ಹಣದ ಮಹಿಮೆ - ಲಕ್ಷ್ಮೀಕಾಂತ ಇಟ್ನಾಳ

ಹಣದ ಮಹಿಮೆ - ಲಕ್ಷ್ಮೀಕಾಂತ ಇಟ್ನಾಳ

                                                      ಹಣದ ಮಹಿಮೆ
                                                                                                               - ಲಕ್ಷ್ಮೀಕಾಂತ ಇಟ್ನಾಳ
    ಒಂದೂರು. ಆ  ಊರಿನಲ್ಲಿ ಒಂದು ಸಣ್ಣ ಹಾಗೂ ಅಚ್ಚುಕಟ್ಟಾದ ವಸತಿಗೃಹವೊಂದನ್ನು ನಡೆಸಿಕೊಂಡು ಹೋಗುವ ಮಾಲೀಕನ ಕೌಂಟರ್ ಹತ್ತಿರ ಒಬ್ಬ ಪ್ರವಾಸಿ ಬಂದ. ರೂಮು ದೊರಕುವುದೇ ಎಂದು ಕೇಳಿದ. ಇದೆ ಎಂದು ಹೇಳಿದವನಿಗೆ ಒಂದು ರೂಮು ನೀಡಲು ತಿಳಿಸಿ ಜೇಬಿನಿಂದ ಐನೂರು ರೂಪಾಯಿ ನೀಡಿದ. ತನ್ನ ಹೆಸರು ಬರೆಯುವಷ್ಟರಲ್ಲಿ ನಾನು ರೂಮು ನೋಡಬಹುದೇ ಎಂದ ಆಗಂತುಕ. ಓ ಅದಕ್ಕೇನು ಧಾರಾಳವಾಗಿ ನೋಡಿ, ಅದಕ್ಕೇನು ಎಂದು ಹೆಸರು ನಮೂದಿಸುವುದನ್ನು ತಡೆದು, ತನ್ನ ಮಾಣಿಯನ್ನು ಕರೆದು ರೂಮು ತೋರಿಸಿಕೊಂಡು ಬರಲು ಕಳಿಸಿದ.
   ಅಷ್ಟರಲ್ಲಿ ಅಂದಿನ ದಿನದ ಫ್ರೆಶ್ ಆದ ತರಕಾರಿ ಮಾರಲು ಬಂದ ತರಕಾರಿಯವನೊಂದಿಗೆ ತರಕಾರಿ ಕೊಂಡು ಅವನ ಹಳೆಯ ಬಾಕಿ ಇದ್ದುದರಿಂದ ಆ ಗಿರಾಕಿ ನೀಡಿದ ಅದೇ ಐನೂರು ರೂಪಾಯಿ ತರಕಾರಿಯವನಿಗೆ ನೀಡಿದ. ಅವನು  ಹೋಗಿ ತೋಟದ ಮಾಲೀಕನಿಗೆ ತಾನು ಕೊಡಬೇಕಾದ ತರಕಾರಿಯನ್ನು ತಂದ ಬಾಕಿ ತೀರಿಸಲು ಆ ಐನೂರು ರೂಪಾಯಿ ಅವನಿಗೆ ಕೊಟ್ಟ.  ತೋಟದ ಮಾಲೀಕ  ತನ್ನ ಹೆಂಡತಿ ತನಗೆ ಹಣ ನೀಡಲು  ಎರಡು ಮೂರು ದಿನಗಳಿಂದ  ಪೀಡಿಸುತ್ತಿದ್ದವಳಿಗೆ ಆ ಹಣವನ್ನು ನೀಡಿದ.  ಮನೆಯಲ್ಲಿ ನಡೆದ ಸಮಾರಂಭವೊಂದಕ್ಕೆ ಅತಿಥಿಗಳು ಬಂದಾಗ ಮೇಲಿನ ವಸತಿಗೃಹದಲ್ಲಿ ರೂಮು ಬಾಡಿಗೆ ಪಡೆದಿದ್ದುದರಿಂದ ಸುಮಾರು ದಿನದ ಬಾಕಿಯನ್ನು ಕೊಡುವುದು ಇದ್ದುದರಿಂದ, ಅದರ ಬಾಕಿಯನ್ನು ವಸತಿಗೃಹದ ಮಾಲೀಕನಿಗೆ ಮನೆಯ ಆಳಿನ ಮೂಲಕ ಕೂಡಲೇ ಕೊಟ್ಟು ಕಳುಹಿಸಿದಳು.
    ರೂಮು ನೋಡಿಕೊಂಡು ಬಂದ ಆಗಂತುಕ ಅತಿಥಿ ತನಗೆ ರೂಮು ಅಷ್ಟೊಂದು ಇಷ್ಟವಾಗಲಿಲ್ಲ. ನನ್ನ ಹಣ ಮರಳಿಸುತ್ತೀರಾ ಎಂದಾಗ ಅದೇ ಹಣವನ್ನು ವಸತಿಗೃಹದ ಮಾಲೀಕ ಅವನಿಗೆ ಮರಳಿಸಿದ!
ಎಲ್ಲರ ಬೇಡಿಕೆ, ಬಾಕಿ ತೀರಿಸಿದ ಐನೂರು ರೂಪಾಯಿ ಗಿರಾಕಿಗೆ ಮರಳುವಷ್ಟರಲ್ಲಿ ಇಷ್ಟೆಲ್ಲ ಕರಾಮತ್ತು ನಡೆಸಿ ಮರಳಿ ಗಿರಾಕಿಯ ಜೇಬು ಸೇರಿತ್ತು!

