ಒಂದಿಷ್ಟು ಚುಟುಕುಗಳು
ಕವನ
ಪ್ರೇಮ ನಿವೇದನೆ
ಹೃದಯ ತೋಟದ
ತಾರೆ
ನಿನಗಿದೋ ಎನ್ನ
ಭಾವಧಾರೆ.
**** **** **** **** ****
ಕನಸು
ಹೃದಯಾಕಾಶದ
ಚುಕ್ಕಿ,
ದೇಹವೃಕ್ಷದಾಲಿಂಗನದಿ
ಪುಟ್ಟ ಹಕ್ಕಿ
**** **** **** **** ****
ಅದೃಷ್ಟ
ಆಕೆಯ ಕಣ್ಣೋಟ
ನನ್ನತ್ತ ಹರಿದಾಗಲೇ
ಸುಳಿದು ಮರೆಯಾಗುವ
ಕೋಲ್ಮಿಂಚು
**** **** **** **** ****
ಕರೆನ್ಸಿ
ಮಿಸ್ಡ್ ಕಾಲ್
ಗೆಳತಿಯು
ಕರೆ ಸ್ವೀಕರಿಸಿದಾಗಲೇ
ಮುಗಿದು ಹೋದ ಹಣ
**** **** **** **** ****
Comments
"ಹೃದಯಾಕಾಶದ
"ಹೃದಯಾಕಾಶದ
ಚುಕ್ಕಿ,
ದೇಹವೃಕ್ಷದಾಲಿಂಗನದಿ
ಪುಟ್ಟ ಹಕ್ಕಿ"
ಸಖತ್ ಮಾರಾಯ್ರೇ...!!
ಎಲ್ಲ ಸಾಲುಗಳು- ಮುದ ನೀಡಿದವು...
ಶುಭವಾಗಲಿ..
\|
In reply to "ಹೃದಯಾಕಾಶದ by venkatb83
ವೆಂಕಟೇಶ್ ರವರೆ,
ವೆಂಕಟೇಶ್ ರವರೆ,
ಧನ್ಯವಾದಗಳು, ತಮ್ಮ ಪ್ರೋತ್ಸಾಹ ಹೀಗೆ ನಿರಂತರವಾಗಿರಲಿ :)