ಸುನೀತ ೧೩೦
ನನ್ನವಳ ಕಂಗಳಲಿ
ಅರುಣಕಾಂತಿಯದಿಲ್ಲ
ಹವಳದ ಕೆಂಪು
ಅವಳ ತುಟಿಗಳಲಿಲ್ಲ
ಹಿಮವು ಬಿಳುಪೆಂದರೆ
ಅವಳೆದೆಯು ಬಿಳಿಯಲ್ಲ.
ಕರಿಮುಗಿಲ ಕೇಶವದು
ಸುವರ್ಣದೆಳೆಯಂತಿಲ್ಲ
ಅವಳ ಕೆನ್ನೆಗಳಲಿ ಕಂಡಿಲ್ಲ
ಕೆಂಗುಲಾಬಿಯ ಕೆಂಪು
ಅವಳುಸಿರ ಕಂಪಿನಲಿಲ್ಲ
ಸಿರಿಗಂಧದ ಪೆಂಪು
ಅವಳುಲಿವ ಸದ್ದಿನಲಿ
ರಾಗದಿಂಚರವಿಲ್ಲ
ಅವಳಿಡುವ ನಡೆಯಲ್ಲಿ
ಅಪ್ಸರೆಯ ಬಳುಕಿಲ್ಲ
ಅಪರೂಪದವಳಿವಳು, ನನ್ನವಳು
ನನ್ನಾಣೆ, ಉಪಮೆಗೆ ದಕ್ಕದವಳು.
ವಿಲಿಯಂ ಶೇಕ್ಸ್ಪಿಯರ್ನ ಸುನೀತ ಸಂಖ್ಯೆ ೧೩೦. ನನ್ನಳತೆಯೊಳಗೆ ಸಿಕ್ಕಂತೆ.
Rating
Comments
ಸುಂದರವಾಗಿದೆ!..............
ಸುಂದರವಾಗಿದೆ!..............
In reply to ಸುಂದರವಾಗಿದೆ!.............. by sumangala badami
ಮೆಚ್ಚಿದ್ದಕ್ಕಾಗಿ ನನ್ನಿ
ಮೆಚ್ಚಿದ್ದಕ್ಕಾಗಿ ನನ್ನಿ
ಮೊದ್ಮಣಿ