" ಡೆಂಗ್ಯೂ ಮಾರಿಗೆ ಬಲಿಯಾದ ಹಿಂದಿ ಚಿತ್ರ ರಂಗದ ದಿಗ್ಗಜ ಯಶರಾಜ್ ಛೋಪ್ರಾ"
2012 ರ ಅಕ್ಟೋಬರ್ 21 ರ ಸಂಧ್ಯಾಕಾಲ ಮುಂಬೈನ ಲೀಲಾವತಿ ಆಸ್ಪತ್ರೆ ಮತ್ತೊಬ್ಬ ದಿಗ್ಗಜರ ಸಾವಿಗೆ ಸಾಕ್ಷಿಯಾಯಿತು. ಬಾಲಿವುಡ್ನ ಮೊದಲ ಸೂಪರ್ ಸ್ಟಾರ್ ' ರಾಜೇಶ ಖನ್ನಾನ ' ಸಾವನ್ನು ಅರಗಿಸಿ ಕೊಳ್ಳುವ ಮುನ್ನವೆ ಮತ್ತೊಬ್ಬ ಪ್ರತಿಷ್ಟಿತ ನಿಮರ್ಾಪಕ, ನಿದರ್ೇಶಕ, ಪಟಕಥಾ ಬರಹಗಾರ ಯಶರಾಜ ಛೋಪ್ರಾ ಡೆಂಗ್ಯೂ ಜ್ವರಕ್ಕೆ ಬಲಿಯಾಗಿ ಚಲನಚಿತ್ರ ರಂಗ ಮಂಚದ ತಮ್ಮ ಪಾತ್ರ ಮುಗಿಸಿ ವೇಷ ಭೂಷಣ ಕಳಚಿಟ್ಟು ರಂಗಕ್ಕೆ ವಿದಾಯ ಹೇಳಿ ನೇಪಥ್ಯಕ್ಕೆ ಸರಿದು ಹೋಗಿದ್ದಾರೆ. ನನಗೆ ನಿನ್ನೆ ಸಾಯಂಕಾಲ ಈ ಸುದ್ದಿ ದೃಶ್ಯ ಮಾಧ್ಯಮದ ಮೂಲಕ ತಿಳಿದು ಬಂದಾಗ ನನಗೆ ಮೊದಲು ಯಶರಾಜ ನೆನಪಿಗೆ ಬಂದದ್ದು ತನ್ನ ಅಣ್ನ ಬಿ.ಆರ್.ಛೋಪ್ರಾ ಬ್ಯಾನರ್ನಲ್ಲಿ ಅದ್ಭುತ ವೆನ್ನುವಂತಹ ಚಿತ್ರಗಳನ್ನು ನಿದರ್ೇಶಿಸಿದವನೆಂದು. ನಂತರ ಈತ ದಾದಾ ಸಾಹೆಬ ಫಾಲ್ಕೆ ಪ್ರಶಸ್ತಿ ಪಡೆದಿರುವನೆ ಎಂಬ ಕುತೂಹಲ. ಭಾರತೀಯರಿಗೆ ಚಲನಚಿತ್ರ ರಂಗದೊಂದಿಗೆ ಒಂದು ರೀತಿಯ ಅವಿನಾಭಾವ ಸಂಬಂಧ. ಅದು ನಟ, ನಟಿ, ನಿಮರ್ಾಪಕ, ನಿದರ್ೇಶಕ, ಹಾಸ್ಯ ನಟ ನಟಿಯರು, ಸಂಗೀತ ನಿದರ್ೇಶಕ, ಹಿನ್ನೆಲೆ ಗಾಯಕ ಗಾಯಕಿಯರು, ಛಾಯಾಗ್ರಾಹಕ ಅವರು ಯಾರೆ ಇರಬಹುದು. ಅಷ್ಟು ಆಪ್ತತೆಯನ್ನು ನಾವು ಚಲನಚಿತ್ರ ರಂಗದೊಂದಿಗೆ ಹೊಂದಿರುತ್ತೇವೆ. ಯಶ ಛೋಪ್ರಾನ ಯೋಗ್ಯತೆಯನ್ನು ನಾವು ಆತ ಪಡೆದಿರಬಹುದಾದ ಪ್ರಶಸ್ತಿ ಫಲಕಗಳ ಆಧಾರದ ಮೇಲೆ ಅಳೆಯಬೇಕೆ? ಇಲ್ಲ..! ಆದರೂ ನನ್ನಂತಹ ಜೀವನದ ಸಂಧ್ಯಾಕಾಲಕ್ಕೆ ಸಾಗುತ್ತಿರುವ ವ್ಯಕ್ತಿಗೂ ಯಶ ಛೋಪ್ರ ದಾದಾ ಸಾಹೇಬ ಫಾಲ್ಕೆ ಪ್ರಶಸ್ತಿ ಪಡೆದಿರುವನೆ ಎಂಬ ಜಿಜ್ಞಾಸೆ ಕಾಡಬೇಕಾದರೆ ಇನ್ನೂ ಕನಸಿನ ಲೋಕದಲ್ಲಿ ವಿಹರಿಸುತ್ತಿರುವ ಯುವ ಜನತೆ ಎಷ್ಟು ಭಾವುಕರಾಗಿ ಯೋಚಿಸ ಬಹುದು, ಇದು ಊಹೆಗೂ ಮೀರಿದ್ದು.
