ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ....

ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ....

ಕವನ

 

ಬಣ್ಣದ ಬಾನಿನ ಹುಣ್ಣಿಮೆ ಇರುಳಲಿ
ಸಣ್ಣಗೆ ಕೊಳಲನು ಊದುತ ಬಂದ
ಒಲವನು ತಂದ ಚೆಲುವ ಮುಕುಂದ
ಕನಸಲು ಬಂದು ಎದೆಯೊಳು ನಿಂದ
 
ರಕ್ಕಸ ಮಾವನ ರಕ್ಕಸಿ ಪೂತನ
ಚಿಕ್ಕವನಾದರು ಚೊಕ್ಕದಿ ಕೊಂದ
ಗಿರಿಯನು ಎತ್ತಿದ  ಉರಗವ ಮೆಟ್ಟಿದ
ಜಗವನು ಪೊರೆದ ನಂದನ ಕಂದ
 
ಅಮ್ಮ ಯಶೋದೆಗೆ ಸುಮ್ಮನೆ ಕಾಡಿದ
ತುಂಬಿದ ಮೊಸರನು ಕುಂಭದಿ  ಕುಡಿದ 
ಗೋಪಿಕ ಸ್ತ್ರೀಯರ ತಾಪವ ಕಳೆದ
ಸುರ ಹರಿ ಬಂದ ಮನದೊಳು ನಿಂದ.
-ಹರಿ ಪ್ರಿಯೆ ಮಾಲು. 
 

Comments