ಎಲ್ಲೀವರೆಗೆ ಹೋರಾಟಾ...

ಎಲ್ಲೀವರೆಗೆ ಹೋರಾಟಾ...

ನಿಮಗೆಲ್ಲಾ ಪ್ರಕಾಶ್ ಪಡುಕೋಣೆ ಪರಿಚಯ ಹೇಳಬೇಕಾಗಿಯೇ ಇಲ್ಲ. "ದೀಪಿಕಾ ಪಡುಕೋಣ್‌ಳ ಅಪ್ಪ ಅಂದದ್ದು ಯಾರದು..? ಸಪ್ತಗಿರಿವಾಸಿಯಾ...ಹೋಗಲಿ ಬಿಡಿ, ಈಗಿನ ಜನರೇಶನ್ ಹುಡುಗ ಅಲ್ವಾ..
ಪ್ರಕಾಶ್ ಪಡುಕೋಣೆ ಶಟ್ಲ್ ಬ್ಯಾಡ್ಮಿಂಟನ್‌ನಲ್ಲಿ  ವಿಶ್ವ ಪ್ರಸಿದ್ಧರು. ನಾನೂ ಸಹ...ಶಟ್ಲ್ ಆಡಲು ಮನೆಯೆದುರಿಗಿನ ರಸ್ತೆಗಿಳಿದರೆ ಎದುರುಮನೆ "ವಿಶ್ವ" ಕಣ್ಣು ಎವೆಯಿಕ್ಕದೇ ಆಟ ನೋಡಲು "ಸಿದ್ಧ".
ನನ್ನ ಶಟ್ಲ್ ಕೋರ್ಟ್‌ನ ಬೌಂಡರಿ ಲೈನ್-ಎಡಕ್ಕೆ ವಿಶ್ವನ ಹೊಸ ಇನ್ನೋವಾ ಕಾರು, ಬಲಕ್ಕೆ ಸುಬ್ಬರಾಯರ ಸ್ವಿಫ್ಟ್ ಕಾರು, ಹಿಂದೆ ಕರಿಷ್ಮಾ ಬೈಕ್, ಮುಂದೆ ಯಮಹಾ ಬೈಕ್. ಈ ವಾಹನಗಳ ಒವ್ನರ್‌ಗಳೇ ನನ್ನ ಆಟದ ಲೈನ್ ಅಂಪೈರ್‌ಗಳು. ಇವರೆಲ್ಲರ ಹಾರೈಕೆ(ಹರಕೆ)ಯ ಫಲವೋ ಏನೋ ನಾನು ಮನೆ ಶಿಫ್ಟ್ ಮಾಡಿದೆ. 
ಈಗ ನಾನಿರುವ ಪುಟ್ಟ ಹಳ್ಳಿಯಲ್ಲಿ, ಪಕ್ಕದ ಖಾಲಿ ಸೈಟನ್ನೇ ನನ್ನ ಬ್ಯಾಡ್ಮಿಂಟನ್ ಕೋರ್ಟ್ ಆಗಿ ಮಾಡಿರುವೆ. ಆದರೆ ಅಲ್ಲಿ ಮೊದಲಿಂದ ವಾಸಿಸಿರುವ ಈ ಇರುವೆಗಳು   ಏನು ಮಾಡಿದರೂ ಜಾಗ ಬಿಟ್ಟುಕೊಡುತ್ತಿಲ್ಲಾ.. 
ಶೂನಿಂದ ಅವುಗಳ ಗೂಡನ್ನೆಲ್ಲಾ ಹಾಳು ಮಾಡಿದೆ. ಅವು ಮೇಲೆ ಹತ್ತಿಬಂದು ಕೈಮೈಎಲ್ಲಾ ಕಚ್ಚಿ ಸೇಡು ತೀರಿಸಿಕೊಂಡವು.
ಮೊನ್ನೆ ರಾತ್ರಿ ಮಳೆ ಬಂದು ಕೋರ್ಟು ತುಂಬಾ ನೀರು ನಿಂತಾಗ ಖುಷಿಯಾಯಿತು-ಇರುವೆಗಳೆಲ್ಲಾ ಕೊಚ್ಚಿಹೋಗಿರಬಹುದು ಎಂದು ಬೆಳಗ್ಗೆ ಬಂದು ನೋಡುತ್ತೇನೆ- ಹೊಸಕೋಟೆ ಕಟ್ಟಿ ರೆಡಿಯಾಗಿದ್ದವು.
ಅಂಗಡಿಗೆ ಹೋದವನೇ "ಗ್ಯಾಮಕ್ಸಿನ್" ( http://www.mylot.com/w/discussions/1655208.aspx )ತಂದು ಗೂಡು ತುಂಬಾ ಸುರಿದೆ.  ಪಾಪ..ಮೈತುಂಬಾ ಪೌಡರ್ ಮೆತ್ತಿಕೊಂಡು  ಸಂಸಾರ ಸಮೇತ ಬೇರೆ ಕಡೆ ಹೊರಟವು. 
ಮರುದಿನ ಬೆಳಗ್ಗೆ ನೋಡಿದರೆ..........
ಪೋಲೀಸರು ಇನ್ನಷ್ಟು ಭದ್ರತೆಗೆ ಸಿ‌ಆರ್‌ಪಿ‌ಏಫ್ ಪಡೆ ಕರೆಸಿದಂತೆ ಹೊರಗಿನಿಂದ ಬೇರೆ ಇರುವೆ ಪಡೆಗಳನ್ನು ಕರೆಸಿಕೊಂಡಿತ್ತು! ತಲೆಮೇಲೆ ಕೈ ಇಟ್ಟುಕೊಂಡು ಗೂಡಿನ ಬಳಿ ಕುಳಿತು ನೋಡುವಾಗ, ಅವೆಲ್ಲಾ ಇರುವೆಗಳು ಕೈಮೇಲೆತ್ತಿ ಜೋರಾಗಿ ಹೇಳಿದಂತೆ ಅನಿಸಿತು- ಹೋರಾಟಾ..ಹೋರಾಟ...ಎಲ್ಲಿಯವರೆಗೆ ಹೋರಾಟಾ...
Rating
No votes yet