ಮನುಷ್ಯ ಅದರಲ್ಲೂ ಭಾರತೀಯ ಒಬ್ಬ ಭಾವುಕ ಜೀವಿ, ಯಾಕೆಂದರೆ ಸಾಧಕ ಚಲನಚಿತ್ರ, ಸಂಗೀತ, ಕ್ರೀಡೆ, ಸಾಂಸ್ಕೃತಿಕ, ಧಾಮರ್ಿಕ ಮತ್ತು ರಾಜಕೀಯ ಯಾವುದೇ ರಂಗದವನಿರಲಿ, ಅವನೆಡೆಗಿನ ಸಮ್ಮ ಶ್ರದ್ಧೆ ಅಂಧ ರೀತಿಯದು. ಹೀಗಾಗಿ ನಮ್ಮವೆ ಆದಂತಹ ಮಾನದಂಡಗಳನ್ನು ನಾವು ಬಳಸುತ್ತಿರುತ್ತೇವೆ. ಚಲನಚಿತ್ರ ರಂಗವಾದರೆ ಆತ ದಾದಾ ಸಾಹೇಬ ಪಶಸ್ತಿ, ಸಂಗೀತ ಕ್ಷೇತ್ರವಾದರೆ ಸೂರ ಸಿಂಗಾರ ಪ್ರಶಸ್ತಿ, ಕ್ರೀಡೆಯಾದರೆ ಅಜರ್ುನ ಪ್ರಶಸ್ತಿ, ಸಾಹಿತ್ಯವಾದರೆ ಜ್ಞಾನ ಪೀಠ ಪ್ರಶಸ್ತಿ ಪಡೆದಿದ್ದರೆ ನಮಗೆ ಒಂದು ತರಹದ ಧನ್ಯತಾಭಾವ. ಹಿಂದಿ ಚಿತ್ರ ಲೋಕದ ಜುಬಿಲಿ ಸ್ಟಾರ್ ರಾಜಹೆಂದ್ರ ಕುಮಾರ ಒಮ್ಮೆಯೂ ನಟನೆಗೆ ಫಿಲಂ ಫೇರ್ ಪ್ರಶಸ್ತಿ ದಕ್ಕಲಿಲ್ಲ. 1964 ರಲ್ಲಿ ಆತ ಅಭಿನಯಿಸಿದ 'ಸಂಗಂ' ಚಿತ್ರದಲ್ಲಿಯ ನಟನೆಗೆ ವಿಶೇಷ ಪ್ರಶಸ್ತಿಯನ್ನು ಕೊಟ್ಟದ್ದು ಬಿಟ್ಟರೆ ಬೇರೆ ಪಿಲ್ಮ ಫೇರ್ ಪ್ರಶಸ್ತಿ ದೊರೆಯಲಿಲ್ಲ. ಅದೆ ರೀತಿ ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಡಿವಿಜಿ ಯವರಿಗೆ ಜ್ಞಾನಪೀಠ ಒಲಿಯಲಿಲ್ಲ, ಆದರೂ ಅವರ ಸಾಧನೆ ಯೋಫಗ್ಯತೆಗಳೇನೂ ಕಡಿಮೆಯಾಗಲಿಲ್ಲ. ಹೀಗಾಗಿ ನನಗೆ ಒಂದು ಕುತೂಹಲ ಯಶ ಛೋಪ್ರಾ ಬಗ್ಗೆ ಬಂದದ್ದಕ್ಕೆ ಈ ಅನಿಸಿಕೆ. ಫಾಲಕೆ ಪಸ್ರಶಸ್ತಿ ದೊರೆಯದಿದ್ದರೂ ಯಶ ಛೋಪ್ರಾ ಜನಪ್ರಿಯತೆಗೇನೂ ಕುಂದು ಬರುತ್ತಿರಲಿಲ್ಲ. ಯಶ ಛೋಪ್ರಾ ಹಿಂದಿ ಚಲನಚಿತ್ರರಂಗದ ದಿಗ್ಗಜ ಏಕೆಂದರೆ, ಒಂದು ಎರಡು ಚಲನಚಿತ್ರಗಳನ್ನು ನೀಡುವಷ್ಟರಲ್ಲಿಯೆ ಖಾಲಿಯಾಗಿ ಬಿಡುವ ಈ ಸಂಧರ್ಭದಲ್ಲಿ ಐವತ್ಮೂರು ವರ್ಷಗಳ ಕಾಲ ಮಾನದಲ್ಲಿ ಐವತ್ತೊಂದು ಚಿತ್ರಗಳನ್ನು ನೀಡಿ ಇಂದಿನ ಯುವ ಪೀಳಿಗೆಯನ್ನು ಸಹ ಆಕಷರ್ಿಸುತ್ತಿದ್ದನೆಂದರೆ ಆತನ ಗೈರತ್ತು ಎಂತಹುದು ಎನ್ನುವುದು ಅರ್ಥವಾಗುತ್ತದೆ. ತಮ್ಮ ತಲೆಮಾರಿನ ಅಭಿಮಾನಿಗಳಿಂದ ಮುಂದಿನ ತಲೆಮಾರಿಗೆ ಸರಾಗವಾಗಿ ದಾಟಹೋದವರನ್ನು ಈಗ ಹೆಸರಿಸುವುದಾದಲ್ಲಿ ಒಬ್ಬ ನಟ ಅಮಿತಾಬ ಬಚ್ಚನ್ ಆದರೆ ಮತ್ತೊಬ್ಬ ಅದು ಯಶರಾಜ ಛೋಪ್ರ.. ಇದು ಯಶ ಛೋಪ್ರಾನಿಗೆ ಯಾಕೆ ಸಾಧ್ಯವಾಯಿತೆಂದರೆ ಆತನ ಚಿಂತನಾಕ್ರಮ ಅವುಗಳನ್ನು ಚಲನಚಿತ್ರಗಳ ಮೂಲಕ ಅಭಿವ್ಯಕ್ತಿಸುವ ರೀತಿ, ಹೀಗಾಗಿ ಆತ ಎಂದೂ ನಿಂತ ನೀರಾಗಲಿಲ್ಲ, ದಟ್ಟ ಕಾನನದಲ್ಲಿ ಸುಂದರ ಪರಿಸರದ ಮಧ್ಯೆ ಸ್ವಚ್ಛಂದವಾಗಿ ಹರಿವ ಎಂದೂ ಬತ್ತೆದ ಒಂದು ತೊರೆಯಾಗಿದ್ದ ಹೀಗಾಗಿ ಆತ ಹಳೆಯ ಕಾಲದವ ಎನಿಸಲೆ ಇಲ್ಲ ಅಂತಹ ಅಪ್ಪಟ ಪ್ರತಿಭೆ ಆತ.
