ಶ್ರೀ ರಾಮ ಎನ್ನಾ ಪಾಲಿಸೋ ರಘುರಾಮ
ಕವನ
•ಶ್ರೀ ರಾಮ ಎನ್ನಾ ಪಾಲಿಸೋ ರಘುರಾಮ
•ಶ್ರೀ ರಾಮ ಎನ್ನಾ ಪಾಲಿಸೋ
•
•ಶ್ಯಾಮ ಸುಂದರ, ಧೀರ ಗಂಭೀರ
•ಕರುಣಸಾಗರ, ಭಕ್ತಜನಮಂದಾರ
•
•ದಶರಥತನಯ, ಜಾನಕಿಹೃದಯ
•ಅನುಜರಾಪ್ರಿಯ, ಹನುಮನೊಡೆಯ
•
•ಕೌಸಲ್ಯನಂದನ, ರಾಜೀವಲೋಚನ
•ತಾಟಕಿಮರ್ದನ, ಪತಿತಪಾವನ
•
•ಕೈಕೇಯಿ ಆಸೆ ತೀರಿಸೆ, ಪಿತೃ ವಾಕ್ಯ ಪಾಲಿಸೆ
•ಸಿಂಹಾಸನವ ತೊರೆದೆ, ವನವಾಸವ ಗೈದೆ
•
•ವಾಲಿ ಶಿಕ್ಷಕ, ಸುಗ್ರೀವ ರಕ್ಷಕ
•ವಾನರ ಪೋಷಕ, ಮುನಿಜನ ಪಾಲಕ
•
•ಸೀತೆಯ ಅಪಹರಿಸಿದ ರಾವಣನ ಕೊಂದೆ
•ಶರಣಾಗತನಾದ ವಿಭೀಷಣನ ಪೊರೆದೆ
•
•ಪಾವನನಾಮ ಪಟ್ಟಾಭಿರಾಮ
•ಕಾರುಣ್ಯಧಾಮ ಕೋದಂಡರಾಮ
•
•ಶ್ರೀ ರಾಮ ಜಯರಾಮ ಜಯ ಜಯ ರಾಮ
•ರಘುಪತಿ ರಾಘವ ರಾಜಾರಾಮ
•
ಶಾರಿಸುತೆ
ಚಿತ್ರ್
![](https://saaranga-aws.s3.ap-south-1.amazonaws.com/s3fs-public/rama%201_0.jpg)
Comments
ಶಾರಿಸುತೆ ರವರೆ,
ಶಾರಿಸುತೆ ರವರೆ,
ಚೆನ್ನಿದೆ ನಿಮ್ಮ ದೇವರ ಸ್ತುತಿ.
ಹಾಡಿದರೆ ಇನ್ನೂ ಚೆನ್ನಿರುತ್ತದೆ.
In reply to ಶಾರಿಸುತೆ ರವರೆ, by Maalu
ಧನ್ಯವಾದಗಳು ಮಾಲು ಅವರೆ.
ಧನ್ಯವಾದಗಳು ಮಾಲು ಅವರೆ. ಹಾಡಿದ್ದೇನೆ. ಆದರೆ ಇದರಲ್ಲಿ ಅಪ್ಲೋಡ್ ಮಾಡುವುದು ಹೇಗೆ ಎನ್ನುವುದು ನನಗೆ ಗೊತ್ತಿಲ್ಲ..
In reply to ಧನ್ಯವಾದಗಳು ಮಾಲು ಅವರೆ. by saraswathichandrasmo
ಸರಸ್ವತಿ ಚಂದ್ರ ಅವ್ರೆ-
ಸರಸ್ವತಿ ಚಂದ್ರ ಅವ್ರೆ-
ನೀವು ಹಾಡಿರುವ ಹಾಡನ್ನು ಯೂಟೂಬ್ ಗೆ ಸೇರಿಸಿ ಅಲ್ಲಿನ ಲಿಂಕ್ ಇಲ್ಲಿ ಸೇರಿಸಿ ನಾವ್ ಅದನ್ನು ಕ್ಲಿಕ್ ಮಾಡಿ ಕೇಳುವೆವು.
http://www.youtube.com/
ಅದಕಾಗಿ ನೀವು ಜೀ ಮೇಲು ಅಕೌಂಟು ಹೊಂದಿರಬೇಕು ಆಮೇಲೆ ಗೆ ಲಾಗ್ ಇನ್ ಆಗಿ(ನಿಮ್ ಜೀ ಮೇಲು ಅಯ್- ಡಿ ಪಾಸ್ವರ್ಡ್) ನಿಮ್ಮ ಹಾಡು ಸೇರಿಸಿ..