Comments

Submitted by lpitnal@gmail.com Thu, 10/11/2012 - 10:04

ಗೆಳೆಯ ಗಣೇಶ ರವರೇ, ನಿಮ್ಮ ಪರಿಸರ ಪ್ರೇಮ,, ಕುತೂಹಲ.ಮೆಚ್ಚುವಂತದ್ದು. ನಿಮ್ಮನ್ನು ಕಾಡಿದ ಮನುಷ್ಯ ಇರುವೆಗಳಿಗಿಂತ ಈ ನಿಜ ಇರುವೆಗಳು ನಿಸರ್ಗ ಸಹ್ಯ. ಅಂತೂ ಶಟ್ಲ್ ಕೋರ್ಟ್ ಕನಸು ಕೊನಗೂ ಕೈಗೂಡಿತೋ ಇಲ್ಲವೋ ಗೊತ್ತಾಗಲಿಲ್ಲ.

Submitted by partha1059 Thu, 10/11/2012 - 10:19

ಪಾಪ‌ ಅದೆ0ದತು ನಿಮ್ಮದು ಇರುವೆಗಳ‌ ಮೇಲೆ ಹೋರಾಟ‌.... shoe ಕಾಲಿನಿ0ದ‌ ತುಳಿದು... ಪುಡಿ ಹಾಕಿ.....
ಪಾಪ‌ ನಾವು ಅದರ‌ ಮನೆಗೆ ಹೋಗಿರುವದಲ್ವ.... ಸ್ವಲ್ಪ adjust ಮಾಡಿ ಇರುವದಪ್ಪ ವಿಶ್ವ ಸುಬ್ಬರಾಯರಿಗಿ0ತ‌ ಸ್ವಲ್ಪ ಮೇಲಾ ??