1932 ರ ಅಕ್ಟೋಬರ್ 21 ರಂದು ಆಗಿನ ಬ್ರಿಟೀಶ್ ಇಂಡಿಯಾದ ಲಾಹೋರನಲ್ಲಿ ಜನಿಸಿದ ಆತ ಸರಿಯಾಗಿ 80 ವರ್ಷಕಾಲ ಬದುಕಿ 2012 ರ ಅಕ್ಟೋಬರ್ 21 ಕ್ಕೆ ತನ್ನ ಜೀವನ ಯಾತ್ರೆಯನ್ನು ಮುಗಿಸಿದ್ದಾನೆ. ಇದು ಒಂದು ಅಪರೂಪದ ಸಂಗತಿ. ಈತ ತಂದೆ ತಾಯಿಗಳ ಎಂಟು ಮಕ್ಕಳ ಪೈಕಿ ಕೊನೆಯವನು. ಬಿ.ಆರ್.ಛೋಪ್ರ ಮತ್ತು ಧರಮ್ ಛೋಪ್ರಾ ಈತನ ಅಣ್ಣಂದಿರು. 1945 ರಲ್ಲಿ ಪಂಜಾಬ್ನ ಜಲಂಧರ್ಗೆ ಶಿಕ್ಷಣಕ್ಕಾಗಿ ಬಂದ ಈತ ದೇಶ ವಿಭಜನೆಯ ನಂತರ ನೆಲೆ ನಿಂತದ್ದು ಲುಧಿಯಾನಾದಲ್ಲಿ. ತಮ್ಮ ಚಲನಚಿತ್ರ ಬದುಕು ಪ್ರಾರಂಭಿಸಿದ್ದು 1956 ರಲ್ಲಿ 'ಏಕ್ ಹಿ ರಾಸ್ತಾ' ಚಿತ್ರದ ಅಸಿಸ್ಟಂಟ್ ನಿದರ್ೇಶಕ ನಾಗುವುದರ ಮೂಲಕ. ಇವರು ಇಂದ್ರಸೇನ ಜೋಹರ್ ಮತ್ತು ತನ್ನ ಅಣ್ಣ ಬಿ.ಆರ್.ಛೋಪ್ರಾರ ಜೊತೆ 1957 ರಲ್ಲಿ ತಯಾರಾದ 'ನಯಾದೌರ್' ಮತ್ತು 1958 ರಲ್ಲಿ ತಯಾರಾದ
'ಸಾಧನಾ' ಚಿತ್ರಗಳಿಗೆ ಸಹಾಯಕ ನಿದರ್ೇಶಕರಾಗಿ ತಮ್ಮ ಛಾಪನ್ನು ಮೂಡಿಸುತ್ತಾರೆ. ಇವರ ದೈತ್ಯ ಪ್ರತಿಭೆಯನ್ನು ಗುರುತಿಸಿದ ಇವರ ಅಣ್ಣ ಬಿ.ಆರ್.ಛೋಪ್ರಾ ತಮ್ಮ ಲಾಂಛನದ 1959 ರಲ್ಲಿ ತಯಾರಾಗಿ ತೆರೆಕಂಡು ಪ್ರದರ್ಶನ ವಾದೆಡೆಯೆಲ್ಲ ಶತದಿನೋತ್ಸವ, ಸಿಲ್ವರ್ ಜುಬಿಲಿ ಮತ್ತು ಕೆಲವು ಮೆಟ್ರೊಪೊಲಿಟನ್ ನಗರಗಳಲ್ಲಿ ಗೋಲ್ಡನ್ ಜುಬಿಲಿ ಕಂಡ 'ಧೂಲ್ ಕಾ ಫೂಲ್' ಚಿತ್ರಕ್ಕೆ ನಿದರ್ೇಶಕನನ್ನಾಗಿಸುವುದರ ಮೂಲಕ. ನಯಾದೌರ್ ಚಿತ್ರದಲ್ಲಿ ಮಾಲಿಕ ಮತ್ತು ಶ್ರಮಿಕ ವರ್ಗದ ತಾಕಲಾಟಗಳ ಬಗ್ಗೆ ಕ್ಷಕಿರಣ ಬೀರಿದ್ದರೆ, ಧೂಲ್ ಕಾ ಫೂಲ್ ಹದಿ ಹರೆಯದವರ ಪ್ರೇಮ ಕಥೆಯಾಗಿ ಅದರಲ್ಲೂ ವಿಶೇಷವಾಗಿ ಯು7ವ ಜನಸಮೂಹದ ಗಮನ ಸೆರಳೆಯಿತು. ಆ ಕಾಲದ ಸಿನೆಮಾ ಪ್ರೇಮಿಗಳು ಇಂದಿಗೂ ಆ ಚಿತ್ರದಲ್ಲಿ ನಟಸಿದ ರಾಜೇಂದ್ರರ ಕುಮಾರ, ಅಶೋಕ ಕುಮಾರ, ಮಾಲಾಸಿನ್ಹ, ನಂದಾ, ಮನಮೋಹನ ಕೃಷ್ಣ ಮತ್ತು ಲೀಲಾ ಚಿಟ್ನೀಸ್ ರವರ ಅಭಿನಯ, ದತ್ತಾರಾಮ ರವರ ಸುಮಧುರ ಸಂಗೀತ, ಸುಶ್ರಾವ್ಯ ರಾಗ ಸಂಯೋಜನೆಯಿಂದ ಎಲ್ಲ ಹಾಡುಗಳು ಜನಪ್ರಿಯ ವಾಗಿದ್ದವು. ಅದರಲ್ಲೂ 'ತೆರೆ ಪ್ಯಾರಕಾ ಆಸರಾ ಚಾಹತಾ ಹ್ಞೂಂ' ಎಂಬ ಯುಗಳ ಗೀತೆ, ಮನಮೋಹನರ ಪಾತ್ರಕ್ಕೆ ಸಂಯೋಜಿಸಲಾಗಿದ್ದ 