" ಚುಟುಕುಗಳು 16 "

" ಚುಟುಕುಗಳು 16 "

 


 


 


ಬದುಕನ್ನು ಅರಿಯುವುದೆಂದರೆ


ಸಂಕೀರ್ಣ ಜೀವಿ


ಮನುಷ್ಯನನ್ನು ಅರಿಯುವುದೆಂದೇ


ಅರ್ಥ ಆದರೆ ಆತನ


ಅಂತರ್ಗತ ಚಿತ್ತ


ಶಬ್ದಕೋಶದಲಿ ದೊರೆಯದ


ಒಂದು ಕ್ಲೀಷ್ಟ ಶಬ್ದ


 


     ***


 


ಮನುಷ್ಯನ ಸಪ್ತ ರಂಧ್ರಗಳು


ದುರ್ಘಂಧಗಳ ವೈತರಣಿ


ಅದರಲ್ಲಿಯೆ ಬೀಳುತ್ತ


ಮುಳುಗೇಳುತ್ತಲೆ ಬಂದಿದೆ


ನಮ್ಮೆಲ್ಲರ ಬದುಕು


ಮುಕ್ತತೆ ಎಂದರೆ ಇವುಗಳ


ಮೀರಿ ಬೆಳೆಯುವುದು


 


     ***


 


ಶುಷ್ಕ ವೇದಾಂತ


ಹೊಟ್ಟೆಗೆ ಅನ್ನ ಕೊಡುವುದಿಲ್ಲ


ಕೈ ಕೆಸರಾದರೆ ಬಾಯಿ ಮೊಸರು


ಬದುಕು ಒಂದು ವಾಸ್ತವ


ಅದನರಿತು ನಡೆಯಬೇಕು


       ***

Rating
No votes yet

Comments

Submitted by hvravikiran Mon, 10/15/2012 - 17:28

In reply to by ಗಣೇಶ

೨ ಕಣ್ಣನ್ನು ಬಿಟ್ಟು ಉಳಿದೆಲ್ಲವೂ ದುರ್ಗಂಧ ಸೂಸುವನ್ತವು ಎಂಬುದು ಕವಿಗಳ ಮಾತು ಎಂದು ನನ್ನ ಅಭಿಪ್ರಾಯ. ಅಲ್ಲವೇ ಪಾಟೀಲರೆ?
ವೈತರನೀ ಇದು ಹಿಂದೂಗಳ ನಂಬಿಕೆಯಂತೆ ಪರಲೋಕದಲ್ಲಿ ಹರಿವ ನದಿ. ಎಲ್ಲ ದುಷ್ಟ & ಕ್ರೂರತೆಗಳನ್ನೂ ಇಲ್ಲಿ ಕಾಣಬಹುದು. (ನರಕದ ಹೆಬ್ಬಾಗಿಲು ಇದು ಅಂತ ಎಲ್ಲೋ ಕೇಳಿದ ನೆನಪು. ತಪ್ಪಿದ್ದರೆ ದಯವಿಟ್ಟು ಸರಿಪಡಿಸಿ.(ಗರುಡ ಪುರಾಣ) :) )

Ravikiran

Submitted by H A Patil Mon, 10/15/2012 - 19:15

In reply to by hvravikiran

ಹೆಚ್ ವಿ ರವಿಕಿರಣ ರವರಿಗೆ ವಂದನೆಗಳು
ತಮ್ಮ ಅನಿಸಿಕೆ ಸರಿ, ಆದರೆ ಎರಡು ಕಣ್ಣುಗಳು ದುರ್ಗಂಧವನ್ನು ಸೂಸುವುದಿಲ್ಲೊವಾದರೂ, ಅವುಗಳನ್ನು ಪ್ರತಿನಿತ್ಯ ಸ್ವಚ್ಛಗೊಳಿಸಿ ಕೊಳ್ಳದೆ ಹೋದರೂ ರೆಪ್ಪೆಗಳು ಕೂಡಸುವ ಕೋನಗಳಲ್ಲಿ ಪಿಚ್ಚುಗಟ್ಟಿ ನೋಡಲು ಅಸ್ಯ ವೆನಿಸುತ್ತವೆ, ಈ ಗ್ರಹಿಕೆಯಲ್ಲಿ ಕಣ್ಣೂ ಸಹ ದುರ್ಗಂಧದ ವೈತರಣೀಯ ಪೈಕಿ ಒಂದು ಬಳಸಿದ್ದು, ವೈತರಣಿ ಎಂದರೆ ಪಾಪಕೂಪ ವೆಂಬ ಅರ್ಥವೂ ಇದೆ, ನೀವಂದಂತೆ ಗರುಡ ಪುರಾಣದಲ್ಲಿ ವೈತರಣಿ ನಿದಿಯ ಪ್ರಸ್ತಾವನೆಯಿದೆ, ವೈಃತರಣಿ ಭೂಲೋಕ ಮತ್ತು ಯಮಲೋಕದ ಗಡಿ, ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Mon, 10/15/2012 - 19:07

