ಬ್ರೇಕಿಂಗ್ ನ್ಯೂಸ್-ಶಿಷ್ಯನ ಕೊಲೆ ಮಾಡಿದ ಪಾಪಿ ಗುರು!?..
ಆರಾಮ ಸೋಫಾದಲ್ಲಿ ಕುಳಿತುಕೊಂಡು ನ್ಯೂಸ್ ನೋಡುತ್ತಿದ್ದ ಸಪ್ತಗಿರಿವಾಸಿ ಐದಡಿ ಎಗರಿಬಿದ್ದು ಎದ್ದು ಓಡಿ, ಮೊಬೈಲ್ ತೆಗೆದುಕೊಂಡು ೯೪೪....... ನಂಬರ್ ಒತ್ತಿ, "ಗುರುಗಳೇ,......ಎಲ್ಲಿ ಹೋಗಿದ್ದಾರಪ್ಪಾ...ಫೋನ್ ಎತ್ತಿಕೊಳ್ಳಿ... ಗುರುಗಳೇ...ಹಾಂ...ಬಂದ್ರಾ...ಕೂಡಲೇ ಜ್ಯೂಸೀ ನ್ಯೂಸ್ ಚಾನಲ್ ಹಾಕಿ....ಇಂಪಾರ್ಟೆಂಟ್ ನ್ಯೂಸ್...ಮತ್ತೆ ಮಾತನಾಡೋಣ" ಎಂದು ಹೇಳಿ, ಟಿ.ವಿ ಎದುರಿಗೆ ಚ್ಯಾರ್ ಎಳೆದುಕೊಂಡು ಕುಳಿತನು. ಉಳಿದೆಲ್ಲಾ ಸಂಪದಿಗ ಮಿತ್ರರಿಗೆ sms ಕಳುಹಿಸಿ, ಟಿ.ವಿ ವಾಲ್ಯೂಮ್ ಜಾಸ್ತಿ ಮಾಡಿದ...
"ಹೇಳಿ ಹೇಳಿ ಮಿಸೆಸ್ ಗಣೇಶ್ ಅವರೆ, ಏನಾಯ್ತು ವಿವರವಾಗಿ ಹೇಳಿ..."
"ಹಲೋ...ಹಲೋ..." "ಹಾಂ..ಕೇಳಿಸ್ತಾ ಇದೆ..ಹೇಳಿ.." (ಐದು ಬಾರಿ ರಿಪೀಟ್)
"ನಾನು ನೆನ್ನೆಯಿಂದ ಹೋಟಲಿನಲ್ಲಿ ನಾಸ್ಟಾ, ಊಟ ಮಾಡಿ ನಾಲಗೆ ಜಡ್ಡು ಹಿಡಿದಿದೆ.."
"ಅದು ಸರಿ ಮಿಸೆಸ್ ಗಣೇಶರವರೆ,ನಿಮ್ಮ ಯಜಮಾನರ ಬಗ್ಗೆ ಏನೋ ಹೇಳುತ್ತಿದ್ದೀರಲ್ಲಾ..?"
"ನಿನ್ನೆ ದಿನ ರಜೆ ಇತ್ತಲ್ಲಾ ಎಂದು ಅಂಡಾಂಡಭಂಡರ ಆಶ್ರಮಕ್ಕೆ ಹೋಗಿ ಬೇಗ ಬರುವೆ ಎಂದು...."
"ಹಾಂ..ಹಾಂ ಅದೇ ವಿಷಯ. ವಿವರವಾಗಿ ಹೇಳಿ"
" ಅವರು ಅಡುಗೆ ಮಾಡದೇ ಬೆಳಗ್ಗೆ ಬೇಗನೆ ಹೋದವರು ಇನ್ನೂ ಬಂದಿಲ್ಲಾsss.ಪಾತ್ರೆ ಬಟ್ಟೆಗಳೆಲ್ಲಾ ರಾಶಿ ಬಿದ್ದಿವೆ..."