'ತೂ ಹಿಂದು ಬನೆಗಾ ನ ಮುಸಲ್ಮಾನ ಬನೆಗಾ, ಇನಸಾನಕಿ ಔಲಾದ ಇನ್ಸಾನ ಬನೆಗಾ' ಎಂಬ ಹಾಡುಗಳು ಅನೇಕ ವರ್ಷಗಳ ಕಾಲ ಚಾಲ್ತಿಯಲ್ಲಿದ್ದವು. ಅದೇ ಟೆಂಪೋವನ್ನು ತಮ್ಮ ಕೊನೆಯ ಚಿತ್ರದ ವರೆಗೂ ಉಳಿಸಿಕೊಂಡು ಬಂದದ್ದು ಯಶರಾಜ ಅಗ್ಗಳಿಕೆ. ಈ ಯಶಸ್ಸು ಒಂದು ಅಕಸ್ಮಿಕವಾಗಿರಲಿಲ್ಲ. ಇದಕ್ಕೆ ಉದಾಹರಣೆ ಎಂದರೆ ಅವರು ತಮ್ಮ ಅಣ್ಣನ ಬಿ.ಆರ್.ಛೋಪ್ರಾ ಬ್ಯಾನರ್ಗೆ 1965 ನಿಉದರ್ೇಶಿಸಿದ ಚಿತ್ರ 'ವಖ್ತ'.
' ವಖ್ತ ' ಒಂದು ಮಲ್ಟಿ ಸ್ಟಾರರ್ ಚಿತ್ರ, ಇದರಲ್ಲಿ ರಾಜಕುಮಾರ, ಸುನಿಲದತ್ತ, ಶಶಿಕಪೂರ, ಬಲರಾಜ್ ಸಹನಿ, ಮದನಪುರಿ, ರೆಹಮಾನ್, ಹಿಂದಿ ಚಿತ್ರರಂಗದ ಎಲಿಜಬೆತ್ ಟೇಲರ್ ಎಂಬ ಅಭಿದಾನವನ್ನು ಪಡೆದಿದ್ದ ಸಾಧನ, ಶಮರ್ಿಳಾ ಟ್ಯಗೋರ್, ಶಶಿಕಲಾ, ಅಚಲಾ ಸಚ ದೇವ ಮಂತಾದ ಸಮರ್ಥ ನಟನಟಿಯರನ್ನು ಬಳಸಿಕೊಂಡ ರೀತಿ ಮಾತ್ರ ಅದ್ಭುತವಾಗಿತ್ತು. ಇದು ಮನಮಿಡಿವ ಸುಂದರ ಕೌಟುಂಬಿಕ ಕಥಾ ಹಂದರದ ಚಿತ್ರಕಥೇಯನ್ನು ಹೊಂದಿತ್ತು. ಮನುಷ್ಯ ಪ್ರಯತ್ನ ಮಾತ್ರವೆ ಅಲ್ಲ ದೈವಕೃಪೆಯೂ ಬೇಕು ಎನ್ನುವುದು ಕಥೆಯ ಸ್ಥೂಲ ಹಂದರವಾಗಿತ್ತು. ಇದೂ ಸಹ ಅದ್ಭುತ ಯಶಸ್ಸು ಕಂಡ ಚಿತ್ರ. ರಾಜಕುಮಾರನ ವಿಶಿಷ್ಟ ಅಭಿನಯ, ರವಿಯ ಸುಮಧುರ ಸಂಗೀತ ಸಂಯೋಜನೆ ಗಳು ಈ ಚಿತ್ರದ ಪ್ಲಸ್ ಪಾಯಿಂಟ್ ಗಳಾಗಿದ್ದವು. ಈ ಚಿತ್ರದ ಪ್ರಾರಂಭಿಕ ಹಾಡು ' ಏ ಮೆರಿ ಜೊಹರ ಜಬಿ, ತುಝೆ ಮಾಲೂಮ್ ನಹಿ, ಏ ಹಕೀಕತ್ ಔರ್ ಹಸಿ ಹೈರೆ ಮೈ ಜವಾನ್, ಮತ್ತು ರಾಜಕುಮಾರ ಮತ್ತು ಶಶಿಕಲಾರ ಸುತ್ತ ಬಾಲ್ಡಾನ್ಸ್ ನೃತ್ಯದ ಸಂಧರ್ಭದಲ್ಲಿ ಸಂಯೋಜಿಸಲಾದ ಆಶಾ ಭೋಸ್ಲೆ ಹಾಡಿದ ' ಆಗೇ ಭೀ ಜಾನೇನ ದೋ, ಪೀಛೆ ಭಿ ಕೆಹನೇನ ದೋ ಯಹಿ ವಖ್ತ ಹೈ ' ಎಂಬ ಹಾಡುಗಳು ಅಂದು ಮಾತ್ರವಲ್ಲ ಇಂದೂ ಸಹ ಜನಪ್ರಿಯ ಹಾಡುಗಳ. ಅವುಗಳ ಲಯಕ್ಕೆ ತಲೆಎದೂಗದವರಿಲ್ಲ. ನಂತರ ಅದೇ ಬ್ಯಾನರ್ನಲ್ಲಿ 1967 ರಲ್ಲಿ ರಾಜೇಶ ಖನ್ನ ಮತ್ತು ನಂದಾರ ಅಭಿನಯದ ' ಇತ್ತೆಫಾಕ್ ' ಚಿತ್ರ್ವವನ್ನು ನಿದರ್ೇಶಿಸುತ್ತಾರೆ. ಇದು ಹಾಡುಗಳಿಲ್ಲದ ಮೇಲಾಗಿ ಗುಜರಾತಿ ಪ್ಲೇ ಒಂದರ ಆಧಾರದಲ್ಲಿ ತಯಾರಾದ ಚಿತ್ರವಾಗಿತ್ತು. ಇದು ಸಹ ಯಶಸ್ಸು ಪಡೆಯಿತು ಕೂಡ.