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ಕಣ್ಣು ಕಿವಿ,ಮೂಗು ಬಾಯಿ, ತ್ವಚೆ, ಮಲ ಮತ್ತು ಮೂತ್ರವಿಸರ್ಜನಾಂಗಳನ್ನು ಮನುಷ್ಯನ ಸಪ್ತ ದುರ್ಘಂಧಗಳ ವೈತರಣಿ ಎಂಬ ಅರ್ಥದಲ್ಲಿ ಬಳಸಲಾಗಿದೆ., ವೈತರಣಿ ಎಂಬುದೊಂದು ನದಿ ಅದು ಭೂಲೋಕ ಮತ್ತು ಯಮಲೋಕಗಳ ಮಧ್ಯದ ಗಡಿ ಎನ್ನುವ ಅರ್ಥ ಗರುಡ ಪುರಾಣದಲ್ಲಿ ಬರುತ್ತದೆ. ಧನ್ಯವಾದಗಳು

Submitted by venkatb83 Mon, 10/15/2012 - 19:03

"ಮನುಷ್ಯನ ಸಪ್ತ ರಂಧ್ರಗಳು

ದುರ್ಘಂಧಗಳ ವೈತರಣಿ

ಅದರಲ್ಲಿಯೆ ಬೀಳುತ್ತ

ಮುಳುಗೇಳುತ್ತಲೆ ಬಂದಿದೆ

ನಮ್ಮೆಲ್ಲರ ಬದುಕು

ಮುಕ್ತತೆ ಎಂದರೆ ಇವುಗಳ

ಮೀರಿ ಬೆಳೆಯುವುದು"

ಹಿರಿಯರೇ
ಅತ್ಯುತ್ತಮಾರ್ಥದ ಸಾಲುಗಳು...
ಕಲ್ಸ್ಮಶದ ವೈತರಣಿ ಪದ ಪ್ರಯೋಗ ಸಖತ್...

ನವ ರಂದ್ರಗಳು ಅಂತ ಓದಿದ್ದು ಕೇಳಿದ್ದು ನೆನಪು..
ಸಪ್ತ ರಂದ್ರಗಳು ಗಣೇಶ್ ಅಣ್ಣ ಅವರ ಹಾಗೆ ನನಗೂ ಗೊಂದಲ ಉಂಟು ಮಾಡಿವೆ...!!

ಶುಭವಾಗಲಿ..

