ಜೊತೆಗಾರ

ಜೊತೆಗಾರ

 ನನ್ನವನು ನನ್ನವನು ನನ ಹಣೆಯ ಸಿಂಧೂರ

ನನ ಸಕಲ ಸೌಂದರ್ಯಕೆ ಅವನೇ ಸಿಂಗಾರ

ನನ್ನೊಡನವನಿರುವಾಗ ಬೇಕ್ಯಾತಕೋ ಬಂಗಾರ

ಅವನೊಡನೆಯ ಒಡನಾಟದಿ ಜೀವನವೇ ಸಾಕಾರ

 

ಜೀವನವು ಒಂದು ಸುಖ ದುಃಖದ ಸಾಗರ

ಅವನಿರಲು ನನ್ನಡೊನೆ ಸಕಲ ದುಃಖಕು ಪರಿಹಾರ

ಒಲವು ಎನ್ನೊಲವು ಅವನೆನಗೆ ಸುಖತೀರ

ಕೊನೆವರೆಗು ಕೈಹಿಡಿದು ಎನಗಾದ ಆಧಾರ

 

ಕಷ್ಟಕೂಟಗಳ ಸಹಿಪೆ,ಸಹಿಸೆನಾ ಈ ದೂರ

ಬಾ ಜೀವಾ ನನ್ ಜೀವಾ ನನ ಬಾಳ ಸರದಾರ

ಜೊತೆ ನೀನಿರದಾಗ ಬರಡು ಈ ಸಂಸಾರ

ಬಂದೆನ್ನ ಕರೆದೊಯ್ಯು ನಿನ್ನಲ್ಲಿಗೆ ಜೊತೆಗಾರ

 

                                                                 ಸುಮಂಗಲಾ ಪ್ರಕಾಶ್

Rating
No votes yet

Comments

Submitted by venkatb83 Sun, 10/07/2012 - 17:19

" ನನ್ನವನು ನನ್ನವನು ನನ ಹಣೆಯ ಸಿಂಧೂರ

ನನ ಸಕಲ ಸೌಂದರ್ಯಕೆ ಅವನೇ ಸಿಂಗಾರ

ನನ್ನೊಡನವನಿರುವಾಗ ಬೇಕ್ಯಾತಕೋ ಬಂಗಾರ

ಅವನೊಡನೆಯ ಒಡನಾಟದಿ ಜೀವನವೇ ಸಾಕಾರ"

ಸುಮಂಗಳ(ಸುಮಂಗಲ) ಅವ್ರೆ
ಬಹು ದಿನಗಳ ನಂತರ ಒಳ್ಳೆ ಬರಹ ಬರಹದೊಡನೆ ಮರಳಿರುವಿರಿ...
ಬರಹ ಸೂಪರ್..
ಬರಹದ ಮೊದಲಿನ ಸಾಲಿನಲ್ಲಿ ನೀವ್ ಹೇಳುವಂತೆ ಎಲ್ಲ ಹುಡುಗೀರು - ಹೆಣ್ಣು ಮಕ್ಕಳು
'ನೀನೆ ನನ್ನ ಬಂಗಾರ' ನನಗ್ಯಾಕೆ ಬೇರೆ ಬಂಗಾರ ಅಂದ್ರೆ ನಾವ್ ಗಂಡಸರ ಮೇಲಿನ ಬಂಗಾರ ಭಾರ ಕಮ್ಮಿಯಾದೀತು...!
ಹಾಗೆ ಬಂಗಾರದ ರೇಟು ಪಾತಾಳ ಮುಟ್ಟೀತು...!!
ಮುಟ್ಟೀತೆ?

ಶುಭವಾಗಲಿ..

ನನ್ನಿ

\|

Submitted by sumangala badami Wed, 10/10/2012 - 19:08

In reply to by venkatb83

ಯಾಕಾಗದು ಸಪ್ತಗಿರಿಯವರೇ ಬಂಗಾರದ ರೇಟು ಪಾತಾಳಾ ಮುಟ್ಟೇ ಮುಟ್ಟುತ್ರಿ ...... ಆದ್ರ ಬಂಗಾರ ಅನಸ್ಗೊಳ್ಳುವವರು ಬಂಗಾರದಂತಾ ಗುಣ ಹೊಂದಿದ್ರ ಯಾವ ಹುಡುಗಿ(ಹೆಣ್ಮಗಳು) ನೀನೆ ನನ ಬಂಗಾರಾ ಅಂತ ಅನ್ನೊದಿಲ್ಲ ಹೇಳ್ರಿ.........
ಮೆಚ್ಚುಗೆಗೆ ವಂದನೆಗಳು

Submitted by swara kamath Mon, 10/08/2012 - 11:45

ಸುಮಂಗಲಾ ಪ್ರಕಾಶ್ಅವರೆ
,ಈ ಕವನವೇ ಸಾಕ್ಷಿಯಂತಿದೆ ತಮ್ಮ ಹರ್ಷಭರಿತ ಸಂಸಾರಿಕ ಜಿವನಕ್ಕೆ. ಅಂತೆಯೆ ಸಾಗಲಿ ತಮ್ಮ ಜೀವನದ ಪಯಣ.
ಶುಭವಾಗಲಿ