1973 ರಲ್ಲಿ ಅಣ್ಣ ಬಿ.ಆರ್.ಛೋಪ್ರಾನ ನೆರಳಿನಿಂದ ಹೊರಬಂದ ಯಶರಾಜ್ ಛೋಪ್ರಾ ತನ್ನದೆ ಆದ
' ಯಶರಾಜ .ಫಿಲ್ಮಂ ' ಎಂಬ ಲಾಂಛನವನ್ನು ಹುಟ್ದ ಹಾಕಿ ಸ್ವತಃ ನಿಮರ್ಾಣ ಮತ್ತು ನಿದರ್ೇಶನಕ್ಕಿಳಿದು ಇದಿನ ವರೆಗೂ ಯಶಸ್ಸನ್ನು ಕಂಡುದು ಬಹಳ ಮುಖ್ಯ. 1956 ರಿಂದ 2012 ರಲ್ಲಿ ಮರಣಹೊಂದುವ ವರೆಗಿನ ಅವರ ಬದುಕು ಒಂದು ರೀತಿ ಕ್ರಿಯಾತ್ಮಕವಾದ ಮತ್ತು ಯಶಸ್ಸು ಕಂಡ ಬದುಕು. ಇವರು ತಮ್ಮ ನಿಮರ್ಾಣ ಸಂಸ್ಥೆಯಿಂದ ದೀವಾರ, ಕಭಿಕಭಿ, ತ್ರಿಶೂಲ, ಚಾಂದನಿ, ಲಮ್ಹೆ, ಡರ್, ದಿಲ್ ತೋ ಪಾಗಲ್ ಹೈ, ವೀರಝರಾ ಮುಂತಾದವು ಬಹಳ ಯಶಸ್ಸನ್ನು ಕಂಡ ಚಿತ್ರಗಳು. ಆದರೆ ಸಿಲ್ಸಿಲಾ, ಮಶಾಲ್, ವಿಜಯ ಅಷ್ಟು ಯಶಸ್ಸು ಪಡೆಯದ ಚಿತ್ರಗಳು. ಈತ 1961 ರಲ್ಲಿ ನಿದರ್ೇಶಿಸಿದ ಚಿತ್ರ ' ಧರ್ಮಪುತ್ರ ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಸ್ಥಾಪಿತಗೊಂಡ ಮುಂದೆ ಯಶಸ್ಸಿನೆಡೆಗೆ ಸಾಗಿ ಹೋದ. ಅದೇ ಶಶಿಕಪೂರ ಯಶ ಛೋಪ್ರಾನ ಸ್ವಂತ ಬ್ಯಾನರ ಚಿತ್ರ ದೀವಾರ್ ನಲ್ಲಿ ಅಮಿತಾಬ ಜೊತೆ ಪ್ರಮುಖ ಪಾತ್ರವೊಂದರಲ್ಲಿ ನಟಸಿದುದಲ್ಲದೆ ಬಹಳ ವರ್ಷಗಳ ಕಾಲ ಚಲಾವಣೆಯಲ್ಲುಳಿದು ಬಂದ. ಅಮಿತಾಬ್ ಶೋಲೆ, ಜಂಝೀರ ಮತ್ತು ಅಭಿಮಾನ ಚಿತ್ರಗಳ ಮೂಲಕ ಪ್ರಮುಖ ನಟನಾಗಿ ಚಾಲ್ತಿಗೆ ಬಂದಿದ್ದರೂ ಯಶ್ ಛೋಪ್ರಾನ ದೀವಾರ ಆತನನ್ನು ಸೂಪರ್ ಸ್ಟಾರ್ ಪಟ್ಟಕ್ಕೆ ಏರಿಸಿದ್ದು ಮಾತ್ರ ನಿಜ. ಮುಂದೆ ಅಮಿತಾಬ ಹಿಂದಿರುಗಿ ನೋಡಲಿಲ್ಲ. ಆತ ಏರಿದ ಎತ್ತರ ಮೌಂಟ್ ಎವರೆಸ್ಟ್ನ ಎತ್ತರ. ಅದೇ ರೀತಿ ಚಾಂದನಿ ರಿಷಿ ಕಪೂರ್, ವಿನೋದ ಖನ್ನ ಮತ್ತು ಶ್ರೀದೇವಿ ಯವರ ಹಾಗೂ ಲಮ್ಹೆ ಅನಿಲ್ ಕಪೂರ್ ಮತ್ತು ಶ್ರೀದೇವಿ ಯವರಿಗೆ ವಿಶಿಷ್ಟ ತಾರಾ ಮೌಲ್ಯ ನೀಡಿದ ಚಿತ್ರ. ಅದೇ ರೀತಿ ಇವರ ಬ್ಯಾನರ್ನಲ್ಲಿ ಅಭಿನಯಿಸಿದ ಸನ್ನಿ ಡಿಯೋಲ್, ಶಾರುಖ್ಖಾನ್, ಪ್ರೀತಿ ಜಿಂಟಾ, ರಾಣಿ ಮುಖಜರ್ಿ, ಮಾಧುರಿ ದಿಕ್ಷಿತ್ ರವರು ಅಭಿನಯಿಸಿದ ಚಿತ್ರಗಳು ಅವರುಗಳಿಗೆ ತಾರಾ ಮೌಲ್ಯವನ್ನು ಹೆಚ್ಚಿಸಿದವೆಂದು ಹೇಳಬಹುದು.
