" ಶೋಭಾ ಕರಂದ್ಲಾಜೆ ಯವರ ಮಾನವೀಯ ಕಳಕಳಿ "
ನಿನ್ನೆ ಬೆಳಿಗ್ಗೆ ದೂರದರ್ಶನದ ಚಾನಲ್ ವೊಂದನ್ನು ವೀಕ್ಷಿಸುತ್ತಿದ್ದಾಗ ಆಘಾತಕರ ಸುದ್ದಿಯೊಂದು ತೇಲಿ ಬಂತು. ಮಾಸ್ತಿ ವೆಂಕಟೇಶ ರವರ ಮೊಮ್ಮಗ ದೃಷ್ಟಿಹೀನ ವೃತ್ತಿಯಲ್ಲಿ ಪ್ರೊಫೆಸರ್ ಆಗಿದ್ದ ಚಕ್ರಪಾಣಿ ಯವರು ಅಕ್ಷರಶಃ ಭಿಕ್ಷುಕರಂತೆ ಕೋಲಾರದಲ್ಲಿ ತಮ್ಮ ಸಾಕು ನಾಯಿಯೊಂದರ ಜೊತೆ ಸುತ್ತುತ್ತ ಭಿಕ್ಷಾಟನೆ ತೊಡಗಿರುವ ದೃಶ್ಯಾವಳಿ. ನಿಜಕ್ಕೂ ಮನ ಕಲುಕುವ ಘಟನೆ, ವೃದ್ಧಾಪ್ಯದ ಅಸಹಾಯಕತೆ ಮನುಷ್ಯನನ್ನು ಯಾವ ಅವಸ್ಥೆಗೆ ತಳ್ಳುತ್ತದೆ ಎನ್ನುವುದು. ಮಾಸ್ತಿ ವೆಂಕಟೇಶ ಅಯ್ಯಂಗಾರರ ಮೊಮ್ಮಗನ ಈ ಸ್ಥಿತಿಗೆ ಯಾರೂ ಮಿಡಿಯದ ಜನ ಸಮೂಹ ಮತ್ತು ನಮ್ಮ ಸರ್ಕಾರಿ ವ್ಯವಸ್ಥೆ ತಲುಪಿರುವ ಅಧಃಪತನ ಎನ್ನಲಡ್ಡಿಯಿಲ್ಲ.
ಈ ಮನಕಲುಕುವ ಸುದ್ದಿಗೆ ಮಿಡಿದ ಮಾನ್ಯ ಸಚಿವೆ ಶೋಭಾ ಕರಂದ್ಲಾಜೆಯವರು ಪ್ರವೃತ್ತರಾದ ರೀತಿ ಇನ್ನೂ ನಮ್ಮ ಆಡಳಿಕತಶಾಹಿಯಲ್ಲಿ ಇನ್ನೂ ಮಾನವೀಯ ಕಳಕಳಿ ಬತ್ತಿಲ್ಲ ಎನ್ನುವದಕ್ಕೆ ಒಂದು ಶ್ರೇಷ್ಟ ಉದಾಹರಣೆ. ಅವರು ಚಕ್ರಪಾಣಿಯವರ ಮಾಹಿತಿ ಕಲೆಹಾಕಿ ಅವರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ಚಿಕಿತ್ಸೆ ಕೊಡಿಸಿದ ಸುದ್ದಿ ಇಂದು ಆ ಚಾನಲ್ ನಲ್ಲಿ ಮೂಡಿ ಬಂತು. ಮಾನವೀಯ ರೀತಿಯಲ್ಲಿ ನಡೆಸಿಕೊಂಡ ಕರಂದ್ಲಾಜೆ ಯವರ ಮಾನವೀಯ ಮೌಲ್ಯಗಳ ನಡುವಳಿಕೆಯ ರೀತಿ ಮನ ಕಲುಕಿತು. ಇಂತಹವರ ಸಂಖ್ಯೆ ಸರ್ಕಾರದಲ್ಲಿ ಮತ್ತು ಸಮಾಜದಲ್ಲಿ ಹೆಚ್ಚಲಿ.