Submitted by ಗಣೇಶ Fri, 10/12/2012 - 00:07

In reply to by partha1059

ಬ್ರಿಟಿಷರ ಕಾಲದಿಂದಲೂ ಅದು ಅಲ್ಲೇ ಇದ್ದಿರಬಹುದು. ಆದರೆ ನನ್ನ ಪರಿಸ್ಥಿತಿ ಊಹಿಸಿ. "ಸಾಂಬಾ" ಬೆಳೆಯಂತೆ ಇರುವ ನನ್ನ ದೇಹಕ್ಕೆ ಈಗ ವ್ಯಾಯಾಮ ಅನಿವಾರ್ಯ. ಇರುವೆಗಳು ತೆಳ್ಳಗಿರುವುದರಿಂದ ಅವಕ್ಕೆ ವ್ಯಾಯಾಮದ ಅಗತ್ಯವಿಲ್ಲ. ಇಂದಿನಿಂದ ಮುಂದಿನ ಮಳೆಗಾಲದವರೆಗೆ, ಅಂದಾಜು ಒಂದೂವರೆ tmc ಅಲ್ಲ time/ಗಂಟೆ ನನಗೆ ಕೋರ್ಟ್ ಬಿಟ್ಟುಕೊಡಬೇಕು.

Submitted by Chikku123 Thu, 10/11/2012 - 11:50

ಪಾಪ, ಒಂದೇ ಒಂದು ಸೈಟ್ ಇರುವೆಗಳಿಗೆ ಅಂತಿತ್ತು ಅದಕ್ಕೂ ಮಣ್ಣು ಹಾಕಿದ್ರಲ್ಲಾ ಗಣೇಶಣ್ಣ....!!
ಇರುವೆಗಳ ಶಾಪದಿಂದ ನೀವು ಶಟಲ್ ಆಟದಲ್ಲಿ ಸೋಲ್ತೀರಾ
ಇರುವೆಗಳಿಗೆ ನಮ್ಮ ಬೆಂಬಲವೂ ಇದೆ

Submitted by ಗಣೇಶ Fri, 10/12/2012 - 00:30

In reply to by kavinagaraj

" ನನಗೆ ಪಾರ್ಥ ಮತ್ತು ಗಣೇಶ ಇಬ್ಬರ ಮನೆಯ ವಿಳಾಸವೂ ಗೊತ್ತಿಲ್ಲ ಅಂತ ಧೈರ್ಯವಾಗಿ ಯಾರು ಕೇಳಿದರೂ ಹೇಳುತ್ತೇನೆ!!"
-ಇರುವೆಗಳ ಪರವಾಗಿ ಸರಿ.. ಹೋರಾಟ ಎಲ್ಲಿ ಮಾಡುವಿರಿ?:)

Submitted by kavinagaraj Fri, 10/12/2012 - 10:26

In reply to by ಗಣೇಶ

ನನ್ನ ಈ ತಾಪತ್ರಯವೇ ನಿಮಗೆ ಅನುಕೂಲವಾಗಿದೆ. ನನ್ನ ಈ ಅನಿಸಿಕೆ ವಿರೋಧ ಪಕ್ಷದ ನಾಯಕರ ಪತ್ರಿಕಾ ಹೇಳಿಕೆಯಂತಾಯಿತಲ್ಲಾ!! :(

Submitted by ಗಣೇಶ Sat, 10/13/2012 - 00:38

In reply to by kavinagaraj

:) ಹೋಗಲಿ ಬಿಡಿ. ನೀವು ಸ್ಟ್ರೈಕ್ ಮಾಡಲು ವಿಳಾಸ ಹೇಳಿಯೇ ಬಿಡುವೆ- ೧೨-೧am,c/o sampada ಅಲ್ಲಿಲ್ಲದಿದ್ದರೆ c/o ಮಾಯೆ(ನಮ್ಮ ಕವಿನಾಗರಾಜರ ಪ್ರಕಾರ ನಿದ್ರೆ:) )

Submitted by venkatb83 Thu, 10/11/2012 - 18:47

ಸ.ಗಿ.ಯ ? :())

