ಸವಿರುಚಿ- ಎಣ್ಣೆ ಬದನೆ ಕಾಯಿ .. ಹೂರಣ ಬೇರೆಯೇ ಇದೆ...!!

ಸವಿರುಚಿ- ಎಣ್ಣೆ ಬದನೆ ಕಾಯಿ .. ಹೂರಣ ಬೇರೆಯೇ ಇದೆ...!!

ಚಿತ್ರ

 

 
 
 
ಸಮಯ  ಮದ್ಯಾಹ್ನ  ೧೨ 
 
ಅದು ಸವಿ ರುಚಿ  -ಅಡುಗೆ  ಕಾರ್ಯಕ್ರಮದ ಸಮಯ- ಹಾಗೆ ಅವತ್ತೊಂದಿನ  ಹೀಗಾಯ್ತು...
 
 
ಓವರ್ ಟು  ಸವಿ ರುಚಿ -
 
ಆತ್ಮೀಯ ವೀಕ್ಚಕರೆ  ನಮಸ್ಕಾರ -ನಮಸ್ಕಾರ-ನಮಸ್ಕಾರ-
(ನೋಡುತ್ತಿದ್ದ  ವೀಕ್ಚಕಿ ಒಬ್ರಿಗೆ  ರೇಗಿ ಹೋಗಿ  ಸಾಕ್ ಮಾಡಮ್ಮಿ  ನಿನ್ ಆ  ದರಿದ್ರ ನಮಸ್ಕಾರ .ಮೊದ್ಲು ವಿಷಯಕ್  ಬಾ...!!)
 
ನಾ ನಿಮ್ ಗೆಳತಿ  .......... ಈಗ ನಮ್ಮೊಡನೆ  ತಮ್ ಸವಿ ರುಚಿ  ತೋರ್ಸೋಕೆ  ಇದಾರೆ   ಶ್ರೀ ಮತಿ  ........ ಅವರು ... 
ಅವ್ರಿಗೆ ನಮ್ ಸವಿ ರುಚಿ ಕಾರ್ಯಕ್ರಮಕ್ಕೆ  ಸ್ವಾಗತ.
 
ಕ್ಯಾಮೆರ  ತಮ್ಮ  ಕಡೆ ತಿರುಗುತ್ತಿದ್ದಂತೆ ಅದರ ಬೆಳಕಿಗೆ  ಶ್ರೀ ಮತಿ ...... ಅವರು ದಿಗಿಲಿನಿಂದ  ಸರ್ರನೆ  ತಮ್ ರೇಷ್ಮೆ  ಸೀರೇನ  ಸರಿ ಮಾಡಿಕೊಂಡು  ಕತ್ತಿನಲ್ಲಿನ  ೩  ಎಳೆ  ಸರ (!!) ಸೊಂಟದಲ್ಲಿನ ಡಾಬು (ಹೀಗೂ ಉಂಟೆ/!!) ಕೈನಲ್ಲಿನ  ಸ್ವರ್ಣ ಬಳೆಗಳು  ವಾಚು ಉಂಗುರ  ಎಲ್ಲವೂ ಕ್ಯಾಮೆರಾಗೆ ಸರಿ ಕಾಣುವಂತೆ  ನಿಂತರು....
ಮುಖದಲ್ಲಿ ಅತೀವ ಸಂತಸದ ಭಾವ.
ಒಂಥರಾ ಎಮ್ಮೆ!! ... 
 
ನಿರೂಪಕಿ- 
ವೀಕ್ಚಕರೆ  ಈಗ ಸಣ್ಣದೊಂದು ಬ್ರೇಕ್- ನೀವೆಲ್ಲಿಗೂ ಹೋಗ್ಬೇಡಿ -ನಾವ್ ಕೆಲವೇ ಕ್ಷಣಗಳಲಿ  ವಾಪಾಸ್ ಬರುವೆವು...
ಜಾಹಿರಾತು-೧
೪೪ ...:(((
 
ಅದನ್ನು ಹುರುಪಿಂದಲೇ ನೋಡ  ಕುಳಿತ ಕೆಲವು ಜನ ವೀಕ್ಚಕರು  ಆಗಲೇ ಸವಿ ನಿದ್ದೆಗೆ  ಜಾರಿದ್ದರು...!!
 