Comments
ಹನುಮ0ತ ಪಾಟೀಲರಿಗೆ ನಮಸ್ಕಾರಗಳು;
ಹನುಮ0ತ ಪಾಟೀಲರಿಗೆ ನಮಸ್ಕಾರಗಳು;
ಈ ರೀತಿಯ ಸಚಿವರು ಎಲ್ಲರಿಗೂ ಮಾದರಿಯಾಗಿರುತ್ತಾರೆ; ಇದೇ ನಿಜವಾದ ನಾಯಕತ್ವದ ಲಕ್ಶ್ಹಣಗಳು. ಒಳ್ಳೆಯ ಮಾಹಿತಿ ಹ0ಚಿಕೊ0ಡಿದ್ದಕ್ಕೆ ಧನ್ಯವಾದಗಳು.
In reply to ಹನುಮ0ತ ಪಾಟೀಲರಿಗೆ ನಮಸ್ಕಾರಗಳು; by makara
ಶ್ರೀಧರ ಬಂಡ್ರಿಯವರಿಗೆ ವಂದನೆಗಳು.
ಶ್ರೀಧರ ಬಂಡ್ರಿಯವರಿಗೆ ವಂದನೆಗಳು. ಇಂತಹ ಒಂದೊಂದು ಮಾನವೀಯ ಕಳಕಳಿಯ ಕೆಲಸಗಳನ್ನು ನಮ್ಮ ಮಂತ್ರಿ ವರ್ಯರು ಮಾಡಿದರೂ ಸಾಕು ನಮ್ಮ ಜನ ಅವರನ್ನು ತಲೆಯ ಮೇಲೆ ಹೊತ್ತು ಮೆರೆಯುತ್ತಾರೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಶೋಭಾ ಅಕ್ಕನ ಮಾನವೀಯ ಕಳಕಳಿ
ಹನುಮಂತ ಅನಂತ ಪಾಟೀಲರೇ, ಧಾರವಾಡದ ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಶೋಭಾಮೇಡಂ ಅವರನ್ನು ಬಹಳ ದಿನಗಳಿಂದ ಸನಿಹದಿಂದ ಬಲ್ಲೆ. ಅವರು ಅತ್ಯಂತ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಂಥ ಅಪರೂಪದಲ್ಲಿ ಅಪರೂಪದವರು. ಯಾರೇ ಅವರನ್ನು ಸಂಪರ್ಕಿಸಲಿ ಅವರು ಸಹಾಯ ಹಸ್ತ ನೀಡಿಯೇ ಬಿಡುತ್ತಾರೆ. ಇಂತಹ ದಿನಗಳಲ್ಲೂ ಇಂತಹವರು ಇದ್ದಾರಲ್ಲ ಅನ್ನುವ ತರಹದ ನಡುವಳಿಕೆ ಅವರದು,ಅವರು ತಮ್ಮ ಇಲಾಖೆಯಲ್ಲಿ ಅಂತಹ ಕಳಕಳಿಯಂತಹವರನ್ನೇ ಮುದ್ದಾಂ ಆರಿಸಿಕೊಳ್ಳುತ್ತಾರೆ. ಅವರ ಸಿಬ್ಬಂದಿಯಂತೂ ಇನ್ನೂ ಒಳ್ಳೆಯವರು. ಮೌಲ್ಯಗಳನ್ನು ಕಾಪಾಡಿಕೊಂಡಂಥ ಟೀಮ್ ಅವರದು. ಅವರೆಲ್ಲರಿಗೂ ಒಂದು ಆತ್ಮೀಯ ಸಲಾಂ. ಅಂತಹ ಮಂತ್ರಿಸ್ಥಾನದಲ್ಲಿ ಇದ್ದರೂ ಕನ್ನಡಿಗರೆಲ್ಲರಿಗೂ ತೀರ ಹತ್ತಿರದವರು. ನನಗೂ ಕೂಡ ತುಂಬ ತುಂಬ ಸಹಾಯ ಮಾಡಿದ ಮಂತ್ರಿಗಳು ಅವರು. ಅವರೆಂದೂ ನ್ಯಾಯ ಪರ. ಚಕ್ರಪಾಣಿಯವರಿಗೆ ಸಹಾಯ ಹಸ್ತ ಚಾಚಿರುವುದರಿಂದ ಈಗ ಜನಕ್ಕೆ ಅವರು ಇನ್ನೂ ಹೆಚ್ಚು ಪರಿಚಿತರಾಗಿದ್ದಾರೆ. ಅವರ ಮಾನವೀಯ ಮುಖ ನಮ್ಮ ಜನಕ್ಕೆ ಮತ್ತೊಮ್ಮೆ ಅನಾವರಣಗೊಂಡಿದೆ. ಪರಿಮಳದ ಹೂವಿನಂಥವರು. ಅವರು ಬಹುಕಾಲ ಬಾಳಲಿ ಎಂದು ಈ ಸಂದರ್ಭದಲ್ಲಿ ಹಾರೈಸುವೆ. ಧನ್ಯವಾದಗಳು.
