ದಕ್ಷಿಣಕ್ಕೆ ಮುಖ ಮಾಡಬಹುದೆ ?

ದಕ್ಷಿಣಕ್ಕೆ ಮುಖ ಮಾಡಬಹುದೆ ?

 

ಮಗಳು ಮನೆಯಲ್ಲಿ ಒಮ್ಮೆಲೆ ಒಂದು ರೂಮನ್ನು ತನ್ನ ಓದಿಗೆ ಎಂದು ರಿಸರ್ವ್ ಮಾಡಿ ಆ ರೂಮಿನಲ್ಲಿದ್ದ ಎಲ್ಲವನ್ನು ಹೊರಗೆಸೆದು ತನಗೆ ಬೇಕಾದನ್ನು ಮಾತ್ರ ಆ ರೂಮಿನಲ್ಲಿ ಉಳಿಸಿಕೊಂಡಳು. ಹಾಗಾಗಿ ಉಳಿದ ಮತ್ತೊಂದು ರೂಮಿನಲ್ಲಿ ಇರುವ ವಸ್ತುಗಳಿಗೆ ಸಂಕೋಚ ಜಾಸ್ತಿಯಾಗಿತ್ತು. ಹಳೆಯದೊಂದು ಬೀರು (ಅಲ್ಮೇರ) ಇದೆ. ಅದನ್ನು ರೂಮಿನ ಒಂದು ಮೂಲೆಯಲ್ಲಿ ಸೇರಿಸಿದೆ. ಪಕ್ಕದಲ್ಲೆ ಮಂಚ ಬರುತ್ತದೆ ಹಾಗಾಗಿ ಬೀರುವಿನಿ ಬಾಗಿಲು ಪೂರ್ತಿ ತೆಗಿಯಲು ಆಗಲ್ಲ. ನಾವು ಬೀರು ಹಾಗು ಮಂಚದ ನಡುವೆ ನಿಂತು ಮೊದಲು ಬಲಬಾಗಿಲು ತೆಗೆದು ನಂತರ ನಾವು ಬಲಕ್ಕೆ ಸರಿದು , ನಂತರ ಎಡಬಾಗಿಲನ್ನು ತೆರೆಯಬೇಕು. ಎರಡು ಬಾಗಿಲುಗಳು ಪೂರ್ಣವಾಗೆ ತೆಗೆದುಕೊಳ್ಳದೆ, ಮಂಚದ ಹಲಗೆಗೆ ಒತ್ತಿಕೊಂಡು , ಬಾಗಿಲು ತೆರೆದ ನಾವು ಹಿಂಬಾಗದ ಮಂಚ , ಮುಂದಿನ ಬೀರು, ಹಾಗು ಗೋಡೆಗಳಂತೆ ಕವಿದ ಬಾಗಿಲುಗಳ ನಡುವೆ ಸೇರುವದರಿಂದ ಹೆಚ್ಚು ಕಡಿಮೆ ನಾವು ಬೀರುವಿನ ಒಳಗೆ ಇದ್ದ ಅನುಭವವಾಗುತ್ತೆ . 
 
ಹೊರಗೆ ಬರುವಾಗಲು ಅದೆ ಕ್ರಮ, ಬೀರುವಿನಲ್ಲಿ ಬೇಕಾದ ವಸ್ತುಗಳನ್ನು ತೆಗೆದುಕೊಂಡಾದ ಮೇಲೆ, ಮೊದಲು ಎಡಬಾಗಿಲು ಹಾಕಿ ನಾವು ಎಡಕ್ಕೆ ಸರಿದು, ನಂತರ ಬಲಗಾಗಿಲು ಹಾಗಿ ಭದ್ರಪಡಿಸಿ ನಾವು ಸರಾಗವಾಗಿ ಹೊರಬರಬಹುದು. 
 