ಇದು  ಹೊಳಗಡೆ  ಸ್ಟುಡಿಯೋದಲ್ಲಿನ  ಕಥೆ- ಹೊರಗಿನ ಕಥೆ ಏನು???
 
ಈ ಸವಿ ರುಚಿ ಕಾರ್ಯಕ್ರಮಕ್ಕೆ  ತಾ  ಹೋಗಲೇ ಬೇಕು, ನೀವೂ ಬನ್ನಿ ನನ್ನನು  ಅಲ್ಲಿ ಡ್ರಾಪ್ ಮಾಡಿ ನನಗಾಗಿ  ಕಾಯ್ರಿ ಅಂತ ಹೇಳಿ ತಮ್ಮ  ಪತಿ ದೇವರನ್ನು  ಕರೆದುಕೊಂಡು ಬಂದಿದ್ದರಲ್ಲ ಶ್ರೀಮತಿ.... ಅವರು...   
ಅವರ ಪತಿ  ಬೆಳಗ್ಗೆಯಿಂದ  ಎಸ್ಟೇ ಬೇಡಿಕೊಂಡರೂ  ತಿಂಡಿ ಮಾಡದೆ  ಮೇಕಪ್ ಮಾಡುತ್ತಾ  ಕುಳಿತಿದ್ದು  ಒತ್ತಾಯಿಸಿ  ಸ್ಟುಡಿಯೋ ಗೆ  ಕರೆ ತಂದಿದ್ದಳು.ಹೊಟ್ಟೆ ಚುರುಗುಡುತ್ತಿತ್ತಲ್ಲ ಅದ್ಕೆ ಅವರು ಅಲ್ಲೇ ಹತ್ತಿರದಲ್ಲಿ  ಕಾಣಿಸಿದ ಬೋರ್ಡ್ ನೋಡಿದರು -  ಹೋಟೆಲ್  ನಳ ಪಾಕ .. 
ಟೀ ವಿ ಲಿ ಅ ನಮ್ ದಮಯಂತಿ ಮಾಡುವ ಪಾಕ ತಿನ್ನುವ ಅಧ್ರುಸ್ಟ  ಈಗಿಲ್ಲ  ಆದ್ರೆ ಈ ಹೋಟೆಲಿನ ನಳರ  ಪಾಕ ಸವಿಯುವ.....!!
ಅತ್ತ ನಡೆದರು
ಒಂದು  ದಕ್ಷಿಣ ಶೈಲಿ  ಊಟಕ್ಕೆ ಆರ್ಡರ್ ಮಾಡಿ ತಿಂದು ಹಾಗೆ ಸ್ವಲ್ಪ ದೂರ ಅಡ್ಡಾಡಿ   ವಾಪಾಸ್ಸು ಬಂದು  ತಮ್ಮ ಎ ಸಿ  ಕಾರಲ್ಲಿ  ಸೀಟು ನೇರ ಮಾಡಿ ಮಲಗಿದರು...
 
ಈಗ  ಸ್ಟುಡಿಯೋದಲ್ಲಿ  
 
ನಮಸ್ಕಾರ ವೀಕ್ಚಕರೆ  ನಮ್ಮ    ಸವಿ ರುಚಿ ಕಾರ್ಯಕ್ರಮಕ್ಕೆ  ಮರಳಿ  ಸ್ವಾಗತ  
 ಈಗ ನಾವು  ನಿಮಗಾಗಿ (ನಮಗಾಗಿ!!)  ಎಣ್ಣೆ ಬದನೆ ಕಾಯಿ ಮಾಡುವ  ವಿಧಾನವನ್ನು (ನಿಧಾನವಾಗಿ)   ಹೇಳಿಕೊಡುವೆವು ..!!
ಮೊದಲಿಗೆ  ಇದಕ್ಕೆ ಬೇಕಾಗುವ ಸಾಮಗ್ರಿಗಳನು  ಆಯ್ದುಕೊಳ್ಳುವ
ಅಗತ್ಯಕ್ಕೆ ತಕ್ಕಸ್ಟು  ಅಂದಾಜಿನಂತೆ  ಗಾತ್ರದಲ್ಲಿ  ಮಾಮೂಲಾಗಿರುವ  ಬದನೆ ತೆಗೆದುಕೊಳ್ಳಿ.. 
 