In reply to ಶೋಭಾ ಅಕ್ಕನ ಮಾನವೀಯ ಕಳಕಳಿ by lpitnal@gmail.com
ಲಕ್ಷ್ಮಿಕಾಂತ ಇಟ್ನಾಳ ರವರಿಗೆ
ಲಕ್ಷ್ಮಿಕಾಂತ ಇಟ್ನಾಳ ರವರಿಗೆ ವಂದನೆಗಳು
ಮಾನ್ಯ ಸಚಿವೆ ಶೋಭಾ ಕರಂದ್ಲಾಜೆ ಯವರನ್ನು ಸನಿಹದಿಂದ ಬಲ್ಲ ನೀವು ಅವರ ಗುಣ ಸ್ವಬಾವ ಕುರಿತು ಒಳ್ಳೆಯ ರೀತಯಲ್ಲಿ ಬರೆದಿದ್ದೀರಿ, ಹೀಗೆ
ಧನಾತ್ಮಕ ಅಂಶಗಳನ್ನು ಗುರುತಿಸುತ್ತ ದಾಖಲಿಸುತ್ತ ಹೊದರೆ ನಮ್ಮ ಸಮಾಜವನ್ನು ಒಳ್ಳೆಯ ದಾರಿಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯ.ಪ್ರತಿಕ್ರಿಯೆಗೆ ಧನ್ಯವಾದಗಳು.
In reply to ಶೋಭಾ ಅಕ್ಕನ ಮಾನವೀಯ ಕಳಕಳಿ by lpitnal@gmail.com
@ ಹಿರಿಯರೇ ಮತ್ತು ಹಿಟ್ನಾಳ್ ಅವ್ರೆ
ಹಿರಿಯರೇ ಮತ್ತು ಹಿಟ್ನಾಳ್ ಅವ್ರೆ
ಶೋಭಾ ಅವರನ್ನು ನಾ ನೋಡಿಲ್ಲ- ಮಾತಾಡಿಸಿಯು ಇಲ್ಲ.
ಆದ್ರೆ ಅವರ ಕಾರ್ಯ ವೈಖರಿ-ಸಮಾಧಾನದ ಸಮಸ್ಯಾ ಆಲಿಕೆ -ಪರಿಹಾರ-ದಕ್ಷತೆ ಬಗ್ಗೆ ಎರಡು ಮಾತಿಲ್ಲ..
ಇರುವ ಕೆಲವೇ ಕಡಿಮೆ ಸಂಖ್ಯೆಯ ಮಹಿಳಾ ರಾಜಕಾರಣಿಗಳಲ್ಲಿ ಕೆವಾ ಅವರ ಪಕ್ಷ ಮಾತ್ರ ಅಲ್ಲದೆ ವಿಪಕ್ಷದವರೂ ಅವರ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುವರು...