ಇನ್ನು ಬೀರುವಿನಲ್ಲಿರುವ ವಸ್ತುಗಳ ವಿವರಕ್ಕೆ ಬರೋಣ. ಮೇಲು ಬಾಗದಲ್ಲಿ, ನನ್ನ ಮಗಳು ತಾನು ಹೈಸ್ಕೂಲಿನಲ್ಲಿ ಉಪಯೋಗಿಸುತ್ತಿದ್ದ ಕೆಲವು ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದಾಳೆ, ಅಲ್ಲದೆ ಕೆಲವು ಮದುವೆಗಳಲ್ಲಿ ಉಡುಗೊರೆಯಾಗಿ ಬಂದ ಹಾಟ್ ಬಾಕ್ಸ್, ಬೊಂಬೆಗಳು, ಕೆಲವು ದೇವರ ವಿಗ್ರಹಗಳ ಇಂತವೆಲ್ಲ ತುಂಬಿವೆ. ಸ್ವಲ್ಕ ಕೆಳಗೆ ಬಂದರೆ ಸಿಗುವ ಚಿಕ್ಕ ಗೂಡಿನಲ್ಲಿ, ನನ್ನಾಕೆ , ನನಗೆ ಸೇರಿದ ಬಿಳಿಯ ಪಂಚೆಗಳು, ಮದುವೆಯಲ್ಲಿ ಬಂದ ಶರ್ಟ್ ಪೀಸ್, ಅಲ್ಲದೆ ಉಪಯೋಗಿಸದ ಕೆಲವು ಬಟ್ಟೆಗಳನ್ನು ತುರುಕಿ ಇಟ್ಟಿದ್ದಾಳೆ. ಮರೆತೆ ಅದರಲ್ಲಿ ಅತಿ ಮುಖ್ಯವಾದುದ್ದು, ಒಂದು ಸಫಾರಿ ಸೆಟ್, ನನ್ನ ಮದುವೆಯ ಸಂದರ್ಭದಲ್ಲಿ ಹೊಲೆಸಿದ್ದ ಅದನ್ನು ಜತನದಿಂದ ಕಾಪಾಡಲಾಗಿದೆ, ನನ್ನ ಮದುವೆ ರಿಸಿಪ್ಷನ್ ಕಾರ್ಯಕ್ರಮದಲ್ಲಿ ಒಂದೆ ಒಂದು ಸಾರಿ ಅದನ್ನು ಧರಿಸಿದ್ದ ನೆನಪು ಮತ್ತು ಅದಕ್ಕೆ ದಾಖಲೆಗಳಿವೆ. 
 
ಮತ್ತು ಕೆಳಗೆ ಬಂದರೆ ಉದ್ದನೆಯ ವಿಸ್ತಾರವಾದ ಗೂಡುಗಳು. ಅದ್ರಲ್ಲಿ ಕೆಲವು ಬಟ್ಟೆಗಳು, ಮನೆಯಲ್ಲಿ  ಹೆಚ್ಚುವರಿಯಾಗಿ ಇರುವ ಸೊಳ್ಳೆಪರದೆ, ಸೀರೆಗಳು ,ಅಲ್ಲದೆ ಕೆಲವೊಮ್ಮೆ ದೂರದ ನೆಂಟರ ಮದುವೆಯಾದಾಗ ಅವರಿಗೆ ಪ್ಯಾಕ್ ಮಾಡಿಸಿ ಕೊಡಲು ಸಹಾಯ ಮಾಡುವ ಕೆಲವು ಗಿಫ್ಟ್ ಗಳು ಅಂದರೆ, ದೇವರ ವಿಗ್ರಹ, ಗಡಿಯಾರದಂತಹ ವಸ್ತುಗಳ ಅಮೂಲ್ಯ ಸಂಗ್ರಹ. 
 