ಶುಭವಾಗಲಿ..
ನನ್ನಿ
\|
In reply to ಸರಸ್ವತಿ ಚಂದ್ರ ಅವ್ರೆ- by venkatb83
ನೀವು ಹೇಳಿದ ಹಾಗೆ ಹಾಡನ್ನು
ನೀವು ಹೇಳಿದ ಹಾಗೆ ಹಾಡನ್ನು ಯೂಟ್ಯೂಬ್ ಗೆ ಸೇರಿಸಿದ್ದೇನೆ. ಆದರೆ ಎಡಿಟ್ ಮಾಡಲಿಕ್ಕೆ ಬರುತ್ತ ಇಲ್ಲ. ಬದಲಾಯಿಸಿ ಎನ್ನುವ option
ಸಿಗುತ್ತ ಇಲ್ಲ..... ಏನು ಮಾಡಬೇಕು ಹೇಳುತ್ತೀರ.
http://youtu.be/XaBRz1j8_ME
ನೀವು ಕೊಟ್ಟ ಲಿಂಕ್ ಮೂಲಕ ಹಾಡು
ನೀವು ಕೊಟ್ಟ ಲಿಂಕ್ ಮೂಲಕ ಹಾಡು ಕೇಳಿದೆ ..
ಹಾಡು ಸೊಗಸಾಗಿದೆ..
ಆದ್ರೆ ವಾಲ್ಯೂಮ್ ಹೆಚ್ಚು ಮಾಡಿದರೂ ಸಣ್ಣಗೆನೆ ಕೇಳಿಸುತ್ತಿದೆ...
ಬಹುಶ ಇಯರ್ ಫೋನ್ ಹಾಕಿದರೆ ಸರಿಯಾಗಿ ಕೇಳಿಸಬಹುದೇನೋ...
ನೀವು ಇದನ್ನು (ನೀವೇಳಿದ್ದು ಬಹುಷ ಹಾಡು ಅನ್ಸುತೆ) ಎಡಿಟ್ ಮಾಡಲು ಇಲ್ಲಿ ಕ್ಲಿಕ್ಕಿಸಿ,,
http://www.music-editor.net/mef/tutorial-how_to_edit_music_and_add_audio_effects.html
http://audacity.sourceforge.net/
http://www.real.com.au/features/trim.html
http://www.audioeditorpro.com/
http://www.goldwave.com/
http://www.online-tech-tips.com/cool-websites/create-edit-or-remix-music-and-songs-online-for-free/
http://www.lavideofilmmaker.com/music-videos/shooting-music-video-tips.html
http://www.thevideogenius.com/how-to-edit-a-music-video/
http://www.real.com.au/features/trim.html
http://www.ehow.com/how_4471412_edit-music-video.html
ಶುಭವಾಗಲಿ..
ನನ್ನಿ
\|
In reply to ನೀವು ಕೊಟ್ಟ ಲಿಂಕ್ ಮೂಲಕ ಹಾಡು by venkatb83
ಧನ್ಯವಾದಗಳು ಹಾಡನ್ನು ಕೇಳಿ
ಧನ್ಯವಾದಗಳು ಹಾಡನ್ನು ಕೇಳಿ ಪ್ರತಿಕ್ರಿಯಿಸಿದ್ದಕ್ಕೆ. ಆದರೆ ನಾನು ಎಡಿಟ್ ಮಾಡಲು ಬಯಸಿದ್ದು ಹಾಡನಲ್ಲ.............................................. ಲಿಂಕನ್ನು ಹಾಡಿನ ಸಾಹಿತ್ಯದ ಕೆಳಗೆ ಸೇರಿಸಲು ಯೋಚಿಸಿದ್ದೆ. ಅಲ್ಲಿ ಬದಲಾಯಿಸಿ ಎನ್ನುವ option ಸಿಗಲಿಲ್ಲ.. .. ಅದ್ಹಕ್ಕೆ ಪ್ರತಿಕ್ರಿಯೆಯಲ್ಲಿ ಸೇರಿಸಿದ್ದೆ. ಜೊತೆಗೆ ಈಗಾಗಲೆ ಸೇರಿಸಿರುವ ಕವನಗಳನ್ನು ಡಿಲೀಟ್ ಮಾಡುವುದು ಹೇಗೆ ಎನ್ನುವುದು ತಿಳಿಸುತ್ತೀರ.