ಗಣೇಶ್ ಅಣ್ಣ
ಪ್ರಾಣಿ
ಪಕ್ಷಿ
ಕ್ರಿಮಿ
ಕೀಟ ಪ್ರಿಯ
-ತಜ್ಞ-ವರದಿಗಾರ
ಚಿತ್ರಕಾರರಾದ ನೀವೇ ಹೀಗೆ ಅವುಗಳ ಮೇಲೆ ಹೇಳದೆ- ಕೇಳದೆ ಅತಿಕ್ರಮ ಆಕ್ರಮಣ ಮಾಡೋದೇ?
ನನಗೆ ಆಗ ಯಾವುದೋ ಮೌನ ಆರ್ತನಾದ ಕೇಳಿಸಿದ ಹಾಗಿತ್ತು ಆದ್ರೆ ಏನದು ಅಂತ ಪೂರ್ಣವಾಗಿ .......ಗಲಿಲ್ಲ..
ಈಗ ನಿಮ್ಮ ಚಿತ್ರ ಬರಹ ನೋಡಿದ ಮೇಲೆ ಆ ಮೌನ ಧ್ವನಿ ಇರುವೆಗಳದು ಅಂತ ಗೊತ್ತಾಗಿದೆ...!!

ನಿಮಗೆ ಕಾದಿದೆ ಗಂಡಾಂತರ: ಇರುವೆಗಳು ಈಗ ತಮ್ಮ ಹಿರಿಯಣ್ಣ - ಮನುಷ್ಯ ಮ್ರುಗಾದಿ ಸಹಿತ ಭಕ್ಷಕ 'ಸೈನಿಕ ಇರುವೆಗಳಿಗೆ' ಭಾರತಕ್ಕೆ ,ಅದೂ ನಿಮ್ಮ ಹಳ್ಳಿಗೆ ಧಾಳಿ ಇಡಲು ಕೋರಿಕೆ ಸಲ್ಲಿಸಿವೆ....!!

http://en.wikipedia.org/wiki/Army_ant

http://www.youtube.com/watch?v=DXaaTQztoI0

http://info-now.org/ants/ArmyAntSoldier_Eciton_burchellii-AWild-captivecolonyCalifAcadSci.jpg

ನಿಮ್ಮ ಈ ಅತಿಕ್ರಮಣ ಆಕ್ರಮಣವನ್ನು ನಾವ್ ತೀವ್ರವಾಗಿ ವಿರೋಧಿಸುತ್ತ ಕ್ರಿಮಿ ಕೀಟ ಪ್ರಾಣಿ ಪಕ್ಷಿ ಅಭುದಯ ಸಂಘಕ್ಕೆ ದೂರು ಸಲ್ಲಿಸುವೆವು..
ನಿಮ್ಮನೆ ಮುಂದೆ 'ಹುಗ್ರ' ಪ್ರತಿಭಟನೆ ಮಾಡುವೆವು..:()))

ಇರುವೆಗಳ ಸಹಾಯಕ್ಕೆ ನಾವ್ ಸದಾ ಸಿದ್ಧ...
ಆದ್ರೆ ನಮ್ಮನೆಗೆ ಮಾತ್ರ ಬರಬೇಡಿ...!
ಅಲ್ಲೇ ಗಣೇಶ್ ಅಣ್ಣ ಅವರ ಶಟಲ್ ಗ್ರೌಂಡ್ ನಲ್ಲೆ ಟೆಂಟ್ ಹಾಕಿ...!!

ಶುಭವಾಗಲಿ..

\|

ಸಪ್ತಗಿರಿವಾಸಿ,
ಯುಟ್ಯೂಬ್ ನ ಇರುವೆಗಳನ್ನು ನೋಡಿದ ಮೇಲೆ ನನಗೆ ಭಯವಾಗುತ್ತಿದೆ.ನಾನು ಹೋರಾಟ ಕೈಬಿಟ್ಟು ಸಂಧಾನಕ್ಕೆ ಸಿದ್ಧ.