ಕಟ್ಟಕಡೆಯ ಕೆಳಬಾಗದಲ್ಲಿ, ಲೆದರ್ ಬ್ಯಾಗ್ ಗಳು, ಊರಿಗೆ, ಟೂರಿಗೆ ಹೋಗುವಾಗ ಬಳಸಬಹುದಾದ ಲೆದರ್ ಬ್ಯಾಗ್, ಚೀಲಗಳು. ಒಂದೆರಡು ದಿಂಬು, ಅಲ್ಲದೆ ನೆಲದ ಮೇಲೆ ಹಾಸಬಹುದಾದ ಚಾಪೆ, ಹಾಗು ಕಾರ್ಪೆಟ್ ಇಂತವೆಲ್ಲ ಇವೆ. 
 
ಬೀರು ಬಾಗಿಲು ತೆಗೆಯುವಾಗ ವಹಿಸಬಹುದಾದ ಒಂದು ಎಚ್ಚರಿಕೆ ಇದೆ, ಬಾಗಿಲು ತೆರೆದ ತಕ್ಷಣಕ್ಕೆ ಕೆಲವೊಮ್ಮೆ ತಲೆಯ ಮೇಲೆ ಒಳಗಿನಿಂದ ಯಾವುದಾದರು ಬಟ್ಟೆಯೊ, ವಸ್ತುವೊ, ಸ್ಟಿಲ್ ಲೋಟವೊ ಬೀಳುವ ಸಾದ್ಯತೆಯನ್ನು  ಊಹಿಸಿ ಸಿದ್ದವಾಗಿರಬೇಕಾದ್ದ್ದು ಅನಿವಾರ್ಯ. 
 
ನಿಮ್ಮೆಲ್ಲರ ಕುತೂಹಲದ ಬಾಗಕ್ಕೆ ಬಂದು ಬಿಡುತ್ತೇನೆ, ಪ್ರತಿ ಬೀರುವಿನಲ್ಲಿ ಸಿಕ್ರೆಟ್ ಲಾಕರ್ ಇದ್ದೆ ಇರುತ್ತದೆ. ಖಂಡೀತ ನಮ್ಮ ಮನೆ ಬೀರುವಿನಲ್ಲಿ ಸಹ ಅಮೂಲ್ಯವಾದ ಅ ಲಾಕರ್ ಇದೆ. ಅದರಲ್ಲಿ ಮೊದಲು ಒಳಗೆ ಕೈ ಆಡಿಸಿದರೆ ಸಿಗೋದು, ನಾಲಕ್ಕು ಅಲ್ಬಮ್ ಗಳು, ತೆಗೆದುನೋಡಿದರೆ, ಅದು ನಮ್ಮ ಮದುವೆಯಲ್ಲಿ ತೆಗೆಸಿದ, ಗಂಡಿನ ಕಡೇಯವರು ಹಾಗು ಹೆಣ್ಣಿನ ಕಡೇಯವರು (ನಮ್ಮ ಮಾವನವರ ಮನೆಯವರು ಅವರಲ್ಲಿದ್ದ ಅಲ್ಬಮ್ ಅನ್ನು ಇಲ್ಲಿಯೆ ತಂದು ಹಾಕಿ ಹೋಗಿದ್ದಾರೆ) ಸಿಗುತ್ತದೆ. ಅದರ ಮೇಲ್ಬಾಗದಲ್ಲಿ ನಾಲಕ್ಕು ದೊಡ್ಡ ದೊಡ್ಡ ಮ್ಯಾಗ್ನಿಟಿಕ್ ಟೇಪ್ ಗಳ ಕ್ಯಾಟ್ರೆಡ್ಜ್ (ಗಂಡಿನ ಹಾಗು ಹೆಣ್ಣಿನ .... ಡಿಟೋ ಡಿಟೋ....), ಹಾಗು ನಂತರದಲ್ಲಿ ಅದನ್ನು ಸಿ.ಡಿ, ಮಾಡಿಸಿದ ಸೀಡಿಗಳು ಇವೆ. ಜೊತೆಯಲ್ಲಿ ಮದುವೆಯಲ್ಲಿ ಒಳಗೆ ಬರುವವರ ಮೇಲೆ ಸೆಂಟ್ ನೀರನ್ನು ಎರಚುತ್ತಾರಲ್ಲ , ಸ್ವಲ್ಲ ಉದ್ದಕ್ಕೆ ಸ್ಟೀಲಿನದು ಅದನ್ನು ಏನನ್ನುತ್ತಾರೆ ಅದು , ಇದೆ. 
 