In reply to ಧನ್ಯವಾದಗಳು ಹಾಡನ್ನು ಕೇಳಿ by saraswathichandrasmo
ಯೂಟೂಬ್ ನನಗೂ ಹೊಸದೇ..!! ನಾ
ಯೂಟೂಬ್ ನನಗೂ ಹೊಸದೇ..!! ನಾ ಅಲ್ಲಿ ಬರಿ ಚಲನ ಚಿತ್ರಗಳನ್ನು ವೀಡಿಯೊ ಗಳನ್ನೂ ಮಾತ್ರ ನೋಡೋದು.. ಹೀಗಾಗಿ ನಿಮ್ಮ ಸಮಸ್ಯೆ ಬಗೆಹರಿಸಲು ನನಗೂ ಅಸಾಧ್ಯ.. ಅದ್ಕೆ.... ಯಾರಾದ್ರೂ ಗೊತ್ತಿರುವವರು ಹೆಲ್ಪ್ ಮಾಡಿಯಾರು.. ನೀವು ಗೂಗಲ್ ನಲ್ಲಿ ಸರ್ಚ್ ಮಾಡಿ.. ಏನಾದರೂ ಸಿಗಬಹ್ದು..!
ಶುಭವಾಗಲಿ..
\|
ಕವನ ಚೆನ್ನಾಗಿದೆ. ನಿಮ್ಮಸ್ವರವೂ
ಕವನ ಚೆನ್ನಾಗಿದೆ. ನಿಮ್ಮಸ್ವರವೂ ಚೆನ್ನಾಗಿದೆ. ಹಾಡು ಇಷ್ಟವಾಯಿತು.
>>>•ದಶರಥತನಯ, ಜಾನಕಿಹೃದಯ
•ಅನುಜರಾಪ್ರಿಯ, ಹನುಮನೊಡೆಯ
--ಇಲ್ಲಿ ಅನುಜರಾಪ್ರಿಯ- ಅನುಜರ ಪ್ರಿಯ ಆಗಬೇಕಲ್ವಾ..ಅಥವಾ ಅನುಜರಾssss ಪ್ರಿಯ?
-ಗಣೇಶ.
In reply to ಕವನ ಚೆನ್ನಾಗಿದೆ. ನಿಮ್ಮಸ್ವರವೂ by ಗಣೇಶ
ಧನ್ಯವಾದಗಳು. ನೀವು ಹೇಳಿದ್ದು ಸರಿ
ಧನ್ಯವಾದಗಳು. ನೀವು ಹೇಳಿದ್ದು ಸರಿ. ಆದರೆ ಅದನ್ನು ಸರಿಪಡಿಸುವ ಬಗೆ ಹೇಗೆ. ಮತ್ತು ಈಗಾಗಲೇ sampadadalli ಬರೆದಿರುವ ಕವನಗಳನ್ನು ಡಿಲೀಟ್ ಮಾಡುವುದು ಹೇಗೆ? ಮೊದಲೆಲ್ಲ ಸರಿಪಡಿಸಲು ಆಗುತಿತ್ತು.
ಸರಸ್ವತಿ,
ಸರಸ್ವತಿ,
ನಿಮ್ಮ ಕವನ ಮತ್ತು ಗಾಯನ ಚೆನ್ನಾಗಿ ಬಂದಿದೆ. ಅಭಿನಂದನೆಗಳು.
In reply to ಸರಸ್ವತಿ, by vinyasa
ಪ್ರೋತ್ಸಾಹಕ್ಕೆ ಧನ್ಯವಾದಗಳು.
ಪ್ರೋತ್ಸಾಹಕ್ಕೆ ಧನ್ಯವಾದಗಳು.
In reply to ಸರಸ್ವತಿ, by vinyasa
ಪ್ರೋತ್ಸಾಹಕ್ಕೆ ಧನ್ಯವಾದಗಳು.
ಪ್ರೋತ್ಸಾಹಕ್ಕೆ ಧನ್ಯವಾದಗಳು.
In reply to ಪ್ರೋತ್ಸಾಹಕ್ಕೆ ಧನ್ಯವಾದಗಳು. by saraswathichandrasmo
ಕವನ ಚೆನ್ನಾಗಿವೆ ಮತ್ತು ಗಾಯನ
ಕವನ ಚೆನ್ನಾಗಿವೆ ಮತ್ತು ಗಾಯನ ಇಂಪಾಗಿದೆ.
In reply to ಕವನ ಚೆನ್ನಾಗಿವೆ ಮತ್ತು ಗಾಯನ by Premashri
ಧನ್ಯವಾದಗಳು ಪ್ರೇಮಶ್ರಿ .
ಧನ್ಯವಾದಗಳು ಪ್ರೇಮಶ್ರಿ .