Skip to main content
ಕವನ
ಹುಸಿ ಮುನಿಸಿನ ನಿಶೆ ಕಂಗಳ
ನವ ಲಾಸ್ಯದ ಸುರ ಸುಂದರಿ
ಮಧು ಚಂದ್ರದ ಶುಭ ಘಳಿಗೆಗೆ
ಗಿಳಿ ಶಕುನದ ಗೀಳೆ ||
ನಸು ನಾಚಿದ ಪಿಸು ಮಾತಿನ
ಬಡ ನಡುವಿನ ಕಡು ಚೆಲುವೆಯೆ
ಶಶಿ ಉದಯದಿ ನಿಶೆ ಜಾರಿದೆ
ಶುಭ ಶಕುನವ ನುಡಿಯೆ ||
ಮನ ಮೋಹನ ನವ ವಸಂತದ
ತನಿ ಗಾಳಿಯ ಮಧು ಬನದಲಿ
ಸಿರಿ ಜೀವನ ಚಿರ ನೂತನ
ರಸ ಸ್ವಾದದ ಪರಿಶೆ ||
Comments
ಚೆನ್ನಿದೆ. ಪದಗಳ ಲಾಸ್ಯವೂ ಕೂಡ
ಚೆನ್ನಿದೆ. ಪದಗಳ ಲಾಸ್ಯವೂ ಕೂಡ ಇದೆ.
In reply to ಚೆನ್ನಿದೆ. ಪದಗಳ ಲಾಸ್ಯವೂ ಕೂಡ by Maalu
ನಿಮ್ಮ ಪ್ರೋತ್ಸಾಹಕ್ಕೆ ಋಣಿ
ನಿಮ್ಮ ಪ್ರೋತ್ಸಾಹಕ್ಕೆ ಋಣಿ ಮಾಲುರವರೆ
ಜಯಪ್ರಕಾಶ