ಕಷ್ಟಬಿದ್ದು ಮತ್ತು ಒಳಗೆ ಕೈ ಆಡಿಸಿದರೆ, ಮತ್ತೊಂದು ಒಳ ಲಾಕರ್ ಇದ್ದು ಅಲ್ಲಿ ಕೈ ಹಾಕಿದರೆ (ಕಾಣಿಸಲ್ಲ) ನನ್ನ ಮಗಳು ಹೈಸ್ಕೂಲಿನಲ್ಲಿ ಹೈದರಾಬಾದ್ ಗೆ ಹೋಗಿದ್ದಾಗ ತಂದಿದ್ದ ಸರಗಳ ಸೆಟೆ, ಬಳೆ, ಕಿವಿಗೆ ಹಾಕುವ ಓಲೆಗಳು ಎಲ್ಲವು ಇವೆ. ಆದರೆ ಅದನ್ನೆಲ್ಲ ಎಂದಾದರು ಉಪಯೋಗಿಸುವ  ಕಷ್ಟ ಅವಳು ತೆಗೆದುಕೊಳ್ಳಲಿಲ್ಲ. 
 
ಇರಲಿ ಈಗಿನ ಸಮಸ್ಯೆ ಏನೆಂದರೆ, ನಮ್ಮ ಮನೆ ಬೀರು ಈಗ ಸಧ್ಯಕ್ಕೆ ಪೂರ್ವಕ್ಕೆ ಮುಖ ಮಾಡಿಕೊಂಡಿದೆ. ಅದನ್ನು ಸ್ವಲ ೯೦ ಡಿಗ್ರಿಯಷ್ಟು ತಿರುಗಿಸಿ ಇಟ್ಟು ಬಿಟ್ಟರೆ ಸಾಕು ಸ್ವಲ್ಪ ಸಮಸ್ಯೆ ಪರಿಹಾರ ಆಗುತ್ತೆ, ಆಗೆ ಅಡ್ಡಡ್ಡ ಇರುವದರಿಂದ ಬಾಗಿಲು ತೆಗೆಯಲು ಮಂಚ ಅಡ್ಡ ಬರಲ್ಲ. ಆದರೆ ಒಂದು ಸಮಸ್ಯೆ ಇದೆ ನೋಡಿ, ಅದೇನೊ ಮನೆಯಲ್ಲಿ ಬೀರುವನ್ನು ದಕ್ಷಿಣಕ್ಕೆ ಮುಖ ಮಾಡಬಾರದು ಎಂದು ನಮ್ಮ ಮನೆಯವರು ನಂಬಿದ್ದಾರೆ, ಹೀಗಾಗಿ ತಿರುಗಿಸಲು ಆಗುತ್ತಿಲ್ಲ. ನನಗಂತು ಅರ್ಥವಾಗುತ್ತಿಲ್ಲ, 
ಅಲ್ಲ ಬೀರುವನ್ನು (ಅಲ್ಮೇರ) ದಕ್ಷಿಣಕ್ಕೆ ಮುಖಮಾಡಿ ತಿರುಗಿಸಿ ಇಡಬಾರದು ಎಂಬ ವಾಸ್ತುವೊ ಅಥವ ನಂಬಿಕೆ ಏನಾದರು ಇದೆಯ ??
 
