ಮೂಢ ಉವಾಚ - 166

ಮೂಢ ಉವಾಚ - 166

 

ಕೀಳರಿಮೆ ಪಡಬೇಡ ಹೀಗಳೆವರ ಮುಂದೆ 
ಜಾರಿ ಬೀಳಲು ಬೇಡ ನಗುವವರ ಮುಂದೆ |
ಜನವ ಮೆಚ್ಚಿಸಲ್ ಸುಳ್ಳು ಹೇಳಲು ಬೇಡ
ಮನವು ಮೆಚ್ಚಿದೊಡೆ ಸಾಕೆಲವೊ ಮೂಢ || ..331
 
ಭಕ್ತಿಯಿಲ್ಲದ ಪೂಜೆ ವಿನಯವಿಲ್ಲದ ವಿದ್ಯೆ 
ಗುರುವಿರದ ಶಾಲೆ ಒಡೆಯನಿಲ್ಲದ ಮನೆ |
ಇದ್ದರೇನಿಲ್ಲದಿರೇನ್ ತಳವಿರದ ಮಡಕೆ 
ಲೋಕವಿದು ಕೊರತೆಯ ಸಂತೆ ಮೂಢ || ..332
***************
-ಕ.ವೆಂ.ನಾಗರಾಜ್.
 
Rating
No votes yet

Comments

Submitted by lpitnal@gmail.com Tue, 10/16/2012 - 18:28

ಶ್ರೀ ಕವಿನಾಗರಾಜ್ ರವರೇ, ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಎಷ್ಟಿದ್ದರೂ ಲೋಕವಿದು ಕೊರತೆಯ ಸಂತೆ. ಒಳ್ಳೆಯ ಅನುಭವ ಜನ್ಯ ಉವಾಚಗಳು.

Submitted by Prakash Narasimhaiya Tue, 10/16/2012 - 21:09

In reply to by lpitnal@gmail.com

ಆತ್ಮೀಯ ನಾಗರಾಜರೆ,
" ತೋಡಿದ ಬಾವಿಗೆ ಜಲವೇ ಸಾಕ್ಷಿ, ಮಾಡಿದ ಪಾಪಕೆ ಮನವೆ ಸಾಕ್ಷಿ, ಆಡಿದ ಮಾತಿಗೆ ಹರಿಯೇ ಸಾಕ್ಷಿ "
ಹೀಗಿರುವ ಒಂದು ಒಳ್ಳೆಯ ಒಂದು ದಾಸರ ಪದ್ಯ ಓದಿದ ಹಾಗೆ ಆಯಿತು,ನಿಮ್ಮ ಉವಾಚ. ಅಷ್ಟು ಖುಷಿ ಕೊಟ್ಟಿತು. ಧನ್ಯವಾದಗಳು.