ಈಗ ನಾವು  ೬ ಮಾತ್ರ ತೆಗೆದುಕೊಂಡಿರುವೆವು..
ಇದಕ್ಕೆ ಸೇರಿಸಬೇಕಾದ  ಮಿಶ್ರಣವನ್ನು  ನಾವ್ ನಿನ್ನೆಯೇ ರೆಡಿ ಮಾಡಿದ್ದೆವು.ಆದ್ರೆ  ಚಿಂತಿಸಬೇಡಿ  ಈಗ  ಅದನು ಹೇಳುವೆವು..
ಖಾರ,  ಉಪ್ಪು  ,ಕೊಬ್ಬರಿ ಚೂರುಗಳು(ನಿಮಗೆ ಬೇಕಿದ್ದರೆ  ಹಾಕಿ !!)  ಸೇರಿಸಿ ರುಬ್ಬಿದ ಮಿಶ್ರಣವನ್ನು ರೆಡಿ ಮಾಡಿಕೊಳ್ಳಿ.
ಈಗ  ಬದನೆಕಾಯಿಯನ್ನು  ಕೈನಲ್ಲಿ ಹೀಗೆ (ಹ್ಯಾಗೇ ಅನ್ಬೇಡಿ) ಲಂಬವಾಗಿ ಹಿಡಿದು  ಚಾಕುವಿನಿಂದ  ೪ ಭಾಗವಾಗಿ ಸೀಳಿ ....
ವೀಕ್ಷಕರೆ  ಈಗ ಒಂದು ವಿರಾಮ  ನಾವ್ ಮತ್ತೆ ಶೀಘ್ರದಲ್ಲಿಯೇ  ಮರಳುವೆವು , ನೀವ್ ಅಲ್ಲಿಯವೆರೆಗೆ  ಮೋರ್ ಗೋ 
 ಬಿಗ್ ಬಜಾರ್ ಗೋ
 ರಿಲಯನ್ಸ್  ಫ್ರೆಶ್ ಗೋ ಹೋಗಿ ಬದನೇಕಾಯಿ  ತನ್ನಿ, ಹಾಗೆಯೇ  ಅದ್ಕೆ ಬೇಕಾಗುವ ಮಿಶ್ರಣ  ರೆಡಿ ಮಾಡಿಕೊಳ್ಳಿ...!!
 
 
ಒಂದು ಘಂಟೆ ಅವಧಿಯ  ಕಾರ್ಯಕ್ರಮದಲ್ಲಿ  ಬರೀ ಜಾಹೀರಾತಲ್ಲೇ ಹೊಟ್ಟೆ ತುಂಬಿಸುತ್ತಾ    ಇರವ ಈ ಟೀ ವಿ  ಯವರನ್ನ  ನಂಬಿಕೊಂಡರೆ ನಾವ್ ಇವತ್ತು ಅಡುಗೆ ಮಾಡಿದ  ಹಾಗೆಯೇ ..!!
ಲೇ  ... ಇವಳೇ  ಹೊಟ್ಟೆ ಚುರುಗುಡುತ್ತಿದೆ  ಏನಾರ ಮಾಡಿದಿಯೇನೆ? ಮನೆಯೊಂದರಲಿ ಅಜ್ಜಿಯ ಪ್ರಶ್ನೆ,
ಸೊಸೆ-ಮೊಮ್ಮಗಳು- ಇರಿ  ಅಜ್ಜಿ  ಈಗಲೇ ಹೋಗಿ  ಬದನೆ ತರುವೆ ,ತಂದು ಎಣ್ಣೆ  ಬದನೇಕಾಯಿ ಚಪಾತಿ ಮಾಡುವೆ.. 
ತಿನ್ನೋಣವಂತೆ.. ಸರಿಯ???
ಅದೇನ್  ಹಾಳು ಮೂಳು  ಟೀ ವಿ  ನೋಡ್  ಅಡುಗೆ ಮಾಡ್ತಿರೋ?  
ಅಡುಗೆನೂ ಅವರನ್ನ ನೋಡ್ ಕಲಿಬೇಕ??? 
ನಮ್ ಕಾಲದಲ್ಲಿ  ಎಲ್ಲಾನು ನಾವೇ ಕಲಿತಿದ್ವಿ...!!
ಹಾಗೆ ಹೇಳುತಲೇ  ಆ ಟೀ ವಿ ಕಡೆ  ನೋಡುತ್ತಾ  ಕುಳಿತರು ಅಜ್ಜಿ..!!
ವೀಕ್ಷಕರೆ  ಮರಳಿ  ನಮ್ಮ ಸವಿ ರುಚಿ ಕಾರ್ಯಕ್ರಮಕ್ಕೆ ಸ್ವಾಗತ ...
ಈಗ ನೀವೆಲ್ಲ  ಬದನೆ ತಂದು  ಮಿಶ್ರಣ ರೆಡಿ ಮಾಡಿ  ನಮಗಾಗಿ  ಕಾದಿರುವಿರಿ ಅಂತ ಗೊತ್ತು...
ಇನ್ಯಾಕೆ ತಡ  ಮತ್ತೆ??
 