" ಆ ವಿಷಯ ಹಾಗಿರಲಿ...ಅವರು ಹೋಗುವಾಗ ಕ್ಯಾಮರಾ ಮೊಬೈಲ್ ಹಿಡಕೊಂಡಿದ್ದರಾ?"
"ಮೊಬೈಲ್.."
"ತಡೀರಿ, ಮಿಸೆಸ್ ಗಣೇಶ ಅವರೆ. ಡಿಸ್ಕನೆಕ್ಟ್ ಮಾಡಬೇಡಿ. ವೀಕ್ಷಕರೆ, ನೋಡಿದಿರಾ..ಸ್ವಾಮೀಜಿಯ ಹುಳುಕನ್ನು ಹೊರಗೆಳೆಯಲು ಸ್ಟಿಂಗ್ ಆಪರೇಶನ್ಗೆಂದು ಹೊರಟ ಅವರ ಶಿಷ್ಯ ಗಣೇಶರೇ ನಾಪತ್ತೆ! ಇನ್ನಷ್ಟು ವಿವರಗಳನ್ನು ಪಡೆಯೋಣ...ಸಣ್ಣ ಕಮರ್ಶಿಯಲ್ ಬ್ರೇಕ್ ನಂತರ.."
ನ್ಯೂಸ್ ರೀಡರ್ ನ್ಯೂಸ್ ರೂಮಿನ ಕಂಪ್ಯೂಟರ್ ಆಪರೇಟರ್ಗೆ-" ಕೂಡಲೇ ಬ್ರೇಕಿಂಗ್ ನ್ಯೂಸ್ ಹಾಕು : "ಅಂಡಾಂಡ ಭಂಡರ ಆಶ್ರಮದಲ್ಲಿ ರಕ್ತಪಾತ! ಸ್ಟಿಂಗ್ ಆಪರೇಶನ್ಗೆಂದು ಹೋದ ಶಿಷ್ಯ ಗಣೇಶ್ ನಾಪತ್ತೆ" ಎಂದು ಅಂದಾಗ..
"ಸರ್..ಅಂತಹದ್ದೇನೂ ಆಕೆ ಹೇಳಿಲ್ಲವಲ್ಲಾ?"
"ಸುಮ್ಮನೆ ಹಾಕೋ..ಮೊದಲ ಬ್ರೇಕಿಂಗ್ ನ್ಯೂಸ್ ನಮ್ಮದಾಗಬೇಕು. ಅಂಡಾಂಡಭಂಡರ ಫೋಟೋ, ಆಶ್ರಮದ ಫೋಟೋ ಎಲ್ಲಾ ರೆಡಿ ಮಾಡು."
"ಸರ್.. ಆ ಆಶ್ರಮದ ಫೋಟೋ ನಮ್ಮ ಬಳಿ ಇಲ್ಲ.. ಆ ಹೆಸರಿನ ಯಾವ ಸ್ವಾಮಿಯೂ ಇಲ್ಲಾ...."
"ಏsss..ಸದ್ಯಕ್ಕೆ ಯಾವುದೋ ಒಂದು ಸ್ವಾಮಿಯ, ಮತ್ತು ಆಶ್ರಮದ ಫೋಟೋ ಲಾಂಗ್ ಷಾಟ್ನಲ್ಲಿ ಹಾಕು..ಬೇಗ ಬೇಗ.."
" ವೀಕ್ಷಕರೆ....