ಇವರ ತಮ್ಮ ಐವತ್ತು ವರ್ಷಗಳ ಸಿನೆ ಬದುಕಿನಲ್ಲಿ ಮಾಡಿದ ಸಾಧನೆ ಅಪಾರ. ವರ್ಷಕ್ಜಕೊಂದರಂತೆ ಸರಿ ಸುಮಾರು ಐವತ್ತು ಚಿತ್ರಗಳನ್ನು ನಿಮರ್ಿಸಿ ನಿದರ್ೇಶಿಸಿದರು. ತಮ್ಮ ಚಿತ್ರ ರಂಗದ ಬದುಕಿನಲ್ಲಿ ಆರು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಹನ್ನೊಂದು ಫಿಲಂಫೇರ್ ಪ್ರಶಸ್ತಿಗಳನ್ನು ಪಡೆದರು. ವಖ್ತ, ಇತ್ತೆಫಾಕ್, ದಾಗ್ ಮತ್ತು ದೀವಾರ ಚಿತ್ರಗಳಿಗೆ ನಿದರ್ೇಶನಕ್ಕೆ ಫಿಲಂಫೇರ್ ಪ್ರಶಸ್ತಿಗಳು ಬಂದಿದ್ದರೆ, ಲಮ್ಹೆ, ದಿಲವಾಲೆ ದುಲ್ಹನಿಯಾ ಲೇ ಜಾಯೇಂಗೆ, ದಿಲ್ ತೊ ಪಾಗಲ್ ಹೈ,, ವೀರಝರಾ, ಚಿತ್ರಗಳಿಗೆ ಅತ್ಯುತ್ತಮ ಚಿತ್ರಗಳೆಂದು ಫಿಲಂಫೇರ್ಗೆ ಭಾಜನವಾದವು. ಇವರಿಗೆ 2001 ರಲ್ಲಿ ದಾದಾ ಸಾಹೇಬ ಪ್ರಶಸ್ತಿ, ಮತ್ತು 2005 ರಲ್ಲಿ ಪದ್ಮಭೂಷಣ ಪ್ರಶಸ್ತಿಗಳು ಇವರನ್ನರಸಿ ಬಂದವು. ಅವುಗಳಿಗೆ ಅವರು ಯೋಗ್ಯರಾಗಿದ್ದರೂ ಕೂಡ. ಅದೇ 2005 ರಲ್ಲಿ ಫ್ರಾನ್ಸ್ ದೇಶದ ಲೀಜನ್ ಆಫ್ ಆನರ್ ಪ್ರಶಸ್ತಿಯನ್ನು ಪಡೆದದ್ದು ಒಂದು ವಿಶೇಷ. 2009 ರಲ್ಲಿ ಸ್ವಿಸ್ ಸಕರ್ಾರ ' ಏಶಿಯನ್ ಫಿಲಂ ಮೇಕರ್ ' ಅವಾರ್ಡನ್ನು ಪ್ರಸಿದ್ಧ ಹಾಲಿವುಡ್ ನಟಿ ಅಸರ್ೆಲಾ ಅಂಡ್ರೂಸ್ರಿಂದ ಪಡೆದರು. ಇವಲ್ಲದೆ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನು ಅರಸಿ ಬಂದವು
ಇವರು ತಮ್ಮ ಅಂತಿಮ ಹಂತ ತಲುಪಿದ್ದ ಚಿತ್ರ ' ಜಬ್ ತಕ್ ಹೈ ಜಾನ್ ' ಚಿತ್ರವನ್ನು ನಿದರ್ೇಶಿಸಿ ಚಿತ್ರರಂಗದ ಬದುಕಿಗೆ ವಿದಾಯ ಹೇಳ ಬೇಕೆಂದಿದ್ದರು. ಅದು ಆಗಲಿಲ್ಲ. ಒಟ್ಟಿನಲ್ಲಿ ಅವರ ಬದುಕನ್ನು ಅವಲೋಕಿಸಿ ಹೇಳುವುದಾದರೆ ಆತ ಒಬ್ಬ ಅತ್ಯುತ್ತಮ ನಿಮರ್ಾಪಕ, ನಿದರ್ೇಶಕ ಆಗಿದ್ದನೆಂಬುದು. ಅಂತಹ ಒಂದು ದೈತ್ಯ ಚಲನಶೀಲ ಪ್ರತಿಭೆ ಕಾಲಗರ್ಭದಲ್ಲಿ ಲೀನವಾಗಿ ಹೋಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಹಾರೈಸುವೆ.
Comments
ಮಾನ್ಯ ಸಂಪದಿಗರಿಗೆ ವಂದನೆಗಳು
ಮಾನ್ಯ ಸಂಪದಿಗರಿಗೆ ವಂದನೆಗಳು
ನಾನು ಈಗ್ಗೆ ಕೆಲ ಸಮಯದ ಹಿಂದೆ ಯಶ ಛೋಪ್ರಾ ಕುರಿತು ಒಂದು ಬ್ಲಾಗ್ ಬರಹವನ್ನು ಹಾಕಿದ್ದೆ, ನಂತರದಲ್ಲಿ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಹಲವು ತಪ್ಪುಗಳು ನುಸುಳಿವೆ, ಓದುಗರಿಗೆ ಆಗಬಹುದಾದ ತೊಂದರೆಯನ್ನು ಊಹಿಸಬಲ್ಲೆ. ಈ ಮೊದಲು ಆಗಿದ್ದರೆ ಬದಲಾಯಿಸಿ ಭಾಗಕ್ಕೆ ಹೋಗಿ ತಿದ್ದುಪಡಿ ಮಾಡಬಹುದಿತ್ತು. ಈಗ ಹೊಸ ವಿನ್ಯಾಸದಲ್ಲಿ ಸಂಪದ ಬಂದ ನಂತರ ಆ ಸೌಲಭ್ಯ ಇಲ್ಲವಾಗಿದೆ. ಸಂಪದಿಗರು ಇದನ್ನು ಗಮನಿಸಬೇಕಾಗಿ ಕೋರಿಕೆ.