ಈಗ  ಒಂದು   ಚಿಕ್ಕ ಕಡಾಯಿ ತೆಗೆದುಕೊಳ್ಳಿ  ಅದರಲಿ  ನಿಮಗಿಷ್ಟವಾದ  ಎಣ್ಣೆಯನ್ನು    ಬದನೆ ಮುಳುಗುವಸ್ಟು  ಹಾಕಿ... 
ಎಣ್ಣೆ ಅದರ ಪಾಡಿಗೆ ಅದು  ಕಾಯುವುದು  ಈಗ ನೀವು  ಆ  ಕತ್ತರಿಸಿದ  ಬದನೆಯೊಳಗೆ  ಆ ಖಾರ  ಉಪ್ಪು   ಮಸಾಲೆ  ಮಿಶ್ರಣ  ಹಾಕಿ ರೆಡಿಯಾಗಿ..
ಚಟ್ ಪಟ್ ಚಟ್ ಪಟ್ --- 
ಅದೇನು ಶಬ್ದ??/  
ಎಣ್ಣೆ ಕಾದಿದೆ....!
ಹಾ ಕೂಲ್ ಕೂಲ್ ....
ಬದನೆಯನ್ನು ಶತ್ರುವನ್ನು  ಎತ್ತಿ ಕುಕ್ಕಿ ನೆಲಕ್ಕೆ ಎಸೆದಂತೆ  ಎಣ್ಣೆಯೊಳಗೆ   ಬದನೆ ಹಾಕದಿರಿ .. 
ಆಮೇಲೆ ಎಣ್ಣೆ ಸಿಡಿದು....... ಬೇಕಾ?????
 