Rating
No votes yet

Comments

Submitted by swara kamath Sat, 10/06/2012 - 23:05

ಪಾರ್ಥಅವರೆ, ನನಗೆ ಅನಿಸುವುದೇನೆಂದರೆ ಮನೆಯು ಚಿಕ್ಕದಾಗಿದ್ದಾಗ ವಾಸ್ತು ಮತ್ತು ಕೆಲವು ಮೂಡನಂಬಿಕೆಗಳಿಗೆ ಶರಣಾಗದೆ(ಖಂಡಿತವಾಗಿ ತಮಗೆ ಆ ಶಕ್ತಿಇದೆ) ತಮಗೆ ಹೇಗೆ ಅನುಕೂಲವೊ ಹಾಗೆ ವಸ್ತುಗಳನ್ನು ಹೊಂದಿಸಿ ಕೊಳ್ಳುವುದು ಉತ್ತಮ .ಬೀರುವನ್ನು ದಕ್ಷಿಣಕ್ಕೆ ಮುಖ ಮಾಡಿಡಬಾರದು ಎಂಬ ನಂಬಿಕೆ ಬರಲು ಕಾರಣ ನಾವು ಅದರೊಳಗೆ ಧನ ಕನಕಗಳನ್ನು ಇಡುತ್ತೇವೆ ಹಾಗಾಗಿ ಶ್ರೀ ಲಕ್ಷ್ಮಿಯು ಅಲ್ಲಿ ಅವಾಸವಾಗಿರುತ್ತಾಳೆ ಎಂದೆನಿಸಿರಬಹುದು. (ದೇವರ ಪಟಗಳನ್ನು ಹಾಗು ದೇವರ ಮಂಟಪವನ್ನು ದಕ್ಷಿಣಕ್ಕೆ ಮುಖ ಮಾಡಿಡಬಾರದೆಂಬ ನಂಬಿಕೆ ಅನೇಕರು ಪಾಲಿಸುತ್ತಾ ಬಂದಿದ್ದಾರೆ) ಹಾಗಾಗಿ ತಮ್ಮ ಮನೆಯಲ್ಲಿ ಈ ಸಂದಿಗ್ಧ.ಎಲ್ಲವೂ ಒಳ್ಳೆಯದಾಗುವುದೆಂಬ ಗಾಢ ಮನಸ್ಸಿನಿಂದ ತಮ್ಮ ಅನುಕೂಲಕ್ಕೆ ತಕ್ಕಂತೆ ಬೀರುವನ್ನ ಹೊಂದಿಸಿ ....ವಂದನೆಗಳು, ರಮೇಶ ಕಾಮತ್

Submitted by makara Sun, 10/07/2012 - 07:03

ಪಾರ್ಥಸಾರಥಿಗಳೆ,
ವಾಸ್ತು ಮತ್ತು ವಾಸ್ತವತೆಗಳ‌ ನಡುವೆ ಆಯ್ಕೆ ಬ0ದಾಗ‌; ಖ0ಡಿತವಾಗಿ ಎರಡನೆಯದನ್ನು ಆಯ್ದುಕೊಳ್ಳಿ! ವಾಸ್ತು ಮೂಢ‌ ನ0ಬಿಕೆಯಲ್ಲ‌ ಆದರೆ ತಪ್ಪಿರುವುದು ಅದನ್ನು ಅಳವಡಿಸಿಕೊಳ್ಳುವುದರಲ್ಲಿ. ಅದು ಆದರ್ಶ‌ ಸ್ಥಳಗಳ‌ ಪಟ್ಟಿಯನ್ನು ಕೊಡುತ್ತದೆ ಅದು ಸಾಧ್ಯವಾಗದಾಗ‌ ನಮಗೆ ಅನುಕೂಲವಾದದ್ದನ್ನು ಆರಿಸಿಕೊಳ್ಳುವುದು ಅನಿವಾರ್ಯ‌... ಅದರಿ0ದೇನೂ ಹಾನಿ ಆಗದು.