Rating
No votes yet

Comments

Submitted by Mohan V Kollegal Mon, 10/15/2012 - 23:38

ಕಥೆ ಚೆನ್ನಾಗಿದೆ... ಹಣ ಕೇವಲ ಕಾಗದವಾದರೂ ಈ ರೀತಿಯಾಗಿ ವ್ಯವಸ್ಥೆಯನ್ನು ನಿಯಂತ್ರಿಸಬಲ್ಲದು. ಆದರೂ ಅಲ್ಲಿ ಆಯಾ ಘಟ್ಟದಲ್ಲಿ ಸಂಭವಿಸಿದ ಘಟನೆಗಳಿಗೆ ಸಾಕ್ಷಿಯಾಗಿ, ವ್ಯಾಪಾರಕ್ಕೆ ಸಾಕ್ಷಿಯಾಗಿ, ಲಾಭದ ವರ್ಗಾವಣೆಗೆ ಮುಂಚೂಣಿಯಾಗಿ ಹಣ ಹರಿದಾಡಿತು...

Submitted by Prakash Narasimhaiya Tue, 10/16/2012 - 21:16

In reply to by lpitnal@gmail.com

ಆತ್ಮೀಯ ಇತ್ನಾಳರೆ,
ಅಲ್ಲೇ ಹುಟ್ಟಿ ಅಲ್ಲೇ ಸತ್ತರೂ ಸಹ, ತನ್ನ ಕೆಲಸವನ್ನು ಮುಗಿಸಿ ತನ್ನ ಜನ್ಮ ಸಾರ್ಥಕ ಮಾಡಿಕೊಂಡಿತು. ಇಷ್ಟೇ ಅಲ್ಲವೇ ನಮ್ಮ ಪಾಡು!!!!
ಚಿಕ್ಕದಾಗಿ, ಚೊಕ್ಕವಾಗಿ ಮನಮುಟ್ಟುವಂತೆ ಹೇಳಿದ್ದಿರ. ಧನ್ಯವಾದಗಳು.

Submitted by lpitnal@gmail.com Tue, 10/16/2012 - 22:52

In reply to by Prakash Narasimhaiya

ಆತ್ಮೀಯ ಪ್ರಕಾಶ ನರಸಿಂಹಯ್ಯನವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಹಣದ ಮಹಿಮೆ ಯ ಈ ಕಥೆಯನ್ನು ಹಿಂದೊಮ್ಮೆ ಎಲ್ಲೋ ಓದಿದ್ದನ್ನು ಸಂಪದಿಗರೊಂದಿಗೆ ಹಂಚಿಕೊಂಡಿದ್ದೇನೆ ಅಷ್ಟೆ. ತಾವು ಚುಟುಕು ಕಥೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಅನಂತ ಧನ್ಯವಾದಗಳು.