ಸವಿ ರುಚಿ ಕಾರ್ಯಕ್ರಮದ  ನಿರೂಪಕಿ  ಮತ್ತು ಅಡುಗೆ  ಮಾಡಿ ಆರಿಸಲು ಬಂದಿದ್ದ  ಶ್ರೀ ಮತಿ...... ಅವರು  ಕ್ಯಾಮೆರಾದತ್ತ  ಮುಖ ಮಾಡಿ  ಮಾತಾಡುತ್ತ  ಬಿಜಿ ಆಗಿರಲು...
ಅಲ್ಲಿ  ಆ ಅಡುಗೆ ಟೇಬಲ್ ಮೂಲೆಯೊಂದರಿಂದ  ೨-೩  ಜಿರಳೆಗಳು  ತೆವಳುತ್ತ ಬಂದು (ಮಸಾಲೆ ವಾಸನೆಗೆ ಇರ್ಬೇಕು..!!)  ಅಡುಗೆಗೆ ರೆಡಿ ಮಾಡಿದ್ದ   ಮಿಶ್ರಣದಲ್ಲಿ   ಕ್ಷಣ ಮಾತ್ರದಲ್ಲಿ ಬಿದ್ದದ್ದು  ಒದ್ದಾಡಿದ್ದು ಕೊನೆಗೆ  ಶಿವನ ಪಾದ ಸೇರಿದ್ದು ಆಯ್ತು...:(
ಸವಿ ರುಚಿ ಕಾರ್ಯಕ್ರಮ ನೋಡುತ್ತಿದ್ದ  ಲಕ್ಚಾಂತರ  ಜನರಿಗೆ ಕಾಣಿಸದ ಈ  'ಅಮೋಘ ' ದೃಶ್ಯವನ್ನು     ಆ ಅಜ್ಜಿ (ಕಣ್ಣು ದೃಷ್ಟಿ ಚೆನ್ನಾಗೆ ಇತ್ತು) ನೋಡಿ  - 
ಅಯ್ಯೋ ಅಯ್ಯೋ  ಮುಂಡೆತಾವ್  ಜಿರಳೆ ಬಿದ್ದುದು  ನೋಡದೆ ಅಡುಗೆ ಮಾಡ್ತಾವಲ್ಲ- ತಿಂತವಲ್ಲ, ಇವ್ರು ಮಾಡಿದ್ದನ್ನು  ನೋಡುತ್ತಾ ಹಾಗಯೇ  ಮಾಡುವ ಜನರಿದ್ದರೂ  ಇರಬಹದು, ಅವರೂ ಹೀಗೆಯೇ  ಜಿರಳೆ ಬೀಳಿಸಿ  ಸವಿ ರುಚಿ ಮಾಡಿದರೆ.....!!
ಅಯ್ಯೋ ದೇವ್ರೇ. ಈ  ಟೀ ವಿ ನೋರು  ಜಾಹೀರಾತಲ್ಲಿ ಯಾವ್ಯಾವ್ದೋ ಸೊಳ್ಳೆ ನೊಣ ಜಿರಳೆ  ಕೊಲ್ಲೋ  ಉತ್ಪನ್ನದ ಬಗ್ಗೆ   ಘಂಟೆಗಟ್ಲೆ  ತೋರ್ಸ್ತಾರೆ -
ತಮ್ದೇ ಅಡುಗೆ ಮನೆ ಕ್ಲೀನ್  ಇಟ್ಕೊಳೋಕ್  ಏನು ರೋಗ...!
. ಛೀ  ಥೂ  ....
ಅಲ್ದೇ  ಇದು ನೇರ ಪ್ರಸಾರ ಕಾರ್ಯಕ್ರಮವಾದುದರಿಂದ  ಪ್ರಿ ವ್ಯೂ  -ಎಡಿಟಿಂಗ್  ಸಾಧ್ಯವೂ ಇಲ್ಲ...:((
ಆ ಮಧ್ಯೆ  ನಿರೂಪಕಿ  ಹೇಳುವಳು-
ವೀಕ್ಷಕರೆ  ಈಗ ಅಂತಿಮ  ಹಂತದಲ್ಲಿ ನಮ್ಮ  ಸವಿ ರುಚಿ ಕಾರ್ಯಕ್ರಮ-  ಅದ್ಕೆ   ಒಂದೆರಡು 
 ಮೂರು 
ನಾಲ್ಕು 
ಬ್ರೇಕ್ ತಗೆದುಕೊಂಡು  ಬರುವೆವು.. 
ನೀವ್ ನಮಗಾಗಿ ಕಾಯ್ವಿರಿ ಅಂತ ನಮಗ್ಗೊತ್ತು , 
ಕಾಯಲೇಬೇಕು..
ಕಾಯ್ರಿ....
ನಾವ್ ಬೇಗ ವಾಪಸ್ಸು ಬರ್ತೀವಿ...:(((
 
ಆ ಮಧ್ಯೆ  ಜಾಹೀರಾತಿನಲ್ಲಿ  ಸೊಳ್ಳೆ -ನೊಣ-  ಇಲಿ -ಹಲ್ಲಿ -ಬಲ್ಲಿ -ಜಿರಳೆ  ಎಲ್ಲವನ್ನು  ಸಾಯಿಸುವ  ಉತ್ಪನ್ನಗಳ  ಬಗ್ಗೆ ಭಲೇ  ಅರ್ಧ ಘಂಟೆ  ಜಾಹೀರಾತು...:((
 
ವೀಕ್ಷಕರೆ  ನಿಮ್ಮ ತಾಳ್ಮೆಗೆ  ನಮೋ ನಮಃ...!! 
 
