ಕಣ್ಣಿನಲ್ಲಿ ನೋಡಿ ; ಮತ್ತೆ ಕಣ್ಣಿನಲ್ಲಿ ನೋಡಿ !
ದಾಸರ ಮಾತಿನಲ್ಲೇ ಹೇಳುವುದಾದರೆ 'ಕಣ್ಣಿನಲ್ಲಿ ನೋಡಿ; ಮತ್ತೆ ಕಣ್ಣಿನಲ್ಲಿ ನೋಡಿ' ಈಗ ಹೆಚ್ಚಿಗೆ ಹೇಳಿದರೆ ಕೇಳುವವರ ಸಂಖ್ಯೆ ಇಲ್ಲವೇ ಇಲ್ಲ. ನನ್ನ ಮಗನಿಗೆ ರಾಮಾಯಣದ ಯಾವುದೋ ಪ್ರಸಂಗ ಹೇಳಿ ಅಂತ ಕೇಳಿದ ಅಂತ, ನಾನು ಮುದದಿಂದ ಅವನಕಡೆ ನೋಡಿದಾಗ, 'ಸರಿ ; ಅಪ್ಪ ಏನ್ ಹೇಳ್ತಿರೋ ಅದನ್ನ ಬ್ರೀಫ್ ಆಗಿ ಹೇಳಿ', ಅಂದಾಗ ನನಗೆ 'ಮುಖದ ಮೇಲೆ ತಣ್ಣೀರ್ ಎರಚಿದಂತಾಯಿತು' ! ಇದು ನಮ್ಮಂತಹ ವಯೋಮಿತಿಯ ಜನರಿಗೆ ಆಗುವ 'ವಿರೋದಾಭಾಸ' ! ನಮ್ಮನ್ನು ಮೂದಲಿಸುವುದು ಕಿರಿಯರ ಮನದಿಂಗಿತವಲ್ಲ ! ಅವರಿಗೆ ಎಲ್ಲವೂ 'ಚಿಟಿಕೆ ಹೊಡೆದಂತೆ ತಕ್ಷಣ ಆಗಬೇಕು ಎನ್ನುವ ಆತುರ' ! ಹಾಗಾಗಿ ಅತಿ ಹೆಚ್ಚು ಎಳೆದುಕೊಂಡು ಹೋಗದೇ ಅತಿ ಚಿಕ್ಕದಾಗಿ ನನ್ನ ಚಿತ್ರಗಳೇ ಹೇಳುವ 'ಮೌನವಾಣಿ' ಯನ್ನು ನೋಡಿ ಮತ್ತು ಕೇಳಿ !
ಇತ್ತೀಚಿನ ಹಚ್ಚ ಹೊಸ ಮಾಲ್ 'ಫಿನಿಕ್ಸ್'
ಫಿನಿಕ್ಸ್ ಮಾಲ್ ಒಳಗಿನ 'ಪಿಜಾ ಶಾಪ್'
'ನೆಹರೂ ಸೈನ್ಸ್ ಸೆಂಟರ್'-ಇಲ್ಲಿ ಅಮಿತಾಬ್ ಬಚ್ಚನ್ ರವರ ಪ್ರೀತಿಯ ಪತ್ನಿ, ಜಯಾ ಬಚ್ಚನ್ ಆಯೋಜಿಸಿದ 'ಅಮಿತಾಬ್ ರ, ಬಾಲಿವುಡ್ ವಲಯದ ಮೈತ್ರಿ'
'ಮುಂಬೈನ ನಾರಿಮನ್ ಪಾಯಿಂಟ್' ಈಗ ; ಹೌದಲ್ಲಾ.. ಚೊಕ್ಕಟವಾಗಿದೆ ಮತ್ತು ಕೆಟ್ಟಾವಾಸನೆ ಸ್ವಲ್ಪವೂ ಇಲ್ಲ !
Comments
ಮತ್ತೆ ಮತ್ತೆ ನೋಡಿದರೂ......
ಚಿತ್ರಗಳು ಕಾಣಿಸುತ್ತಿಲ್ಲ ವೆಂಕಟೇಶರೆ. ಆದರೆ >>>> 'ಸರಿ ; ಅಪ್ಪ ಏನ್ ಹೇಳ್ತಿರೋ ಅದನ್ನ ಬ್ರೀಫ್ ಆಗಿ ಹೇಳಿ', ಅಂದಾಗ ನನಗೆ 'ಮುಖದ ಮೇಲೆ ತಣ್ಣೀರ್ ಎರಚಿದಂತಾಯಿತು' ! ಇದು ನಮ್ಮಂತಹ ವಯೋಮಿತಿಯ ಜನರಿಗೆ ಆಗುವ 'ವಿರೋದಾಭಾಸ' ! ನಮ್ಮನ್ನು ಮೂದಲಿಸುವುದು ಕಿರಿಯರ ಮನದಿಂಗಿತವಲ್ಲ ! ಅವರಿಗೆ ಎಲ್ಲವೂ 'ಚಿಟಿಕೆ ಹೊಡೆದಂತೆ ತಕ್ಷಣ ಆಗಬೇಕು ಎನ್ನುವ ಆತುರ' !
<<<ಇದಕ್ಕೆ ನನ್ನ +೧
ಗಣೇಶ.
In reply to ಮತ್ತೆ ಮತ್ತೆ ನೋಡಿದರೂ...... by ಗಣೇಶ
ಒಹ್ ಗಣೇಶ್
'ಸಬ ಕುಚ್ ಸಿಖಾ ಮೈನೆ ನ ಸೀಖಾ ಹೊಶಿಯಾರಿ ಎನ್ನುವ ತರಹ 'ಆಗಿದೆ. ಸಾರ್, ಅದೇಕೆ ಚಿತ್ರಗಳು ಕಾಣಿಸಲ್ಲ ಎನ್ನುವುದು ಇನ್ನೂ ನನ್ನ ಮಂದ ಮಾತಿಗೆ ಗೊತ್ತಾಗಿಲ್ಲ. ಮೇಲಾಗಿ ಇದನ್ನು ಸಂಪಾದಿಸೋಣ ಎಂದರೆ, ಆ ಬಟನ್ ಗಳೇ ಇಲ್ಲ. ಹೇಗೆ ಉತ್ತಮ ಪಡಿಸುವುದು ತಿಳಿಯುತ್ತಿಲ್ಲ. ನಾನು ಇದರ ಬಗ್ಗೆ ನಿರ್ವಾಹಕರ ಗಮನಕ್ಕೆ ತಂದೆ. ಆದರೆ ಅವರಿಗೆ ಪುರುಸೊತ್ತಿಲ್ಲ ಅನ್ನಿಸುತ್ತೆ !
ಸಾರಿ, ಅಂತ ಅನ್ನಬಹುದಷ್ಟೇ ಈಗ....