@ಹಿರಿಯರೇ ಯಶ್ ಚೋಪ್ರ ಬಗ್ಗೆ ಸಕಾಲಿಕ ನಮನದ ಬರಹ..
ರೊಮ್ಯಾಂಟಿಕ್ ಚಿತ್ರಗಳ ನಿರ್ಮಾತೃ ಕತೃ ಯಶ್ ಚೋಪ್ರ ನಿದನ ಭರಿಸಲಾಗದ್ದು..
ಅವರು ಶಾರೂಕ್ ಖಾನ್ ಜೊತೆ ತೆಗೆದ ಎಲ್ಲ ಚಿತ್ರಗಳನ್ನು ನೋಡಿರುವೆ. ಹಾಗೆಯೇ ಬೇರೆ ನಾಯಕರನು ಹಾಕಿಕೊಂಡು ತೆಗೆದ ಚಿತ್ರಗಳನ್ನು ಸ್ವಲ್ಪ ಸ್ವಲ್ಪ ನೋಡಿರುವೆ.. ಹಳೆಯ ಹೊಸಬ ನಾಯಕರೊಂದಿಗೆ ಅವರ ಹೊಂದಾಣಿಕೆ ಅನ್ಯೋನ್ಯತೆ ಅಚ್ಚರಿ ಹುಟ್ತಿಸುವನ್ತದ್ದು..
ಇನೇನು ಬಿಡುಗಡೆ ಆಗಲಿರುವ ಚಿತ್ರ 'ಜಬ್ ತಕ್ ಹಾಯ್ ಜಾನ್'' -ನನ್ನ ನಿರ್ದೇಶನದ ಕೊನೆಯ ಚಿತ್ರ ಅನ್ತ ಅವರೇ ಹೇಳಿದ್ದು ಈಗ ದುತ್ತನೆ ಮರೆಯಾಗಿದ್ದು ಅಚ್ಚರಿ..!!
ಡೆಂಗ್ಯೂ ಬಗ್ಗೆ ಜನಕ್ಕೆ ಅಷ್ಟೇನು ಭಯ ಇದ್ದ ಹಾಗೆ ಇರಲಿಲ್ಲ ಆದರೆ ಈಗ ದೊಡ್ಡ ಆಸ್ಪತ್ರೆಯಲ್ಲಿ ಜನಪ್ರಿಯ ನಿರ್ದೇಶಕರೊಬ್ಬರು , ಅಪಾರ ಹಣವಂತರು ಏನೆಲ್ಲಾ ಇದ್ದು ಡೆಂಗ್ಯೂ ಗೆ ತುತ್ತಾಗಿ ಮರಣಿಸಿದ್ದು ಈಗ ಜನಕ್ಕೆ ಗೊತ್ತಾಗಿದೆ...
ಈಗೀಗ ಕರ್ನಾಟಕದಲ್ಲೇ ಸುಮಾರು ೩೦ಕ್ಕಿನ್ತ ಹೆಚ್ಚು ಜನ ಡೆಂಗ್ಯೂ ಗೆ ಆಹುತಿಯಾಗಿರುವರು ವಯಸ್ಸಿನ ಬೇದವಿಲ್ಲದೆ ..
ಎಲ್ಲರೂ ಎಚ್ಚರ ವಹಿಸಿ...
ಹಿರಿಯರೇ ಯಶ್ ಚೋಪ್ರ ಬಗ್ಗೆ ಸಕಾಲಿಕ ನಮನದ ಬರಹ..
\|/
In reply to @ಹಿರಿಯರೇ ಯಶ್ ಚೋಪ್ರ ಬಗ್ಗೆ ಸಕಾಲಿಕ ನಮನದ ಬರಹ.. by venkatb83
ವೆಂಕಟೇಶ ರವರಿಗೆ ವಂದನೆಗಳು
ವೆಂಕಟೇಶ ರವರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಯಶ ಛೋಪ್ರಾ ಅಮಿತಾಬ ಬಚ್ಚನ್ ಬಿಟ್ಟರೆ ಹೆಚ್ಚು ಚಿತ್ರಗಳಿಗೆ ನಾಯಕನನ್ನಾಗಿ ಶಾರುಖ್ ಖಾನನನ್ನು ಆಯ್ಕೆ ಮಾಡಿ ಕೊಂಡಿದ್ದಾರೆ. ತಾವಂದ ಮಾತು ಅಕ್ಷರಶಃ ನಿಜ , ಕರ್ನಾಟಕದಲ್ಲಿ ಡೆಂಗ್ಯೂಗೆ ಅನೇಕರು ಬಲಿಯಾಗಿದ್ದರೂ ಎಲ್ಲರನ್ನೂ ಅಷ್ಟು ಆ ಸಮಸ್ಯೆ ತಟ್ಟಿಲ್ಲ. ಹಣ ಹೆಸರು ಎಲ್ಲ ಇದ್ದೂ ಯಶ ಛೋಪ್ರಾ ಡೆಂಗ್ಯೂವನ್ನು ಗೆದ್ದು ಬರಲಾಗಲಿಲ್ಲ. ಪರಿಸರ ಸ್ವಚ್ಛತೆ ಎಲ್ಲಿಯವರೆಗೆ ಬಡವ ಶ್ರೀಮಂತ ಎಂಬ ಬೆಧ ಭಾವವಿಲ್ಲದೆ ಆಚರಣೆಗೆ ಬರುತ್ತೋ ಆವಾಗ ಮಾತ್ರ ಇಂತಹ ಮಾರಕ ರೋಗಗಳನ್ನು ಗೆದ್ದು ಬರಲು ಸಾಧ್ಯ, ಧನ್ಯವಾದಗಳು.