ಈಗ  ಆ ಬದನೆಗೆ  ಈ ಮಿಶ್ರಣವನ್ನು  ತುಂಬುವ... ಹೀಗೆ...(ಹ್ಯಾಗೇ ಅನ್ಬೇಡಿ -ನೋಡಿ -ಮಾಡಿ )
ಹೀಗೆ ಹೀಗೆ ಅಂತ ಕ್ಯಾಮೆರ ಕಡೆ ನೋಡುತ್ತಾ  ಆ ಮೂರು ಜಿರಳೆಗಳನ್ನು  ಒಂದೊಂದು  ಬದನೆಗೆ ತುಂಬಿ , ತುಂಬುವಾಗಲೂ  ಆ ಮಿಶ್ರಣದತ್ತ  ನೋಡದೆ  ಕ್ಯಾಮೆರ ಕಡೆ ನಗು ಮೊಗ ತೋರುತ್ತಿದ್ದ  ಅಡುಗೆ ಮಾಡುತ್ತಿದ್ದ ಶ್ರೀ ಮತಿ.. ಯವರು  ಆ ಬದನೆಗಳನ್ನು  ಎಣ್ಣೆಗೆ ಹಾಕಿದರು....
ಚಟ ಪಟ  ಸದ್ದಿನೊಂದಿಗೆ  ಮಿಶ್ರಣದೊಳಗೆ ಒಂದಾಗಿ  ಹೋದವು ಆ ಬಡ ಪಾಯಿ ಜಿರಳೆಗಳು...
ಮಸಾಲೆ ವಾಸನೆ ಅಲ್ಲೆಲ್ಲ ಹರಡಿ - ಆ ವಾಸನೆ ಮತ್ತು  ಬೆಂದ ಬದನೆಯನ್ನು  ನೋಡುತ್ತಿದ್ದ ನಿರೂಪಕಿಯ ಮನದಲ್ಲಿ  ಅಲ್ಲೋಲ್ಲ ಕಲ್ಲೋಲ ಆಗಿ, ಇನ್ನು ತಾಳಲಾರೆ  ಹೇಳಲಾರೆ  ಎನ್ನುವಂತೆ  ಮುಂದೆ ಬಂದು  ಒಂದು ಬದನೆಯನ್ನು  ಚಪಾತಿ  ಇದ್ದ  ತಟ್ಟೆಗೆ ಹಾಕಿ  ಸ್ವಾಹ ಮಾಡಿದಳು- ಉದ್ಘರಿಸಿದಳು
 ಅದ್ಭುತ - 
ಅಮೋಘ, 
ಸೂಪರ್ - 
ಸಖತ್.....!!
ವಾಹ್ವ್  ವಾಹ್ವ್...! 
 
ವೀಕ್ಷಕರೆ  ಹೀಗೆ ನೀವು  ಎಣ್ಣೆ  ಬದನೇಕಾಯಿ ಮಾಡಿ ತಿಂದರೆ  ಇನ್ನು ಮೇಲೆ  ಅದನ್ನೇ ಮಾಡಿ  ತಿನ್ನುವಿರಿ . ಬೇರೆಲ್ಲ   ಅಡುಗೆ ಮರೆಯುವಿರಿ...
ವನಿತೆಯರೇ  ನೋಡಿದಿರಲ್ಲ ನಮ್ಮ  ಇಂದಿನ ಅತಿಥಿ  ಶ್ರೀ ಮತಿ.. ಆವರು ಮಾಡಿದ  ಎಣ್ಣೆ ಬದನೇಕಾಯಿ  ಮಾಡುವ ವಿಧಾನ.. 
ನೀವೂ ಹೀಗೆಯೇ   ಮಾಡಿ  ನಿಮ್ಮೆಜಮನರನ್ನು  ಖುಷಿ ಪಡಿಸಿ.. ಅವರ ಉದರ ತುಂಬಿಸಿ....
 