Submitted by kavinagaraj Sun, 10/07/2012 - 12:57

ಪಾರ್ಥರೇ, ಪೂರ್ಣ ಬೆಂಗಳೂರೇ ದಕ್ಷಿಣಕ್ಕೆ ಮುಖ ಮಾಡಿದೆ. ಇನ್ನು ಬೆಂಗಳೂರಿನಲ್ಲಿರುವ ನಿಮ್ಮ ಮನೆಯ ಬೀರು ಯಾವ ದಿಕ್ಕಿನಲ್ಲಿದ್ದರೇನು? ವಾಸ್ತು ಹೆಸರಿನಲ್ಲಿ ಬೀಳದಿರಿ ಬೇಸ್ತು!!

Submitted by venkatb83 Sun, 10/07/2012 - 17:26

In reply to by kavinagaraj

ಗುರುಗಳ ಸಮಸ್ಯೆಗೆ ನನ್ನಲ್ಲಿ ಯಾವದೇ ಪರಿಹಾರವಿಲ್ಲ...!!
ಆದ್ರೆ ಅವರ ಈ ಬರಹದ ಮೂಲಕ ಅವರು ಕೆಲವು ಅತ್ಯಮೂಲ್ಯ ಮಾಹಿತಿಗಳನ್ನು ಕಳ್ಳ ಕಾಕರಿಗಾಗಿ ಬಿಟ್ಟು ಕೊಟ್ಟಿರುವರು...!!

ಮಾಟ ಮಂತ್ರ ತಂತ್ರ ದ ತವರು ಕೊಳ್ಳೆಗಾಲದ ಕುರಿತು ಬರೆದ ಬರಹವೊಂದಕ್ಕೆ ಗುರುಗಳು ಪ್ರತಿಕ್ರಿಯಿಸಿರುವರು.
ಈ ವಿಷಯದಲ್ಲೂ ಏನೂ ಯೋಚಿಸದೆ ಬೀರುವನ್ನು ನಿಮಗೆ ಹೇಗೆ ಬೇಕೋ ಹಾಗೆ ಇಡಿ ಅನ್ನಬಹ್ದು.. !!
ಆದರೂ ಹಾಗೆ ಹೇಳೋಲ್ಲ....!!
ಹಾಗೆಯೇ ಕವಿಗಳ(ಕವಿ ನಾಗರಾಜ ಸರ್) ಮೂಲಕ ಇಡೀ ಬೆಂಗಳೂರು ದಕ್ಷಿಣಕ್ಕೆ ಮುಖ ಮಾಡಿದೆ ಎಂಬ ಮಾಹಿತಿಯು ತಿಳಿಯಿತು..

ಇದಕೆ ಪರಿಹಾರವನ್ನು ನಿಮಗೆ ಬಹುಶ ಅಂಡಾ೦ಡ ಭಂಡ ಜ್ಯೋತಿಷ್ಯವಿಶಾರದ ಜ್ಯೋತಿಷ್ಯ ಬ್ರಹ್ಮ ಪಂಡಿತ ರತ್ನ ವಾಸ್ತು ಪಂಡಿತ .......ಗಳು ಪರಿಹರಿಸಬಹ್ದು... ಸಂಪರ್ಕಿಸಿ...

ಶುಭವಾಗಲಿ..

