ಅಯ್ಯೋ ನಿಮಗೆ ನಾಚಿಕೆಯಾಗದೆ
ಲೋಕಸಭೆ-ಪಾರ್ಲಿಮೆಂಟ್ ! ಪ್ರಪಂಚದಲ್ಲಿ ಅತಿ ದೊಡ್ಡ ಪ್ರಜಾಪಭುತ್ವದ ಶಕ್ತಿ ಕೇಂದ್ರ. ಅಲ್ಲಿರುವರು ಯಾರು ? ಅರವತ್ತಕ್ಕಿಂತ ಹೆಚ್ಚು ವರುಷಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ , ಅನುಭವ ಗಳಿಸಿರುವ ದೇಶದ ರಾಜಕೀಯ ನಾಯಕರು, ಮುತ್ಸದಿಗಳು. ಪ್ರತಿ ನಿಮಿಷಕ್ಕು ಲಕ್ಷ ಲಕ್ಷ ಹಣ ಖರ್ಚಾಗುವ ನಮ್ಮ ದುಭಾರಿ ವ್ಯವಸ್ಥೆ. ಅದರೇನು ಅಲ್ಲಿ ಕಾವೇರಿ ವಿವಾದದಂತ ಜ್ವಲಿಸುವ ಸಮಸ್ಯೆಗೆ ಪರಿಹಾರ ಸಿಗದು, ನಮ್ಮ ನಾಯಕರು ರಾಷ್ಟ್ರೀಯ ಜಲನೀತಿಯಂತ ವ್ಯವಸ್ಥೆ ರೂಪಿಸಲಾರರು. ಅವರ ಸುದೀರ್ಘ ಅನುಭವದಲ್ಲಿ ಅದು ಅಸಾದ್ಯ
ವಿಧಾನಸೌದ ವಿಕಾಸ ಸೌದ ಈಗ ಬೆಳಗಾವಿಯಲ್ಲಿ ಮತ್ತೊಂದು ಪ್ರಜಾಪ್ರಭುತ್ವ ಲಾಂಚನ. ಹಲವು ಲಕ್ಷ ಲಕ್ಷ ಕೋಟಿಗಳ ಸುಂದರ ವ್ಯವಸ್ಥೆ. ಅದರೇನು ಅಲ್ಲಿ ಕಾವೇರಿಯಂತ ಸಮಸ್ಯೆಯ ಬಗ್ಗೆ ಚರ್ಚಿಸಲು ಸಮಯವಿಲ್ಲ.
ಪ್ರಪಂಚದಲ್ಲಿ ಪ್ರಖ್ಯಾತ ನಮ್ಮ ಕಾನೂನು ವ್ಯವಸ್ಥೆ, ಹೈ ಕೋರ್ಟ್ ಸುಪ್ರೀಂಕೋರ್ಟ್ ಕಾನೂನನ್ನು ಅರೆದು ಕುಡಿದ ನ್ಯಾಯವಾದಿಗಳು. ಆದರೆ ನಮ್ಮ ಕಾವೇರಿ ನೀರಿನ ಸಮಸ್ಯೆಗೆ ಪರಿಹಾರವಿಲ್ಲ.
ರಸ್ತೆ ರಸ್ತೆಯಲ್ಲಿ ಕಾವೇರಿಗಾಗಿ ಹೋರಾಟಾ.... ರಕ್ತ ಕೊಟ್ಟೇವು ನೀರು ಬಿಡೆವು ಎಂಬ ಘೋಷಣೆ. ಎರಡು ರಾಜ್ಯದ ಜನರ ನಡುವೆ ದ್ವೇಷ ಹೋರಾಟ. ಕಾವೇರಿ ನ್ಯಾಯ ತೀರ್ಮಾನವಾಗಬೇಕಿರುವುದು ಪಾರ್ಲಿಮೆಂಟಿನಲ್ಲಿ ಅಲ್ಲ ವಿದಾನಸಬೆಗಳಲ್ಲಿ ಅಲ್ಲ ಕೋರ್ಟಿನಲ್ಲಿ ಅಲ್ಲ.