ಹಾಗೆ ಹೇಳುತಲೇ  ೫ ಚಪಾತಿ  ೫ ಬದನೆ ತಿಂದ  ನಿರೂಪಕಿಯ  ಉದರ ಸೇರಿದವು ಆ ಮೂರು ಜಿರಳೆಗಳು...
ಈಗ  ಅಡುಗೆ ಮಾಡಿದವರಿಗೆ  ಒಂದು ಗಿಫ್ಟ್  ಬಾಕ್ಸ್ ಕೊಟ್ಟು ಮನೆಗೆ ಕಳಿಸಿದರು...
ಹೊರಗಡೆ  ಎ ಸಿ ಕಾರಲ್ಲ್ಲಿ ಮಲಗಿದ್ದ ಯಜಮಾನರನ್ನು  ತಟ್ಟಿ ಎಬ್ಬಿಸಿ  ಮನೆಗೆ  ಹೋದರು ದಂಪತಿಗಳು.......
 
ಎಣ್ಣೆ ಬದನೇಕಾಯಿ  ಸವಿರುಚಿ   ಇವತ್ತಿಗೆ ಮುಗಿಯಿತು....
ನಾಳೆ ಮತ್ತೊಂದು  ಹೊಸ ಸವಿ ರುಚಿಯೊಂದಿಗೆ   ನಾ ಬರುವೆ...
ಅಲ್ಲ್ವರ್ಗೆ ಎಣ್ಣೆ ಬದನೇಕಾಯಿ  ಸವಿಯಿರಿ....
 
ನಮಸ್ಕಾರ
 ನಮಸ್ಕಾರ  
ನಮಸ್ಕಾರ.....!!
===========================================================
   
 
 
 
ಎಣ್ಣೆ ಬದನೇಕಾಯಿ ಮಾಡುವ  ನೈಜ  ವಿಧಾನಕ್ಕಾಗಿ  ಇಲ್ಲಿ ಕ್ಲಿಕ್ಕಿಸಿ....
 
 
 
 
Rating
No votes yet

Comments

Submitted by ಗಣೇಶ Mon, 10/01/2012 - 23:50

>>>ಅಲ್ಲ್ವರ್ಗೆ ಎಣ್ಣೆ ಬದನೇಕಾಯಿ ಸವಿಯಿರಿ....
-ಎಣ್ಣೆಬದನೆಕಾಯಿ ನೋಡಿದರೆ ಓಡಿ ಹೋಗುವ ಹಾಗೆ ಮಾಡಿದಿರಲ್ಲಾ..:)
ಸವಿರುಚಿ "ಕಾರ್ಯಕ್ರಮ" ಸೂಪರ್ ಆಗಿತ್ತು.

Submitted by venkatb83 Tue, 10/02/2012 - 13:32

In reply to by ಗಣೇಶ

ಗಣೇಶ್ ಅಣ್ಣ...

ಚಿಂತಿಸಬೇಡಿ......
ನೀವು ಜಿರಳೆ ಹಾಕದೆ ಎಣ್ಣೆ ಬದನೆ ಮಾಡಿ ಜಮಾಯ್ಸಿ...!!
ಅದು(ಜಿರಳೆ) ಎಣ್ಣೆ ಬದನೇಕಾಯಿ ಸವಿ ರುಚ್ಚಿ ಗೆ ಬೇಕಾದ ಸಾಮಾಗ್ರಿ ಪಟ್ಟಿಯಲ್ಲಿ ಇಲ್ಲ.... ಅದು ಆಕಸ್ಮಿಕವಾಗಿ ಸೇರಿದ್ದು ಅಸ್ಟೆ ... :()))
ಎಣ್ಣೆ ಬದನೆ ಬೇಡ ಅಂತ ಯಾರಾದರೂ ದೂರ ತಳ್ಳುವರೆ???
ಇವತ್ತು ಸಂಜೆ (ನಿಮಗಾದ್ರೆ ಮಧ್ಯ ರಾತ್ರಿ)ನಮ್ಮನೆಗೆ ಬಂದರೆ ಎಣ್ಣೆ ಬದನೇಕಾಯಿ + ಚಪಾತಿ-ರೊಟ್ಟಿ ಭೋಜನ ಮಾಡಬಹುದು...
ನಿಮ್ಮೆಲ್ಲರ ನಿರೀಕ್ಷೆಯಲ್ಲಿ...

