ಕಾಮನಾಟದ‌ ವರ‌

ಕಾಮನಾಟದ‌ ವರ‌

ಕವನ

 

ಶವದ ಕೆಂಡದೊಳಗೆ
ನಾನಾ ಪ್ರಕಾರದ ಸೂತ್ರದ ಬೊಂಬೆಗಳು
ಧೂಳೀ ಪಟವಾಗುವ  ಅಲ್ಲಲ್ಲಿ
ಎಲ್ಲೆಲ್ಲಿ ಭವದಾಟದ ಭುಗಿಲಿನ ಹೊಗೆ 
ಎಬ್ಬಿಸಿ 
 
ಜೀವನಾಕುವ ನಾಸಿಕದ ತುಂಬೆಲ್ಲ 
ಗರಿಕೆಯ ನೀರು ಬಿಟ್ಟು ಶುದ್ಧಿಸುವ 
ಇಡೀ ಊರಿಗೆ ಸೀರೆ ಉಡಿಸುವದಾಗಿ 
ಆಗಸವೇ ಗಲಿಬಿಲಿಗೊಂಡು
ಶವದ ಕೆಂಡದ ಶಾಖಕ್ಕಾಗಿ ತವಕಿಸುವ-
 
ಎಲ್ಲರ ಮನದ  ಕಾಮನಾಟಕ್ಕೆ 
ಕಾಮನರತಿಗೆನಿನಗಿದೋ ಎಂದು
ಶಿವ ಕೊಟ್ಟ ವರವೆಂದು
ನಾವೆಲ್ಲ ಹಿಗ್ಗಾಡಿ ಹೋದೆವು|
 
ಆದರಿಲ್ಲಿ ಬಸವಳಿಸುವ ಭ್ರೂಣಗಳಿಗಾರು 
ಅನ್ನ ನೀರು ಹಾಕುವರಿಲ್ಲದೇ
ಲಕ್ಷಾಂತರ ಭ್ರೂಣಗಳು 
ಸೂತ್ರ ತಪ್ಪಿದ ಬೊಂಬೆಗಳಂತೆ
 ಗಾಳೀಪಟಗಳಾಗಿ ಹಾರಾಡುತ್ತ ಶವದ 
ಕೆಂಡದಲ್ಲಿ ಉರಿದು ಹೋಗುತ್ತಿವೆ.
 
-ಕೇಶವ ದೇಶಪಾಂಡೆ.

Comments

Submitted by H A Patil Fri, 10/05/2012 - 12:02

ಕೇಶವ ದೇಶಪಾಂಡೆಯವರೆ ವಂದನೆಗಳು
ಸಂಪದಕ್ಕೆ ನಿಮಗೆ ಹಾರ್ದಿಕ ಸ್ವಾಗತ. " ಕಾಮನಾಟದ ವರ " ಒಂದು ಸತ್ವಪೂರ್ಣ ಕವನ,, ನಿಮ್ಮ ಕಾವ್ಯದಲ್ಲಿ ಒಂದು ತಾಕತ್ತಿದೆ, ಹೀಗೆಯ ಬರೆಯುತ್ತ ಹೋಗಿ, ಧನ್ಯವ಻ದಗಳು.

Submitted by Maalu Sun, 10/07/2012 - 14:19

ಚೆನ್ನಿದೆ ನಿಮ್ಮ ಕವಿತೆ
'ಜೀವನಾಕುವ ನಾಸಿಕದ ತುಂಬೆಲ್ಲ '
'ಜೀವನಾಕುವ' ಎಂಬುದರ ಅರ್ಥ ತಿಳಿಸಿ ದಯವಿಟ್ಟು.

Submitted by keshavvd Sun, 10/07/2012 - 19:55

In reply to by Maalu

ಇದು ಒ0ತರಹದ‌ ಪ್ರಯೋಗ‌ ವಿರುದ್ಢ‌ ಸ್0ಧಿ ಉಪಯೋಗಿಸುವ‌ ಪರಿ ಜೀವನಕ್ಕೆ ಆಗುವ‌ 'ಜೀವನವ‌ ಆಗುವ‌ ' ಅದನ್ನೇ ' ಜೀವನಾಕುವ‌' ಎ0ಬ ಪ್ರಯೋಗ‌.