ಅವರ ಈ ನಡೆ(ಚಿಕಿತ್ಸೆ ಕೊಡಿಸಿದ್ದು)ಅವರ ಬಗ್ಗೆ ಮತ್ತಸ್ತು ಅಭಿಮಾನ ಮೂಡುವ ಹಾಗೆ ಮಾಡಿದೆ....
ಮಾಸ್ತಿ ಅವರ ಕುಟುಂಬ ಸದಸ್ಯರ ಸ್ತಿತಿ ಗತಿ ಬಗ್ಗೆ ಸರಕಾರ, ಕನ್ನಡ ಸಾಹಿತ್ಯ ಪರಿಷತ್ತು ,ನಾವು ಕನ್ನಡಿಗರು ಕಾಳಜಿ ವಹಿಸಬೇಕಿದೆ ..
ಇಲ್ಲವಾದರೆ ಮಾಸ್ತಿ ಕನ್ನಡದ ಆಸ್ತಿ ಎಂಬುದಕ್ಕೆ ಅರ್ಥವೇ ಇಲ್ಲ....!
ಉತ್ತಮ ಬರಹ
ನನ್ನಿ
ಶುಭವಾಗಲಿ..
\|
In reply to @ ಹಿರಿಯರೇ ಮತ್ತು ಹಿಟ್ನಾಳ್ ಅವ್ರೆ by venkatb83
ವೆಂಕಟೇಶ ರವರೆ ವಂದನೆಗಳು
ವೆಂಕಟೇಶ ರವರೆ ವಂದನೆಗಳು
ತಮ್ಮ ಮನಮಿಡಿದ ಪ್ರತಿಕ್ರಿಯೆಗೆ ಧನ್ಯವಾದಗಳು.
ಟೈಮ್ಸ್ ಆಫ್ ಇಂಡಿಯಾ
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಚಕ್ರಪಾಣಿಯವರು ನಾಯಿ 'ರಾಜು'ವಿನೊಡನೆ ಇರುವ ಫೋಟೋ ಇದೆ. ಅದನ್ನು ನಿಮ್ಮ ಲೇಖನದೊಡನೆ ಅಪ್ ಲೋಡ್ ಮಾಡಿದರೆ ಚೆನ್ನಾಗಿರುತ್ತದೆ, ಪಾಟೀಲರೆ.
In reply to ಟೈಮ್ಸ್ ಆಫ್ ಇಂಡಿಯಾ by kavinagaraj
ಕವಿ ನಾಗರಾಜ ರವರಿಗೆ ವಂದನೆಗಳು
ಕವಿ ನಾಗರಾಜ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ತಮ್ಮ ಸಲಹೆಯಂತೆ ಆ ಚಿತ್ರವನ್ನು ಈ ಲೇಖನಕ್ಕೆ ಅಪ್ ಲೋಡ್ ಮಾಡಲು ಪ್ರಯತ್ನಿಸುವೆ. ಧನ್ಯವಾದಗಳು.
ಪುಣ್ಯಾತ್ಗಿತ್ತಿ... ಸದ್ಯದ
ಪುಣ್ಯಾತ್ಗಿತ್ತಿ... ಸದ್ಯದ ರಾಜಕೀಯದಲ್ಲಿ ಇಂಥವರೂ ಇರ್ತಾರಾ ಅನ್ನೋ ಹಾಗೆ ಮಾಡಿದ್ದಾರೆ!!
In reply to ಪುಣ್ಯಾತ್ಗಿತ್ತಿ... ಸದ್ಯದ by Chikku123
ಚೇತನ ಕೋಡುವಳ್ಳಿ ಯವರಿಗೆ
ಚೇತನ ಕೋಡುವಳ್ಳಿ ಯವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಪ್ರತಿಕ್ರಿಯೆಯ ಪ್ರಾರಂಭದ ' ಪುಣ್ಯಾತ್ಗಿತ್ತಿ..ಮತ್ತು ಕೊನೆಯ ಎರಡು !! ಉದ್ಗಾರ ವಾಚಕಗಳು ಹೊರಡಿಸುವ ಧ್ವನಿ ನನಗರ್ಥವಾಗಲಿಲ್ಲ, ವಿಷಯ ಏನೇ ಇರಲಿ ಪ್ರತಿಕ್ರಿಯೆಗೆ ಧನ್ಯವಾದಗಳು.