Submitted by nkumar Thu, 10/11/2012 - 19:13

ಆಫೀಸ್ ತಲೆಬಿಸಿ ಮಧ್ಯೆ ಉತ್ತಮ‌ ನಗೆ ಬರಹ‌ :). ನಾಳೆ PETAದವರು ನಿಮ್ಮ‌ ಮನೆ ಮು೦ದೆ ಕಾಣಿಸಿಕೊಳ್ಳುವುದು ಗ್ಯಾರ೦ಟಿ. ಅವರ‌ ಹೋರಾಟ‌ ಎದುರಿಸಲು ತಯಾರಾಗಿರಿ

Submitted by ಗಣೇಶ Fri, 10/12/2012 - 00:45

In reply to by nkumar

ನಾನು ಇಲ್ಲ್ಲಿ ಗೋಳಾಟ ಹೇಳಿಕೊಂಡರೆ, ಎಲ್ಲರೂ ನನ್ನ ವಿರುದ್ಧವೇ ಹೋರಾಟಕ್ಕೆ ಬರುತ್ತಿದ್ದಾರಲ್ಲಾ? ಕಸ ಬ್‌ಗೂ ಕಡೆಯಾದೆನೆ:)

Submitted by ಗಣೇಶ Fri, 10/12/2012 - 00:54

In reply to by bhalle

ನೀವು ನೆನಪಿಸಿದ್ದು ಒಳ್ಳೆಯದಾಯಿತು. ಇನ್ನು ನನ್ನ ಪರವಾಗಿ ದನಿಯೆತ್ತಲು ಉಳಿದಿರುವುದು ವಾಟಾಳ್ ಒಬ್ಬರೇ.. ಆದರೆ ಅವರು ಹೋರಾಟಕ್ಕೆ ತಂದ ಹಂದಿ ಎಮ್ಮೆ ಕತ್ತೆಗಳನ್ನು ಇಲ್ಲೇ ಬಿಟ್ಟು ಹೋಗುವುದಿಲ್ಲ ತಾನೆ?

Submitted by Prakash Narasimhaiya Fri, 10/12/2012 - 10:39

In reply to by kavinagaraj

ಆತ್ಮೀಯ ಗಣೇಶರೆ,
ನಿಮ್ಮದು ಹೋರಾಟದ ಬದುಕು! ಮನುಷ್ಯ ಯಾವ ಯಾವುದಕ್ಕೆ ಹೋರಾಟ ಮಾಡಬೇಕು? ನಿತ್ಯವೂ ಹೋರಾಟ!!! ಕಾಲ ಎಷ್ಟು ಕೆಟ್ಟು ಹೋಗಿದೆ ಅಂದ್ರೆ, ಆ ಇರುವೇನೂ ಮನುಷ್ಯನ ಮಾತು ಕೇಳದೆ ದಿಕ್ಕಾರ ಮಾಡುತ್ತಿವೆ!!!!!!!. ಮುಂಚಿನ ದಿನಗಳ ಹಾಗಿಲ್ಲ ಸ್ವಾಮಿ, ಅವುಗಳ ಜಾಗಕ್ಕೆ ನಾವು ಹೋಗಿ ಅತಿಕ್ರಮಣ ಮಾಡೋ ಹಾಗಿಲ್ಲ . ಹಾಗೇನಾದ್ರೂ ಮಾಡಿದ್ರೆ ಯಡ್ಯುರಪ್ಪ ಮತ್ತು ರಾಬರ್ಟ್ ವಾದ್ರಾ ತರಾ ಸುದ್ದಿಗೆ ಬರುತ್ತೀರಾ , ಜೋಕೆ ಅಂತ ಇರುವೆಗಳು ಹೇಳಿದನ್ತಿರಬೇಕು! ಏನೇ ಆಗಲಿ, ಇನ್ನೊಮ್ಮೆ ಯೋಚಿಸಿ ನೋಡಿ.

Submitted by ಗಣೇಶ Sat, 10/13/2012 - 00:08

In reply to by Prakash Narasimhaiya

ಪ್ರಕಾಶ್ ಅವರೆ,
ಈ ಪ್ರಾಣಿ ಪಕ್ಷಿ ಕ್ರಿಮಿ ಕೀಟ,ಸಸ್ಯಗಳ ಹೋರಾಟದ ಮುಂದೆ ನಮ್ಮ ಹೋರಾಟ ಏನೂ ಇಲ್ಲ. ನಮಗೇ ಭಯವಾಗುವಂತಹ ಈ ಬೆಂಗಳೂರಿನ ರಸ್ತೆಗಳನ್ನು ನಾಯಿ,ದನ ಕರುಗಳು ದಾಟುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ಈ ಕಾಂಕ್ರೀಟ್ ನೆಲದಲ್ಲಿ ಸಿಕ್ಕ ಪುಟ್ಟ ಸ್ಥಳದಲ್ಲಿ ಚಿಗುರಿದ ಬೇವಿನ ಗಿಡ ನೋಡಿ-

