ನನ್ನವಳು

ನನ್ನವಳು

 ಮನದಿ ಮಗುವಾಗಿ

ಮೊಗದಿ ನಗುವಾಗಿ

ಮಿಡಿದೆ ಸೊಗಸಾಗಿ

ಬಂದೆ ನನಗಾಗಿ,ಬಾಳ ಸಂಗಾತಿಯಾಗಿ

ಬಾಳ ಸಂಗಾತಿಯಾಗಿ

 

ಪ್ರೀತಿ ಅಂಗಳದಲ್ಲಿ

ನಗುವೆಂಬ ಹೂಚೆಲ್ಲಿ

ಬಾಳ ಪಯಣದಲ್ಲಿ

ಗೆಳತಿ ನೀನಿಲ್ಲಿ, ಮನದೊಡತಿ ನನಗಿಲ್ಲಿ

ಮನದೊಡತಿ ನನಗಿಲ್ಲಿ

 

ಕವಿಗಿಂದು ಕಣ್ಣಾದೆ

ಬರೆವ ಲೇಖನಿಯಾದೆ

ಕವಿ ಮನದಿ ಸೆರೆಯಾದೆ

ಅಂತರಾಳದ ಭಾವನೆಯಾದೆ, ಸುಂದರ ಕವಿತೆಯಾದೆ

ಸುಂದರ ಕವಿತೆಯಾದೆ

Rating
No votes yet

Comments

Submitted by vidyakumargv Wed, 10/03/2012 - 23:00

ಒಬ್ಬ ಪುರುಷನಂತೆ ಯೋಚಿಸಿ, ತನ್ನ ಸಂಗಾತಿ ಬಗ್ಗೆ ಬರೆದಿದಿರಿ .. ಸ್ವಲ್ಪ ರಿಸ್ಕ್ ತೆಗೊಂಡ್ರಿ ಅನ್ಸುತ್ತೆ..ಅಲ್ವಾ ))

ಚೆನ್ನಾಗಿದೆ ವಂದನೆಗಳು.

Submitted by sumangala badami Sun, 10/07/2012 - 11:11

In reply to by vidyakumargv

ವಿದ್ಯಾ ಅವರೇ ಸಂಸಾರದಲ್ಲಿ ಬರೀ ಹಾಫ್ ಶರ್ಟ ಪಾತ್ರ ನಿಭಾಯಿಸಿದ್ರೆ ನಡೆಯೋದಿಲ್ರಿ,ಕೆಲವೊಂದ ಸಲಾ ಫುಲ್ ಶರ್ಟ ಪಾತ್ರಾನು ಮಾಡ್ಬೇಕಾಗತ್ರಿ :-)...... ಮೆಚ್ಚುಗೆಗೆ ಧನ್ಯವಾದಗಳು

Submitted by lpitnal@gmail.com Wed, 10/10/2012 - 06:55

ಪ್ರಿಯ ಸುಮಂಗಲಾ ಬಾದಾಮಿ ಯವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಕವಿ ಮನದ ಕವನ. ಸುಂದರವಾಗಿ ಮೂಡಿ ಕಾವ್ಯಮಯವಾಗಿ ಮಿಡಿದಿದೆ. ಭಾವನೆಗಳಲ್ಲಿ ಅರಳುತ್ತ ಹೋಗುವ ಉತ್ತಮ ಕವನ. ಸುಂದರ ಕವನವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.