ಪ್ಯಾರೀ ಪಿಜ್ಜಾ..

ಪ್ಯಾರೀ ಪಿಜ್ಜಾ..

ಬೆಳಗ್ಗಿನ ಉಪಹಾರಕ್ಕೆ ಮಾಡಿದ "ಸೆಟ್ ದೋಸೆ"ಯ ಹಿಟ್ಟು ಉಳಿದಿದ್ದರೆ ಸಂಜೆಗೆ "ದೋಸೆ ಪಿಜ್ಜಾ" ಮಾಡುವುದು ಹೇಗೆ ಎಂದು ಹೇಳುವೆ. ಪಿಜ್ಜಾ ಬೇಸ್, ಓವನ್ ಏನೂ ಬೇಕಾಗಿಲ್ಲ!

ಮಾಡುವ ವಿಧಾನ :

ಮೊದಲಿಗೆ ಉಳಿದ ಸೆಟ್ ದೋಸೆ ಹಿಟ್ಟಿಗೆ, ಸ್ವಲ್ಪ ಚಿರೋಟಿ ರವೆ, ಸ್ವಲ್ಪ ಮೈದಾಹಿಟ್ಟು, ಚಿಟಿಕೆ ಉಪ್ಪು ಸೇರಿಸಿ ಇಡಿ.

ಇನ್ನೊಂದು ಕಡೆ ಕ್ಯಾಪ್ಸಿಕಮ್ ಮತ್ತು ಈರುಳ್ಳಿ ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ.

ಟೊಮೆಟೊ ಸಾಸ್‌ಗೆ ಸ್ವಲ್ಪ ಕಾಳುಮೆಣಸು ಪುಡಿ ಮಾಡಿ ಹಾಕಿ, ಸ್ವಲ್ಪ ನೀರು ಬೆರೆಸಿ ಕಲಸಿ ಇಟ್ಟುಕೊಳ್ಳಿ.

ಈಗ ಕಲಸಿಟ್ಟ ಹಿಟ್ಟನ್ನು ಕಾವಲಿಗೆ ದಪ್ಪಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ.

ಅರ್ಧ ಬೆಂದ ಮೇಲೆ, ಅದರ ಮೇಲೆ ಸಾಸ್ ಮಿಶ್ರಣವನ್ನು ಹರಡಿ.

ಅದರ ಮೇಲೆ ಮೊದಲೇ ಕತ್ತರಿಸಿ ಇಟ್ಟಿರುವ ಈರುಳ್ಳಿ, ಕ್ಯಾಪ್ಸಿಕಮ್‌ನ್ನು ಹರಡಿ ಹಾಕಿ.

ಅದರ ಮೇಲೆ ಚೀಸನ್ನು ತುರಿದು ಹಾಕಿ(ಸ್ಲೈಸ್ ಆಗಿದ್ದರೆ ಹಾಗೇ ಹರಡಿ).

ಕಾವಲಿಗೆ ಮುಚ್ಚಿ, ಸಣ್ಣ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಿಸಿ.

ಚೀಸ್ ಕರಗಿದ ಮೇಲೆ ತೆಗೆದು ಕಟ್ ಮಾಡಿ ಸರ್ವ್ ಮಾಡಿ.

    

ಸೂಪರ್ ಆಗಿರುವುದು. ಮಕ್ಕಳು ಇದನ್ನು ತಿಂದರೆ, ಪಿಜ್ಜಾ ಹಟ್/ದರ್ಶಿನಿ/ಚಾಟ್ ಕಾರ್ನರ್ ಕಡೆ ತಿರುಗಿಯೂ ನೋಡುವುದಿಲ್ಲ..ಬೆಟ್!

(ಈ ದಿನ ನನ್ನ ಹೆಂಡತಿಯ ಬರ್ತ್ ಡೇಗೆ ಸ್ಪೆಷಲ್ ಆಗಿ ಮಾಡಿದ್ದು.. )

ಹಾಗೇ ಒಂದು ಪಿಜ್ಜಾ ಹಾಡು ಸಹ ಕೇಳಿ-

 

http://www.youtube.com/watch?v=Se9lySMlfRw

ಗಣೇಶ.

 

Rating
No votes yet

Comments

Submitted by saraswathichandrasmo Sun, 10/14/2012 - 07:58

ನಿಮ್ಮ ಶ್ರೀಮತಿಯವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ. ಹುಟ್ಟಿದ‌ ಹಬ್ಬಕ್ಕೆ ಮಾತ್ರನ‌ ನಳಪಾಕ‌.? ಬೇರೆ ದಿನಗಳು ಹೊಸರುಚಿ ಪ್ರಯೋಗ‌ ನಡೆಯುತ್ತಾ ಇರುತ್ತ‌ ಹೇಗೆ. ನನಗೆ ಹಾಗು ಯಜಮಾನರಿಗೆ ಪಿಜ್ಜಾ ಸೇರೊಲ್ಲ‌. ಮಗಳಿಗೆ ಮಾಡಿ ಕೊಡೋಣ‌ ಎನ್ನಲಿಕ್ಕೆ ಅವಳೇ ಚೆನ್ನಾಗಿ ಮಾಡುತ್ತಾಳೆ.ನೋಡಲಿಕ್ಕೆ ಪಿಜ್ಜಾ ಚೆನ್ನಾಗಿತ್ತು. ರುಚಿ ಹೇಗಿತ್ತು ಅನ್ನುವುದನ್ನು ನಿಮ್ಮ‌ ಶ್ರೀಮತಿಯವರೇ ಹೇಳಬೇಕು.

Submitted by ಗಣೇಶ Mon, 10/15/2012 - 00:13

In reply to by saraswathichandrasmo

>>>ರುಚಿ ಹೇಗಿತ್ತು ಅನ್ನುವುದನ್ನು ನಿಮ್ಮ‌ ಶ್ರೀಮತಿಯವರೇ ಹೇಳಬೇಕು.
-ಈ ತಿಂಗಳ ೯ನೇ ತಾರೀಕು, ಪುನಃ ನನ್ನ ಬರ್ತ್ಡೇ ಮಾಡೋಣವಾ ಅಂತ ಕೇಳುತ್ತಿದ್ದಳು! ಧನ್ಯವಾದಗಳು.
-ಗಣೇಶ.