Rating
Comments
ಗುರುವಿನಿ0ದಲೆ ಶಿಷ್ಯನ ಮರ್ಡರ್
ನೋಡಿದಿರಾ ಗಣೇಶರೆ ಚಾನಲ್ ಗಳ ಪರಿಯನ್ನು ಸುಖಾ ಸುಮ್ಮನೆ ಸುದ್ದಿಹಬ್ಬಿಸಿ ಟಿಆರ್ ಪಿ ಹೆಚ್ಚಿಸಿಕೊಳ್ತಾರೆ. ನ0ತರ ನಾನು ಸಪ್ತಗಿರಿಗೆ ಪೋನ 'ಹಚ್ಚಿದ್ದೆ' , ವಿಷಯ ತಿಳಿಯಿತು, ನೀವು ಪಾಪ ನಾಡಿಗರಲ್ಲಿ 'ಮೆ0ತೆ ಪಲಾವ್' ಮಾಡುವ ವಿಧಾನ ಸರಿಯಾಗಿ ತಿಳಿಯಲು ಹೋಗಿದ್ದಿರಿ ಎ0ದು ತಿಳಿಯಿತು. ಪಾಪ ಮನೆಯಲ್ಲಿ ಆಶ್ರಮ ಎ0ದು ಎ0ತದೋ ಹೇಳಿ ಹೋಗುವುದಾ , ಅವರು ಸುಮ್ಮನೆ ಆತ0ಕ ಪಟ್ಟರು 'ಈ ದಿನದ ಅಡುಗೆ, ಪಾತ್ರೆ , ಬಟ್ಟೆಯ ಕತೆಯನ್ನೆ0ತು' ಮಾಡುವುದು ಎ0ದು.
In reply to ಗುರುವಿನಿ0ದಲೆ ಶಿಷ್ಯನ ಮರ್ಡರ್ by partha1059
ಬ್ರೇಕಿಂಗ್ ನ್ಯೂಸ್- ಮೆಂತ್ಯೆ ಪಲಾವ್
:)))
>>>ನೀವು ಪಾಪ ನಾಡಿಗರಲ್ಲಿ 'ಮೆ0ತೆ ಪಲಾವ್' ಮಾಡುವ ವಿಧಾನ ಸರಿಯಾಗಿ ತಿಳಿಯಲು ಹೋಗಿದ್ದಿರಿ ಎ0ದು..
-ನಿಮಗೆ ಹೇಗೆ ಗೊತ್ತಾಯಿತು? ಮೆಂತ್ಯೆ ಪಲಾವ್ http://www.sampada.net/node/38560 ... "ಅಳತೆಗೆ ತಕ್ಕಂತೆ ಬಾಸ್ಮತಿಗೆ ನೀರು ಬೆರೆಸಿ, ಕುಕ್ಕರ್ ಮುಚ್ಚಳ ಮುಚ್ಚಿಟ್ಟು ಎರಡು ಸಾರಿ ಕುಕ್ಕರ್ ವಿಸಲ್ ಬರುವ ತನಕ ಇಡಬೇಕು." ಎಂದು ಹೇಳಿದ್ದರು. ಎರಡು ಸಾರಿ ಕುಕ್ಕರ್ ವಿಸಲ್ ಬಂತು..ಇನ್ನೇನು ಮಾಡಲಿ?:)
ಬ್ರೇಕಿಂಗ್ ನ್ಯುಸ್..........
ಗೆಳೆಯ ಗಣೇಶರವರೇ, ಲಕ್ಷ್ಮಿಕಾಂತ ಇಟ್ನಾಳ ರ ವಂದನಗೆಳು. ಬ್ರೇಕಿಂಗ್ ನ್ಯೂಸ್ ನ ಮೂಲ ತುಂಬ ಚನ್ನಾಗಿದೆ. ಅವರಿಗೆ ಒಳ್ಳೆಯ ಬುದ್ಧಿ ಬರಲಿ, ಟಿಆರ್ಪಿ ಗಾಗಿ ಏನೆಲ್ಲ ಮಾಡುವ ಇವರನ್ನು ಜನರೇ ಬುದ್ಧಿ ಕಲಿಸುವ ಕಾಲ ದೂರವಿಲ್ಲ.
In reply to ಬ್ರೇಕಿಂಗ್ ನ್ಯುಸ್.......... by lpitnal@gmail.com
ಜನರೇ ಬುದ್ಧಿ ಕಲಿಸುವ ಕಾಲ ದೂರವಿಲ್ಲ.
+೧
ಇತ್ನಾಳರೆ,
ಧನ್ಯವಾದಗಳು.
