ಈಗ ಮುಂಬೈ ಹೇಗಿದೆ ?
ಇದನ್ನು ಅವರವರ ಅನುಭವದಿಂದ ಕಂಡುಕೊಳ್ಳಬೇಕು ಅಷ್ಟೇ. ಒಂದು ಕಾಲದಲ್ಲಿ 'ಮೆರಿನ್ ಡ್ರೈವ್', 'ನಾರಿಮನ್ ಪಾಯಿಂಟ್' ನ ಕಡೆ ಹೋಗಿ ಕಡಲಿನ ಹತ್ತಿರದ ಸಿಮೆಂಟ್ ಕಟ್ಟೆಯಮೇಲೆ ಕುಳಿತಾಗ ಅಲ್ಲಿನ ಹೊಲಸು ಪರಿಸರ ಬೇಸರತರಿಸುತ್ತಿತ್ತು. ಈಗ ಸ್ವಲ್ಪ ಉತ್ತಮ. ಶುಚಿಯಾಗಿದೆ. ಸಿಮೆಂಟ್ ಕಟ್ಟೆ ಮುರಿದಿಲ್ಲ. ಸ್ವಲ್ಪ ಹೊತ್ತು ಕೂಡಲು ಅಡ್ಡಿಯಿಲ್ಲ. ಸಾಕುನಾಯಿಗಳು 'ಇಸ್ಸಿ' ಮಾಡಿದಾಗ ಅದರ ಮಾಲೀಕರು ಬಟ್ಟೆಯಲ್ಲೋ 'ಟಿಸ್ಯೂ ಪೇಪರ್' ನಲ್ಲೋ ತೆಗೆದು ಜಾಗವನ್ನೂ ಶುದ್ಧಿಗೊಳಿಸುವ ದೃಶ್ಯ ನಿಜಕ್ಕೂ ಒಳ್ಳೆಯದೇ ಆಗಿದೆ. ಇನ್ನು ನಾವು ವಿದೇಶಗಳನ್ನು ಇಲ್ಲಿಗೆ ಹೋಲಿಸಿ ಛೀಮಾರಿ ಮಾಡಬೇಕಾಗಿಲ್ಲ.
'ಫ್ಲೈ ಓವರ್ ರಸ್ತೆ'ಗಳು ನಿಜಕ್ಕೂ ಚೆನ್ನಾಗಿವೆ. 'ಟೈಮ್ಸ್ ಆಪ್ ಇಂಡಿಯ ಕಚೇರಿ'ಯಿಂದ ಕಾರಿನಲ್ಲಿ ನೇರವಾಗಿ ಥಾಣೆಯವರೆಗೆ ೩೪ ಕಿ.ಮೀ. ಉದ್ದದ ರಸ್ತೆಯನ್ನು ಅಷ್ಟೇನೂ ಶ್ರಮವಿಲ್ಲದೆ ಈ ಮೇಲು ರಸ್ತೆಯಲ್ಲಿ ಪ್ರಯಾಣಮಾಡಿ ಮುಗಿಸಬಹುದು !
'ಮಾಲ್ ಕಲ್ಚರ್', ಈಗ ಮುಂಬೈಗೇನು ಸೀಮಿತವಲ್ಲ. ಇದನ್ನು ಬೇಕಾದವರು ಬಳಸಬಹುದು, ಮತ್ತು ನಾವು ವಿದೇಶದಲ್ಲಿರುವ ಬಗ್ಗೆ ಕನಸುಕಾಣಬಹುದು. ಆದರೆ ಒಳಗಿನ ಶಾಪ್ ಗಳು 'ನೊಣ ಹೊಡೆಯುತ್ತಿರುತ್ತವೆ'. ಅಷ್ಟು ದುಬಾರಿ ಕೊಳ್ಳುವಿಕೆ ಇನ್ನು ನಮ್ಮ ಜನರಿಗೆ ಒಗ್ಗಿಲ್ಲ. ಮೇಲಾಗಿ ಅವೆಲ್ಲಾ ವಿದೇಶದ ಬಹಳಷ್ಟು ಸಾಮಾನುಗಳನ್ನು ಹೊಂದಿರುತ್ತವೆ.ಪಾರ್ಕಿಂಗ್ ಬೆಲೆ ೧೦೦ ರುಪಾಯಿಗಳು. ೩೦ ರುಪಾಯಿಗಳ ಪಾರ್ಕಿಂಗ್ ಗೆ 'ಪಾತಾಳ'ಕ್ಕೆ ಹೋಗಬೇಕು.
ಮುಂಬೈನಲ್ಲಿ ಕಟ್ಟಿ ತಯಾರಾಗುತ್ತಿರುವ ಕಟ್ಟಡಗಳು ಅತಿ ಹೆಚ್ಚು. ನಾನು ಅಲ್ಲಿ ಕಾಲಿಟ್ಟ ವರ್ಷದಿಂದ ಸುಮಾರು ೩೫ ವರ್ಷ ಕಟ್ಟಡ ಕಟ್ಟುವಿಕೆ ಇರಲೇ ಇಲ್ಲ ಎಂದು ಹೇಳುವಷ್ಟು ಕಡಿಮೆ ಪ್ರಮಾಣದಲ್ಲಿ ಹೊಸ ನಿರ್ಮಾಣ ಆಗುತ್ತಿತ್ತು. ಈಗಂತೂ ಎಲ್ಲಿನೋಡಿದರು ವರ್ಷಪೂರ್ತಿ ಹೊಸ ಕಟ್ಟಡ ನಿರ್ಮಾಣಗಳು ನಡೆಯುತ್ತಲೇ ಇರುತ್ತವೆ.
-ಹೊರಂಲವೆಂ
Comments
ಗೆಳೆಯರೇ, ಮುಂಬಯಿಯ ಬೆಳವಣಿಗೆಯ
In reply to ಗೆಳೆಯರೇ, ಮುಂಬಯಿಯ ಬೆಳವಣಿಗೆಯ by lpitnal@gmail.com
ದಕ್ಷಿಣ ಮುಂಬೈನಗರಕ್ಕೆ ಹೊಸದಾಗಿ