ನನ್ನವಳು ಮತ್ತು ಅವಳ ನೆನಪು
ನನ್ನವಳು ಮತ್ತು ಅವಳ ನೆನಪು
ಕೊಪ್ಪಳದಲ್ಲಿ ಸಂಸಾರ ಹೂಡಿ ಸರಿ ಸುಮಾರು ಈಗ 7/8 ವರ್ಷಗಳೇ ಆಯಿತು.ಕಾವ್ಯಾಳೊಂದಿಗೆ ಮದುವೆಯಾದ ತಕ್ಷಣ ಕೊಪ್ಪಳದ ನಮ್ಮಣ್ಣನ ಮೇಲಿನ ಮನೆಯಲ್ಲಿ ಸಂಸಾರ ಶುರುಮಾಡಿದ್ದೆವು.
ಮದುವೆಗೂ ಮೊದಲು ಸುಮಾರು ನಾಲ್ಕು ವರ್ಷ ನಮ್ಮಣ್ಣನ ಮನೆಯಲ್ಲಿ ನಾನು ಇದ್ದದ್ದು. ನನ್ನ ಮನೆಯಲ್ಲಿ ಇರೋದಕ್ಕೂ ನಮ್ಮಣ್ಣನ ಮನೆಯಲ್ಲಿರೋದಕ್ಕೂ ಯಾವುದೇ ವ್ಯತ್ಯಾಸವಿರಲಿಲ್ಲ. ಅಷ್ಟೊಂದು ಸ್ವಾತಂತ್ರ ನನಗೆ ಅವರ ಮನೆಯಲ್ಲಿತ್ತು. ನನ್ನ ಮದುವೆ ಫಿಕ್ಸ್ ಆಗೋದಕ್ಕೂ ನಮ್ಮಣ್ಣಗೆ ರಾಯಚೂರಿಗೆ ವರ್ಗ ಆಗೋದಕ್ಕೂ ಕಾಕತಾಳೀಯವಾಗಿತ್ತು. ಅದಕ್ಕೆ ನಮ್ಮಣ್ಣ ಅವನ ಸ್ವಂತ ಮನೆಯ ಮೇಲಿನ ಹೊಸ ಮನೆಯನ್ನು ನನಗೆ ಬಿಟ್ಟಿದ್ದಾನೆ 7/8 ವರ್ಷದಿಂದಲೂ ಇದೇ ಮನೆಯಲ್ಲಿ ಈಗ ನನ್ನ ಮತ್ತು ನನ್ನವಳ ವಾಸ.
" ಕಾವ್ಯ " ಇದು ನಾವು ಮದುವೆಯಾದ ಮೇಲೆ ಅತ್ತೆ ಮನೆಯಲ್ಲಿ ಇಟ್ಟ ಹೆಸರು. ನನ್ನ ಬಾಳ ಸಂಗಾತಿಯಾಗಿ ಕೇವಲ ಕಥೆಯೊಂದಿಗೆ ಕೂಡಿದ್ದ ನನ್ನ ಬಾಳಿಗೆ ಕಾವ್ಯವಾಗಿ ಬಂದವಳು. ಮದುವೆಯ ಹೊಸದರಲ್ಲಿ ಅವಳಿನ್ನು ಚಿಕ್ಕವಳು ಅವಳ ವಯಸ್ಸಿಗೆ ತಕ್ಕಷ್ಟೇ ಬುದ್ದಿ ಆದರೂ ಅಡುಗೆ ಮಾಡಿ ಸಮಯಕ್ಕೆ ಸರಿಯಾಗಿ ನನಗೆಲ್ಲ ಒದಗಿಸುವ ಜಾಣೆ. ಎಲ್ಲಾ ಸರಿಯಾಗಿ ಮಾಡಿದಳು ಎನ್ನುವುದರಲ್ಲಿ ಚಿಕ್ಕ ಪುಟ್ಟವು ಏನಾದರೂ ಎಡವಟ್ಟು ಮಾಡಿರೋಳು. ಕೆಲವೊಮ್ಮೆ ನಾನೂ ಹೆಚ್ಚಾಗಿ ಸಿಟ್ಟಾಗಿದ್ದರೂ ನಂತರ ಇಬ್ಬರೂ ಒಪ್ಪಂದಕ್ಕೆ ಬಂದುಬಿಡುತ್ತಿದ್ದೆವು. ಇದಂತೂ ಎಲ್ಲರ ಮನೆಯ ಸಂಸಾರದಲ್ಲೂ ಸರ್ವೇಸಾಮಾನ್ಯ.