ಗಣೇಶರ ನಾಪತ್ತೆ ಅಂತ ಗಣೇಶರೇ . .
ಗಣೇಶರ ನಾಪತ್ತೆ ಅಂತ ಗಣೇಶರೇ . . . . . !!! ಎಲ್ಲಾ ಆ ಸ್ವಾಮಿಯ ಮಹಿಮೆ!!!!
In reply to ಗಣೇಶರ ನಾಪತ್ತೆ ಅಂತ ಗಣೇಶರೇ . . by kavinagaraj
ಗಣೇಶರ ನಾಪತ್ತೆ
ಆಡಿಸುವವನೂ ಅವನೇ..ಆಡುವವನೂ ಅವನೇ..ಅನ್ನುತ್ತೀರಲ್ಲಾ..ಹಾಗೇ.:)
ಧನ್ಯವಾದ ಕವಿನಾಗರಾಜರೆ.
ಹಿಂಗೆ ವಿಷ್ಯ, ಅಲ್ಲಾ ಸ್ವಾಮೀಜಿ
ಹಿಂಗೆ ವಿಷ್ಯ, ಅಲ್ಲಾ ಸ್ವಾಮೀಜಿ ಜೊತೆ ಹೋಗೋ ಕೆಟ್ಟ ಬುದ್ಧಿ ಯಾಕೆ ಬಂತು ಗಣೇಶಣ್ಣ?
ಅಡುಗೆ ಮಾಡ್ಬೇಕು, ಪಾತ್ರೆ ತೊಳೀಬೇಕು ಬಟ್ಟೆ ಒಗೀಬೇಕಲ್ಲ ಅಂಥಾ ಬೇಸರದಿಂದ ಆಶ್ರಮ ಸೇರ್ಪಡೆಯಾ??!!
@ ಗಣೇಶ್ ಅಣ್ಣ... - ಹಿಡನ್ ಕ್ಯಾಮೆರ ಹಿಡ್ಕೋಬೇಕು...
ನಾನ್ ಆಫೀಸಲ್ಲಿ ಎರಡು ದಿನ ನೆಟ್ ಸಮಸ್ಯೆ ಆಗಿ. ನಂ ಮೊಬೈಲು ಟೂ ಜೀ ಟೂ ಕಡಮೆ ಸ್ಪೀಡಲ್ಲಿ ಓಪನ ಆಗದೆ ಸಂಪದ ನೋಡೋಕ್ ಆಗಿರಲಿಲ್ಲ... ಈಗ ನೆಟ್ ಪ್ರಾಬ್ಲಂ ಸರಿ ಹೋಗಿ ನೋಡಿದರೆ ನಂ ಅನುಪಸ್ತಿತಿಯಲ್ಲಿ ಇಲ್ಲಿ ಏನೇನೋ ಆಗಿದೆ....!! ಗಣೇಶ್ ಅಣ್ಣ ಅವರು ಇನ್ನು ಮೇಲೆ ಈ ರೀತಿ ಕೈನಲ್ಲಿ ಕ್ಯಾಮೆರ ಹಿಡಿದು ಹೊರಡೋದು ಬಿಡಬೇಕು..
ಹಿಡನ್ ಕ್ಯಾಮೆರ ಹಿಡ್ಕೋಬೇಕು...
ಚೇಂಜ್ ಆಗ್ರಿ..!!
ಜನ ಚೇಂಜ್ ಕೇಳ್ತಾರೆ...!!!
ನಂಗೆ ಜೀವಾನೇ ಹೋದ ಹಾಗೆ ಆಗಿತ್ತು.ಯಾಕ್ ಅಂತೀರಾ?
ನಿಮ್ಮ ಶೀರ್ಷಿಕೆ ಮತ್ತು ನನ್ನ ಹೆಸರು ನಿಮ್ ಬರಹದಲ್ಲಿ..!! ಸದ್ಯ ನನಗೇನು ಆಗಿಲ್ಲ...!!
ಶುಭವಾಗಲಿ...
\|