ನನ್ನಿ

\|/

>>> ಆದ್ರೆ ಅವರ ಈ ಬರಹದ ಮೂಲಕ ಅವರು ಕೆಲವು ಅತ್ಯಮೂಲ್ಯ ಮಾಹಿತಿಗಳನ್ನು ಕಳ್ಳ ಕಾಕರಿಗಾಗಿ ಬಿಟ್ಟು ಕೊಟ್ಟಿರುವರು...!!
:) :)
"ಪಾರ್ಥಣ್ಣ",
-ಸಪ್ತಗಿರಿವಾಸಿಯವರು ನಿಮ್ಮ ಸಮಸ್ಯೆಯನ್ನು ನಮಗೆ ಅರುಹಿದರು. ಚಿಂತಿಸದಿರಿ. ಇದಕ್ಕೆ ನಮ್ಮ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ. ಬೀರು ದಕ್ಷಿಣಕ್ಕೆ ಮುಖಮಾಡಿ ಇಡಬೇಕಾದರೆ, ಸಮೀಪದ ಮಂಚದಲ್ಲಿ ತಾವು ತಲೆಯನ್ನು ಮತ್ತು ಎಡಕಾಲನ್ನು ಪೂರ್ವ ದಿಕ್ಕಿಗೆ ಹಾಗೂ ಎಡಕೈ+
ಬಲಗಾಲನ್ನು ಉತ್ತರ ದಿಕ್ಕಿಗೆ ಇಟ್ಟು ಮಲಕೊಳ್ಳಬೇಕು.ತಲೆದಿಂಬು ಇಟ್ಟುಕೊಳ್ಳಬಾರದು.ಬೆಳಗೆದ್ದು ತಣ್ಣೀರು ಸ್ನಾನ ಮಾಡಿ "ದಕ್ಷಿಣದ್ವಾರೆ ಬೀರೆ ನಮಃ" ಎಂದು ೨೮ ಸಲ ಹೇಳಿ. ಶುಭಮಸ್ತು.
- ಅಂಡಾ೦ಡ ಭಂಡ ಜ್ಯೋತಿಷ್ಯವಿಶಾರದ ಜ್ಯೋತಿಷ್ಯ ಬ್ರಹ್ಮ ಪಂಡಿತ ರತ್ನ ವಾಸ್ತು ಪಂಡಿತ

Submitted by partha1059 Mon, 10/08/2012 - 14:51

In reply to by ಗಣೇಶ

ಸ್ವರಕಾಮತ್, ಮಕರರವರೆ, ಸಪ್ತಗಿರಿ, ಕವಿನಾಗರಾಜರೆ
ತಮ್ಮಲ್ಲರ‌ ಆತ್ಮೀಯ‌ ಪ್ರತಿಕ್ರಿಯೆಗೆ ಧನ್ಯವಾದಗಳು

ಗಣೇಶರೆ
ನಿಮ್ಮ ಸಲಹೆ ಬಗ್ಗೆ ಚಿ0ತಿಸಿದೆ ಆದರೆ ಅಲ್ಲಿ ಬಲಕೈಯನ್ನು ಏನು ಮಾಡಬೇಕು ಎ0ದು ತಾವು ತಿಳಿಸಿಲ್ಲ ಹಾಗಾಗಿ ಪೆ0ಡಿ0ಗ್
ಮತ್ತೆ ಎರಡನೆ ಸಲಹೆ ಸ್ವಲ್ಪ ಅಪಾಯಕಾರಿ
ಆ ರೀತಿ ಧ್ಯಾನ‌ ಮಾಡುತ್ತ ಉಚ್ಚರಿಸುತ್ತಿದ್ದರೆ , ನಮ್ಮ ಪಕ್ಕದ‌ ಮನೆಯವರ‌ ಕಿವಿ ಸ್ವಲ್ಪ ಚುರುಕು. ಅವರು ಸುಖಾ ಸುಮ್ಮನೆ
"ಪಾರ್ಥ‌ ಒಳ್ಳೆಯವರು ಎ0ದು ಮಾಡಿದ್ದೆವು ನೋಡಿ ಬೆಳಗ್ಗೆ ಬೆಳಗ್ಗೆ ಅದೇನೊ ಬೀರ್ ಬೀರ್ ಎನ್ನುತ್ತಿರುತ್ತರೆ" ಎ0ದು ಪ್ರಚಾರ‌ ಮಾಡುವ‌ ಸಾದ್ಯತೆ ಇದೆ

ನನ್ನ ಹಾಸ್ಯ ಬರಹ‌ ಸ್ವಲ್ಪ ಹದ‌ ತಪ್ಪಿತ್ತು , ನೀವು ಅದನ್ನು ಸರಿಪಡಿಸಿದ್ದಕ್ಕಾಗಿ ವ0ದನೆಗಳು

ಗೋಪಾಲ್ ನಿಮಗು ವ0ದನೆಗಳು