Submitted by RAMAMOHANA Fri, 10/12/2012 - 15:39

ಇರುವೇನೂ ಸರಿ, ಇರುವೆ ಗೂಡೂ ಕಾಣಿಸ್ತಿದೆ ಸರಿ, ಆದ್ರೆ ಅದ್ರೊಳಗೆ ನಿಮ್ಮ ಟೆನಿಸ್ ಕೋರ್ಟ್ ಎಲ್ಲಿ ಕಾಣಿಸ್ತಿಲ್ವಲ್ಲ.? ಅದೂ ಕ0ಡ್ರೆ ಆಗ‌ ನಾನು ಡಿಸೈಡ್ ಮಾಡ್ಬಹ್ದು, ನಾನು ಇರ್ವೆ ಕಡೆಗಾ ಅಥವ‌ ಗಣೇಶ್ ಜಿ ಕಡೆಗಾ ಅ0ಥ‌.
ಯಾರು ಒತ್ತುವರಿ ಮಾಡಿದ್ದಾರೆ ಅ0ಥ‌ ನಿರ್ಧರಿಸುವುದು, ನೀವು ಕೊಟ್ಟಿರುವ‌ ಚಿತ್ರದಿ0ದ‌ ಸಾಧ್ಯವಿಲ್ಲ. ಆದ್ದರಿ0ದ‌, ನಿಮ್ಮ ಮನೆ ಏರಿಯಾ, ರಸ್ತೆ ನ0ಬರ್, ಮತ್ತು ನಿಮ್ಮ ಅಕ್ಕ ಪಕ್ಕದ‌ ಮನೆಗಳ‌ ಫೋಟೊ ಹ್ಜಾ..... ಹಾಗೆ ಆ ಟೆನಿಸ್ ಕೋರ್ಟ್ ಫೋಟೊ ಕೂಡ‌.. ಮರೆಯ‌ ಬೇಡಿ.
ಇ0ತಿ... ಯಾರವ‌........??
ರಾಮೋ.

Submitted by ಗಣೇಶ Sat, 10/13/2012 - 00:21

In reply to by RAMAMOHANA

ನಿಜಕ್ಕೂ.. ನಾವಾಡುವ ಕೋರ್ಟ್ನ ಚಿತ್ರ ತೆಗೆಯಲು ಹೊರಟಿದ್ದೆ. ಕ್ಲಿಕ್ ಮಾಡುವ ಸಮಯಕ್ಕೆ ಕಾಲಿಗೆ ನಿಮ್ಮೆಲ್ಲರ ಪ್ರೀತಿಯ ಇರುವೆಗಳು ಕಚ್ಚಿದರಿಂದ...ಮೊಬೈಲ್ ಆಕಾಶದ ಕಡೆ......... ಈ ಹಕ್ಕಿ ನಮ್ಮ ಆಟ ನೋಡಲು ದಿನವೂ ಬರುವುದು!

Submitted by partha1059 Fri, 10/12/2012 - 15:59

>> "ದೀಪಿಕಾ ಪಡುಕೋಣ್‌ಳ ಅಪ್ಪ ..... ಅ0ದದ್ದು ಸ‌.ಗಿ.ಯವರ‌

ಇಲ್ಲ ಇಲ್ಲ ಅವರೇನಿದ್ದರು ತಮನ್ನಾ .... ಪ್ಯಾನ್...