\|

ವೆಂಕಟರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, <<< ನವ ರಂಧ್ರಗಳು.......ಸಪ್ತ ರಂಧ್ರಗಳು .....ಗೊಂದಲ ಉಂಟು ಮಾಡಿವೆ >>>. ನಾನು ನವ ರಸಗಳ ಬಗ್ಗೆ ಕೇಳಿದ್ದೇನೆ, ಆದರೆ ನವ ರಂಧ್ರಗಳು ? ನನಗೂ ಗೋಂದಲವಿದೆ, ಕಿವಿಗಳ ಕೂಗಣಿ, ಕಣ್ಣುಗಳ ಪಿಸುರು, ಮೂಗಿನಲ್ಲಿಯ ಶ್ಲೇಷ್ಮ, ಬಾಯಲ್ಲಿ ಅಸ್ವಚ್ಛತೆಯ ಕಾರಣ ಬರುವ ದುವಾಸನೆ, ತ್ವಚೆಯಿಂದ ಹೊರ ಸೂಸುವ ಬೆವರು, ಮೂತ್ರ ಜನಕಾಂಗ ಮತ್ತು ಮಲ ದ್ವಾರಗಳು ಸಪ್ತಗ ರಂಧ್ರಗಳು ಎನ್ನುವ ಗ್ರಹಿಕೆ ನನ್ನದು, ನವ ರಂಧ್ರಗಳು ಎನ್ನುವುದಾದರೆ ಶ್ವೇದ ಗ್ರಂ ಥಿಗಳು ಮತ್ತು ಉಗುರುಗಳನ್ನು ಸೇರಿಸಿದರೆ ಒಟ್ಟು ನವ ರಂಧ್ರಗಳಾಗ ಬಹುದೆ? ನನಗೆ ಗೊತ್ತಿಲ್ಲ ಅದನ್ನು ತಿಳಿದು ವಿವಿರಿಸಲು ಪ್ರಯತ್ನಿಸುವೆ, ಮೆಚ್ಚುಗೆಗೆ ಧನ್ಯವಾದಗಳು.

Submitted by venkatb83 Tue, 10/16/2012 - 14:14

In reply to by H A Patil

ಹಿರಿಯರೇ-

ನಾ- ನವ ರಸಗಳು ಮರೆತಿದ್ದೆ-ಅದು ಈಗ ನೀವೇ ನೆನಪಿಸಿದಿರಿ..
ನವ ರಂದ್ರಗಳು ಹಳತು-
ಸಪ್ತ ರಂದ್ರಗಳು ಅವುಗಳ ಕಲ್ಮಶ ನೀವ್ ಹೇಳಿದಂತೆ ಸರಿ...
ನಾ ಅದನ್ನು ಯೋಚಿಸಿರಲಿಲ್ಲ..
ಈಗ ನಿಮ್ಮ ವಿವರಣೆಯ ಮೂಲಕ ಅದು ತಿಳಿಯಿತು..
ತ್ವರಿತ ಮರು ಪ್ರತಿಕ್ರಿಯೆಗೆ -ಸಂದೇಹ ಪರಿಹಾರಕ್ಕೆ ನನ್ನಿ

ಶುಭವಾಗಲಿ..

\|/'

Submitted by Prakash Narasimhaiya Tue, 10/16/2012 - 21:33

In reply to by venkatb83

ಆತ್ಮೀಯ ಪಾಟೀಲರೆ,
ನಡೆದಷ್ಟಿದೆ ನೆಲ, ಅರಿತಷ್ಟಿದೆ ಬದುಕು. ಆದರೂ, ಸುಂದರವಾದ ಸಾಲುಗಳಲ್ಲಿ ಬದುಕನ್ನು ಸರಳವಾಗಿ ತಿಳಿಸುವ ಪ್ರಯತ್ನ. ಮೆಲಕು ಹಾಕುವಂತಿದೆ. ಧನ್ಯವಾದಗಳು

Submitted by ಗಣೇಶ Wed, 10/17/2012 - 00:28

In reply to by venkatb83

>>>ನವ ರಂದ್ರಗಳು ಹಳತು- ಸಪ್ತ ರಂದ್ರಗಳು ...:)
"ಸಪ್ತ"ಗಿರಿವಾಸಿಯವರೆ, "ಸಪ್ತ"ರಂಧ್ರಗಳು ಅಂದಕೂಡಲೇ ಒಪ್ಪಿದಿರಲ್ಲಾ? ಕೊಂಡಿ ಹುಡುಕಲೂ ಹೋಗಲಿಲ್ಲವೇಕೆ?
-ಗಣೇಶ.