ಪಾಟೀಲರಿಗೆ ನಮಸ್ಕಾರಗಳು. ಹೌದು ಈ
ಪಾಟೀಲರಿಗೆ ನಮಸ್ಕಾರಗಳು. ಹೌದು ಈ ವಿಚಾರವಾಗಿ ಪತ್ರಿಕೆಯಲ್ಲೂ ಓದಿದೆ. ನಿಜಕ್ಕೂ ಶೋಭಾ ಮೇಡ0 ಮಾಡಿರುವ ಕೆಲಸ ಸ್ತುತ್ಯಾರ್ಹ. ಹಿ0ದೆಯೂ ಮ0ತ್ರಾಲಯದಲ್ಲಿ ಪ್ರವಾಹ ಪರಿಸ್ಥಿತಿ ಉ0ಟಾದಾಗ ಅಲ್ಲಿದ್ದ ಸ್ವಾಮಿಗಳನ್ನು ಕರೆತರಲು, ಹೆಲಿಕ್ಯಾಪ್ಟರನಲ್ಲಿ ತೆರೆಳಿದ್ದು ಈಕೆಯೆ. ಮಾನವೀಯತೆಯೊ0ದಿಗೆ ದೈರ್ಯವ0ತೆ ಕೂಡ.
ಧನ್ಯವಾದಗಳು
ರಾಮೋ.
In reply to ಪಾಟೀಲರಿಗೆ ನಮಸ್ಕಾರಗಳು. ಹೌದು ಈ by RAMAMOHANA
ರಾಮ ಮೋಹನ ರವರೆ ವಂದನೆಗಳು
ರಾಮ ಮೋಹನ ರವರೆ ವಂದನೆಗಳು
ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.
ಅವರ ಮಾನವೀಯತೆ ಶ್ಲಾಘನೀಯ ಆದರೆ
ಅವರ ಮಾನವೀಯತೆ ಶ್ಲಾಘನೀಯ ಆದರೆ ಚಕ್ರಪಾಣಿ ಮಾಸ್ತಿಯವರ ಮೊಮ್ಮಗ ಅಲ್ಲ ಅನ್ನುವ ಸುದ್ದಿ ಇಂದಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದೆ ಧನ್ಯವಾದಗಳೊಂದಿಗೆ
....ಸತೀಶ್
In reply to ಅವರ ಮಾನವೀಯತೆ ಶ್ಲಾಘನೀಯ ಆದರೆ by sathishnasa
ಸತೀಶ ರವರೆಇಗೆ ವಂದನೆಗಳು
ಸತೀಶ ರವರೆಇಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ನೋಡಿದೆ, ನಾನು ದೂರದರ್ಶನ ಚಾನಲ್ ವೊಂದರಲ್ಲಿ ಬಂದ ಮಾಹಿತಿ ತುಣುಕೊಂದನ್ನು ಆಧರಿಸಿ ಅದನ್ನು ಸಂಪದಿಗರೊಂದಿಗೆ ಹಂಚಿಕೊಳ್ಳ ಬೇಕೆನಿಸಿತು, ಆದರೆ ಆ ವ್ಯಕ್ತಿ ಮಾಸ್ತಿಯವರ ಮೊಮ್ಮಗನಲ್ಲ ಎನ್ನುವ ಬಗ್ಗೆ ನನಗೆ ತಿಳುವಳಿಕೆಯಿರಲಿಲ್ಲ,ಮಾನ್ಯ ಸಚಿವೆಯರ ಕಳಕಳಿಯ ನಡೆಯನ್ನು ಶ್ಲ್ಯಾಘಿಸ ಬೇಕೆನಿಸಿತು, ಆ ಕಾರಣ ದಾಖಲಿಸಿದೆ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಹೀಗಯೆ ಪ್ರತಿಕ್ರಿಯಿಸುತ್ತ ಇರಿ.