ಆಂತರ್ಯ

ಆಂತರ್ಯ

ಕವನ

ಒಂದಿಷ್ಟು
ಭಾವನೆಗಳು
ಕನಸುಗಳು
ಆಗಾಗ
ನನ್ನೊಳಗೆ
ಜೊತೆ ಸೇರುತ್ತವೆ:
ಕೆಲವು
ಹಾಡಾಗುವ
ತವಕದಲಿ
ಹೊರಬಂದು
ಸಾಲುಗಳಾಗಿ
ಸೋತು ನಿಂತಿವೆ:
ಇನ್ನುಳಿದವುಕೆ
ಜಗದ
ಕುಹಕಕ್ಕೆ
ಅಂಜಿ
ನನ್ನೊಳಗೇ
ಗರ್ಭಪಾತವಾಗಿದೆ.......

Comments

Submitted by venkatb83 Tue, 10/16/2012 - 17:39

ಸೂಪರ್ ಮಾರಾಯ್ರೇ...
ಏನು ಅರ್ಥಪೂರ್ಣ ಸಾಲುಗಳು...!!

ಯಾಕೆ ಗರ್ಭಾಪಾತ -??
ಸಹಜ ಹೆರಿಗೆ ಆಗಲಿ-
ಸಿಸೆರಯನ್ ಸಹಾ ಬೇಡ...!
ಬರಲಿ ಸಂಪದದಂಗಳಕ್ಕೆ-
ಮೆಚ್ಚುಗೆ
ಹೊಗಳಿಕೆ
ತೆಗಳಿಕೆ
ಸಮನಾಗಿ ಸ್ವೀಕರಿಸಿ ಮಾಗಿ ಹಣ್ಣಾಗಿ..!!

ಶುಭವಾಗಲಿ..

\|/