ಲಾಲಿಹಾಡು
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಲಾಲಿ ಜೋ ಜೋ ಲಾಲಿಯೇ...
ಜೋ ಜೋ ಜೋ ಲಾಲಿ
ಜೋ ಜೋ ಜೋ ಲಾಲಿ
ಲಾಲಿ ಜೋ ಜೋ ಲಾಲಿಯೇ...
ಜೋ ಜೋ ಪುಟ್ಟಮ್ಮ
ಜೋ ಮುದ್ದು ಕಂದಮ್ಮ
ಲಾಲಿಯ ನಾ ಹಾಡುವೆ|
ತಾರೆಗಳ ಲೋಕದಲಿ
ತಿಂಗಳಿನ ತೊಟ್ಟಿಲಲಿ
ಮಲಗಿಸಿ ನಾ ತೂಗುವೆ ||ಜೋ ಜೋ ||
ಚೆಲುವಿನ ಖನಿ ನೀನು
ನಗುವಿನ ಗಣಿ ನೀನು
ಮುದ್ದಿನ ಕಣ್ಮಣಿಯೇ|
ತಾಯಿಯ ಖುಷಿ ನೀನು
ತಂದೆಯ ಸಿರಿ ನೀನು
ಈ ಮನೆಯ ಸಂಭ್ರಮವೇ||ಜೋ ಜೋ ||
ಪಿಳಪಿಳನೆ ಬಡಿಬಡಿದು
ಕಣ್ರೆಪ್ಪೆ ಸುಸ್ತಾಯ್ತು
ಯಾಕಿನ್ನು ಚೆಲ್ಲಾಟವು?
ಘಲಘಲನೆ ದನಿಗೈದು
ಗೆಜ್ಜೆಗೂ ದಣಿವಾಯ್ತು
ಸಾಕಿನ್ನು ತುಂಟಾಟವು||ಜೋ ಜೋ ||
ನಿದಿರೆಯು ಬಳಿ ಬಂದು
ನಿನ್ನನ್ನಾವರಿಸುವಳು
ನಿದ್ರಿಸು ಬಂಗಾರಿಯೇ|
ಸ್ವಪ್ನಲೋಕದಿ ಈಗ
ನಿನ್ನದೇ ಆಳ್ವಿಕೆಯು
ಸುಖಿಸಿನ್ನು ಸಿಂಗಾರಿಯೇ||ಜೋ ಜೋ ||
Rating
Comments
zzzzzzzzz
ಇಂದುಶ್ರೀ ಅವರೆ,
ಲಾಲಿ ಹಾಡು ಚೆನ್ನಾಗಿದೆ.
-ಗಣೇಶ.
In reply to zzzzzzzzz by ಗಣೇಶ
ಚೆನ್ನಾಗಿದೆ.
ಚೆನ್ನಾಗಿದೆ.
In reply to ಚೆನ್ನಾಗಿದೆ. by Premashri
ಧನ್ಯವಾದಗಳು
ಗಣೇಶ್ ಮತ್ತು ಪ್ರೇಮಶ್ರೀ ಮೆಚ್ಚಿದ್ದಕ್ಕೆ ಧನ್ಯವಾದಗಳು :)