ನೀನಿರದೆ
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಬೆಳ್ಳಿ-ತಾರೆ ಅದೆಂತು ಹೊಳೆವುವು
ನೀನಿರದೆ ಬೆಳ್ದಿಂಗಳು ಅದೆಂತು ಸುರಿವುದು
ನೀನಿರದೆ ಜೇನಿಲ್ಲ
ನೀನಿರದೆ ತುಟಿಯಿಲ್ಲ
ನೀನಿರದೆ ಮೆಲ್ದುಟಿಗಳ ಹೆಜ್ಜೇನನು ಸವಿವ ಬಗೆಯೆಂತು
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ
ನೀನಿರದೆ ಕಾವಿಲ್ಲ
ನೀನಿರದೆ ನೋವಿಲ್ಲ
ನೀನಿರದೆ ಸುಡುಬಿಸಿಯಲಿ ಹದಗಾವನು ಈವ ಬಗೆಯೆಂತು
ನೀನಿರದೆ ಕವಿತೆಗಳ ನಾನೆಂತು ಬರೆಯಲಿ
ನೀನಿರದೆ ಸಾಲುಗಳನದೆಂತು ಹೆಣೆಯಲಿ
ನೀನಿರದೆ ಮಾತಿಲ್ಲ
ನೀನಿರದೆ ಕನಸಿಲ್ಲ
ನೀನಿರದೆ ಮೆಲುಮಾತಿನ ಸವಿಗನಸನು ಕಾಂಬ ಬಗೆಯೆಂತು
ನೀನಿರದೆ ಕನಸುಗಳ ನಾನೆಂತು ನೇಯಲಿ
ನೀನಿರದೆ ಬದುಕನ್ನು ನಾನೆಂತು ತೇಯಲಿ
Rating
Comments
ನೀನಿರದೆ
ನೀನಿರದೆ ಈ ಜೀವನ ಹೇಗೆ ಕಳೆಯಲಿ? ತುಂಬಾ ಕಷ್ಟ ಅಲ್ವ ಸರ್? ಸುಂದರ ರಚನೆ :)
good luck :)
In reply to ನೀನಿರದೆ by hvravikiran
ಧನ್ಯವಾದಗಳು ರವಿಕಿರಣ್
ಧನ್ಯವಾದಗಳು ರವಿಕಿರಣ್
ನೀನಿರದೆ
ನೀನಿರದೆ ಈ ಜೀವನ ಹೇಗೆ ಕಳೆಯಲಿ? ತುಂಬಾ ಕಷ್ಟ ಅಲ್ವ ಸರ್? ಸುಂದರ ರಚನೆ :)
good luck :)