ಆದರೆ ನನ್ನವಳ ಬಳಿ ಇದ್ದ ವಿಷೇಶ ಗುಣ ಎಂದರೆ ಅವಳ ನೆನಪು. ಕೆಲವೊಮ್ಮೆ ಎಲ್ಲ ತುಂಬಾ ಚೆನ್ನಾಗಿ ಮಾಡ್ತಿದ್ಲು,ಕೆಲವೊಮ್ಮೆ ತುಂಬಾ ಮುಖ್ಯವಾದದ್ದು ಮರೆತು ಬಿಡುತ್ತಿದ್ದಳು. ಅವಳ ಈ ಸ್ವಭಾವ ನಿಜ ಹೇಳಬೇಕು ಅಂದರೆ,ತುಂಬಾ ಚುಡಾಯಿಸುವ ಸ್ವಭಾವ ಇರುವ ನನಗೆ ತುಂಬಾನೆ ಇಷ್ಟ. ಯಾಕಂದರೆ ಅವಳನ್ನು ಕಾಡಲು ನನಗೆ ಅವಳು ತಾನಾಗಿಯೇ ಅವಕಾಶಗಳನ್ನು ಕೊಡುವಳು. ಹೀಗಿರುವಾಗ,ನಾನು ಅವಳಿಗೆ ಒಂದು ದಿನ ಕರೆದು ಹೀಗೆಂದೆ.
ನಾನು : ಕಾವ್ಯ ನಾನು ಒಂದು ಸಣ್ಣ ಕಥೆ ಬರೆಯಬೇಕು ಅಂತ ಮಾಡಿದ್ದೀನಿ,ನಿನ್ನ ಮೇಲೆ,ನೀನು ಊರಿಗೆ ಹೋದಾಗ ನನಗೆ ಟೈಂ ಪಾಸ್ ಆಗ್ಬೇಕಲ್ಲಾ?
ಕಾವ್ಯ ; ಹೌದಾ, ನನ್ನ ಮೇಲೆನಾ? ಏನಂತ ?
ನಾನು : ಹೀಗೆ ಏನಾದರೂ . ಆದ್ರೆ ಅದಕ್ಕೆ ಟ್ಯೆಟಲ್ ಕೊಟ್ಟಿದ್ದೀನಿ ಆಗಲೆ.
ಕಾವ್ಯ : ಏನದು?
ನಾನು : "ನನ್ನವಳು ಮತ್ತು ಅವಳ ನೆನಪು".
ಆ ಟ್ಯೆಟಲ್ ಕೇಳಿದಾಕ್ಷಣ,ಊರಿಗೆ ಹೋದಾಗ ಟ್ಯೆಂ ಪಾಸ್ ಗೆ ಅಂತಬೇರೆ ಹೇಳಿದ್ನಲ್ಲ,ಅವಳ ಖುಷಿಗೆ ಪಾರವೇ ಇಲ್ಲ. ಆದರೂ ಹುಸಿಮುನಿಸಿನಿಂದ, ದೊಡ್ಡ ಸುಂದರ ಕಣ್ಣುಳ್ಳ ಅವಳು ಅರಳಿಸುತ್ತ ಹೂಂ ಬರೀರಿ ಅಂತ ಅಷ್ಟೇ ಹೇಳಿದಳು. ಆದರೆ ಅವಳ ಮನದಲ್ಲಿಯ ಸಂತಸ ಅವಳು ಏನರ್ಥ ಮಾಡಿಕೊಂಡಿರುವಳು ಎಂದು ನಾನೇನೋ ಊಹಿಸಿದೆನು. "ನಾನಿಲ್ಲದಾಗ ಅವರನ್ನು ಕಾಡುವ ನನ್ನ ನೆನಪು,ಒಂದು ಕಲ್ಪನೆ, ಅಂತ ನನಗೆ ಗೊತ್ತಿದ್ದರೂ ಯಾಕೋ ಅಷ್ಟೊಂದು ಖುಷಿ ನನಗೆ" ಅಂತ ಅವಳ ಮನಸ್ಸು ಸಾರಿ ಸಾರಿ ಹೇಳುತ್ತಿದ್ದದ್ದು ಅವಳ ಕಣ್ಣಿನಿಂದಲೇ ಅರ್ಥವಾಯಿತು.
ಇದಾದ 2 ದಿನದ ನಂತರ,ಒಂದು ದಿನ ಬೆಳಿಗ್ಗೆ ಪ್ರತಿದಿನದಂತೆ ಅವಳು ಬೇಗ ಸ್ನಾನ ಮುಗಿಸಿ ಶ್ರೀ ರಾಘವೇಂದ್ರ ವಿಜಯ ಕಥೆಯನ್ನು ಓದ್ತಾ ಇದ್ದ ಅವಳು ಅದೇ ತಾನೆ ಎದ್ದು ಬಂದ ನನ್ನ ನೋಡಿ ರೀ ಗ್ಯಾಸ್ ಮೇಲೆ ಹಾಲು ಇಟ್ಟಿದ್ದೀನಿ ಬೇಗ ಉಕ್ಕಿಬಿಡ್ತದೆ ಸ್ವಲ್ಪ ಉರಿ ಕಡಿಮೆ ಮಾಡ್ರಿ ಎಂದಳು. ಕಣ್ಣೊರೆಸಿಕೊಳ್ಳುತ್ತಾ ಅಡಿಗೆ ಮನೆ ಕಡೆಗೆ ಹೆಜ್ಜೆ ಹಾಕಿದ ನಾನು ದಂಗಾದೆ,ಇನ್ನೊಮ್ಮೆ ಕಣ್ಣು ಚೆನ್ನಾಗಿ ಒರೆಸಿಕೊಂಡೆ ನಂತರ ಕೂಗಿದೆ.