ನಿಜ ಕಾವೇರಿ ನ್ಯಾಯ ತೀರ್ಮಾನವಾಗಬೇಕಿರುವುದು ರಸ್ತೆಯಲ್ಲಿ !
ದೇಶದ ರಾಜಕಾರಣಿಗಳೆ ಅಯ್ಯೊ ನಿಮಗೆ ನಾಚಿಕೆಯಾಗದೆ
Rating
Comments
ಅಯ್ಯೋ ನಿಮಗೆ ನಾಚಿಕೆಯಾಗದೇ
ಪ್ರಿಯ ಗೆಳೆಯ ಪಾರ್ಥರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ವ್ಯವಸ್ಥೆಯ ಕುರಿತು ತಮ್ಮ ಸಾತ್ವಿಕ ಸಿಟ್ಟು ಅರ್ಥವಾಗುವಂಥದ್ದೇ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಆಡಳಿತಗಳ ವಿಫಲತೆಗಳು ಜನಜೀವನದ ಮೇಲೆ ಅಪಾರ ಪ್ರಭಾವ ಬೀರುತ್ತ, ಬದುಕನ್ನು ಇನ್ನಷ್ಟು ಅಸಹನೀಯವಾಗಿಸುತ್ತವೆ. ಧನ್ಯವಾದಗಳು.
In reply to ಅಯ್ಯೋ ನಿಮಗೆ ನಾಚಿಕೆಯಾಗದೇ by lpitnal@gmail.com
ಆತ್ಮೀಯ ಪಾರ್ಥರೆ,
ಆತ್ಮೀಯ ಪಾರ್ಥರೆ,
ನೀವು ಹೇಳಿದಂತೆ ನಾಚಿಕೆ ಖಂಡಿತ ಆಗಬೇಕು!!!!!!!! ಅವರಿಗಲ್ಲ ನಮಗೆ??? ಕಾವೇರಿ ಸಮಸ್ಯೆಯನ್ನು ಜೀವಂತ ಇಟ್ಟು, ಪ್ರತಿ ಚುನಾವಣೆಯಲ್ಲೂ ನಮ್ಮ ಕಿವಿಗೆ ಚಂಡು ಹೂವು ಮುಡುವುಸುವವರಿಗೆ ಮತ್ತೆ ಮತ್ತೆ ಓಟು ಹಾಕಿ ಜೈಕಾರ ಕೂಗುತ್ತ ಇರುವ ನಮಗೆ................ ಖಂಡಿತಾ ನಾಚಿಗೆ ಆಗಲೇಬೇಕು.
ರಾಜಕಾರಣಿ ಮತ್ತು ನಾಚಿಕೆ -
ರಾಜಕಾರಣಿ ಮತ್ತು ನಾಚಿಕೆ - ವಿರುದ್ಧ ಪದಗಳು!!
"ನಾಚಿಕೆ " ಯನ್ನು ಬಿಡುವುದೆ
"ನಾಚಿಕೆ " ಯನ್ನು ಬಿಡುವುದೆ ರಾಜಕೀಯಕ್ಕೆ ಪ್ರವೇಶಿಸಲು ಮೊದಲ " ಅರ್ಹತೆ " ಎಂಬಂತಾಗಿದೆ ಈಗ
.....ಸತೀಶ್
In reply to "ನಾಚಿಕೆ " ಯನ್ನು ಬಿಡುವುದೆ by sathishnasa
ಅಯ್ಯೊ ನಿಮಗೆ ನಾಚಿಕೆಯಾಗದೆ
ಇಟ್ನಾಳರೆ, ಕವಿನಾಗರಾಜರೆ, ಸತೀಶ ಹಾಗು ಪ್ರಕಾಶ ನರಸಿಮ್ಹಯ್ಯನವರೆ
ತಮ್ಮೆಲ್ಲರ ಪ್ರತಿಕ್ರಿಯೆ ವಮ್ದನೆಗಳು.
:(
:(
ನಾಚಿಕೆ ಪದದ ಅರ್ಥವೇ ಗೊತ್ತಿಲ್ಲ ಅವಕೆ!