಬ ಮಿತ್ರನದು ದಿನಸಿ ಅಂಗಡಿ ಇದೆ. ಅವನ ಅಂಗಡಿ ದೂರ ಇರುವುದರಿಮದ ಅವನ ಅಂಗಡಿಯಿಂದ ನಾನು ಏನು ತರುವುದಿಲ್ಲವಾದರೂ ಆವನು ಆಗಾಗ ನನಗೆ ಪಾರ್ಟಿ ಕೊಡುತ್ತಿರುತ್ತಾನೆ. ಯಾವಾಗಲೂ ಅವನೇ ಬಿಲ್ ಕೊಡುತ್ತಿದ್ದ. ನಾನು ಕೊಡಲು ಹೋದರೂ ಬೇಡ ಅನ್ನುತ್ತಿದ್ದ. "ಆರ್ಥಿಕವಾಗಿ ನನು ಚೆನ್ನಾಗಿದ್ದೇನೆ, ಮುಂದೆ ಯಾವಾಗಲಾದರೂ ನಷ್ಟ ಆಗಿದ್ದರೆ ನೀನು ಪಾರ್ಟಿ ಕೊಡುವಂತೆ" ಎಂದು ಹೆಳಿ ನನ್ನ ಬಾಯಿ ಮುಚ್ಚಿಸುತ್ತಿದ್ದ. ಇದಕ್ಕೆ ಪರಿಹಾರವಾಗಿ ನನಗೆ ತೋಚಿದ್ದು ಪ್ಲಾಸ್ಟಿಕ್ ಕೊಟ್ಟೆಗಳು. ನಾವು ಯಾವಾಗಲೋ ಒಮ್ಮೆ ಪಾಟಿ ಮಾಡುವ ಹೊತ್ತಿಗೆ ನನ್ನ ಮನೆಯಲ್ಲಿ ಕೆಜಿಗಟ್ಟಲೇ ಪ್ಲಾಸ್ಟಿಕ್ ಕೊಟ್ಟೆಗಳ ಸಂಗ್ರಹ ಆಗಿರುತ್ತದೆ. ಅದನ್ನು ಅವನಿಗೆ ಕೊಡುತ್ತೇನೆ. ಪ್ಲಾಸ್ಟಿಕ್ ಮರು ಬಳಕೆ ಮಾಡಿದಂತೆಯೂ ಆಯ್ತು, ಪಾರ್ಟಿ ಕೊಟ್ಟವನ ಋಣ ತೀರಿಸಿದಂತೆಯೂ ಆಯ್ತು. ಹೀಗಿದೆ ನನ್ನ ಪರಿಸರ ಕಾಳಜಿ.
Comments
ಉ: ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ
In reply to ಉ: ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ by venkatb83
ಉ: ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ
In reply to ಉ: ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ by pisumathu
ಲೇಖನ ಚೆನ್ನಾಗಿದೆ
ನನ್ನ ಸ್ನೇಹಿತನೊಬ್ಬ ನಿಮ್ಮ
@ಜೀ
In reply to @ಜೀ by venkatb83
ಈಗ ಕಸಕ್ಕೂ ತುಂಬಾ ಬೆಲೆ ಬರ್ತಾ