Submitted by venkatb83 Fri, 10/12/2012 - 18:40

In reply to by partha1059

ದೀಪಿಕಾ ನಮ್ಮೋರು.....ಛೆ ಛೆ...! ನಾ ಹೇಳಿದ್ದು ಕನ್ನಡದವರು ಅಂತ ಮಾರಾಯ್ರೇ..!!
ಆ ತಮನ್ನಾ ಉತ್ತರದವರು.. ಆದರೂ...!! ಅವರೂ ನಮ್ಮೋರೆ....!!
ನಮ್ ದೇಶದೋರೆ...!!

ನನ್ನಿ

\|

Submitted by H A Patil Fri, 10/12/2012 - 17:31

ಗಣೇಶ ರವರಿಗೆ ವಂಧನೆಗಳು
' ಎಲ್ಲಿಯ ವರೆಗೆ ಹೋರಾಟ ' ಒಂದು ಮುದ ಕೊಡುವ ಬರವಣಿಗೆ. ನಿಜ ಹೇಳಲೆ ಇರುವೆಗಳು ನಿಮ್ಮ ಮೇಲೆ ದಾಳಿ ನಡೆಸಿದ ರೀತಿ ನನಗೆ ಖುಷಿ ನೀಡಿತು, ಅವುಗಳ ಕೆಚ್ಚಿನ ಹೋರಾಟ ಇಂದಿನ ವರೆಗೂ ಅವು ಈ ಭೂಮಿಯ ಮೇಲೆ ಉಳಿದು ಕೊಂಡು ಬಂದದ್ಚದಕ್ಕೆ ಸಾಕ್ಷಿ. ಅವುಗಳ ಕರ್ತವ್ಯ ಪ್ರಜ್ಞೆ ನಮ್ಮೆಲ್ಲರಿಗೆ ಮಾದರಿ, ಧನ್ಯವಾದಗಳು..

Submitted by ಗಣೇಶ Sat, 10/13/2012 - 00:27

In reply to by H A Patil

ಪಾಟೀಲರೆ,
ತಂದೆ-ಮಕ್ಕಳು, ಅಣ್ಣ-ತಮ್ಮ, ಗಂಡ-ಹೆಂಡತಿ ಹೊಂದಿಕೊಂಡು ಬಾಳಲಾಗದ ಈ ಕಾಲದಲ್ಲಿ ಈ ಪರಿ ಒಗ್ಗಟ್ಟಿನಲ್ಲಿ ಬಾಳುತ್ತಿರುವ ಇರುವೆಗಳು ಓಡಾಡುವುದನ್ನು ನೋಡುವುದೇ ಖುಷಿ.
ಧನ್ಯವಾದಗಳು.
ಗಣೇಶ.

Submitted by saraswathichandrasmo Sun, 10/14/2012 - 07:20

ಇರುವೆ ಮಹರಾಣಿ ಕೀ ಜಯ್ ಹೊ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು. ಆನೆ ಇರುವೆ ಕತೆ ನೆನಪಾಯಿತು. ಹಾಸ್ಯ‌ ನವಿರಾಗಿ ಮೂಡಿ ಬಂದಿದೆ.

Submitted by saraswathichandrasmo Sun, 10/14/2012 - 07:24

ಇರುವೆ ಮಹರಾಣಿ ಕೀ ಜಯ್ ಹೊ. ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು. ಆನೆ ಇರುವೆ ಕತೆ ನೆನಪಾಯಿತು. ಹಾಸ್ಯ‌ ನವಿರಾಗಿ ಮೂಡಿ ಬಂದಿದೆ.

Submitted by ಗಣೇಶ Sun, 10/14/2012 - 23:59

In reply to by saraswathichandrasmo

ಧನ್ಯವಾದಗಳು ತಮಗೆ. ಆದರೆ ಮೇಡಂ.. ನನ್ನ ಸಂಪದ ಮಿತ್ರರು ನನ್ನ "ಗಾತ್ರ"ದ ಬಗ್ಗೆ "ನವಿರಾಗಿ ಹಾಸ್ಯ" ಮಾಡಲು ಕಾಯುತ್ತಿರುತ್ತಾರೆ.:) ಗಜಗಾತ್ರದಗಣೇಶ ಅಂತಾರೆ ಮೇಡಂ. ನೋಡಿ-ಪಾರ್ಥರ ಪ್ರತಿಕ್ರಿಯೆ:)