ಯಶರಾಜ್ ಛೋಪ್ರಾ
ಪಾಟೀಲರಿಗೆ ನಮಸ್ಕಾರಗಳು,
ಹುಟ್ಟಿದ ಮನುಷ್ಯನಿಗೆ ಸಾವು ತಪ್ಪಲ್ಲಾ,ಆದರೂ ಸಾವಿಗೆ ಈಗ ಒಂದು ಹೊಸ ಕಾಯಿಲೆ ಡೆಂಗ್ಯು ಸೆರ್ಪಡೆ.ದುರಂತ ವೆಂದರೆ ಅದಕ್ಕೆ ಯಶರಾಜ್ ಛೋಪ್ರಾ ಅವರು ಡೆಂಗ್ಯೂಗೆ ಜೀವ ತೆತ್ತದ್ದು. ಅವರ ಸಾವಿನ ಕುರಿತು ತಮ್ಮ ಸಕಾಲಿಕ ಲೇಖನ ನನಗೆ ಹಿಡಿಸಿತು. ಅವರ ಆತ್ಮಕ್ಕೆ ಶಾಂತಿಯನ್ನು ಬಯಸೋಣ.
In reply to ಯಶರಾಜ್ ಛೋಪ್ರಾ by swara kamath
ರಮೇಶ ಕಾಮತರಿಗೆ ವಂದನೆಗಳು
ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ಓದಿದೆ, ಡೆಂಗ್ಯೂ ಜ್ವರದ ಕುರಿತು ಬಹಳ ಚೆನ್ನಾಗಿ ದಾಖಲಿಸಿದ್ದೀರಿ, ಎಲ್ಲ ಇದ್ದೂ ಡೆಂಗ್ಯೂದಿಂದ ಛೋಪ್ರಾ ಗೆದ್ದು ಬರಲಾಗದುದು ಮಾತ್ರ ಬಹಳ, ನೋವಿನ ಸಂಗತಿ. ಡೆಂಗ್ಯೂ ನಿರ್ಮೂಲನೆಗೆ ವಿಜ್ಞಾನ ಕ್ಷೇತ್ರ ಸಮರ್ಪಕ ಔಷಧಿ ಕಂಡು ಹಿಡಿಯ ಬೇಕಾಗಿರುವುದು ವರ್ತಮಾನದ ತುರ್ತು, ಧನ್ಯವಾದಗಳು.
In reply to ರಮೇಶ ಕಾಮತರಿಗೆ ವಂದನೆಗಳು by H A Patil
ಆತ್ಮೀಯ ಪಾಟಿಲರೆ ,
ಆತ್ಮೀಯ ಪಾಟಿಲರೆ ,
ಅತ್ಯುತ್ತಮವಾದ ನಿರೂಪಣೆ. ಚೋಪ್ರ ರವರ ಬದುಕಿನ ಮಾಹಿತಿ ಸಕಾಲಿಕವಾಗಿ, ಚೊಕ್ಕವಾಗಿ ಮೂಡಿಬಂದಿದೆ. ನೀವು ರಾಜೇಶ್ ಖನ್ನ ಬಗ್ಗೆ ಬರೆದ ಲೇಖನವು ಇಷ್ಟೇ ಚನ್ನಾಗಿತ್ತು. ಧನ್ಯವಾದಗಳು ಪಾಟಿಲರೆ......
In reply to ಆತ್ಮೀಯ ಪಾಟಿಲರೆ , by Prakash Narasimhaiya
ಪ್ರಕಾಶ ನರಸಿಂಹಯ್ಯ ರವರಿಗೆ
ಪ್ರಕಾಶ ನರಸಿಂಹಯ್ಯ ರವರಿಗೆ ವಂದನೆಗಳು
ಲೇಖನದ ಮೆಚ್ಚುಗೆಗೆ ಧನ್ಯವಾದಗಳು.
ಯಶ್ ಚೋಪ್ರಾ- ನಾಸ್ಟಾಲಜಿ
ಹೆಚ್, ಎ. ಪಾಟೀಲ ರವರೇ, ಯಶ್ ಚೋಪ್ರಾ ಬದುಕಿನಲ್ಲಿ ನಡೆದು ಬಂದ ದಾರಿಯ ಹೆಜ್ಜೆಗುರುತುಗಳನ್ನು ಸುಂದರವಾಗಿ ಎಳೆಎಳೆಯಾಗಿ ಪಡಿಮೂಡಿಸಿ, ನಮಗೆ ಅವರ ಪರಿಚಯ ಚನ್ನಾಗಿ ಮಾಡಿಕೊಟ್ಟಿರುವಿರಿ. ಉತ್ತಮ ಲೇಖನ.
In reply to ಯಶ್ ಚೋಪ್ರಾ- ನಾಸ್ಟಾಲಜಿ by lpitnal@gmail.com
ಲಕ್ಷ್ಮೀಕಾಂತ ಿಟ್ನಾಳ ರವರಿಗೆ
ಲಕ್ಷ್ಮೀಕಾಂತ ಿಟ್ನಾಳ ರವರಿಗೆ ವಂಧನೆಗಳು ತಮ್ಮ ಪ್ರತಿಕ್ರಿಯೆ ಓದಿದೆ, ಮೆಚ್ಚುಗೆಗೆ ಧನ್ಯವಾದಗಳು.