ಕಾಮನಬಿಲ್ಲು
ನಾನೊಂದು ಕಾಮನಬಿಲ್ಲ
ಹಿಡಿದು ತರುವಂತಿದ್ದರೆ
ತಂದೇ ತರುವೆ ನಿನ್ನೊಡನೆ ಹಂಚಿಕೊಳ್ಳುವೆ
ನಿನಗಾಗಿ ಗಿರಿಮಾಲೆಗಳ
ಕಟ್ಟಿ ಕೊಡುವಂತಿದ್ದರೆ
ಕಟ್ಟಿ ಕೊಡುವೆ ನಿನ್ನನ್ನೂ ತುತ್ತ ತುದಿಗೇರಿಸಿ
ನಿನ್ನೆಲ್ಲಾ ನೋವುಗಳನ್ನೂ
ಅನುಭವಿಸುವಂತಿದ್ದರೆ
ಸ್ವೀಕರಿಸಿ ಎಲ್ಲವನ್ನೂ ನಾ ಹಂಚಿಕೊಳ್ಳುವೆ
ನಡೆಯವೀ ಮಾತುಗಳೆಂದೂ
ಬರಿಯ ಕನಸಿನವೀ ಮಾತುಗಳೆಂದೂ
ನೀರ ಮೇಲೆ ದೋಣಿಗಳ ತೇಲಿಬಿಡುವೆ
ಕಾಗದದ ಮೇಲೆ ಬರೆದ
ಬರಿಯ ಕವಿತೆ ಸಾಲುಗಳೆಂದೂ
ಕಾಗದದ ದೋಣಿಯಂತೆ ಸುಳ್ಳು-ಪೊಳ್ಳು-ಟೊಳ್ಳು
Rating
Comments
ತ್ರಾಸದ ಪ್ರಾಸ...!!
ಕವನ ತುಂಬಾ ಚೆನ್ನಾಗಿದೆ..
ಒಟ್ನಲ್ಲಿ ನೀವು ಅವಳಿಗಾಗಿ ಏನೆಲ್ಲಾ ತ್ರಾಸ ತೆಗೆದುಕೊಳ್ಳಲು ರೆಡಿ ಇರ್ವ ಹಾಗಿದೆ....
ಶುಭವಾಗಲಿ...
\|
In reply to ತ್ರಾಸದ ಪ್ರಾಸ...!! by venkatb83
ಧನ್ಯವಾದಗಳು
ಧನ್ಯವಾದಗಳು ವೆಂಕಟ್.
ಇಲ್ಲಿರುವುದು ೧೦೦% ನಿಜವಲ್ಲ. ಅಲ್ಲೇ ಹೇಳಿರುವಂತೆ ಸುಳ್ಳು-ಪೊಳ್ಳು.
ಆದರೂ ಮತ್ತೊಮ್ಮೆ ಧನ್ಯವಾದಗಳು ;)