ಪ್ರತಿಕ್ರಿಯೆಗೆ ನನ್ನಿ..

ಶುಭ ದಿನ ರಾತ್ರಿ..ಬೆಳಗು..

ಶುಭವಾಗಲಿ..

\|/

Submitted by venkatb83 Tue, 10/02/2012 - 13:22

ಗುರುಗಳೇ ನೀವ್ ಇಲಿ ಬೋಂಡ -ಅಂತ ಹೇಳಿದ್ದು ಯಾವ್ ಬರಹದ ಬಗ್ಗೆಯೂ ಗೊತ್ತಾಗಲಿಲ್ಲ...!(ಭಲ್ಲೆ ಅವರದು ಆರ್ಗಾನಿಕ್ ಬೋಂಡಾ ).....
ನನಗಂತೂ ಎಣ್ಣೆ ಬದನೇಕಾಯಿ ಅಂದ್ರೆ ೫ ಪ್ರಾಣ....
ಅದರ ಸವಿ ರುಚಿ ಸವಿದವರೇ(ಬಹುತೇಕ ಎಲ್ಲರೂ ಸವಿದಿರುವವರೇ) ಬಲ್ಲರು.....(ಈ ಎಣ್ಣೆ ಬದನೆ ಅಲ್ಲ ಬಿಡಿ..!!)..

ಪ್ರತಿಕ್ರಿಯೆಗೆ ನನ್ನಿ...
ಶುಭ ದಿನ...

ಶುಭವಾಗಲಿ..
\|

Submitted by Chikku123 Wed, 10/03/2012 - 12:19

:) :)

Submitted by sathishnasa Wed, 10/03/2012 - 14:57

ಚನ್ನಾಗಿದೆ " ಸವಿರುಚಿ " (ಜಾಹಿರಾತು) ಕಾರ್ಯಕ್ರಮ
>>ಆ ಮಧ್ಯೆ ಜಾಹೀರಾತಿನಲ್ಲಿ ಸೊಳ್ಳೆ -ನೊಣ- ಇಲಿ -ಹಲ್ಲಿ -ಬಲ್ಲಿ -ಜಿರಳೆ ಎಲ್ಲವನ್ನು ಸಾಯಿಸುವ ಉತ್ಪನ್ನಗಳ ಬಗ್ಗೆ ಭಲೇ ಅರ್ಧ ಘಂಟೆ ಜಾಹೀರಾತು...:((<< ಜಿರಲೆ ಸಾಯಸೋದು ಹೇಗೆ ಅಂತ ತಿಳಿಸಿದ್ದೀರಲ್ಲ ಹಾಗೆ ಮಿಕ್ಕವನ್ನು ಸಾಯಿಸದರೆ ಆಯಿತು ಅಲ್ಲವೆ ?
ಧನ್ಯವಾದಗಳೊಂದಿಗೆ .....ಸತೀಶ್

Submitted by venkatb83 Wed, 10/03/2012 - 19:30

ಹಾಕಬಹುದಿತ್ತು -
ಆದ್ರೆ ಬರಿ ಅಕ್ಷರಗಳಲ್ಲೇ ಹೇಳಿದ್ದಕ್ಕೆ ........ಕೆ ಬರುವಂತಾದಾಗ ,
ಇನ್ನು ಚಿತ್ರವೇನಾರ ಹಾಕಿದ್ದರೆ ....!!
ಅದ್ಕೆ ಬೇಡ ಅಂತ ನಾನೇ ಉದ್ದೇಶಪೂರ್ವಕವಾಗಿ ಹಾಕಲಿಲ್ಲ...

ನಾ ಹಾಕದಿದ್ದರೂ ಕಲ್ಪಿಸಿಕೊಂಡೆ ಓದಬಹದು..!!
ಪ್ರತಿಕ್ರಿಯೆಗೆ ನನ್ನಿ...
ಶುಭವಾಗಲಿ..

\|