Submitted by H A Patil Wed, 10/17/2012 - 20:16

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ನೀವು ಸಪ್ತಗಿರಿಯವರಿಗೆ ಬರೆದ ಪ್ರತಿಕ್ರಿಯೆ ಓದಿದೆ, ನನಗೆ ತಿಳಿದ ಮಟ್ಟಿಗೆ ನನ್ನ ಚುಟುಕಿಗೆ ಸಮ್ಮಂಧಿಸಿದಂತೆ ಸಪ್ತರಂದ್ರಗಳ ಕುರಿತು ಅವರಿಗೆ ಬರೆದ ಪ್ರತಿಕ್ರಿಯೆಯಲ್ಲಿ ವಿವರಿಸಲು ಪ್ರಯತ್ನಿಸಿದ್ದೇನೆ, ನನಗೂ ಇನ್ನೆರಡು ರಂದ್ರಗಳು ಯಾವುವು ಎನ್ನುವುದರ ಕುರಿತು ಜಿಜ್ಞಾಸೆಯಿದೆ, ಧನ್ಯವಾದಗಳು.

Submitted by ಗಣೇಶ Thu, 10/18/2012 - 00:12

In reply to by H A Patil

>>>ನನಗೂ ಇನ್ನೆರಡು ರಂದ್ರಗಳು ಯಾವುವು ಎನ್ನುವುದರ ಕುರಿತು ಜಿಜ್ಞಾಸೆಯಿದೆ,
-ಬೇಸರಿಸದಿರಿ. ಹೇಳಿದ ಕೂಡಲೇ ಒಪ್ಪುವ ಬದಲು ಇನ್ನಷ್ಟು ವಿವರ ಸಂಗ್ರಹಿಸಲಿ ಎಂದು ಸಪ್ತಗಿರಿವಾಸಿಗೆ ಸೂಚಿಸಿದೆ. ನೋಡೋಣ ಅವರು ಕೊಂಡಿ( ನವರಂಧ್ರ/ಸಪ್ತರಂಧ್ರದ ಬಗ್ಗೆ) ಕೊಟ್ಟಾರು.
ಗಣೇಶ.

Submitted by Premashri Thu, 10/18/2012 - 11:03

In reply to by ಗಣೇಶ

ಸುಂದರ ಚುಟುಕುಗಳು.
ನವರಂದ್ರಗಳು- ೨ ಕಿವಿಗಳು, ೨ ಕಣ್ಣುಗಳು, ಮೂಗಿನ ೨ ರಂದ್ರಗಳು, ಬಾಯಿ ಮತ್ತು ಮಲ ಮೂತ್ರ ವಿಸರ್ಜನಾಂಗಳು.

Submitted by H A Patil Fri, 10/19/2012 - 20:50

In reply to by Premashri

ಮೇಡಂ ವಂದನೆಗಳು ,
ತಮ್ಮ ಪ್ರತಿಕ್ರಿಯೆ ಓದಿದೆ, ತಮ್ಮ ಊಹೆ ಸರಿ,ಎರಡು ಕಣ್ಣು, ಎರಡು ಕಿವಿಗಳು ಮತ್ತು ಎರಡು ಮೂಗಿನ ರಂಧ್ರಗಳು ಎಂದು ಗ್ರಹಿಸಿದರೆ ಒಟ್ಟು ನವ ರಂಧ್ರಗಳು ಆಗುತ್ತವೆ, ಆದರೆ ಕಿವಿ, ಕಣ್ಣು ಮತ್ತು ಮೂಗುಗಳು ಪ್ರತ್ಯೇಕ ಒಂದೊಂದೆ ಅವಯವಗಳು ಎನ್ನುವುದು ನನ್ನ ಗ್ರಹಿಕೆ, ವಿಷಯ ಏನೇ ಇರಲಿ ತಮ್ಮ ಬಿಚ್ಚು ಮನದ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Fri, 10/19/2012 - 20:43

In reply to by ಗಣೇಶ

ಗಣೇಶ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಬೇಸರ ! ಖಂಡಿತ ಇಲ್ಲ, ನೀವು ಪ್ರಶ್ನಿಸುವ ರೀತಿ ನನಗೆ ಖುಷಿ ನೀಡುತ್ತದೆ, ಸಂಶಯವಿರುವ ವಿಷಯವನ್ನು ಪ್ರಶ್ನಿಸಿ ತಿಳಿದು ಕೊಳ್ಳಬೇಕು ಎಂಬುದು ನನ್ನ್ನ ಪ್ರಾಮಾಣಿಕ ಅನಿಸಕೆ, ಧನ್ಯವಾದಗಳು.