ನಾನು : ಕಾವ್ಯ ಹಾಲಿಟ್ಟಿಯಾ ? ಸ್ಟೌ ಸಣ್ಣ ಮಾಡಬೇಕಾ ? ಈ ಜನ್ಮ ಕಳೆದರೂ ಹಾಲು ಉಕ್ಕಲ್ಲ ಬಿಡು...
ಕಾವ್ಯ : ಯಾಕ್ರೀ ಏನಾಯ್ತು !?
ನಾನು : ಒಂದ್ಸಲ ಒಳಗೆ ಬಂದು ನೋಡು...
ಒಳಗೆ ಓಡಿ ಬಂದ ಕಾವ್ಯ ಅಯ್ಯಯ್ಯೋ ಸ್ಟೌ ಹತ್ತಿಸಿಯೇ ಇಲ್ಲನಾ.......... ಅಂತ ರಾಗ ತೆಗೆದಳು,ನಂತರ ಸ್ಟೌ ಹಚ್ಚಿ ಸಣ್ಣಗೆ ಮಾಡಿ ಅವಳ ಹತ್ತಿರಕ್ಕೆ ಬಂದು ,
ನಾನು : ಕಾವ್ಯ ಈಗ ಅರ್ಥ ಆಯ್ತ ?
"ನನ್ನವಳು ಮತ್ತು ಅವಳ ನೆನಪು"
ಎಂದಾಗ ಮತ್ತೆ ಹುಸಿಕೋಪದಿಂದ ನನ್ನವಳು ನನ್ನಬಳಿ ಸುಳಿದಾಗ ಅವಳನ್ನು ಚುಡಾಯಿಸಿ ಅವಳಿಗೆ ಸೋತು ಹೋಗಿದ್ದೆ,
ನನ್ನಿಂದ ಕೀಟಲೆ ಸಹಿಸಿ ಸೋತಿದ್ದ ನನ್ನವಳು ನನ್ನ ಮನಸ್ಸನ್ನೇ ಗೆದ್ದು ಬಿಟ್ಟಿದ್ದಳು.
---------- ---------- ----------
Comments
ಆತ್ಮೀಯ ಸಂಪದಿಗರಿಗೆ ಆದರಣೀಯ
In reply to ಆತ್ಮೀಯ ಸಂಪದಿಗರಿಗೆ ಆದರಣೀಯ by mvprahlad
ಹ್ಹ ಹ್ಹ..ಪ್ರಹ್ಲಾದರೆ,
In reply to ಹ್ಹ ಹ್ಹ..ಪ್ರಹ್ಲಾದರೆ, by ಗಣೇಶ
ಧನ್ಯವಾದಗಳು ಗಣೇಶ ಸಾರ್, ನನ್ನ
ಸರಿ ಸರಿ ಆಮೇಲೆ ನಿಮ್ಮವರ ಜೊತೆ
In reply to ಸರಿ ಸರಿ ಆಮೇಲೆ ನಿಮ್ಮವರ ಜೊತೆ by partha1059
ಪಾರ್ಥ ಸಾರ್ , ಮೊದಲಿಗೆ ನಿಮ್ಮ
ಎಂವಿಪ್ರಲ್ಹಾದರೇ, ಲಕ್ಷ್ಮೀಕಾಂತ
In reply to ಎಂವಿಪ್ರಲ್ಹಾದರೇ, ಲಕ್ಷ್ಮೀಕಾಂತ by lpitnal@gmail.com
ತುಂಬಾ ಧನ್ಯವಾದಗಳು ಲಕ್ಷೀಕಾಂತ
ಪ್ರಲ್ಹಾದ ವ್ಹಾ: ನಿಮ್ಮ ಬರವಣಿಗೆ
In reply to ಪ್ರಲ್ಹಾದ ವ್ಹಾ: ನಿಮ್ಮ ಬರವಣಿಗೆ by kishanrao
ನಮಸ್ಕಾರ ಕಿಷನ್ ರಾವ್ ಸಾರ್ ,
ಬಾಳ ಸಂಗಾತಿಯನ್ನು, ಗೆಳೆಯ
In reply to ಬಾಳ ಸಂಗಾತಿಯನ್ನು, ಗೆಳೆಯ by suma kulkarni
ಸುಮಾ ಅವರೇ ನಮಸ್ಕಾರಗಳು ,